7th Pay Commission Latest Update: ಸರ್ಕಾರಿ ನೌಕರರ ಪಾಲಿಗೆ ಭಾರಿ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಹೌದು ನೌಕರರ ಬಹುದಿನಗಳ ಬೇಡಿಕೆಗೆ ಸರಕಾರ ಮನ್ನಣೆ ನೀಡಿದೆ. ವಾಸ್ತವದಲ್ಲಿ, ಸರ್ಕಾರ ಮುಂದಿನ ವೇತನ ಆಯೋಗವನ್ನು ಘೋಷಿಸಿದೆ. ನೌಕರರ ವೇತನವನ್ನು ಪರಿಶೀಲಿಸಲಾಗುವುದು ಎಂದು ಸರ್ಕಾರ ಹೇಳಿದೆ. ಇದಕ್ಕಾಗಿ ಸರ್ಕಾರ ಆಯೋಗ ರಚನೆ ಮಾಡಿದ್ದು, ಈ ಆಯೋಗದ ವರದಿ ಪ್ರಕಾರ ನೌಕರರ ವೇತನ ಪರಿಷ್ಕರಣೆ ಮಾಡಲಾಗುವುದು ಎನ್ನಲಾಗಿದೆ. ಸರ್ಕಾರದ ಈ ಘೋಷಣೆಯ ನಂತರ ಲಕ್ಷಾಂತರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಸಂಬಳ ಹೆಚ್ಚಾಗಲಿದೆ. ಹಾಗಾದರ ಬನ್ನಿ ಈ ಕುರಿತಾದ ಇತ್ತೀಚಿನ ಅಪ್ಡೇಟ್ ತಿಳಿಯೋಣ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-EPFO News: ಇಪಿಎಫ್ಓ ಕೊಡುಗೆದಾರರ ಪೆನ್ಷನ್ ಹೆಚ್ಚಾಗಲಿದೆಯಾ! ಮಹತ್ವದ ಹೇಳಿಕೆ ನೀಡಿದ ಸರ್ಕಾರ

ನೌಕರರ ವೇತನದಲ್ಲಿ ಬಂಪರ್ ಏರಿಕೆ
ಇದರಿಂದ ಸರ್ಕಾರಿ ನೌಕರರ ವೇತನ ಹೆಚ್ಚಾಗಲಿದೆ. ಕರ್ನಾಟಕ ಸರ್ಕಾರ ತನ್ನ ಉದ್ಯೋಗಿಗಳಿಗೆ ಭರ್ಜರಿ ಸುದ್ದಿ ಪ್ರಕಟಿಸಿದೆ. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ರಾಜ್ಯದ ನೌಕರರಿಗೆ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗಾಗಿ ಕರ್ನಾಟಕ ಸರ್ಕಾರ ಆಯೋಗವನ್ನು ರಚಿಸಿದೆ. ಈ ಆಯೋಗದ ಅಧ್ಯಕ್ಷತೆಯನ್ನು ಮಾಜಿ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ವಹಿಸಿದ್ದಾರೆ. ಈ 7ನೇ ವೇತನ ಆಯೋಗದ ವರದಿ ಪ್ರಕಾರ ರಾಜ್ಯ ನೌಕರರ ವೇತನವನ್ನು ಪರಿಶೀಲಿಸಲಾಗುವುದು ಎನ್ನಲಾಗಿದೆ.


ಇದನ್ನೂ ಓದಿ-Price Hike: ಡಿಸೆಂಬರ್ 1 ರಿಂದ ಈ ಜನಪ್ರೀಯ ಕಂಪನಿಯ ಬೈಕ್-ಸ್ಕೂಟರ್ ಗಳು ದುಬಾರಿಯಾಗಲಿವೆ


ನೌಕರರು ಮತ್ತು ಪಿಂಚಣಿದಾರರಿಗೆ ಭಾರಿ ಲಾಭ
ಸರ್ಕಾರದ ಈ ನಿರ್ಧಾರದ ನಂತರ, ರಾಜ್ಯದ ಲಕ್ಷಾಂತರ ನೌಕರರು ಮತ್ತು ಪಿಂಚಣಿದಾರರು ಹೆಚ್ಚಿದ ವೇತನ ಮತ್ತು ಪಿಂಚಣಿಯ ಲಾಭವನ್ನು ಪಡೆಯಲಿದ್ದಾರೆ. ಕರ್ನಾಟಕ ಸರ್ಕಾರ ಅಕ್ಟೋಬರ್ ತಿಂಗಳಿನಲ್ಲಿಯೇ ಈ ಆಯೋಗವನ್ನು ರಚಿಸಿದೆ ಎಂಬುದು ಇಲ್ಲಿ ಉಲ್ಲೇಖನೀಯ ಈ ಆಯೋಗದ ಶಿಫಾರಸಿನ ಮೇರೆಗೆ ಮಾತ್ರ ಸರ್ಕಾರವು ರಾಜ್ಯದ ನೌಕರರ ವೇತನ ಮತ್ತು ಪಿಂಚಣಿಯನ್ನು ನಿರ್ಧರಿಸಲಾಗುತ್ತದೆ. ಕರ್ನಾಟಕ ಸರ್ಕಾರದ ಏಳನೇ ವೇತನ ಆಯೋಗ ರಚನೆಯಾದ ನಂತರ, ರಾಜ್ಯದ 6 ಲಕ್ಷ ನೌಕರರು ಮತ್ತು ಪಿಂಚಣಿದಾರರಲ್ಲಿ ಭಾರಿ ಸಂತಸದ ವಾತಾವರಣವಿದೆ. ನೌಕರರ ಬಹುದಿನಗಳ ಬೇಡಿಕೆಗೆ ಮನ್ನಣೆ ದೊರೆತಿರುವುದರಿಂದ ವೇತನ, ಪಿಂಚಣಿ ಹೆಚ್ಚಳವಾಗುವ ಸಾಧ್ಯತೆ ಇದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.