EPFO ಚಂದಾದಾರರಿಗೊಂದು ಮಹತ್ವದ ಮಾಹಿತಿ!

EPFO Illness Advance: ಸಾಮಾನ್ಯವಾಗಿ ಇಪಿಎಫ್‌ಒ ಚಂದಾದಾರರಿಗೆ ವೈದ್ಯಕೀಯ ತುರ್ತು ಸಂದರ್ಭದಲ್ಲಿ ಅನಾರೋಗ್ಯ ಮುಂಗಡ ಸೌಲಭ್ಯವನ್ನು ನೀಡಲಾಗುತ್ತದೆ. ಇಂದು, ಇಪಿಎಫ್‌ಒ ಚಂದಾದಾರರಿಗೆ ಲಭ್ಯವಿರುವ ಅನಾರೋಗ್ಯದ ಮುಂಗಡ ಕುರಿತು ನಾವು ನಿಮಗೆ ಕೆಲವು ಪ್ರಮುಖ ವಿಷಯಗಳನ್ನು ಹೇಳುತ್ತೇವೆ, ಇದರಿಂದ ಭವಿಷ್ಯದಲ್ಲಿ ಅಗತ್ಯವಿದ್ದರೆ ನೀವು ಸಹ ಈ ಸೌಲಭ್ಯದ ಲಾಭವನ್ನು ಪಡೆಯಬಹುದು.  

Written by - Nitin Tabib | Last Updated : Mar 8, 2023, 05:03 PM IST
  • ಇಪಿಎಫ್‌ಒ ಚಂದಾದಾರರಿಗೆ ಮೆಡಿಕಲ್ ಎಮರ್ಜೆನ್ಸಿ ಅಡ್ವಾನ್ಸ್ ಸೌಲಭ್ಯವನ್ನು ನೀಡುತ್ತದೆ.
  • ಇಂದು, ಇಪಿಎಫ್‌ಒ ಚಂದಾದಾರರಿಗೆ ಲಭ್ಯವಿರುವ ಈ ಅನಾರೋಗ್ಯದ ಮುಂಗಡ ಕುರಿತು ನಾವು ನಿಮಗೆ ಕೆಲವು ಪ್ರಮುಖ ವಿಷಯಗಳನ್ನು ಹೇಳುತ್ತಿದ್ದೇವೆ,
  • ಇದರಿಂದ ಭವಿಷ್ಯದಲ್ಲಿ ಅಗತ್ಯವಿದ್ದರೆ ನೀವು ಸಹ ಈ ಸೌಲಭ್ಯದ ಲಾಭವನ್ನು ಪಡೆಯಬಹುದು.
EPFO ಚಂದಾದಾರರಿಗೊಂದು ಮಹತ್ವದ ಮಾಹಿತಿ! title=
ಇಪಿಎಫ್ಓ ಅನಾರೋಗ್ಯ ಮುಂಗಡ

EPFO Latest Update: ಭಾರತದಲ್ಲಿ ಕೆಲಸ ಮಾಡುವ ಕೋಟ್ಯಾಂತರ ಜನರು ಇಪಿಎಫ್‌ಒ ಸೇವೆಯ ಲಾಭ ಪಡೆಯುತ್ತಿದ್ದಾರೆ. ಇಪಿಎಫ್ಒ ಚಂದಾದಾರರು ಭವಿಷ್ಯ ನಿಧಿ, ಪಿಂಚಣಿ ಮತ್ತು ವಿಮಾ ನಿಧಿಗಳ ರೂಪದಲ್ಲಿ ಸರ್ಕಾರದಿಂದ ಸಾಮಾಜಿಕ ಭದ್ರತೆ ಪ್ರಯೋಜನಗಳನ್ನು ಪಡೆಯುತ್ತಾರೆ. ಆದರೆ, ಇಪಿಎಫ್‌ಒ ತನ್ನ ಚಂದಾದಾರರಿಗೆ ಇಂತಹ ಅನೇಕ ಪ್ರಯೋಜನಗಳನ್ನು ಸಹ ನೀಡುತ್ತಿದ್ದು, ಅವುಗಳ ಬಗ್ಗೆ  ಹೆಚ್ಚಿನ ಜನರಿಗೆ ತಿಳಿದಿಲ್ಲ. ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ, ಇಪಿಎಫ್‌ಒ ಚಂದಾದಾರರಿಗೆ ಮೆಡಿಕಲ್ ಎಮರ್ಜೆನ್ಸಿ ಅಡ್ವಾನ್ಸ್ ಸೌಲಭ್ಯವನ್ನು ನೀಡುತ್ತದೆ. ಇಂದು, ಇಪಿಎಫ್‌ಒ ಚಂದಾದಾರರಿಗೆ ಲಭ್ಯವಿರುವ ಈ ಅನಾರೋಗ್ಯದ ಮುಂಗಡ ಕುರಿತು ನಾವು ನಿಮಗೆ ಕೆಲವು ಪ್ರಮುಖ ವಿಷಯಗಳನ್ನು ಹೇಳುತ್ತಿದ್ದೇವೆ, ಇದರಿಂದ ಭವಿಷ್ಯದಲ್ಲಿ ಅಗತ್ಯವಿದ್ದರೆ ನೀವು ಸಹ ಈ ಸೌಲಭ್ಯದ ಲಾಭವನ್ನು ಪಡೆಯಬಹುದು.

ಯಾವ ಸಂದರ್ಭಗಳಲ್ಲಿ ನೀವು ಈ ಪ್ರಯೋಜನ ಪಡೆಯಬಹುದು?
ಇಪಿಎಫ್‌ಒದ ಅನಾರೋಗ್ಯ ಮುಂಗಡ ಸೌಲಭ್ಯದ ಅಡಿಯಲ್ಲಿ, ಚಂದಾದಾರರು ತಮ್ಮ ಮತ್ತು ಕುಟುಂಬದ ಯಾವುದೇ ಸದಸ್ಯರ ಚಿಕಿತ್ಸೆಗಾಗಿ ಈ ಸೌಲಭ್ಯವನ್ನು ಪಡೆಯಬಹುದು. ನೀವು ಅಥವಾ ನಿಮ್ಮ ಕುಟುಂಬದ ಯಾವುದೇ ಸದಸ್ಯರು ಒಂದು ತಿಂಗಳಿಗಿಂತ ಹೆಚ್ಚು ಕಾಲ ಆಸ್ಪತ್ರೆಯಲ್ಲಿದ್ದರೆ, ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ ಅಥವಾ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೆ (ಟಿಬಿ, ಅಂಗವೈಕಲ್ಯ, ಕ್ಯಾನ್ಸರ್, ಮಾನಸಿಕ ಅಸ್ವಸ್ಥತೆ, ಹೃದ್ರೋಗ) ಇಲ್ನೆಸ್ ಅಡ್ವಾನ್ಸ್ ಕ್ಯಾಶ್ ಅನ್ನು ಪಡೆಯಬಹುದು.

ಇದನ್ನೂ ಓದಿ-Edible Oil Latest Price: ಖಾದ್ಯ ತೈಲ ಬೆಲೆಯಲ್ಲಿ ಭಾರಿ ಇಳಿಕೆ, ಇಲ್ಲಿದೆ ಹೊಸ ದರ ಪಟ್ಟಿ!

ಅನಾರೋಗ್ಯದ ಮುಂಗಡವಾಗಿ ಎಷ್ಟು ಹಣವನ್ನು ಸಿಗುತ್ತದೆ
ಅನಾರೋಗ್ಯದ ಅಡ್ವಾನ್ಸ್ ಅಡಿಯಲ್ಲಿ, ನೀವು 6 ತಿಂಗಳ ಮೂಲ ವೇತನವನ್ನು (ತುಟ್ಟಿಭತ್ಯೆ ಸೇರಿದಂತೆ) ಅಥವಾ ಬಡ್ಡಿಯೊಂದಿಗೆ EPF ಖಾತೆಯಲ್ಲಿ ಠೇವಣಿ ಮಾಡಿದ ಒಟ್ಟು ಮೊತ್ತವನ್ನು ಮುಂಗಡವಾಗಿ ತೆಗೆದುಕೊಳ್ಳಬಹುದು. ವಿಶೇಷವೆಂದರೆ ಈ ಹಣವನ್ನು ಹಿಂದಿರುಗಿಸುವ ಅಗತ್ಯವಿಲ್ಲ.

ಇದನ್ನೂ ಓದಿ-Holi 2023: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರಿ ಬದಲಾವಣೆ, ಇಲ್ಲಿದೆ ಹೊಸ ದರಗಳ ವಿವರ!

ಫಾರ್ಮ್ 31 ಅನ್ನು ಭರ್ತಿ ಮಾಡಿದ ಬಳಿಕ, ಹಣ ನೇರವಾಗಿ ಬ್ಯಾಂಕ್ ಖಾತೆಗೆ ಬರುತ್ತದೆ
ಇಪಿಎಫ್‌ಒ ಅಡಿಯಲ್ಲಿ ಅನಾರೋಗ್ಯ ಮುಂಗಡ ಪಡೆಯಲು ನೀವು ಫಾರ್ಮ್ 31 ಅನ್ನು ಭರ್ತಿ ಮಾಡಬೇಕು. ಫಾರ್ಮ್ 31 ಅನ್ನು ಭರ್ತಿ ಮಾಡಿದ ನಂತರ, ನೀವು ಯಾವುದೇ ರೀತಿಯ ಪ್ರಮಾಣಪತ್ರವನ್ನು ಲಗತ್ತಿಸುವ ಅಗತ್ಯವಿಲ್ಲ. ಅನಾರೋಗ್ಯದ ಮುಂಗಡವನ್ನು ಪಡೆಯಲು, ನೀವು EPFO ​​ವೆಬ್‌ಸೈಟ್‌ನಲ್ಲಿ ಮತ್ತು UMANG ಮೊಬೈಲ್ ಅಪ್ಲಿಕೇಶನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಫಾರ್ಮ್ 31 ಅನ್ನು ವೆಬ್‌ಸೈಟ್‌ನಲ್ಲಿ ಮತ್ತು UMANG ಅಪ್ಲಿಕೇಶನ್‌ನಲ್ಲಿ ಭರ್ತಿ ಮಾಡಬಹುದು. ಫಾರ್ಮ್ 31 ಅನ್ನು ಭರ್ತಿ ಮಾಡಿದ ನಂತರ, ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News