ನವದೆಹಲಿ : ಹೊಸ ವರ್ಷದಲ್ಲಿ ಕೇಂದ್ರ ಉದ್ಯೋಗಿಗಳಿಗೆ ಮೋದಿ ಸರ್ಕಾರ (Modi government) ಶುಭ ಸುದ್ದಿ ನೀಡಲಿದೆ. ಸರ್ಕಾರವು ಈ ತಿಂಗಳು ದೀಪಾವಳಿ ಬೋನಸ್ ಜೊತೆಗೆ ತುಟ್ಟಿಭತ್ಯೆ (DA) ಮತ್ತು ಟಿಎ ಹೆಚ್ಚಿಸಿದೆ. ಈಗ ಮತ್ತೊಮ್ಮೆ ಒಂದು ಭತ್ಯೆ ಹೆಚ್ಚಿಸುವ ಮಾತು ಕೇಳಿಬರುತ್ತಿದೆ. ಜನವರಿ ತಿಂಗಳಿನಿಂದ ಕೇಂದ್ರ ನೌಕರರು (Government empoyees) ಇದರ ಲಾಭ ಪಡೆಯಬಹುದು. 


COMMERCIAL BREAK
SCROLL TO CONTINUE READING

ಮನೆ ಬಾಡಿಗೆ ಭತ್ಯೆಯಲ್ಲಿ ಹೆಚ್ಚಳ : 
ಮಾಹಿತಿಯ ಪ್ರಕಾರ, ಉದ್ಯೋಗಿಗಳಿಗೆ ಲಭ್ಯವಿರುವ ಮನೆ ಬಾಡಿಗೆ ಭತ್ಯೆ (HRA) ಹೆಚ್ಚಿಸಬಹುದು. ಇದರಿಂದಾಗಿ ಉದ್ಯೋಗಿಗಳ ಸಂಬಳದಲ್ಲಿ ಬಂಪರ್ ಹೆಚ್ಚಳವಾಗಲಿದೆ (Salary Hike). ಈ ನಿಟ್ಟಿನಲ್ಲಿ 11.56 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳ ಮನೆ ಬಾಡಿಗೆ ಭತ್ಯೆ (HRA) ಜಾರಿಗೊಳಿಸುವ ಬೇಡಿಕೆಯನ್ನು ಹಣಕಾಸು ಸಚಿವಾಲಯ ಪರಿಗಣಿಸಲು ಆರಂಭಿಸಿದೆ. ಸಚಿವಾಲಯವು ರೈಲ್ವೆ ಮಂಡಳಿಗೆ ಪ್ರಸ್ತಾವನೆ ಕಳುಹಿಸಿದೆ. ಅಲ್ಲಿ ಈ ಪ್ರಸ್ತಾವನೆ ಅನುಮೋದನೆಗೊಂಡ ಬಳಿಕ ಉದ್ಯೋಗಿಗಳು ಜನವರಿಯಿಂದ HRA ಪಡೆಯುತ್ತಾರೆ. ಇದಾದ ನಂತರ ನೌಕರರ ವೇತನದಲ್ಲಿ ಸಾಕಷ್ಟು ಹೆಚ್ಚಳವಾಗಲಿದೆ. ಭಾರತೀಯ ರೈಲ್ವೇ ತಾಂತ್ರಿಕ ಮೇಲ್ವಿಚಾರಕರ ಸಂಘ (IRTSA) ಮತ್ತು ರಾಷ್ಟ್ರೀಯ ರೈಲ್ವೇಮೆನ್ ಫೆಡರೇಶನ್ (NFIR) ಜನವರಿ 1, 2021 ರಿಂದ HRA ಅನುಷ್ಠಾನಕ್ಕೆ ಒತ್ತಾಯಿಸಿವೆ.


ಇದನ್ನೂ ಓದಿ:  ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದ್ದರೂ ಅಕೌಂಟ್ ನಿಂದ ಪಡೆಯಬಹುದು 10 ಸಾವಿರ ರೂಪಾಯಿ..!


ನಗರವಾರು HRA ಲಭ್ಯ :
ನಗರಕ್ಕೆ ಅನುಗುಣವಾಗಿ ಮನೆ ಬಾಡಿಗೆ ಭತ್ಯೆ (HRA) ಲಭ್ಯವಿರುತ್ತದೆ. ನಗರಗಳನ್ನು X, Y ಮತ್ತು Z ವರ್ಗಗಳಾಗಿ ವಿಂಗಡಿಸಲಾಗಿದೆ. X ವರ್ಗದಲ್ಲಿ ಬರುವ ಉದ್ಯೋಗಿಗಳು ಈಗ ತಿಂಗಳಿಗೆ 5400 ರೂ.ಗಿಂತ ಹೆಚ್ಚಿನ HRA ಅನ್ನು ಪಡೆಯುತ್ತಾರೆ. Y ವರ್ಗದ ವ್ಯಕ್ತಿಯು ತಿಂಗಳಿಗೆ 3600 ರೂಪಾಯಿಗಳನ್ನು ಪಡೆದರೆ,  Z ವರ್ಗದ ವ್ಯಕ್ತಿಯು ತಿಂಗಳಿಗೆ 1800 ರೂಪಾಯಿಗಳ HRA ಪಡೆಯುತ್ತಾನೆ. 50 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳು ಎಕ್ಸ್ ವರ್ಗದಲ್ಲಿ ಬರುತ್ತವೆ. ಈ ನಗರಗಳ ಉದ್ಯೋಗಿಗಳು 27% HRA ಪಡೆಯುತ್ತಾರೆ. ಇದರಲ್ಲಿ Y ವರ್ಗದ ನಗರಗಳು 18% ಮತ್ತು Z ವರ್ಗವು 9 ಪ್ರತಿಶತವನ್ನು ಒಳಗೊಂಡಿರುತ್ತದೆ. 


ನೌಕರರ ಮೂಲ ವೇತನದಲ್ಲಿ ಹೆಚ್ಚಳ : 
ಕೇಂದ್ರ ನೌಕರರು (Central government employee) ಹೊಸ ವರ್ಷದಲ್ಲಿ ಹಲವು ಉಡುಗೊರೆಗಳನ್ನು ಪಡೆಯಲಿದ್ದಾರೆ. ಕೆಲವು ಇಲಾಖೆಗಳ ನೌಕರರಿಗೆ ಈ ವರ್ಷದ ಡಿಸೆಂಬರ್ ಅಂತ್ಯದಲ್ಲಿ ಬಡ್ತಿ ನೀಡಲಾಗುವುದು. ಅದೇ ರೀತಿ ಕೇಂದ್ರ ಸರ್ಕಾರ ಮುಂದಿನ ವರ್ಷ ಮಂಡಿಸಲಿರುವ ಬಜೆಟ್‌ಗೂ ಮುನ್ನ ಫಿಟ್‌ಮೆಂಟ್ ಫ್ಯಾಕ್ಟರ್ ಅನ್ನು  ಹೆಚ್ಚಿಸಬಹುದು. ಫಿಟ್‌ಮೆಂಟ್ ಫ್ಯಾಕ್ಟರ್ ಅನ್ನು ಹೆಚ್ಚಿಸುವುದರಿಂದ ನೌಕರರ ಮೂಲ ವೇತನ ಹೆಚ್ಚಾಗುತ್ತದೆ. 


ಇದನ್ನೂ ಓದಿ: Post Officeನ ಈ ಯೋಜನೆಯಲ್ಲಿ ಸಿಗಲಿದೆ 16 ಲಕ್ಷ ರೂಪಾಯಿ, ನಿಯಮಗಳೇನು ತಿಳಿಯಿರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.