7th Pay Commission: DA ಹೆಚ್ಚಳದ ಬಳಿಕ ಸರ್ಕಾರಿ ನೌಕರರಿಗೆ ದೀಪಾವಳಿಗೂ ಮುನ್ನ ಮತ್ತೊಂದು ಗಿಫ್ಟ್ ನೀಡಿದ ಸರ್ಕಾರ
7th Pay Commission DR Hike: ತುಟ್ಟಿ ಭತ್ಯೆ ಹೆಚ್ಚಳದ ಬಳಿಕ ದೀಪಾವಳಿಗೂ ಮುನ್ನ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಮತ್ತೊಂದು ಭರ್ಜರಿ ಸುದ್ದಿ ನೀಡಿದೆ. ಹೌದು, ಜುಲೈ 1, 2022 ರಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರವು ಡಿಯರ್ನೆಸ್ ರಿಲೀಫ್ (ಡಿಆರ್) ಅನ್ನು ಶೇ.4 ರಷ್ಟು ಹೆಚ್ಚಿಸಿದೆ. ಈ ಕುರಿತಾದ ಇತ್ತೀಚಿನ ಅಪ್ಡೇಟ್ ತಿಳಿಯೋಣ ಬನ್ನಿ.
7th Pay Commission: ದೀಪಾವಳಿಗೂ ಮುನ್ನ ಮುನ್ನ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಮತ್ತೊಂದು ಭರ್ಜರಿ ಸುದ್ದಿ ಪ್ರಕಟಿಸಿದೆ. ಈ ಹಿಂದೆ ಸರ್ಕಾರವು ತುಟ್ಟಿಭತ್ಯೆಯನ್ನು ಶೇ.34 ರಿಂದ ಶೇ.4 ರಷ್ಟು ಹೆಚ್ಚಿಸಿ ಶೇ.38ಕ್ಕೆ ತಲುಪಿಸಿದೆ. ಇದೀಗ ಸರ್ಕಾರವು ಜುಲೈ 1, 2022 ರಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರಿ ನೌಕರರಿಗೆ ಡಿಯರ್ನೆಸ್ ರಿಲೀಫ್ (ಡಿಆರ್) ಅನ್ನು ಶೇ.4% ಹೆಚ್ಚಿಸಿದೆ. ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯ ಕಚೇರಿ ಹೊರಡಿಸಿರುವ ಆಫೀಸ್ ಮೆಮೊರಾಂಡಮ್ (ಒಎಂ) ಪ್ರಕಾರ, ಇದೀಗ ಡಿಆರ್ ಅನ್ನು ಶೇ.38% ಕ್ಕೆ ಹೆಚ್ಚಿಸಲಾಗಿದೆ.
ಜ್ಞಾಪಕ ಪತ್ರದಲ್ಲೇನಿದೆ?
ಅಕ್ಟೋಬರ್ 8, 2022 ರಂದು ಇಲಾಖೆ ಹೊರಡಿಸಿದ ಜ್ಞಾಪಕ ಪತ್ರದಲ್ಲಿ, 'ಕೇಂದ್ರ ಸರ್ಕಾರದ ಪಿಂಚಣಿದಾರರು/ಕುಟುಂಬ ಪಿಂಚಣಿದಾರರಿಗೆ ಸ್ವೀಕಾರಾರ್ಹವಾದ ತುಟ್ಟಿಭತ್ಯೆಯನ್ನು 01.07.2022 ರಿಂದ ಜಾರಿಗೆ ಬರುವಂತೆ ಪ್ರಸ್ತುತ ಇರುವ 34% ರಿಂದ 38% ಕ್ಕೆ ಹೆಚ್ಚಿಸಲಾಗುವುದು' ಎನ್ನಲಾಗಿದೆ ಡಿಆರ್ ಹೆಚ್ಚಳದಿಂದ ಕೇಂದ್ರ ಸರ್ಕಾರಿ ನೌಕರರು, ಕೇಂದ್ರ ಸರ್ಕಾರದ ಪಿಂಚಣಿದಾರರು ಮತ್ತು ಕೇಂದ್ರ ಸರ್ಕಾರದಿಂದ ಪಿಂಚಣಿ ಪಡೆಯುವ ಕುಟುಂಬ ಪಿಂಚಣಿದಾರರಿಗೆ ಅನುಕೂಲವಾಗಲಿದೆ. DR ಅನ್ನು ಸಾಮಾನ್ಯವಾಗಿ ಸೆಪ್ಟೆಂಬರ್ ಮತ್ತು ಮಾರ್ಚ್ ತಿಂಗಳುಗಳಲ್ಲಿ ವರ್ಷಕ್ಕೆ ಎರಡು ಬಾರಿ ಘೋಷಿಸಲಾಗುತ್ತದೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ಅಷ್ಟೇ ಅಲ್ಲ, ಪಿಂಚಣಿದಾರರ ಪೋರ್ಟಲ್ ಪ್ರಕಾರ, ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ಪಿಂಚಣಿ/ಕುಟುಂಬ ಪಿಂಚಣಿ ಮೇಲಿನ ಡಿಆರ್ ಅನ್ನು ಹಿಂದಿನ ವರ್ಷದ ಡಿಸೆಂಬರ್ ತಿಂಗಳಿಗೆ ಲಭ್ಯವಿರುವ ಡಿಆರ್ ದರಗಳ ಪ್ರಕಾರ ಲೆಕ್ಕಹಾಕಲಾಗುತ್ತದೆ.
ಇದನ್ನೂ ಓದಿ-Bank FD: ಸರ್ಕಾರಿ ಹಾಗೂ ಖಾಸಗಿ ಬ್ಯಾಂಕುಗಳಲ್ಲಿ FD ಮಾಡುವವರಿಗೆ RBI ನೀಡಿದೆ ಮಹತ್ವದ ಮಾಹಿತಿ
ಡಿಎ ಹೆಚ್ಚಳ ಜುಲೈ 1, 2022 ರಿಂದ ಜಾರಿಗೆ ಬರಲಿದೆ
ಸರ್ಕಾರದ ಡಿಎ ಹೆಚ್ಚಳವು ಜುಲೈ 1, 2022 ರಿಂದ ಅನ್ವಹಿಸಲಿದೆ ಎಂದು ಈ ಹಿಂದೆಯೇ ಹೇಳಲಾಗಿದೆ. ಈ ಹಿಂದೆ ಮಾರ್ಚ್ 2022 ರಲ್ಲಿ, ಜನವರಿಯಿಂದ ಡಿಎ ಹೆಚ್ಚಿಸುವುದಾಗಿ ಸರ್ಕಾರ ಘೋಷಿಸಿತ್ತು. ಆಗ ಕೇಂದ್ರ ನೌಕರರ ಡಿಎಯನ್ನು ಶೇ.31ರಿಂದ ಶೇ.34ಕ್ಕೆ ಹೆಚ್ಚಿಸಲಾಗಿತ್ತು. ಇದೀಗ ಅದು ಶೇ.38ಕ್ಕೆ ಏರಿಕೆಯಾಗಿದೆ. ಇದರ ಪ್ರಕಾರ ಸೆಪ್ಟಂಬರ್ ತಿಂಗಳ ಸಂಬಳದಲ್ಲಿ ನೌಕರರಿಗೆ ಎರಡು ತಿಂಗಳ ಡಿಎ ಅರಿಯರ್ ಸಿಗಲಿದೆ.
ಇದನ್ನೂ ಓದಿ-PFRDA New Rule : NPS ಹೂಡಿಕೆದಾರರಿಗೆ ಗಮನಕ್ಕೆ : ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಇಲಾಖೆ
ಯಾವ ಆಧಾರದ ಮೇಲೆ ಡಿಎ ಹೆಚ್ಚಾಗುತ್ತದೆ
ಲಕ್ಷಗಟ್ಟಲೆ ಉದ್ಯೋಗಿಗಳ ತುಟ್ಟಿಭತ್ಯೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರವು AICPI-IW (ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ- ಕೈಗಾರಿಕಾ ಕೆಲಸಗಾರ) ಸೂಚ್ಯಂಕದ ದತ್ತಾಂಶವನ್ನು ಆಧಾರವಾಗಿ ಪರಿಗಣಿಸುತ್ತದೆ ಎಂಬುದು ಇಲ್ಲಿ ಉಲ್ಲೇಖನೀಯ. ಮೊದಲಾರ್ಧದ AICPI-IW ಡೇಟಾದ ಆಧಾರದ ಮೇಲೆ ಜುಲೈನ DA ಅನ್ನು ಘೋಷಿಸಲಾಗಿದೆ. ಜೂನ್‌ನಲ್ಲಿ ಸೂಚ್ಯಂಕವು 129.2 ಕ್ಕೆ ಏರಿಕೆಯೊಂದಿಗೆ ಶೇ.4 ಡಿಎ ಹೆಚ್ಚಳಕ್ಕೆ ದಾರಿಯನ್ನು ತೆರವು ಮಾಡಿಕೊಟ್ಟಿದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.