Provident Fund: ಅಗತ್ಯವಿದ್ದರೆ ನಿಮ್ಮ PF ಹಣ ಹಿಂಪಡೆಯಬಹುದು, ಆದರೆ ಎಷ್ಟು Tax ಪಾವತಿಸಬೇಕೆಂದು ತಿಳಿಯಿರಿ

ದೇಶದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕರೋನಾವೈರಸ್ ನಿಂದಾಗಿ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಲಾಗುತ್ತಿದೆ. ಅದರಲ್ಲಿ ಎಲ್ಲರನ್ನೂ ಹೆಚ್ಚಾಗಿ ಬಾದಿಸುತ್ತಿರುವ ಸಮಸ್ಯೆ ಎಂದರೆ ಆರ್ಥಿಕ ಸಮಸ್ಯೆ. 

Written by - Yashaswini V | Last Updated : Apr 24, 2021, 11:30 AM IST
  • ಇಪಿಎಫ್‌ನಿಂದ ಹಣವನ್ನು ಹಿಂಪಡೆಯುವುದು ಕಷ್ಟ ಎಂದು ಅನೇಕ ಜನರು ಭಾವಿಸುತ್ತಾರೆ
  • ಆದರೆ, ಅಗತ್ಯವಿದ್ದರೆ ನೀವು ಇಪಿಎಫ್ (EPF) ಖಾತೆಯಿಂದ ಹಣವನ್ನು ಹಿಂಪಡೆಯಬಹುದು
  • ಯಾವುದೇ ಉದ್ಯೋಗಿಯು ಕೆಲಸ ಬಿಟ್ಟ ಒಂದು ತಿಂಗಳ ನಂತರ 75% ಪಿಎಫ್ ಹಣವನ್ನು ಹಿಂಪಡೆಯಬಹುದು
Provident Fund: ಅಗತ್ಯವಿದ್ದರೆ ನಿಮ್ಮ PF ಹಣ ಹಿಂಪಡೆಯಬಹುದು, ಆದರೆ ಎಷ್ಟು  Tax ಪಾವತಿಸಬೇಕೆಂದು ತಿಳಿಯಿರಿ title=
PF withdrawal

ನವದೆಹಲಿ: ಭಾರತದಲ್ಲಿ ಕರೋನಾ ಎರಡನೇ ಅಲೆಯ ಅಬ್ಬರ ಹೆಚ್ಚಾಗಿದೆ. ಇದರಿಂದಾಗಿ ದೇಶಾದ್ಯಂತ ನಾನಾರೀತಿಯ ಸಮಸ್ಯೆಗಳು ಎದುರಾಗಿದೆ. ಅದರಲ್ಲೂ ಮುಖ್ಯವಾಗಿ ಹಣದ ಸಮಸ್ಯೆ ಎಲ್ಲರ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ. ಈ ಸಂದರ್ಭದಲ್ಲಿ ಬೇರೆಯವರ ಬಳಿ ಹಣ ಸಾಲ ಪಡೆಯುವ ಬದಲು ನೀವು ನಿಮ್ಮ ಭವಿಷ್ಯ ನಿಧಿ (ಇಪಿಎಫ್ / ಪಿಎಫ್) ಖಾತೆಯಿಂದ  ಹಣವನ್ನು ಹಿಂಪಡೆಯಬಹುದು. 

ಇಪಿಎಫ್‌ನಿಂದ ಹಣವನ್ನು ಹಿಂಪಡೆಯುವುದು ಕಷ್ಟ ಎಂದು ಅನೇಕ ಜನರು ಭಾವಿಸುತ್ತಾರೆ. ಆದರೆ, ಅಗತ್ಯವಿದ್ದರೆ ನೀವು ಇಪಿಎಫ್ (EPF) ಖಾತೆಯಿಂದ ಹಣವನ್ನು ಹಿಂಪಡೆಯಬಹುದು. ಆದರೆ ಅದಕ್ಕೂ ಮೊದಲು ನೀವು ಪಿಎಫ್ ಖಾತೆಯಿಂದ ಹಿಂಪಡೆಯುವ ಹಣಕ್ಕೆ ಎಷ್ಟು ತೆರಿಗೆ ಪಾವತಿಸಬೇಕು ಎಂದು ತಿಳಿಯುವುದು ಮುಖ್ಯ.

ಕೆಲಸ ಬಿಟ್ಟ ಒಂದು ತಿಂಗಳ ನಂತರ 75% ಪಿಎಫ್ ಹಣವನ್ನು ಹಿಂಪಡೆಯಬಹುದು:
ಪಿಎಫ್ ವಾಪಸಾತಿ ನಿಯಮಗಳ ಪ್ರಕಾರ, ಒಬ್ಬ ಸದಸ್ಯನು ಕೆಲಸವನ್ನು ತೊರೆದ ಒಂದು  ತಿಂಗಳ ನಂತರ ಪಿಎಫ್ (PF) ಖಾತೆಯಿಂದ 75% ಹಣವನ್ನು ಹಿಂಪಡೆಯಬಹುದು. ಪಿಎಫ್‌ನಲ್ಲಿ ಉಳಿದ 25% ಠೇವಣಿಯನ್ನು ಕೆಲಸ ಬಿಟ್ಟು ಎರಡು ತಿಂಗಳ ನಂತರ ಹಿಂಪಡೆಯಬಹುದು.

ಇದನ್ನೂ ಓದಿ - EPFO ಖಾತೆದಾರರು UAN ನಂಬರ್ ಇಲ್ಲದೆಯೇ ನಿಮ್ಮ PF/EPF ಬ್ಯಾಲೆನ್ಸ್ ತಿಳಿಯಬಹುದು

ಚಿಕಿತ್ಸೆಗಾಗಿ ನೀವು ಸಂಪೂರ್ಣ ಹಣವನ್ನು ಹಿಂಪಡೆಯಬಹುದು :
ಇಪಿಎಫ್ ಖಾತೆದಾರನು ತನ್ನ ಅಥವಾ ಕುಟುಂಬದ ಚಿಕಿತ್ಸೆಗಾಗಿ ಇಪಿಎಫ್‌ನ ಸಂಪೂರ್ಣ ಮೊತ್ತವನ್ನು ಹಿಂಪಡೆಯಬಹುದು. ಈ ಪರಿಸ್ಥಿತಿಯಲ್ಲಿ, ಇಪಿಎಫ್ ಹಣವನ್ನು ಯಾವುದೇ ಸಮಯದಲ್ಲಿ ಹಿಂಪಡೆಯಬಹುದು. ಇದಕ್ಕಾಗಿ, ಒಂದು ತಿಂಗಳು ಅಥವಾ ಹೆಚ್ಚಿನ ಅವಧಿಗೆ ಆಸ್ಪತ್ರೆಗೆ ದಾಖಲಾದ ಪುರಾವೆಗಳನ್ನು ನೀಡಬೇಕಾಗುತ್ತದೆ.

ಇದನ್ನೂ ಓದಿ - PPF Scheme : 150 ರೂಪಾಯಿಯನ್ನು 15 ಲಕ್ಷವನ್ನಾಗಿಸುವ ಅವಕಾಶ; ತಕ್ಷಣವೇ ಈ ಕೆಲಸ ಮಾಡಿ

ಐದು ವರ್ಷಗಳ ಮೊದಲು ಇಪಿಎಫ್ ಖಾತೆಯಿಂದ ಹಣ ಹಿಂಪಡೆದರೆ ತೆರಿಗೆ ಪಾವತಿಸಬೇಕಾಗುತ್ತದೆ?
ನಾವು ಮೇಲೆ ಹೇಳಿದಂತೆ, ಪಿಎಫ್ ಖಾತೆಯಿಂದ ಐದು ವರ್ಷಗಳ ಮೊದಲು ಹಣವನ್ನು ಹಿಂಪಡೆಯಲು ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ನಿಮ್ಮ ಅಸ್ತಿತ್ವದಲ್ಲಿರುವ ಸ್ಲ್ಯಾಬ್ ಪ್ರಕಾರ ಈ ಮೊತ್ತದ ಮೇಲೆ ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಪಿಎಫ್ ಖಾತೆಗೆ ನೀವು ಕೊಡುಗೆ ನೀಡಿದ (ಠೇವಣಿ) ವರ್ಷದಲ್ಲಿ, ನಿಮ್ಮ ಒಟ್ಟು ಆದಾಯಕ್ಕೆ ಅನ್ವಯವಾಗುವ ತೆರಿಗೆ ಸ್ಲ್ಯಾಬ್ ಪ್ರಕಾರ ತೆರಿಗೆ ಪಾವತಿಸಬೇಕಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News