Price Hike: ಡಿಸೆಂಬರ್ 1 ರಿಂದ ಈ ಜನಪ್ರೀಯ ಕಂಪನಿಯ ಬೈಕ್-ಸ್ಕೂಟರ್ ಗಳು ದುಬಾರಿಯಾಗಲಿವೆ

Hero Motocorp: ದ್ವಿಚಕ್ರ ವಾಹನವೇ ಇರಲಿ ಅಥವಾ ನಾಲ್ಕು ಚಕ್ರದ ವಾಹನಗಳಿರಲಿ, ಈ ವರ್ಷ ಬಹುತೇಕ ಎಲ್ಲಾ ವರ್ಗದ ವಾಹನಗಳ ಬೆಲೆಯಲ್ಲಿ ಏರಿಕೆಯಾಗಿದೆ. ಇದೀಗ ಮತ್ತೊಂದು ಜನಪ್ರೀಯ ದ್ವಿಚಕ್ರ ವಾಹನ ತಯಾರಕ ಕಂಪನಿಯು ತನ್ನ ಸ್ಕೂಟರ್ ಮತ್ತು ಬೈಕ್‌ಗಳ ಬೆಲೆಯನ್ನು ಹೆಚ್ಚಿಸಲಿದೆ.  

Written by - Nitin Tabib | Last Updated : Nov 26, 2022, 04:49 PM IST
  • ದ್ವಿಚಕ್ರ ವಾಹನವೇ ಇರಲಿ ಅಥವಾ ನಾಲ್ಕು ಚಕ್ರದ ವಾಹನಗಳಿರಲಿ,
  • ಈ ವರ್ಷ ಬಹುತೇಕ ಎಲ್ಲಾ ವರ್ಗದ ವಾಹನಗಳ ಬೆಲೆಯಲ್ಲಿ ಏರಿಕೆಯಾಗಿದೆ.
  • ಇದೀಗ ಮತ್ತೊಂದು ಜನಪ್ರೀಯ ದ್ವಿಚಕ್ರ ವಾಹನ ತಯಾರಕ ಕಂಪನಿಯು ತನ್ನ ಸ್ಕೂಟರ್ ಮತ್ತು ಬೈಕ್‌ಗಳ ಬೆಲೆಯನ್ನು ಹೆಚ್ಚಿಸಲಿದೆ.
Price Hike: ಡಿಸೆಂಬರ್ 1 ರಿಂದ ಈ ಜನಪ್ರೀಯ ಕಂಪನಿಯ ಬೈಕ್-ಸ್ಕೂಟರ್ ಗಳು ದುಬಾರಿಯಾಗಲಿವೆ title=
Price Hike

Hero Motocorp Price Hike: ದ್ವಿಚಕ್ರ ವಾಹನವೇ ಇರಲಿ ಅಥವಾ ನಾಲ್ಕು ಚಕ್ರದ ವಾಹನಗಳಿರಲಿ, ಈ ವರ್ಷ ಬಹುತೇಕ ಎಲ್ಲಾ ವರ್ಗದ ವಾಹನಗಳ ಬೆಲೆಯಲ್ಲಿ ಏರಿಕೆಯಾಗಿದೆ. ಇದೀಗ ಮತ್ತೊಂದು ಜನಪ್ರೀಯ ದ್ವಿಚಕ್ರ ವಾಹನ ತಯಾರಕ ಕಂಪನಿಯು ತನ್ನ ಸ್ಕೂಟರ್ ಮತ್ತು ಬೈಕ್‌ಗಳ ಬೆಲೆಯನ್ನು ಹೆಚ್ಚಿಸಲಿದೆ.  Hero MotoCorp ತನ್ನ ಮೋಟಾರ್‌ಸೈಕಲ್‌ಗಳು ಮತ್ತು ಸ್ಕೂಟರ್‌ಗಳ ಎಕ್ಸ್ ಶೋರೂಂ ಬೆಲೆಗಳನ್ನು 1 ಡಿಸೆಂಬರ್ 2022 ರಿಂದ ಹೆಚ್ಚಿಸುವುದಾಗಿ ಘೋಷಿಸಿದೆ. ಕಂಪನಿಯು 1500 ರೂಪಾಯಿಗಳವರೆಗೆ ಬೆಲೆ ಏರಿಕೆ ಮಾಡಲಿದೆ ಎನ್ನಲಾಗಿದೆ. ಆದರೆ, ಇದು ನಿರ್ದಿಷ್ಟ ಮಾದರಿಯನ್ನು ಅವಲಂಬಿಸಿರುತ್ತದೆ ಎಂದೂ ಕೂಡ ಹೇಳಲಾಗಿದೆ. ಹೀಗಿರುವಾಗ ನೀವು ಕೂಡ ಹೀರೋ ಮೋಟಾರ್‌ಸೈಕಲ್ ಅಥವಾ ಬೈಕ್ ಖರೀದಿಸಲು ಯೋಜಿಸುತ್ತಿದ್ದರೆ, ನೀವು ನವೆಂಬರ್ 30 ರ ಮೊದಲು ಖರೀದಿಸುವ ಮೂಲಕ ಸ್ವಲ್ಪ ಹಣ ಉಳಿತಾಯ ಮಾಡಬಹುದು.

ಇದನ್ನೂ ಓದಿ-ನೂತನ ಇನ್ನೋವಾ ಹೈಕ್ರಾಸ್ ಬಿಡುಗಡೆ ಮಾಡಿದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್

ಮಾಧ್ಯಮ ವರದಿಗಳ ಪ್ರಕಾರ, ಹೀರೋ ಮೋಟೋಕಾರ್ಪ್‌ನ ಸಿಎಫ್‌ಒ (ಮುಖ್ಯ ಹಣಕಾಸು ಅಧಿಕಾರಿ) ನಿರಂಜನ್ ಗುಪ್ತಾ ಅವರು ಹೆಚ್ಚಿದ ವೆಚ್ಚದಿಂದಾಗಿ, ಬ್ರ್ಯಾಂಡ್‌ನ ಮೋಟಾರ್‌ಸೈಕಲ್‌ಗಳು ಮತ್ತು ಸ್ಕೂಟರ್‌ಗಳ ಬೆಲೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ಗ್ರಾಹಕರ ಮೇಲಿನ ಪರಿಣಾಮವನ್ನು ಕಡಿಮೆ ಮಾಡಲು ಕಂಪನಿಯು ಹಣಕಾಸು ಯೋಜನೆಯನ್ನು ಮುಂದುವರಿಸುತ್ತದೆ ಎಂದೂ ಕೂಡ ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ. ಹೀರೋ ತಂಡವು ತನ್ನ ಉಳಿತಾಯ ಕಾರ್ಯಕ್ರಮಗಳನ್ನು ಮುಂದುವರೆಸುತ್ತಿದೆ, ಇದು ವೆಚ್ಚದ ಪರಿಣಾಮವನ್ನು ಮತ್ತಷ್ಟು ಕಡಿಮೆ ಮಾಡಲು ಮತ್ತು ಅಂಚುಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಗುಪ್ತಾ ಹೇಳಿದ್ದಾರೆ.

ಇದನ್ನೂ ಓದಿ-Ration Card News : ಪಡಿತರ ಚೀಟಿದಾರರಿಗೆ ಬಿಗ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ!

"ಆರ್ಥಿಕ ಸೂಚಕಗಳು ಹೆಚ್ಚಿದ ಬೇಡಿಕೆಗೆ ಅನುಕೂಲಕರವಾಗಿವೆ ಮತ್ತು ಮುಂಬರುವ ತ್ರೈಮಾಸಿಕಗಳಲ್ಲಿ ಕಂಪನಿಯು ಹೆಚ್ಚಿನ ಮಾರಾಟವನ್ನು ನಿರೀಕ್ಷಿಸುತ್ತದೆ" ಎಂದು ಗುಪ್ತಾ ಹೇಳಿದ್ದಾರೆ. ಹೀರೋ ಮೋಟೋಕಾರ್ಪ್ ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ಅಕ್ಟೋಬರ್ 2022 ರಲ್ಲಿ Hero MotoCorp ನ ಮಾರಾಟವು ಶೇ.17 ರಷ್ಟು ಕುಸಿದಿದ್ದರೂ, ಅದು ಇನ್ನೂ ಹೆಚ್ಚಿನ ವಾಹನಗಳನ್ನು ಮಾರಾಟ ಮಾಡಿದೆ. ಕಂಪನಿ ಒಟ್ಟು 4,54,582 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ 4,42,825 ಯುನಿಟ್‌ಗಳನ್ನು ಮಾರಾಟ ಮಾಡಿದ್ದರೆ ಉಳಿದ 11,757 ಯುನಿಟ್‌ಗಳನ್ನು ಇತರ ದೇಶಗಳಿಗೆ ರಫ್ತು ಮಾಡಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News