EPFO News Alert: ನಿಮ್ಮ PF ಹೂಡಿಕೆಯ ಮೇಲೆ ನಿಮ್ಮ ತಂದೆ-ತಾಯಿಗೂ ಸಿಗುತ್ತದೆ ಪೆನ್ಷನ್, EPFO ಈ ನಿಯಮ ನಿಮಗೆ ಗೊತ್ತಾ?

EPFO News Alert - ಕೊರೊನಾ ಸಂಕ್ರಾಮಿಕದಿಂದ ಹಲವು ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುವ ಸ್ಥಿತಿ ಬಂದಿದೆ. ಈ ಮಹಾಮಾರಿ ಹಲವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

Written by - Nitin Tabib | Last Updated : Jul 8, 2021, 07:24 PM IST
  • ಕೊರೊನಾ ಸಂಕ್ರಾಮಿಕದಿಂದ ಹಲವು ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುವ ಸ್ಥಿತಿ ಬಂದಿದೆ.
  • ಈ ಮಹಾಮಾರಿ ಹಲವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
  • ಹಲವು ಕುಟುಂಬಗಳಲ್ಲಿ ಕೇವಲ ವೃದ್ಧ ತಂದೆ-ತಾಯಿಯರು ಮಾತ್ರ ಉಳಿದುಕೊಂಡಿದ್ದಾರೆ.
EPFO News Alert: ನಿಮ್ಮ PF ಹೂಡಿಕೆಯ ಮೇಲೆ ನಿಮ್ಮ ತಂದೆ-ತಾಯಿಗೂ ಸಿಗುತ್ತದೆ ಪೆನ್ಷನ್, EPFO ಈ ನಿಯಮ ನಿಮಗೆ ಗೊತ್ತಾ? title=
EPFO News Alert (Courtesy-EPFO Video Grab)

EPFO News Alert - ಕೊರೊನಾ ಸಂಕ್ರಾಮಿಕದಿಂದ (Corona Pandemic) ಹಲವು ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುವ ಸ್ಥಿತಿ ಬಂದಿದೆ. ಈ ಮಹಾಮಾರಿ ಹಲವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಹಲವು ಕುಟುಂಬಗಳಲ್ಲಿ ಕೇವಲ ವೃದ್ಧ ತಂದೆ-ತಾಯಿಯರು ಮಾತ್ರ ಉಳಿದುಕೊಂಡಿದ್ದಾರೆ. ತಮ್ಮ ಮನೆಯ ಏಕೈಕ ಉದ್ಯೋಗಿ ಮಗ/ಮಗಳನ್ನು ಕಳೆದುಕೊಂಡ ಅಂತಹ ವೃದ್ಧರ ನೆರವಿಗೆ EPFO ನಿಂತಿದೆ. ಇಂತಹ ಪೋಷಕರಿಗೆ ಇದೀಗ ಆಜೀವನ ಪಿಂಚಣಿ ಲಾಭ ಸಿಗಲಿದೆ. ಇದಕ್ಕಾಗಿ ಪಿಂಚಣಿ ಯೋಜನೆಯಲ್ಲಿ ಕೆಲ ನಿಯಮ ಮತ್ತು ಷರತ್ತುಗಳನ್ನು ನೀಡಲಾಗಿದೆ.

ಪೆನ್ಷನ್ ಯೋಜನೆಯ ಈ ಷರತ್ತುಗಳೇನು?
1995ರಲ್ಲಿ EPFO ಪಿಂಚಣಿ ಯೋಜನೆ (EPS) ಆರಂಭಗೊಂಡಿತ್ತು. EPFO ಪ್ರಕಾರ, ನೌಕರಿಯಲ್ಲಿರುವಾಗ ಒಂದು ವೇಳೆ ಯಾವುದೇ ವ್ಯಕ್ತಿಯ ಸಾವು ಸಂಭವಿಸಿದರೆ ಮತ್ತು ಆ ನೌಕರ ತನ್ನ ಕುಟುಂಬದ ಏಕಮೇವ ಆರ್ಥಿಕ ಬೆನ್ನೆಲುಬಾಗಿದ್ದು, ಆತನ ತಂದೆ-ತಾಯಿಯರು ಆಶ್ರಿತರಾಗಿದ್ದಾರೆ, ಇಂತಹ ಸಂದರ್ಭದಲ್ಲಿ EPS-95ರ ನಿಯಮಗಳ ಅಡಿ ಆಜೀವನ ಪೆನ್ಷನ್ ಸಿಗುತ್ತದೆ. ಆದರೆ, ಆ ನೌಕರ ಕನಿಷ್ಠ ಅಂದರೆ 10 ವರ್ಷ ಸೇವೆ ಸಲ್ಲಿಸಿರಬೇಕು ಎಂಬ ನಿಯಮವಿದೆ. ಇನೂಂದೆಡೆ ಒಂದು ವೇಳೆ ನೌಕರ, ತನ್ನ ನೌಕರಿ ಇರುವಾಗಲೇ ಶಾರೀರಿಕವಾಗಿ ನೌಕರಿ ಮಾಡುವ ಕ್ಷಮತೆ ಕಳೆದುಕೊಂಡರೆ, ಅಂತಹ ನೌಕರರಿಗೂ ಕೂಡ ಆಜೀವನ ಪೆನ್ಷನ್ ಸಿಗುತ್ತದೆ. ಆದರೆ, ಇಲ್ಲಿ 10 ವರ್ಷ ಕಡ್ಡಾಯ ಸೇವೆ ಸಲ್ಲಿಕೆಯಿಂದ ವಿನಾಯ್ತಿ ಇರಲಿದೆ.

ಇದನ್ನೂ ಓದಿ-Alert! SBI ಖಾತೆದಾರರ ಮೇಲೆ ಚೀನಾ ಸೈಬರ್ ಕಳ್ಳರ ಕಣ್ಣು, ಖಾತೆ ಖಾಲಿಯಾದೀತು ಎಚ್ಚರ!

ಇದನ್ನೂ ಓದಿ-Paytm Postpaid: ಗ್ರಾಹಕರಿಗೆ ನಿಮಿಷಗಳಲ್ಲಿ ಸಿಗಲಿದೆ 60,000 ರೂಪಾಯಿಗಳ ಸಾಲ..!

PF ಖಾತೆಗೆ ಎಷ್ಟು ಕೊಡುಗೆ ನೀಡಬೇಕು?
ಯಾವುದೇ ಓರ್ವ ನೌಕರನ ಒಟ್ಟು ಬೇಸಿಕ್ ಸ್ಯಾಲರಿ ಹಾಗೂ ತುಟ್ಟಿಭತ್ಯೆಯ ಶೇ.12 ರಷ್ಟು ಕೊಡುಗೆ PF ಖಾತೆಗೆ ಸೇರುತ್ತದೆ. ಇದಲ್ಲದೆ ನೌಕರನ ಕೊಡುಗೆಯಷ್ಟೇ ಹಣವನ್ನು ಕಂಪನಿ ಕೂಡ ನೌಕರನ ಖಾತೆಗೆ ಸೇರಿಸುತ್ತದೆ. ನಿವೃತ್ತಿಯ ಬಳಿಕ ನೌಕರನ ಒಟ್ಟು ಹಣ ಸಂಪೂರ್ಣ ಬಡ್ಡಿ ಸಹಿತ ಸಿಗುತ್ತದೆ. ನೌಕರನ ಶೇ.12ರಷ್ಟು ಹಣ ನೇರವಾಗಿ ಆತನ EPF ಖಾತೆ ಸೇರುತ್ತದೆ. ಆದರೆ, ನೌಕರಿದಾತರು ನೀಡುವ ಪಿಎಫ್ (Provident Fund) ಕೊಡುಗೆಯಲ್ಲಿ ಶೇ.8.33 ರಷ್ಟು ಹಣ EPF ಸೇರಿದರೆ, ಶೇ.3.67 ಹಣ EPS ಖಾತೆಗೆ ಸೇರುತ್ತದೆ.

ಇದನ್ನೂ ಓದಿ-Personal Loan : ವೈಯಕ್ತಿಕ ಸಾಲದ ಮೇಲೆ ಆದಾಯ ತೆರಿಗೆ ವಿನಾಯಿತಿ ಲಭ್ಯ : ಹೇಗೆ ಕ್ಲೈಮ್ ಮಾಡಬೇಕು ಇಲ್ಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News