7th Pay Commission - ಕೊರೊನಾ ಮಹಾಮಾರಿಯ ಹಿನ್ನೆಲೆ ಕೇಂದ್ರದ ಸುಮಾರು 50 ಲಕ್ಷಕ್ಕೂ ಹೆಚ್ಚು ನೌಕರರಿಗೆ ಮೋದಿ ಸರ್ಕಾರದಿಂದ ದೊಡ್ಡ ಉಡುಗೊರೆ ಸಿಕ್ಕಂತಾಗಿದೆ. ಕೇಂದ್ರ ನೌಕರರಿಗೆ Leave Travel Concession (LTC) ಹಕ್ಕಿಗೆ ಸಂಬಂಧಿಸಿದ ನಿಯಮಗಳನ್ನು ಸರ್ಕಾರ ಸಡಿಲಗೊಳಿಸಿದೆ. ಈ ಮೊದಲು ಸೂಚಿಸಲಾಗಿದ್ದ ಅಂತಿಮ ಗಡುವಿನವರೆಗೆ ಅಂದರೆ, 2021 ರ ಮೇ 31 ರ ತನಕ ತಮ್ಮ ಎಲ್‌ಟಿಸಿಗೆ ಹಕ್ಕು ಪಡೆಯಲು ಸಾಧ್ಯವಾಗದ ನೌಕರರಿಗೆ ಇದು ಪ್ರಯೋಜ ನೀಡಲಿದೆ. ಕೇಂದ್ರ ನೌಕರರು ಲಾಭ ಪಡೆಯಲು ಬಯಸಿದರೆ, 2021 ಮಾರ್ಚ್ 31 ರವರೆಗೆ, ಎಲ್‌ಟಿಸಿ ಹೆಸರಿನಲ್ಲಿ ಮಾಡಿದ ಎಲ್ಲಾ ಖರ್ಚಿನ ಬಿಲ್‌ಗಳನ್ನು ಈಗಲೂ ಕೂಡ ನೌಕರರು ಸಲ್ಲಿಸಬಹುದು ಮತ್ತು ಅವರ ಬಿಲ್ ಗಳಿಗೆ ಕ್ಲಿಯರೆನ್ಸ್ ನೀಡಲಾಗುವುದು ಎಂದು ಸರ್ಕಾರ ಹೇಳಿದೆ.


COMMERCIAL BREAK
SCROLL TO CONTINUE READING

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್
ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ (PM Narendra Modi Government)  ಈ ಕುರಿತಂತೆ ಆದೇಶ ಹೊರಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಕೇಂದ್ರ ವಿತ್ತ ಸಚಿವಾಲಯ,  LTC Cash Voucher Scheme ಗೆ ಸಂಬಂಧಿಸಿದಂತೆ, ನೌಕರರು 31 ಮೇ ಬಳಿಕವೂ ಕೂಡ ಬಿಲ್ ಪಾಸ್ ಮಾಡುವಂತೆ ಮನವಿ ಮಾಡಿದ್ದರು. ಏಕೆಂದರೆ, ಕೊರೊನಾ ವೈರಸ್ ಹಿನ್ನೆಲೆ ಅವರು ಇದುವರೆಗೂ ಕೂಡ ಬಿಲ್ ದಾಖಲಿಸಿರಲಿಲ್ಲ ಎಂದಿದೆ. ಈ ಕುರಿತು ಮಾಹಿತಿ ನೀಡಿರುವ ಅಂಡರ್ ಸೆಕ್ರೆಟರಿ ಸುನಿಲ್ ಕುಮಾರ್,  LTC Special Cash Package ಲಾಭ ಪಡೆಯಲು ಕೇಂದ್ರ ಸರ್ಕಾರಿ ನೌಕರರಿಗೆ ಈ ಸಡಿಲಿಕೆ ನೀಡಲಾಗಿದೆ ಎಂದಿದ್ದಾರೆ. 


ಮೇ 31ರ ಬಳಿಕವೂ ಕೂಡ ಹಕ್ಕುಗಳನ್ನು ಸೆಟಲ್ ಮಾಡಲಾಗುವುದು
ವಿತ್ತ ಸಚಿವಾಲಯದ ಖರ್ಚು ವಿಭಾಗ ಈ ಕುರಿತು ಒಂದು ಆಫಿಸ್ ಮೆಮೊರೆಂಡಂ ಜಾರಿಗೊಳಿಸಿದೆ. 'ಕೊವಿಡ್ 19 ನಂತರ ಸೃಷ್ಟಿಯಾಗಿರುವ ಪರಿಸ್ಥಿತಿಗಳು  ಹಾಗೂ ಕ್ಲೇಮ್/ಬಿಲ್ ಗಳನ್ನು ಇತ್ಯರ್ಥಗೊಳಿಸಲು ಎದುರಾಗುತ್ತಿರುವ ಅಡಚಣೆಗಳನ್ನು ಗಮನದಲ್ಲಿಟ್ಟುಕೊಂಡು ಕ್ಲೇಮ್/ಹಕ್ಕುಗಳ ಸೆಟಲ್ಮೆಂಟ್ ತಿಥಿಯನ್ನು ಮೇ 31, 2021 ರಿಂದ ಮುಂದೂಡಲು ಮನವಿ ದೊರೆತಿದೆ ಎಂದಿದೆ. ಹೀಗಾಗಿ ನಿಗದಿತ ದಿನಾಂಕವನ್ನು ಮೀರಿ  ಅಂದರೆ 2021 ಮೇ 31 ರಂದು ಅಥವಾ ಅದರ ಮೊದಲು ಮಾಡಲಾದ ಹಕ್ಕುಗಳು / ಖರೀದಿಗಳ ಇತ್ಯರ್ಥಕ್ಕೆ ಸಚಿವಾಲಯಗಳು / ಇಲಾಖೆಗಳು ಪರಿಗಣಿಸಬಹುದು ಎಂದು ನಿರ್ಧರಿಸಲಾಗಿದೆ ಎಂದಿದೆ. 


ಇದನ್ನೂ ಓದಿ- EPFO News Alert: ನಿಮ್ಮ PF ಹೂಡಿಕೆಯ ಮೇಲೆ ನಿಮ್ಮ ತಂದೆ-ತಾಯಿಗೂ ಸಿಗುತ್ತದೆ ಪೆನ್ಷನ್, EPFO ಈ ನಿಯಮ ನಿಮಗೆ ಗೊತ್ತಾ?


ಕಳೆದ ವರ್ಷ ಈ ಯೋಜನೆಯನ್ನು ಆರಂಭಿಸಲಾಗಿತ್ತು
ಕಳೆದ ವರ್ಷ ಲಾಕ್‌ಡೌನ್ ನಂತರ ಈ ಯೋಜನೆಯನ್ನು ಪ್ರಾರಂಭಿಸಲಾಗಿತ್ತು.  ಆದರೆ, ಪ್ರಯಾಣಗಳ ಮೇಲೆ ವಿಧಿಸಲಾಗಿದ್ದ ನಿರ್ಬಂಧದಿಂದಾಗಿ, ಕೇಂದ್ರ ನೌಕರರಿಗೆ ಎಲ್‌ಟಿಸಿಯಲ್ಲಿ ಪ್ರಯಾಣಿಸುವುದು ಕಷ್ಟಕರವಾಗಿತ್ತು. ಈ ಯೋಜನೆಯಡಿ, ಉದ್ಯೋಗಿಗೆ ಪ್ರಯಾಣ ಭತ್ಯೆಯ ಬದಲು ನಗದು ಪಾವತಿ ಸಿಗುತ್ತದೆ. ಸಾಮಾನ್ಯ ಸಂದರ್ಭಗಳಲ್ಲಿ, ಎಲ್‌ಟಿಸಿ ಹಕ್ಕು ಇತ್ಯರ್ಥವು ಪ್ರತಿವರ್ಷ ಮಾರ್ಚ್ 31 ರಂದು ನಡೆಯುತ್ತದೆ. ಆದರೆ, ಸಾಂಕ್ರಾಮಿಕ ರೋಗದಿಂದಾಗಿ ಇದನ್ನು 2021 ಮೇ 31 ಕ್ಕೆ ಹೆಚ್ಚಿಸಲಾಗಿತ್ತು. ಪ್ರಸ್ತುತ ಇದಕ್ಕಾಗಿ ಯಾವುದೇ ಗಡುವನ್ನು ನಿಗದಿಪಡಿಸಲಾಗಿಲ್ಲ. ಆದರೆ, ನೌಕರರು ತಮ್ಮ ಹಕ್ಕುಗಳನ್ನು ಆದಷ್ಟು ಬೇಗ ಇತ್ಯರ್ಥಪಡಿಸಿಕೊಳ್ಳಬಹುದು ಎನ್ನಲಾಗಿದೆ.


ಇದನ್ನೂ ಓದಿ- Alert! SBI ಖಾತೆದಾರರ ಮೇಲೆ ಚೀನಾ ಸೈಬರ್ ಕಳ್ಳರ ಕಣ್ಣು, ಖಾತೆ ಖಾಲಿಯಾದೀತು ಎಚ್ಚರ!


ಏನಿದು  LTC Special Cash Package?
ಸರ್ಕಾರಿ ನೌಕರರಿಗೆ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ LTC ಲಾಭ ಸಿಗುತ್ತದೆ. ನೌಕರರು ಒಂದು ಆರ್ಥಿಕ ವರ್ಷದಲ್ಲಿ ಒಂದು ಬಾರಿ ದೇಶದಲ್ಲಿ ಎಲ್ಲಿಗೆ ಬೇಕಾದರೂ ಪ್ರಯಾಣ ಬೆಳೆಸಬಹುದು. ಕುಟುಂಬ ಸಮೇತ ಅವರು ಎರಡು ಬಾರಿ ತಮ್ಮ ಮನೆಗಳಿಗೆ ತೆರಳಬಹುದಾಗಿದೆ. ನೌಕರರಿಗೆ ಇದಕ್ಕಾಗಿ ವಿಮಾನ ಯಾತ್ರೆ ಹಾಗೂ ರೈಲು ಯಾತ್ರೆಯ LTC ಲಾಭ ಸಿಗುತ್ತದೆ.


ಇದನ್ನೂ ಓದಿ- GPF Interest Rate: ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ, GPF ಹೊಸ ಬಡ್ಡಿದರಗಳು ಪ್ರಕಟ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.