ನವದೆಹಲಿ : ಯಾವುದೇ ಹೂಡಿಕೆಗೆ ಸಂಬಂಧಿಸಿದಂತೆ ಅಪಾಯ ಇದ್ದೇ ಇರುತ್ತದೆ. ಜನರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಹೂಡಿಕೆ ಮಾಡುತ್ತಾರೆ. ಆದರೆ ಅನೇಕರು ತಾವು ಹೂಡಿಕೆ (Investment) ಮಾಡುವ ಹಣ ಸುರಕ್ಷಿತವಾಗಿರಬೇಕು ಎಂದು ಬಯಸುತ್ತಾರೆ. ಹೀಗೆ ಸುರಕ್ಷಿತ ಹೂಡಿಕೆ ಮಾಡಲು ಇರುವ ಯೋಜನೆಗಳಲ್ಲಿ ಒಂದು ಪೋಸ್ಟ್ ಆಫೀಸ್ ಸಣ್ಣ ಉಳಿತಾಯ ಯೋಜನೆಗಳು (Post office saving scheme). ಇಲ್ಲಿ ಅಪಾಯವು ಅತ್ಯಲ್ಪವಾಗಿರುತ್ತದೆ. ಮತ್ತು ಆದಾಯವೂ ಉತ್ತಮವಾಗಿರುತ್ತದೆ.
ಪೋಸ್ಟ್ ಆಫೀಸ್ ಆರ್‌ಡಿಯಲ್ಲಿ ಹೂಡಿಕೆಯನ್ನು ಹೇಗೆ ಪ್ರಾರಂಭಿಸುವುದು?
ಪೋಸ್ಟ್ ಆಫೀಸ್ ಆರ್‌ಡಿ ಠೇವಣಿ (Post office RD) ಖಾತೆಯು ಉತ್ತಮ ಬಡ್ಡಿ ದರದೊಂದಿಗೆ ಸಣ್ಣ ಕಂತುಗಳನ್ನು ಠೇವಣಿ ಮಾಡುವ ಯೋಜನೆಯಾಗಿದೆ. ಇದರಲ್ಲಿ ಕೇವಲ 100 ರೂಪಾಯಿಗಳ ಸಣ್ಣ ಮೊತ್ತದೊಂದಿಗೆ ಹೂಡಿಕೆಯನ್ನು ಪ್ರಾರಂಭಿಸಬಹುದು. ಯಾವುದೇ ಗರಿಷ್ಠ ಹೂಡಿಕೆಯ ಮಿತಿ ಇಲ್ಲ.
ಇದನ್ನೂ ಓದಿ: ದೇಶದಲ್ಲಿ ಗಗನಕ್ಕೇರುತ್ತಿದೆ ತರಕಾರಿ ಬೆಲೆ : ಆದ್ರೆ ಇಲ್ಲಿ ಕಡಿಮೆ ಬೆಲೆಗೆ ಸಿಗುತ್ತೆ ಟೊಮೇಟೊ-ಈರುಳ್ಳಿ!
ಈ ಯೋಜನೆಯ ಖಾತೆಯನ್ನು ಐದು ವರ್ಷಗಳವರೆಗೆ ತೆರೆಯಲಾಗುತ್ತದೆ. ಆದರೆ ಬ್ಯಾಂಕುಗಳು (Bank) ಆರು ತಿಂಗಳು, 1 ವರ್ಷ, 2 ವರ್ಷ, 3 ವರ್ಷಗಳ ಆರ್ ಡಿ (RD) ಸೌಲಭ್ಯವನ್ನು ನೀಡುತ್ತವೆ. ಅದರಲ್ಲಿ ಠೇವಣಿ ಮಾಡಿದ ಹಣದ ಮೇಲೆ ಪ್ರತಿ ತ್ರೈಮಾಸಿಕಕ್ಕೆ ಬಡ್ಡಿಯನ್ನು ಲೆಕ್ಕಹಾಕಲಾಗುತ್ತದೆ.
5.8ರಷ್ಟು ಬಡ್ಡಿ ಸಿಗಲಿದೆ :
ಪ್ರಸ್ತುತ, ಆರ್ ಡಿ ಯೋಜನೆಯಲ್ಲಿ 5.8% ಬಡ್ಡಿ ಲಭ್ಯವಿದೆ. ಈ ಹೊಸ ದರವು ಏಪ್ರಿಲ್ ಒಂದು 2020 ರಿಂದ ಅನ್ವಯವಾಗುತ್ತದೆ. ಭಾರತ ಸರ್ಕಾರವು ತನ್ನ ಎಲ್ಲಾ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಪ್ರತಿ ತ್ರೈಮಾಸಿಕದಲ್ಲಿ ನಿಗದಿಪಡಿಸುತ್ತದೆ.
ಸಿಗಲಿದೆ 16 ಲಕ್ಷ :
ನೀವು ಪ್ರತಿ ತಿಂಗಳು 10 ಸಾವಿರ ರೂಪಾಯಿಗಳನ್ನು ಪೋಸ್ಟ್ ಆಫೀಸ್ ಆರ್‌ಡಿ ಯೋಜನೆಯಲ್ಲಿ 10 ವರ್ಷಗಳವರೆಗೆ ಹೂಡಿಕೆ ಮಾಡಿದರೆ, 10 ವರ್ಷಗಳ ನಂತರ 5.8% ದರದಲ್ಲಿ 16 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಮೊತ್ತ ಸಿಗುತ್ತದೆ. 10 ವರ್ಷಗಳ ನಂತರ ಮೆಚ್ಯೂರಿಟಿ ಮೊತ್ತ 16,28,963 ರೂ. ವರೆಗೆ ಸಿಗಲಿದೆ.
ಇದನ್ನೂ ಓದಿ: Aadhaar ತೋರಿಸಿ, ಹೊಸ LPG ಗ್ಯಾಸ್ ಸಂಪರ್ಕದ ಜೊತೆಗೆ ಸಬ್ಸಿಡಿ ಪಡೆಯಿರಿ : ಹೇಗೆ ಇಲ್ಲಿದೆ ನೋಡಿ
RD ಖಾತೆಯ ಪ್ರಮುಖ ವಿಷಯಗಳು :
ನಿಯಮಿತವಾಗಿ ಖಾತೆಯಲ್ಲಿ ಹಣವನ್ನು ಠೇವಣಿ ಇಡಬೇಕಾಗುತ್ತದೆ. ಹಣವನ್ನು ಠೇವಣಿ ಮಾಡದಿದ್ದರೆ ನೀವು ಪ್ರತಿ ತಿಂಗಳು ಒಂದು ಶೇಕಡಾ ದಂಡವನ್ನು ಪಾವತಿಸಬೇಕಾಗುತ್ತದೆ. 4 ಕಂತುಗಳು ತಪ್ಪಿದ ನಂತರ ನಿಮ್ಮ ಖಾತೆಯನ್ನು ಮುಚ್ಚಲಾಗುತ್ತದೆ.
ಪೋಸ್ಟ್ ಆಫೀಸ್ RD ಮೇಲಿನ ತೆರಿಗೆ :
ರಿಕರಿಂಗ್ ಠೇವಣಿಗಳಲ್ಲಿನ ಹೂಡಿಕೆಯ ಮೇಲೆ ಟಿಡಿಎಸ್ (TDS) ಕಡಿತಗೊಳಿಸಲಾಗುತ್ತದೆ. ಠೇವಣಿಯು 40,000 ರೂ. ಮೀರಿದರೆ ವರ್ಷಕ್ಕೆ 10% ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ. ಆರ್‌ಡಿಯಲ್ಲಿ ಗಳಿಸಿದ ಬಡ್ಡಿಯು (Interest On RD) ಸಹ ತೆರಿಗೆಗೆ ಒಳಪಡುತ್ತದೆ. ಆದರೆ ಸಂಪೂರ್ಣ ಮೆಚ್ಯೂರಿಟಿ ಮೊತ್ತಕ್ಕೆ ತೆರಿಗೆ ವಿಧಿಸಲಾಗುವುದಿಲ್ಲ. ಯಾವುದೇ ತೆರಿಗೆಯ ಆದಾಯವನ್ನು ಹೊಂದಿರದ ಹೂಡಿಕೆದಾರರು FD ಗಳಂತೆಯೇ ಫಾರ್ಮ್ 15G ಅನ್ನು ಸಲ್ಲಿಸುವ ಮೂಲಕ TDS ವಿನಾಯಿತಿಯನ್ನು ಪಡೆಯಬಹುದು.
ಇದನ್ನೂ ಓದಿ : Banking: ಡೆಬಿಟ್ ಕಾರ್ಡ್ ಅವಧಿ ಮುಗಿದಿದೆಯೇ? ಹೊಸ ಕಾರ್ಡ್ ಬಂದಿಲ್ಲವೇ? ಎಸ್‌ಬಿಐ ನೀಡಿದೆ ಪರಿಹಾರ
ಅಂಚೆ ಕಚೇರಿಯಲ್ಲದೆ, ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳು ಕೂಡಾ ರಿಕರಿಂಗ್ ಡಿಪಾಸಿಟ್ (RD) ಸೌಲಭ್ಯವನ್ನು ಒದಗಿಸುತ್ತವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.