ನವದೆಹಲಿ: 7th Pay Commission - ಕೇಂದ್ರ ಸರ್ಕಾರಿ ನೌಕರರಿಗೊಂದು ಕಹಿ ಸುದ್ದಿ ಪ್ರಕಟವಾಗಿದೆ. ಒಂದು ವೇಳೆ ನೀವೂ ಕೂಡ ತುಟ್ಟಿಭತ್ಯೆ ಹಾಗೂ ಪ್ರಯಾಣ ಭತ್ಯೆ ಹೆಚ್ಚಳದ ನಿರೀಕ್ಷೆಯಲ್ಲಿದ್ದರೆ, ಇದಕ್ಕಾಗಿ ನೀವೂ ಮತ್ತೆ ಸ್ವಲ್ಪ ದಿನ ಕಾಯಬೇಕಾಗಲಿದೆ. ಕೊರೊನಾ ಕಾಲದಲ್ಲಿ ಸರ್ಕಾರ TA (Travel Allowance) ಹಾಗೂ DA ಹೆಚ್ಚಳದ ನಿರ್ಧಾರವನ್ನು ಸದ್ಯದ ಮಟ್ಟಿಗೆ ಮುಂದೂಡಿದೆ ಎನ್ನಲಾಗಿದೆ . ಹೀಗಾಗಿ ಎಲ್ಲಾ ಸರ್ಕಾರಿ ನೌಕರರಿಗೆ ಹಳೆ ಲೆಕ್ಕಾಚಾರದಲ್ಲಿಯೇ ತುಟ್ಟಿಭತ್ಯೆ ಸಿಗಲಿದೆ. ವರದಿಗಳ ಪ್ರಕಾರ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಜುಲೈ 1 ರಿಂದ ಹೆಚ್ಚಿಸಲಾಗುತ್ತಿಲ್ಲ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಕಳೆದ ಕೆಲ ದಿನಗಳ ಹಿಂದೆಯಷ್ಟೇ ಕೇಂದ್ರ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್ ಈ ಕುರಿತು ಮಾಹಿತಿ ನೀಡಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಜುಲೈ 2021 ರಲ್ಲಿ ಹೆಚ್ಚಿಸಲಾಗುವುದು ಎಂದಿದರು. ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಪ್ರಸ್ತುತ ಸರ್ಕಾರ ಕೊರೊನಾ ಕಾಲದಲ್ಲಿ ಯಾವುದೇ ರೀತಿಯ ಹೆಚ್ಚಳ ನೀಡಲು ಸ್ಪಷ್ಟವಾಗಿ ನಿರಾಕರಿಸಿದೆ ಎನ್ನಲಾಗಿದೆ. ಅಂದರೆ ಈ ವರ್ಷದ ಜುಲೈ ತಿಂಗಳಿನಲ್ಲಿ ಭತ್ಯೆಯಲ್ಲಿ ಹೆಚ್ಚಳವಾಗುವುದಿಲ್ಲ.


ಪ್ರಸ್ತುತ ಶೇ.17 ರಷ್ಟು Dearness Allowance ಸಿಗುತ್ತದೆ
ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರಿಗೆ ಶೇ.17 ಡಿಎ ನೀಡಲಾಗುತ್ತಿದ್ದು, ಇದನ್ನು ಶೇ.28  ಹೆಚ್ಚಿಸಲಾಗುತ್ತಿದೆ ಎಂದು ವರದಿಯಾಗಿತ್ತು. ಜುಲೈ 2021 ರಲ್ಲಿ ಕೇಂದ್ರ ಸರ್ಕಾರವು (Modi Government) ಈ ಭತ್ಯೆಯನ್ನು ಶೇ.28 ಕ್ಕೆ ಹೆಚ್ಚಿಸುತ್ತಿದೆ ಎಂದು ಈ ಮೊದಲು ವರದಿಯಾಗಿತ್ತು.


ಇದನ್ನೂ ಓದಿ- Provident Fund: ಅಗತ್ಯವಿದ್ದರೆ ನಿಮ್ಮ PF ಹಣ ಹಿಂಪಡೆಯಬಹುದು, ಆದರೆ ಎಷ್ಟು Tax ಪಾವತಿಸಬೇಕೆಂದು ತಿಳಿಯಿರಿ


ಎಷ್ಟು ಹೆಚ್ಚಾಗಲಿದೆ DA?
ಈ ಮೊದಲು ಪ್ರಕಟಗೊಂಡ ವರದಿಗಳ ಪ್ರಕಾರ ತುಟ್ಟಿಭತ್ಯೆ ಹೆಚ್ಚಳದಿಂದ ಸರ್ಕಾರಿ ನೌಕರರ ವೇತನದಲ್ಲಿ ಭಾರಿ ಏರಿಕೆಯನ್ನು ವರ್ತಿಸಲಾಗಿತ್ತು. ವರ್ತಮಾನದ ಕುರಿತು ಹೇಳುವುದಾದರೆ ಸದ್ಯ ತುಟ್ಟಿಭತ್ಯೆ ಬೇಸಿಕ್ ವೇತನದ ಶೇ.17ರಷ್ಟಿದೆ.  ಇದನ್ನು ಶೇ.28 (17+3+4+4)ಕ್ಕೆ ಹೆಚ್ಚಿಸಿದಾಗ ನೌಕರರ ವೇತನದಲ್ಲಿ ಭಾರಿ ಏರಿಕೆಯಾಗಲಿದೆ ಎಂದು ವರ್ತಿಸಲಾಗಿತ್ತು. ಆದರೆ, ಕೊರೊನಾ ಮಾಹಾಮಾರಿಯ ಕಾರಣ ಕೇಂದ್ರ ಸರ್ಕಾರ ಈ ಹೆಚ್ಚಳವನ್ನು ಜೂನ್ ವರೆಗೆ ಫ್ರೀಜ್ ಮಾಡಿತ್ತು.


ಇದನ್ನೂ ಓದಿ- Post Office Saving Schemes: ನಿಯಮಿತ ಆದಾಯಕ್ಕಾಗಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿ, ಅಲ್ಪಾವಧಿಯಲ್ಲಿಯೇ ದ್ವಿಗುಣಗೊಳ್ಳುತ್ತೆ ಹಣ


35 ಲಕ್ಷ ಸರ್ಕಾರಿ ನೌಕರರಿಗೆ ಲಾಭ 
DA
ಹೆಚ್ಚಳದ ಲಾಭ ದೇಶದ ಸುಮಾರು 35 ಲಕ್ಷ ಸರ್ಕಾರಿ ನೌಕರರು ಸೇರಿದಂತೆ ಎಲ್ಲಾ ರಾಜ್ಯಗಳ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಆಗಲಿದೆ. ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಜನವರಿ 2020 ರಿಂದ DA ಫ್ರೀಜ್ ಮಾಡಲಾಗಿದೆ. ಹೀಗಿರುವಾಗ ಜುಲೈ ನಲ್ಲಿ ಈ ಹೆಚ್ಚಳದ ಲಾಭ ಸರ್ಕಾರಿ ನೌಕರರಿಗೆ ಸಿಗುವ ನಿರೀಕ್ಷೆ ಇತ್ತು.


ಇದನ್ನೂ ಓದಿ-SBI Account Opening Through Video KYC - SBI ಗ್ರಾಹಕರಿಗೊಂದು ನೆಮ್ಮದಿಯ ಸುದ್ದಿ, ಇನ್ಮುಂದೆ ಈ ಕೆಲಸಕ್ಕಾಗಿ ನೀವು ಬ್ಯಾಂಕ್ ಗೆ ಹೋಗಬೇಕಾಗಿಲ್ಲ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.