7th Pay Commission: ಕೇಂದ್ರ ಸರ್ಕಾರಿ ನೌಕರರ ಪಾಲಿಗೊಂದು ಶಾಕಿಂಗ್ ಸುದ್ದಿ ಪ್ರಕಟವಾಗಿದೆ. ಬೋನಸ್ ಮತ್ತು ಡಿಎಗಳಿಗೆ ಸಂಬಂಧಿಸಿದ ಸಂತಸದ ಸುದ್ದಿಗಳ ನಡುವೆಯೇ, ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರ ಹೊಸ ಆದೇಶವನ್ನು ಹೊರಡಿಸಿದೆ. ಸಿಬ್ಬಂದಿ ಸಚಿವಾಲಯದ ಅಡಿಯಲ್ಲಿ ಬರುವ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT), ಏಕಕಾಲದಲ್ಲಿ ಎರಡು ಅಥವಾ ಹೆಚ್ಚಿನ ದಂಡದ ಕ್ರಮದ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದೆ. ಈ ನಿಯಮವು 7 ನೇ ವೇತನ ಆಯೋಗದ ಅಡಿಯಲ್ಲಿ ಬರುವ ಉದ್ಯೋಗಿಗಳಿಗೆ ಅನ್ವಯಿಸುತ್ತದೆ ಎಂಬುದು ಇಲ್ಲಿ ಉಲ್ಲೇಖನೀಯ.


COMMERCIAL BREAK
SCROLL TO CONTINUE READING

ಸರ್ಕಾರ ಹೊಸ್ರದಿಸಿರುವ ಆದೇಶ ಏನು?
ಪೆನಾಲ್ಟಿಯ ಮೊದಲ ಕ್ರಿಯೆಯ ಸಮಯದಲ್ಲಿ, ಎರಡನೇ ಕ್ರಮವನ್ನು ಸಹ ಆಹ್ವಾನಿಸಬಹುದು ಎಂದು DoPT ಕಚೇರಿ ಜ್ಞಾಪಕ ಪತ್ರದಲ್ಲಿ ತಿಳಿಸಿದೆ. ಅಂದರೆ, ಏಕಕಾಲದಲ್ಲಿ ಎರಡು ದಂಡ ವಿಧಿಸುವ ಸಾಧ್ಯತೆಗಳ ಕುರಿತು ಇಲಾಖೆ ಸ್ಪಷ್ಟೀಕರಣ ನೀಡಿದೆ. ನೌಕರನಿಗೆ ಏಕಕಾಲದಲ್ಲಿ ಎರಡು ದಂಡ ವಿಧಿಸಲಾಗುತ್ತಿದೆ ಮತ್ತು ಎರಡೂ ಶಿಕ್ಷೆಗಳು ಏಕಕಾಲದಲ್ಲಿ ನಡೆಯುತ್ತವೆ ಎಂದು ಶಿಕ್ಷೆ ವಿಧಿಸುವ ಅಧಿಕಾರಿಗಳು ತಮ್ಮ ಆದೇಶದಲ್ಲಿ ಸ್ಪಷ್ಟವಾಗಿ ಬರೆಯಬೇಕು ಎಂದು ಇಲಾಖೆ ಸೂಚಿಸಿದೆ. ಇದರಿಂದ ಎರಡೂ ದಂಡಗಳು ಏಕಕಾಲದಲ್ಲಿ ಅನ್ವಯವಾಗುತ್ತವೆಯೇ ಅಥವಾ ಒಂದು ಮುಗಿದ ನಂತರ ಮತ್ತೊಂದು ಅನ್ವಯವಾಗುತ್ತದೆಯೇ  ಎಂಬುದರ ಕುರಿತು ಕಚೇರಿ ತನ್ನ ಜ್ಞಾಪಕ ಪತ್ರದಲ್ಲಿ ಸ್ಪಷ್ಟೀಕರಣ ನೀಡಿದೆ.


ನಿಯಮವೇನು?
ಪ್ರಾಧಿಕಾರವು ತನ್ನ ಆದೇಶದಲ್ಲಿ ಅದನ್ನು ಸ್ಪಷ್ಟವಾಗಿ ನಮೂದಿಸದಿದ್ದರೆ, ಎರಡೂ ಶಿಕ್ಷೆಗಳು ಒಟ್ಟಿಗೆ ಅನ್ವಯಿಸುತ್ತವೆ ಮತ್ತು ಏಕಕಾಲದಲ್ಲಿ ನಡೆಯುತ್ತವೆ ಎಂದು ಸಿಬ್ಬಂದಿ ಇಲಾಖೆ ತಿಳಿಸಿದೆ. ಈ ನಿಯಮದ ಪ್ರಕಾರ, ನಂತರದ ಆದೇಶವು ಭಾರೀ ದಂಡವನ್ನು ಹೊಂದಿದ್ದರೆ, ನಂತರ ಅದನ್ನು ಹಿಂದಿನ ಆದೇಶದ ಮೇಲೆ ತಕ್ಷಣವೇ ಜಾರಿಗೊಳಿಸಲಾಗುತ್ತದೆ ಮತ್ತು ಅದರ ಅವಧಿ ಮುಗಿದ ನಂತರ, ಹಿಂದಿನ ಆದೇಶದ ಅವಧಿಯನ್ನು ಬಿಟ್ಟರೆ, ಅದು ಸಹ ಪೂರ್ಣಗೊಳ್ಳುತ್ತದೆ. ಅಂದರೆ, ಎರಡೂ ಶಿಕ್ಷೆಗಳು ಒಟ್ಟಿಗೆ ಸಿಗುತ್ತವೆ. 7 ನೇ ವೇತನ ಆಯೋಗದ ಅಡಿಯಲ್ಲಿ ಸಂಬಳ ಪಡೆಯುವ ಉದ್ಯೋಗಿಗಳಿಗೆ DoPT ಹಲವು ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿದೆ.


ಇದನ್ನೂ ಓದಿ-LML First EC: ಬಿಡಿಕಾಸು ಪಾವತಿಸದೇ ಉಚಿತವಾಗಿ ಬುಕ್ ಮಾಡಿ ಈ ಎಲೆಕ್ಟ್ರಿಕ್ ಸ್ಕೂಟರ್, ವೈಶಿಷ್ಟ್ಯಗಳು ಇಲ್ಲಿವೆ


ಪಿಂಚಣಿ ಮತ್ತು ಗ್ರಾಚ್ಯುಟಿ ಸಿಗುವುದಿಲ್ಲ
ಈ ಮೊದಲು, ಸರ್ಕಾರವು CCS (ಪಿಂಚಣಿ) ನಿಯಮಗಳು 2021 ರಲ್ಲಿ ಬದಲಾವಣೆಗಳನ್ನು ಮಾಡಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ. ಇದರ ಅಡಿಯಲ್ಲಿ, ಕೇಂದ್ರ ನೌಕರನು ತನ್ನ ಸೇವೆಯ ಸಮಯದಲ್ಲಿ ಗಂಭೀರ ಅಪರಾಧ ಅಥವಾ ನಿರ್ಲಕ್ಷ್ಯದ ತಪ್ಪಿತಸ್ಥನೆಂದು ಕಂಡುಬಂದರೆ, ಅವನ ಪಿಂಚಣಿ ಅಥವಾ ಗ್ರಾಚ್ಯುಟಿ ಅಥವಾ ಎರಡನ್ನೂ ತಡೆಹಿಡಿಯಲಾಗುವುದು ಎಂದು ಸರ್ಕಾರ ಹೇಳಿತ್ತು.


ಇದನ್ನೂ ಓದಿ-PM Kisan ಲಾಭಾರ್ಥಿಗಳಿಗೊಂದು ಬಿಗ್ ಅಪ್ಡೇಟ್, ಈ ವ್ಯವಸ್ಥೆಯಲ್ಲಿ ಬದಲಾವಣೆ ತಂದ ಸರ್ಕಾರ


ಟಿಎ ನಿಯಮದಲ್ಲಿ ಪರಿಹಾರ
ಇದಲ್ಲದೇ ಕೇಂದ್ರ ನೌಕರರ ಪ್ರಯಾಣ ಭತ್ಯೆಗೆ ಸಂಬಂಧಿಸಿದ ನಿಯಮಗಳನ್ನೂ ಬದಲಾಯಿಸಲಾಗಿದೆ. ಇದರ ಪ್ರಕಾರ, ಈಶಾನ್ಯ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಡಾಖ್ ಅಥವಾ ಅಂಡಮಾನ್ ಮತ್ತು ನಿಕೋಬಾರ್‌ಗೆ ವಿಮಾನ ಪ್ರಯಾಣಕ್ಕಾಗಿ ಸಿಸಿಎಸ್ (ಪ್ರಯಾಣದ ರಿಯಾಯಿತಿ) ನಿಯಮಗಳು 1988 ರ ಅಡಿಯಲ್ಲಿ ನೌಕರರಿಗೆ ವಿನಾಯಿತಿ ನೀಡಲಾಗುತ್ತಿದೆ. ಇದರ ಅಡಿಯಲ್ಲಿ, ಕೇಂದ್ರ ಉದ್ಯೋಗಿಗಳು ಸೆಪ್ಟೆಂಬರ್ 25, 2024 ರವರೆಗೆ ಈ ಸೌಲಭ್ಯದ ಪ್ರಯೋಜನವನ್ನು ಪಡೆಯಲು ಸಾಧ್ಯವಾಗಲಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.