7th Pay Commission:Good News - ಹೆಚ್ಚಾಗಲಿದೆಯಾ ಸರ್ಕಾರಿ ನೌಕರರ ಫಿಟ್ಮೆಂಟ್ ಫ್ಯಾಕ್ಟರ್? ಕನಿಷ್ಠ ವೇತನ ರೂ 26,000
7th Pay Commission Latest News: ನೌಕರರ ಬೇಡಿಕೆಗೆ ಪರ್ಯಾಯವನ್ನು ಅನ್ವೇಷಿಸುತ್ತಿರುವ ಕೇಂದ್ರ ಸರ್ಕಾರ ನೌಕರರ ಬೇಡಿಕೆಯನ್ನು ನಿರ್ಲಕ್ಷಿಸುತ್ತಿಲ್ಲ ಎಂದು ನೌಕರರ ಸಂಘ ಹೇಳಿದೆ.
ನವದೆಹಲಿ: 7th Pay Commission - ಕೇಂದ್ರ ಸರ್ಕಾರಿ ನೌಕರರ ಪಾಲಿಗೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. ತುಟ್ಟಿಭತ್ಯೆ (Dearness Allowance), ಎಚ್‌ಆರ್‌ಎ (House Rent Allowance), ಟಿಎ (Travel Allowance), ಬಡ್ತಿ (Promotion) ಪಡೆದ ಅವರಿಗೆ ಇದೀಗ ಹೊಸ ವರ್ಷ ಭಾರಿ ಸಂತಸ ತರುವ ನಿರೀಕ್ಷೆ ಇದೆ. 2022 ರಲ್ಲಿ ಕೇಂದ್ರ ಉದ್ಯೋಗಿಗಳ (Central Government Employees) ಸಂಬಳದಲ್ಲಿ ಬಂಪರ್ ಹೆಚ್ಚಳವಾಗುವ ನಿರೀಕ್ಷೆ ಇದೆ. ಮೂಲಗಳ ಪ್ರಕಾರ, ಕೇಂದ್ರ ಮತ್ತು ರಾಜ್ಯ ನೌಕರರ ಫಿಟ್‌ಮೆಂಟ್ ಅಂಶವನ್ನು (Fitment Factor News) ವರ್ಷದ ಆರಂಭದಲ್ಲಿ ಹೆಚ್ಚಾಗಲಿದೆ ಎನ್ನಲಾಗುತ್ತಿದೆ. ಫಿಟ್‌ಮೆಂಟ್ ಹೆಚ್ಚಳದಿಂದ ಕೇಂದ್ರ ನೌಕರರ ಕನಿಷ್ಠ ವೇತನ ಕೂಡ ಹೆಚ್ಚಾಗಲಿದೆ.
ಬಜೆಟ್ ಮೊದಲು ಪರಿಗಣಿಸಬಹುದು
ಕೇಂದ್ರ ಮತ್ತು ರಾಜ್ಯ ನೌಕರರ ಫಿಟ್‌ಮೆಂಟ್ ಅಂಶವನ್ನು ಶೇಕಡಾ 2.57 ರಿಂದ 3.68 ಕ್ಕೆ ಹೆಚ್ಚಿಸಬೇಕು ಎಂಬುದು ಕೇಂದ್ರ ಮತ್ತು ರಾಜ್ಯ ನೌಕರರ ಬಹುಕಾಲದ ಬೇಡಿಕೆಯಾಗಿದೆ. ಮೂಲಗಳ ಪ್ರಕಾರ, ಫೆಬ್ರವರಿ 1, 2022 ರಂದು ಬಜೆಟ್ ಮಂಡಿಸುವ ಮೊದಲು ಕೇಂದ್ರ ನೌಕರರ ಫಿಟ್‌ಮೆಂಟ್ ಅಂಶವನ್ನು ನಿರ್ಧರಿಸುವ ನಿರೀಕ್ಷೆ ಇದೆ ಎನ್ನಲಾಗಿದೆ
ಬಜೆಟ್ ಡ್ರಾಫ್ಟ್‌ನಲ್ಲಿ ಸೇರಿಸಬಹುದು
ಈ ಕುರಿತು ಬಲ್ಲ ಮೂಲಗಳು ಹೇಳುವುದನ್ನು ನಂಬುವುದಾದರೆ, ಕೇಂದ್ರೀಯ ಉದ್ಯೋಗಿಗಳ ಫಿಟ್‌ಮೆಂಟ್ ಅಂಶಕ್ಕೆ ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆ ಸಿಗುವ ಸಾಧ್ಯತೆ ಇದೆ. ಬಜೆಟ್‌ಗೂ ಮುನ್ನ ಕ್ಯಾಬಿನೆಟ್ ಅನುಮೋದನೆ ಪಡೆದ ಬಳಿಕ ಅದನ್ನು ಬಜೆಟ್‌ನ ವೆಚ್ಚದಲ್ಲಿ ಸೇರಿಸಬಹುದು. ಆದರೆ, ಕ್ಯಾಬಿನೆಟ್ ಅನುಮೋದನೆಯ ನಂತರ, ಬಜೆಟ್ (ಬಜೆಟ್ 2022) ಕರಡಿನಲ್ಲಿ ಸೇರಿಸುವ ವಿಶೇಷ ಅಗತ್ಯವಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಮಾಡಬೇಕಾದ ವೆಚ್ಚಗಳ ಇದರ ವಿವರಗಳು ಸೇರುವ ಸಾಧ್ಯತೆ ಇದೆ.
ವೇತನದಲ್ಲಿ 8000 ರೂ. ಏರಿಕೆ
ಕೇಂದ್ರೀಯ ಉದ್ಯೋಗಿಗಳ ಫಿಟ್‌ಮೆಂಟ್ ಅಂಶದ ಬಗ್ಗೆ ಯಾವುದೇ ಪ್ರಕಟಣೆ ಬಂದರೆ, ಅವರ ಸಂಬಳವೂ ಹೆಚ್ಚಾಗುತ್ತದೆ. ಹಾಗೆ ನೋಡಿದರೆ, ಫಿಟ್ಮೆಂಟ್ ಅಂಶದ ಹೆಚ್ಚಳದೊಂದಿಗೆ, ಕನಿಷ್ಠ ವೇತನವೂ ಹೆಚ್ಚಾಗುತ್ತದೆ. ಉದ್ಯೋಗಿಗಳು ಪ್ರಸ್ತುತ 2.57 ಶೇಕಡಾ ಫಿಟ್‌ಮೆಂಟ್ ಅಂಶದ ಆಧಾರದ ಮೇಲೆ ಫಿಟ್‌ಮೆಂಟ್ ಅಂಶದ ಅಡಿಯಲ್ಲಿ ಸಂಬಳವನ್ನು ಪಡೆಯುತ್ತಿದ್ದಾರೆ. ಈಗ ಅದನ್ನು ಶೇ.3.68ಕ್ಕೆ ಕೇಂದ್ರ ಸರ್ಕಾರ ಹೆಚ್ಚಿಸುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಇದರಿಂದ ನೌಕರರ ಕನಿಷ್ಠ ವೇತನದಲ್ಲಿ 8 ಸಾವಿರ ರೂಪಾಯಿ ಹೆಚ್ಚಳವಾಗಲಿದೆ. ಅಂದರೆ ಇದುವರೆಗೆ 18000 ರೂ., ಇದ್ದ ಕನಿಷ್ಠ ವೇತನ 26000 ರೂ.ಗೆ ಏರಿಕೆಯಾಗಲಿದೆ.
ಇದನ್ನೂ ಓದಿ-Good News: ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಪ್ರಕಟ, ಈ ವರದಿ ಓದಿ
3.68 ಅಲ್ಲ ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸುವುದರ ಮೇಲೆ ಹೆಚ್ಚಿನ ಒತ್ತು
ಮೂಲಗಳ ಪ್ರಕಾರ, 7 ನೇ CPC ಅಡಿಯಲ್ಲಿ ಕನಿಷ್ಠ ವೇತನವನ್ನು ( (Minimum Salary Under 7th CPC)) ಹೆಚ್ಚಿಸುವ ಪಕ್ಷದಲ್ಲಿ ಸರ್ಕಾರ ಇಲ್ಲ ಆದರೆ, ನಿರಂತರ ನಡೆಯುವ ಪ್ರತಿಭಟನೆಯಿಂದಾಗಿ ನೌಕರರಿಗೆ ಪರ್ಯಾಯ ನೀಡಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಸರ್ಕಾರದ ಮೇಲ ಒತ್ತಡವಿದೆ. ಸರ್ಕಾರವು ಫಿಟ್‌ಮೆಂಟ್ ಅಂಶವನ್ನು 3 ಪಟ್ಟು ಹೆಚ್ಚಿಸಬಹುದು. ಫಿಟ್‌ಮೆಂಟ್ ಅಂಶ ಹೆಚ್ಚಳದಿಂದ ಉದ್ಯೋಗಿಗಳ ಮೂಲ ವೇತನ 18000 ರೂ.ನಿಂದ 21000 ರೂ.ಗೆ ಏರಿಕೆಯಾಗಲಿದೆ.
ಇದನ್ನೂ ಓದಿ-EPFO Big Update: ಇನ್ಮುಂದೆ ಎಷ್ಟೇ ನೌಕರಿ ಬದಲಿಸಿದರೂ ಒಂದೇ UAN ಸಂಖ್ಯೆ ಮತ್ತು ಒಂದೇ EPFO ಖಾತೆ
ಸಂಪುಟ ಕಾರ್ಯದರ್ಶಿ ಭೇಟಿ ಮಾಡಿದ್ದಾರೆ
ನೌಕರರ ಬೇಡಿಕೆಯನ್ನು ಸರಕಾರ ನಿರ್ಲಕ್ಷಿಸುತ್ತಿಲ್ಲ ಎಂದು ನೌಕರರ ಸಂಘ ಹೇಳುತ್ತಿದೆ. ಬದಲಿಗೆ, ಪರ್ಯಾಯವನ್ನು ಅನ್ವೇಷಿಸಲಾಗುತ್ತಿದೆ. ನೌಕರರ ಸಂಘ ಈಗಾಗಲೇ ಸಂಪುಟ ಕಾರ್ಯದರ್ಶಿಯನ್ನು ಭೇಟಿ ಮಾಡಿದೆ. ಸಭೆಯಲ್ಲಿ ಭರವಸೆಯನ್ನೂ ಪಡೆಯಲಾಗಿದೆ. ಮೂಲಗಳನ್ನು ನಂಬುವುದಾದರೆ, ಸರ್ಕಾರವು ಈಗ ಫಿಟ್‌ಮೆಂಟ್ ಅಂಶದತ್ತ ಹೆಚ್ಚು ಗಮನ ಹರಿಸುತ್ತಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ-ಗ್ಯಾಸ್ ಕನೆಕ್ಷನ್ ನಿಯಮದಲ್ಲಿ ಬದಲಾವಣೆ, ಸಬ್ಸಿಡಿಗೆ ಸಂಬಂಧಿಸಿದ ಹೊಸ ರೂಲ್ಸ್ ತಿಳಿಯಿರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.