ನವದೆಹಲಿ: ಕರೋನಾ ಸಾಂಕ್ರಾಮಿಕದ ಮಧ್ಯೆ, ಡಿಎ ಮತ್ತು ಟಿಎ ಹೆಚ್ಚಳಕ್ಕೆ 50 ಲಕ್ಷಕ್ಕೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಕಾಯುತ್ತಿದ್ದಾರೆ. ಏಕೆಂದರೆ ಮಾರ್ಚ್‌ನಿಂದ ರಾಜ್ಯ ಹಣಕಾಸು ಸಚಿವರು ಸಂಸತ್ತಿನಲ್ಲಿ ಈ ಘೋಷಣೆ ಮಾಡಿದ್ದು, ಜುಲೈನಿಂದ ನೌಕರರ DA ಬಿಡುಗಡೆ ಮಾಡಲು ನಿರ್ಧರಿಸಿದೆ, ಅಂದರೆ ಮೊದಲಿನಂತೆ ಬಿಡುಗಡೆ ಮಾಡಲಾಗುವುದು.


COMMERCIAL BREAK
SCROLL TO CONTINUE READING

ಪ್ರಯಾಣ ಭತ್ಯೆ (TA) ಜುಲೈನಿಂದ ಹೆಚ್ಚಾಗುವುದಿಲ್ಲ!


ಆದರೆ ಈಗ ಜುಲೈನಿಂದ ಕೇಂದ್ರ ನೌಕರರ ಪ್ರಯಾಣ ಭತ್ಯೆ(Travel Allowance) ಹೆಚ್ಚಾಗುವುದಿಲ್ಲ ಎಂಬ ಮಾಧ್ಯಮ ವರದಿಗಳಲ್ಲಿ ಸುದ್ದಿ ಚರ್ಚೆಯಲ್ಲಿದೆ. DA ಹೆಚ್ಚಾದಾಗ ಪ್ರಯಾಣ ಭತ್ಯೆಯೂ ಹೆಚ್ಚಾಗುತ್ತದೆ. ಆದರೆ 7 ನೇ ವೇತನ ಆಯೋಗದ ಪೇ ಮ್ಯಾಟ್ರಿಕ್ಸ್ ಲೆಕ್ಕಾಚಾರದ ಪ್ರಕಾರ, ಡಿಎ 25% ಅಥವಾ ಅದಕ್ಕಿಂತ ಹೆಚ್ಚಿಲ್ಲ, ಆದ್ದರಿಂದ ಪ್ರಯಾಣ ಭತ್ಯೆಯನ್ನು ಹೆಚ್ಚಿಸಲಾಗುವುದಿಲ್ಲ. ಏಕೆಂದರೆ ಕೇಂದ್ರ ನೌಕರರ ಪ್ರಸ್ತುತ DA ಕೇವಲ 17% ಮಾತ್ರ.


ಇದನ್ನೂ ಓದಿ : NPS : ಸರ್ಕಾರದ ಈ ಯೋಜನೆಯಲ್ಲಿ ಪ್ರತಿದಿನ ₹ 74 ಹೂಡಿಕೆ ಮಾಡಿ ನಿವೃತ್ತಿ ನಂತ್ರ ಪಡೆಯಿರಿ ₹ 1 ಕೋಟಿ! ಹೇಗೆ ಇಲ್ಲಿದೆ ನೋಡಿ 


TA ಏಕೆ ಹೆಚ್ಚಾಗುವುದಿಲ್ಲ?


ಜುಲೈ 1 , 2021 ರಿಂದ ಡಿಎ ಪುನಃಸ್ಥಾಪನೆಯಾ(Restore)ಗುವುದರಿಂದ, ಜುಲೈ-ಡಿಸೆಂಬರ್ 2021 ರ DA ಶೇ. 25 ಕ್ಕಿಂತ ಹೆಚ್ಚಾಗುತ್ತದೆ, ಆಗ ಪ್ರಯಾಣ ಭತ್ಯೆ ಕೂಡ ಹೆಚ್ಚಾಗುತ್ತದೆ ಎಂದು ಅವರು ಹೇಳಿದರು. ಕಾರ್ಯದರ್ಶಿ ಮಿಶ್ರಾ ಅವರು 2021 ರ ಜನವರಿಯಿಂದ ಜೂನ್ ವರೆಗೆ ಡಿಎ ಪ್ರಕಟಣೆ ಇನ್ನೂ ಬಾಕಿ ಇದೆ ಎಂದು ಹೇಳಿದರು. ಆದ್ದರಿಂದ, ಜುಲೈ 1 ರಿಂದ DA ಹೆಚ್ಚಳವು ದಸರಾ ಮತ್ತು ದೀಪಾವಳಿಗೆ ಮಾಡಲಾಗುತ್ತದೆ ಎನ್ನಲಾಗಿದೆ. ಇದು ಈ ವರ್ಷದ ಅಂತ್ಯದ ವೇಳೆಗೆ ನೌಕರರ 7 ನೇ ವೇತನ ಆಯೋಗದ ವೇತನ ಮ್ಯಾಟ್ರಿಕ್ಸ್‌ನಲ್ಲಿ ಕಂಡುಬರುತ್ತದೆ.


ಇದನ್ನೂ ಓದಿ : 7th Pay Commission: ಸರ್ಕಾರಿ ನೌಕರರಿಗೆ ಬಿಗ್ ಶಾಕ್!


DA ಗಾಗಿ ಕಾಯುತ್ತಿದ್ದ ನೌಕರರು :


ಜುಲೈ 1 ರಿಂದ ಕೇಂದ್ರ ಸರ್ಕಾರದ ಎಲ್ಲ ಉದ್ಯೋಗಿಗಳಿಗೆ ಡಿಎ(Dearness allowance) ಸಂಪೂರ್ಣ ಲಾಭ ಸಿಗಲಿದೆ ಎಂದು ಮಾರ್ಚ್‌ನಲ್ಲಿ ರಾಜ್ಯ ಹಣಕಾಸು ಸಚಿವ ಅನುರಾಗ್ ಠಾಕೂರ್ ಅವರು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದರು.  2021 ರ ಜನವರಿಯಿಂದ ಜೂನ್ ವರೆಗೆ ಫ್ರೀಜ್ ಮಾಡಿದ ಡಿಎ ಜೊತೆಗೆ ಡಿಎ ಹೆಚ್ಚಳದ ಪ್ರಯೋಜನವನ್ನು ಸಹ ಅವರು ಪಡೆಯುತ್ತಾರೆ. ಪ್ರಸ್ತುತ ಶೇ. 17 ರಷ್ಟು DA ಲಭ್ಯವಿದೆ ಅದು ಶೇ. 28 ರಷ್ಟು ಹೆಚ್ಚಳವಾಗುತ್ತದೆ ಎನ್ನಲಾಗಿದೆ. ಕರೋನಾ ಸಾಂಕ್ರಾಮಿಕದ ದೃಷ್ಟಿಯಿಂದ, 1 ಜನವರಿ 2020, 1 ಜುಲೈ 2020 ಮತ್ತು 1 ಜನವರಿ 2021 ರಂದು ಕೇಂದ್ರ ನೌಕರರು ಮತ್ತು ಪಿಂಚಣಿದಾರರ ಡಿಎ ಮತ್ತು ಡಿಆರ್ ಅನ್ನು ತೆಡೆ ಹಿಡಿಯಲಾಗಿದೆ.


ಇದನ್ನೂ ಓದಿ : Gold-Silver Rate : ಚಿನ್ನ ಖರೀದಿಸಲು ಉತ್ತಮ ಅವಕಾಶ: ಬಂಗಾರದ ಬೆಲೆಯಲ್ಲಿ ₹ 8750 ಅಗ್ಗ!


TA ಏಕೆ ಪಡೆಯಬೇಕು?


ಪ್ರಯಾಣ ಭತ್ಯೆಯಾಗಿ, ಕೇಂದ್ರ ನೌಕರರು ಹೋಟೆಲ್‌(Hotels)ಗಳು ಅಥವಾ ಅತಿಥಿ ಗೃಹಗಳಲ್ಲಿ ವಸತಿ ಅಥವಾ ಟ್ಯಾಕ್ಸಿ ವೆಚ್ಚಗಳಿಗಾಗಿ ಪ್ರತ್ಯೇಕ ಹಣವನ್ನು ಪಡೆಯುತ್ತಾರೆ. ಪ್ರಯಾಣ ಭತ್ಯೆಗಳಲ್ಲಿ ರಸ್ತೆ, ವಿಮಾನ ಪ್ರಯಾಣ, ರೈಲು ಪ್ರಯಾಣ ಮತ್ತು ಸಮುದ್ರ ಯಾನ ಶುಲ್ಕಗಳು ಸೇರಿವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.