LML First EC: ಬಿಡಿಕಾಸು ಪಾವತಿಸದೇ ಉಚಿತವಾಗಿ ಬುಕ್ ಮಾಡಿ ಈ ಎಲೆಕ್ಟ್ರಿಕ್ ಸ್ಕೂಟರ್, ವೈಶಿಷ್ಟ್ಯಗಳು ಇಲ್ಲಿವೆ

LML first electric Scooter: ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ತನ್ನ ಮೊಟ್ಟಮೊದಲ ಎಲೆಕ್ಟ್ರಿಕ್ ಸ್ಕೂಟರ್ ಗಾಗಿ ಎಲ್ಎಂಎಲ್ ಕಂಪನಿ ಬುಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿದೆ. ಇದಕ್ಕಾಗಿ ಗ್ರಾಹಕರು ಕಂಪನಿಯ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಆನ್ಲೈನ್ ಫಾರ್ಮ್ ಭರ್ತಿ ಮಾಡಬಹುದು. ಈ ಬುಕಿಂಗ್ ಪ್ರಕ್ರಿಯೆಗಾಗಿ ಕಂಪನಿಯು ಗ್ರಾಹಕರಿನ ಯಾವುದೇ ರೀತಿಯ ಮುಂಗಡ ಹಣವನ್ನು ಪಡೆಯದಿರಲು ನಿರ್ಧರಿಸಿದೆ.

Written by - Nitin Tabib | Last Updated : Nov 1, 2022, 05:27 PM IST
  • ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹೊಸ ಸ್ಟಾರ್ ಇವಿಗಾಗಿ ಆನ್‌ಲೈನ್ ಬುಕಿಂಗ್ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ ಎಂದು ಹೇಳಿದೆ.
  • ಗ್ರಾಹಕರು ಕಂಪನಿಯ ವೆಬ್‌ಸೈಟ್ ಮೂಲಕ ಫಾರ್ಮ್ ಅನ್ನು ಭರ್ತಿ ಮಾಡಬಹುದು ಮತ್ತು ಯಾವುದೇ ಹಣವನ್ನು ಪಾವತಿಸದೆ ಸ್ಕೂಟರ್ ಅನ್ನು ಬುಕ್ ಮಾಡಬಹುದು.
LML First EC: ಬಿಡಿಕಾಸು ಪಾವತಿಸದೇ ಉಚಿತವಾಗಿ ಬುಕ್ ಮಾಡಿ ಈ ಎಲೆಕ್ಟ್ರಿಕ್ ಸ್ಕೂಟರ್, ವೈಶಿಷ್ಟ್ಯಗಳು ಇಲ್ಲಿವೆ title=
Electric Scooter

LML Star electric Scooter Booking: LML ಕಂಪನಿ ತನ್ನ ಮುಂಬರುವ ಎಲೆಕ್ಟ್ರಿಕ್ ಸ್ಕೂಟರ್ LML ಸ್ಟಾರ್  ಗಾಗಿ ಭಾರತದಲ್ಲಿ ಬುಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿದೆ. ಕಂಪನಿಯು ತನ್ನ ಮೂರು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಕಳೆದ ತಿಂಗಳಷ್ಟೇ ಪರಿಚಯಿಸಿತ್ತು, ಅವುಗಳಲ್ಲಿ ಈ ಸ್ಕೂಟರ್ ಕೂಡ ಶಾಮೀಲಾಗಿದೆ. ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹೊಸ ಸ್ಟಾರ್ ಇವಿಗಾಗಿ ಆನ್‌ಲೈನ್ ಬುಕಿಂಗ್ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ ಎಂದು ಹೇಳಿದೆ. ಗ್ರಾಹಕರು ಕಂಪನಿಯ ವೆಬ್‌ಸೈಟ್ ಮೂಲಕ ಫಾರ್ಮ್ ಅನ್ನು ಭರ್ತಿ ಮಾಡಬಹುದು ಮತ್ತು ಯಾವುದೇ ಹಣವನ್ನು ಪಾವತಿಸದೆ ಸ್ಕೂಟರ್ ಅನ್ನು ಬುಕ್ ಮಾಡಬಹುದು.

ಕಂಪನಿಯು ಭಾರತದಲ್ಲಿ ಮರಳಿದ ಬಳಿಕ, ಇದು ಕಂಪನಿಯು ಮಾರಾಟ ಮಾಡಲು ಹೊರಟಿರುವ ಮೊದಲ ಉತ್ಪನ್ನವಾಗಿದೆ ಎನ್ನಲಾಗುತ್ತಿದೆ. ಈ ಸ್ಕೂಟರ್‌ನ ವಿನ್ಯಾಸವು ಮಾರುಕಟ್ಟೆಯಲ್ಲಿರುವ ಉಳಿದ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಿಂತ ಭಿನ್ನವಾಗಿದೆ. ಇದರಲ್ಲಿ, ನೀವು ವಿಭಿನ್ನ ವಿನ್ಯಾಸ, ಹೊಂದಾಣಿಕೆಯ ಆಸನ, ಇಂಟರ್ಯಾಕ್ಟಿವ್ ಸ್ಕ್ರೀನ್ ಮತ್ತು ಫೋಟೋಸೆನ್ಸಿಟಿವ್ ಹೆಡ್‌ಲ್ಯಾಂಪ್‌ಗಳನ್ನು ಪಡೆಯುವಿರಿ. ಸ್ಕೂಟರ್ 360-ಡಿಗ್ರಿ ಕ್ಯಾಮೆರಾ, ಹ್ಯಾಪ್ಟಿಕ್ ಫೀಡ್ ಬ್ಯಾಕ್ ಮತ್ತು ಎಲ್ಇಡಿ ಲ್ಯಾಂಪ್ ಹೊಂದಿದೆ.

ಇದನ್ನೂ ಓದಿ-PM Kisan ಲಾಭಾರ್ಥಿಗಳಿಗೊಂದು ಬಿಗ್ ಅಪ್ಡೇಟ್, ಈ ವ್ಯವಸ್ಥೆಯಲ್ಲಿ ಬದಲಾವಣೆ ತಂದ ಸರ್ಕಾರ

ಈ ಕುರಿತು ಮಾತನಾಡಿರುವ ಕಂಪನಿಯ MD ಮತ್ತು CEO ಯೋಗೇಶ್ ಭಾಟಿಯಾ, "ನಮ್ಮ ಪ್ರಮುಖ ಉತ್ಪನ್ನವಾದ LML ಸ್ಟಾರ್‌ಗಾಗಿ ಬುಕಿಂಗ್‌ಗಳು ತೆರೆದಿವೆ ಎಂದು ಘೋಷಿಸಲು ನಾವು ಸಂತೋಷಪಡುತ್ತೇವೆ. ಜನರು ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಮತ್ತು ಒಂದು ಪೈಸೆಯನ್ನೂ ಖರ್ಚು ಮಾಡದೆ ಸ್ಕೂಟರ್ ಬುಕ್ ಮಾಡಬಹುದು. ಎಲ್ಎಂಎಲ್ ಸ್ಟಾರ್ ಖಚಿತವಾಗಿ ತನ್ನ ಗ್ರಾಹಕರ ನಿರ್ಧಾರವನ್ನು ಸಮರ್ಥಿಸಲಿದೆ' ಎಂದು ಹೇಳಿದ್ದಾರೆ.

ಇದನ್ನೂ ಓದಿ-GPF New Rule: ಸರ್ಕಾರಿ ನೌಕರರಿಗೊಂದು ಮಹತ್ವದ ಸುದ್ದಿ, ತಪ್ಪದೆ ಓದಿ

ಒಂದೊಮ್ಮೆ ಮಾರುಕಟ್ಟೆಗೆ ಬಿಡುಗಡೆಯಾದ ಬಳಿಕ, ಹೊಸ LML ಸ್ಟಾರ್ ಇತ್ತೀಚೆಗೆ ಬಿಡುಗಡೆಯಾದ Ola S1 ಏರ್ ಪ್ರವೇಶ ಮಟ್ಟದ ಸ್ಕೂಟರ್, ಬಜಾಜ್ ಚೇತಕ್, TVS iQube ಮತ್ತು ಇತರ ಎಲೆಕ್ಟ್ರಿಕ್ ಗಳೊಂದಿಗೆ ಪೈಪೋಟಿ ನಡೆಸಲಿದೆ. ಹೊಸ ಸ್ಕೂಟರ್‌ನ ಬೆಲೆ 1 ಲಕ್ಷದಿಂದ 1.10 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಇರಬಹುದೆಂದು ನಿರೀಕ್ಷಿಸಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News