7th Pay Commission: ಈ ಬಾರಿ ಕೇಂದ್ರ ಸರ್ಕಾರ ತನ್ನ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ (ಡಿಎ) ಘೋಷಣೆ ಮಾಡಿಲ್ಲ. ಆದರೆ ಹೋಳಿ ಹಬ್ಬದಂದು ಮೋದಿ ಸರ್ಕಾರ ಎಲ್ಲಾ ಕೇಂದ್ರ ನೌಕರರಿಗೆ ಭರ್ಜರಿ ಗಿಫ್ಟ್ ನೀಡಿದೆ. ನೌಕರರಿಗೆ ವಿಶೇಷ ಹಬ್ಬದ ಮುಂಗಡ ಯೋಜನೆ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಈ ಯೋಜನೆಯಡಿ ಪ್ರತಿ ಕೇಂದ್ರ ನೌಕರರು ಸರಕಾರದಿಂದ 10,000 ರೂ. ಪಡೆಯಲಿದ್ದಾರೆ. ಅಂದರೆ ಹಬ್ಬದ ಸಂದರ್ಭದಲ್ಲಿ ಸರ್ಕಾರಿ ನೌಕರರು ಈ ಯೋಜನೆಯನ್ನು ಬಳಸಿ ಮುಂಗಡವಾಗಿ 10,000 ರೂಪಾಯಿ ತೆಗೆದುಕೊಳ್ಳಬಹುದು.


COMMERCIAL BREAK
SCROLL TO CONTINUE READING

ಲಕ್ಷಾಂತರ ಉದ್ಯೋಗಿಗಳು ಈ ಉಡುಗೊರೆಯನ್ನು ಪಡೆಯುತ್ತಾರೆ
ಈ ಯೋಜನೆಯ ವಿಶೇಷತೆ ಎಂದರೆ ಸರ್ಕಾರದಿಂದ ಪಡೆದ ಈ ಹಣಕ್ಕೆ ನೌಕರರು ಯಾವುದೇ ಬಡ್ಡಿಯನ್ನು ಪಾವತಿಸಬೇಕಾಗಿಲ್ಲ. ಈ ಹಣ ಖರ್ಚು ಮಾಡಲು ಮಾರ್ಚ್ 31ರವರೆಗೆ ಕಾಲಾವಕಾಶ ನೀಡಲಾಗಿದೆ. ಪ್ರತಿ ವರ್ಷ ಲಕ್ಷಾಂತರ ಉದ್ಯೋಗಿಗಳಿಗೆ ಹಣಕಾಸು ಸಚಿವಾಲಯ ಈ ಉಡುಗೊರೆಯನ್ನು ನೀಡುತ್ತದೆ. ಉದ್ಯೋಗಿಗಳಿಗೆ ನೀಡಲಾಗುತ್ತಿರುವ ಈ ಹಣವು ಅಡ್ವಾನ್ಸ್ ಪ್ರಿಲೋಡ್ ಆಗಿದೆ. ಅಂದರೆ, ಈ ಹಣವನ್ನು ಈಗಾಗಲೇ ಕೇಂದ್ರ ಸರ್ಕಾರಿ ನೌಕರರ ವೇತನ ಖಾತೆಯಲ್ಲಿ ನೋಂದಣಿಗೊಂಡಿದೆ, ಅವರು ಅದನ್ನು ಖರ್ಚು ಮಾಡಬೇಕು ಅಷ್ಟೇ.


ಇದನ್ನೂ ಓದಿ-EPFO ಚಂದಾದಾರರಿಗೊಂದು ಮಹತ್ವದ ಮಾಹಿತಿ!


ಹಣದ ಮರುಪಾವತಿಗೆ ಅತ್ಯಂತ ಸುಲಭ ನಿಯಮಗಳು
ಈ ಮುಂಗಡ ಹಣಕ್ಕೆ ಸರ್ಕಾರಿ ನೌಕರರು ಯಾವುದೇ ರೀತಿಯ ಬಡ್ಡಿ ಕಟ್ಟಬೇಕಾಗಿಲ್ಲ ಎಂಬುದು ಅತ್ಯಂತ ಸಂತಸದ ಸಂಗತಿಯಾಗಿದೆ. ಈ ಹಣದ ಮರುಪಾವತಿಯ ನಿಯಮಗಳು ಸಹ ತುಂಬಾ ಸುಲಭವಾಗಿವೆ. ನೀವು 10000 ಸಾವಿರ ರೂಪಾಯಿಗಳನ್ನು 1000 ರೂಪಾಯಿಗಳ ಸುಲಭ ಕಂತುಗಳಲ್ಲಿ ಹಿಂತಿರುಗಿಸಬಹುದು, ಅದು ಕೂಡ ಬಡ್ಡಿಯಿಲ್ಲದೆ. ಪ್ರತಿ ವರ್ಷ ಸರ್ಕಾರದಿಂದ ಉತ್ಸವ ಮುಂಗಡ ಯೋಜನೆಯಡಿ ನೌಕರರಿಗೆ ಹಣ ನೀಡಲಾಗುತ್ತದೆ.


ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರ ಮೇಲೆ ಹಣದ ಸುರಿಮಳೆ, ತುಟ್ಟಿಭತ್ಯೆ ಶೇ.45ಕ್ಕೆ ಏರಿಕೆ!
ಕೇಂದ್ರ ಸರ್ಕಾರದ ಈ ಯೋಜನೆಯಡಿ ನಾಲ್ಕರಿಂದ ಐದು ಸಾವಿರ ಕೋಟಿ ಮೀಸಲಿಡಲಾಗಿದೆ. ಮುಂಗಡ ಯೋಜನೆಯ ಬ್ಯಾಂಕ್ ಶುಲ್ಕವನ್ನೂ ಸರ್ಕಾರವೇ ಭರಿಸುತ್ತಿದೆ ಎಂದು ಮೂಲಗಳು ಹೇಳಿವೆ. ಮುಂಗಡವಾಗಿ ಪಡೆದ ಈ ಹಣವನ್ನು ಉದ್ಯೋಗಿಗಳು ಡಿಜಿಟಲ್ ಆಗಿ ಖರ್ಚು ಮಾಡಬಹುದು. ಈ ಹಿಂದೆ ಕೇಂದ್ರ ನೌಕರರು ಎಲ್ ಟಿಸಿ ಕ್ಯಾಶ್ ವೋಚರ್ ಯೋಜನೆಯಂತಹ ಸೌಲಭ್ಯಗಳನ್ನು ಪಡೆಯುತ್ತಿದ್ದರು. ಈ ಯೋಜನೆಯಡಿ, ಪ್ರಯಾಣ ಭತ್ಯೆಯ ಬದಲಾಗಿ ನೌಕರರು ಪಡೆದ ನಗದು ಮೊತ್ತವನ್ನು ಮಾರುಕಟ್ಟೆಯಲ್ಲಿ ಚಲಾವಣೆ ಮಾಡಲಾಗುತ್ತದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.