NPS : ಸರ್ಕಾರದ ಈ ಯೋಜನೆಯಲ್ಲಿ ಪ್ರತಿದಿನ ₹ 74 ಹೂಡಿಕೆ ಮಾಡಿ ನಿವೃತ್ತಿ ನಂತ್ರ ಪಡೆಯಿರಿ ₹ 1 ಕೋಟಿ! ಹೇಗೆ ಇಲ್ಲಿದೆ ನೋಡಿ 

ನಿಮಗಿರುವ ಕಡಿಮೆ ಸಂಬಳದಲ್ಲಿಯೂ ನೀವು ಮಿಲಿಯನೇರ್ ಆಗಬಹುದು

Last Updated : Apr 26, 2021, 05:55 PM IST
  • ಮಿಲಿಯನೇರ್ ಆಗಲು, ನೀವು ವ್ಯಾಪಾರ ಮಾಡಬೇಕಾಗಿಲ್ಲ ಅಥವಾ ಹೆಚ್ಚಿನ ಸಂಬಳ ತಗೋಳಬೆಕ್ಕಾಗಿಲ್ಲ
  • ನಿಮಗಿರುವ ಕಡಿಮೆ ಸಂಬಳದಲ್ಲಿಯೂ ನೀವು ಮಿಲಿಯನೇರ್ ಆಗಬಹುದು
  • ಇದಕ್ಕಾಗಿ ಸರ್ಕಾರವು ಎನ್‌ಪಿಎಸ್ ಯೋಜನೆ
NPS : ಸರ್ಕಾರದ ಈ ಯೋಜನೆಯಲ್ಲಿ ಪ್ರತಿದಿನ ₹ 74 ಹೂಡಿಕೆ ಮಾಡಿ ನಿವೃತ್ತಿ ನಂತ್ರ ಪಡೆಯಿರಿ ₹ 1 ಕೋಟಿ! ಹೇಗೆ ಇಲ್ಲಿದೆ ನೋಡಿ  title=

ನವದೆಹಲಿ: ಮಿಲಿಯನೇರ್ ಆಗಲು, ನೀವು ವ್ಯಾಪಾರ ಮಾಡಬೇಕಾಗಿಲ್ಲ ಅಥವಾ ಹೆಚ್ಚಿನ ಸಂಬಳ ತಗೋಳಬೆಕ್ಕಾಗಿಲ್ಲ. ನಿಮಗಿರುವ ಕಡಿಮೆ ಸಂಬಳದಲ್ಲಿಯೂ ನೀವು ಮಿಲಿಯನೇರ್ ಆಗಬಹುದು. ಇದಕ್ಕಾಗಿ ಸರ್ಕಾರವು ಎನ್‌ಪಿಎಸ್ ಯೋಜನೆ ಆರಂಭಿಸಿದೆ. ಇದರಿಂದ ಜನರು ಸ್ವಲ್ಪ ಹಣವನ್ನು ಠೇವಣಿ ಇಡಬಹುದು, ನಿವೃತ್ತಿ ನಂತರ ಈ ಹಣ ಪಡೆಯಬಹುದು.

ದಿನಕ್ಕೆ ಕೇವಲ 74 ರೂಪಾಯಿಗಳನ್ನು ಎನ್‌ಪಿಎಸ್‌(National Pension System)ನಲ್ಲಿ  ಉಳಿಸಿ ನಿವೃತ್ತಿ ನಂತರ 1 ಕೋಟಿ ರೂಪಾಯಿ ಕೈಯಲ್ಲಿರುತ್ತದೆ. ನಿಮಗೆ 20 ವಯಸ್ಸಾಗಿದ್ದರೆ  ಈಗಿನಿಂದಲೇ ನಿಮ್ಮ ನಿವೃತ್ತಿಯಬಗ್ಗೆ ಪ್ಲಾನ್ ರೂಪಿಸಿ, ಇನ್ನೂ ದಿನಕ್ಕೆ 74 ರೂಪಾಯಿ ಉಳಿತಾಯ ಮಾಡುವುದು ದೊಡ್ಡ ವಿಷಯವೇನಲ್ಲ.

ಇದನ್ನೂ ಓದಿ : 7th Pay Commission: ಸರ್ಕಾರಿ ನೌಕರರಿಗೆ ಬಿಗ್ ಶಾಕ್!

 ಎನ್‌ಪಿಎಸ್‌ನ ಹಣವನ್ನು ನಿಮ್ಮಲ್ಲಿ ಎರಡು ಕಡೆ ಹೂಡಿಕೆ(Invest) ಮಾಡಬಹುದು, ಸ್ಟಾಕ್ ಮಾರ್ಕೆಟ್ ಮತ್ತು ಸಾಲ ಅಂದರೆ ಸರ್ಕಾರಿ ಬಾಂಡ್‌ಗಳು ಮತ್ತು ಕಾರ್ಪೊರೇಟ್ ಬಾಂಡ್‌ಗಳು. ಖಾತೆಯ ಪ್ರಾರಂಭದ ಸಮಯದಲ್ಲಿ ಮಾತ್ರ ಎನ್‌ಪಿಎಸ್‌ನ ಎಷ್ಟು ಹಣ ಇಕ್ವಿಟಿಗೆ ಹೋಗುತ್ತದೆ ಎಂಬುದನ್ನು ನೀವು ನಿರ್ಧರಿಸಬಹುದು. ಸಾಮಾನ್ಯವಾಗಿ 75% ರಷ್ಟು ಹಣ ಈಕ್ವಿಟಿಗೆ ಹೋಗಬಹುದು. ಇದರರ್ಥ ನೀವು ಪಿಪಿಎಫ್ ಅಥವಾ ಇಪಿಎಫ್ ಗಿಂತ ಸ್ವಲ್ಪ ಹೆಚ್ಚಿನ ಲಾಭವನ್ನು ಪಡೆಯಬ(NPS)ಹುದು.

ಇದನ್ನೂ ಓದಿ : Gold-Silver Rate : ಚಿನ್ನ ಖರೀದಿಸಲು ಉತ್ತಮ ಅವಕಾಶ: ಬಂಗಾರದ ಬೆಲೆಯಲ್ಲಿ ₹ 8750 ಅಗ್ಗ!

ಈಗ ನೀವು ಎನ್‌ಪಿಎಸ್ ಮೂಲಕ ಮಿಲಿಯನೇರ್ ಆಗಲು ಬಯಸಿದರೆ, ಅದರ ವಿಧಾನವು ತುಂಬಾ ಸುಲಭ, ಸ್ವಲ್ಪ ಟ್ರಿಕ್ ಅಗತ್ಯವಿದೆ. ಈ ಸಮಯದಲ್ಲಿ ನಿಮಗೆ 20 ವರ್ಷ ವಯಸ್ಸಾಗಿದೆ ಎಂದು ಭಾವಿಸೋಣ. ನೀವು ದಿನಕ್ಕೆ 74 ರೂಗಳನ್ನು ಉಳಿಸುವ ಮೂಲಕ ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡಿದರೆ, ಅಂದರೆ ತಿಂಗಳಿಗೆ 2230 ರೂಗಳನ್ನು ಉಳಿಸಿದರೆ, ನೀವು ಇದನ್ನು ಮಾಡಬಹುದು. ಅಂದರೆ, ನೀವು 40 ವರ್ಷಗಳ ನಂತರ ನಿವೃತ್ತ(Retirement)ರಾದಾಗ, ನೀವು ಮಿಲಿಯನೇರ್ ಆಗುತ್ತೀರಿ. ಈಗ ನಿಮಗೆ ಶೇ. 9 ರಷ್ಟು ಲಾಭ ಪಡೆಯಬಹುದು. ಆದ್ದರಿಂದ ನೀವು ನಿವೃತ್ತರಾದಾಗ, ನಿಮ್ಮ ಒಟ್ಟು ಪಿಂಚಣಿ ಸಂಪತ್ತು 1.03 ಕೋಟಿ ರೂಪಾಯಿ ಆಗಿರುತ್ತದೆ.

ಇದನ್ನೂ ಓದಿ : LPG ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿ ದೊಡ್ಡ ಬದಲಾವಣೆ!

ಎನ್‌ಪಿಎಸ್‌ನಲ್ಲಿ ಹೂಡಿಕೆ ಪ್ರಾರಂಭ

ವಯಸ್ಸು 20 ವರ್ಷ

ತಿಂಗಳಿಗೆ 2230 ರೂ.

ಹೂಡಿಕೆ ಅವಧಿ 40 ವರ್ಷ

ಅಂದಾಜು ಆದಾಯ ಶೇ. 9

ಇದನ್ನೂ ಓದಿ : Mobile ATM Van: ಕರೋನಾ ಯುಗದಲ್ಲಿ ಈ ಬ್ಯಾಂಕಿನ ಗ್ರಾಹಕರಿಗೆ ಮನೆ ಬಾಗಿಲಿಗೆ ತಲುಪಲಿದೆ ಮೊಬೈಲ್ ಎಟಿಎಂ

ಹೂಡಿಕೆಯ ಎನ್‌ಪಿಎಸ್ ಬುಕ್ಕೀಪಿಂಗ್

ಒಟ್ಟು ಹೂಡಿಕೆ 10.7 ಲಕ್ಷ ರೂಪಾಯಿ

ಒಟ್ಟು ಬಡ್ಡಿ 92.40 ಕೋಟಿ ರೂ

ಪಿಂಚಣಿ ಸಂಪತ್ತು 1.03 ಕೋಟಿ

ಒಟ್ಟು ತೆರಿಗೆ ಉಳಿತಾಯ 3.21 ಲಕ್ಷ ರೂ

ಇದನ್ನೂ ಓದಿ : Gold-Silver Price: ಇಲ್ಲಿದೆ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆಯ ಸಂಪೂರ್ಣ ವಿವರ! 

ಈಗ ನೀವು ಈ ಎಲ್ಲಾ ಹಣ(Money)ವನ್ನು ಒಮ್ಮೆಗೇ ಹಿಂಪಡೆಯಲು ಸಾಧ್ಯವಿಲ್ಲ, ನೀವು ಅದರಲ್ಲಿ ಶೇ.60 ರಷ್ಟು ಹಿಂಪಡೆಯಬಹುದು, ಉಳಿದ ಶೇ.40 ರಷ್ಟು ವರ್ಷಾಶನ ಯೋಜನೆಯಲ್ಲಿ ಹಾಕಬೇಕು, ಇದರಿಂದ ನೀವು ಪ್ರತಿ ತಿಂಗಳು ಪಿಂಚಣಿ ಪಡೆಯುತ್ತೀರಿ. ನಿಮ್ಮ ಹಣದ 40% ಅನ್ನು ನೀವು ವರ್ಷಾಶನದಲ್ಲಿ ಇರಿಸಿದ್ದೀರಿ ಎಂದು ಭಾವಿಸೋಣ. ಆದ್ದರಿಂದ ನಿಮಗೆ 60 ವರ್ಷ ವಯಸ್ಸಾದಾಗ, ನೀವು ಒಂದು ದೊಡ್ಡ ಮೊತ್ತವನ್ನು 61.86 ಲಕ್ಷಗಳನ್ನು ಹಿಂಪಡೆಯಲು ಸಾಧ್ಯವಾಗುತ್ತದೆ ಮತ್ತು ಬಡ್ಡಿ ಶೇ.8  ಎಂದು ಭಾವಿಸಿ. ಪ್ರತಿ ತಿಂಗಳು ಪಿಂಚಣಿ ಸುಮಾರು 27500 ರೂ. ಪಡೆಯಬಹುದು.

ಇದನ್ನೂ ಓದಿ : Bank Holiday : ಬ್ಯಾಂಕ್ ಕೆಲಸಗಳನ್ನ ಆದಷ್ಟು ಬೇಗ ಮುಗಿಸಿಕೊಳ್ಳಿ: ಮೇ ತಿಂಗಳಲ್ಲಿ 12 ದಿನ ಬ್ಯಾಂಕ್ ರಜೆ! 

ಪಿಂಚಣಿ ಖಾತೆ

ವರ್ಷಾಶನ ಶೇ. 40

ಅಂದಾಜು ಬಡ್ಡಿದರ 8%

ಒಟ್ಟು ಮೊತ್ತ 61.86 ಕೋಟಿ ರೂ

ಮಾಸಿಕ ಪಿಂಚಣಿ 27496 ರೂಪಾಯಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News