EPFO Big Update: ಇನ್ಮುಂದೆ ಎಷ್ಟೇ ನೌಕರಿ ಬದಲಿಸಿದರೂ ಒಂದೇ UAN ಸಂಖ್ಯೆ ಮತ್ತು ಒಂದೇ EPFO ಖಾತೆ

Relief for EPF Subscriber: EPF ಖಾತೆದಾರರಿಗೆ ಭಾರಿ ನೆಮ್ಮದಿಯ ಸುದ್ದಿಯೊಂದು ಪ್ರಕಟವಾಗಿದೆ EPF ಖಾತೆದಾರರು ಎಷ್ಟೇ ಉದ್ಯೋಗ ಬದಲಾವಣೆ ಮಾಡಿದರೂ ಇನ್ಮುಂದೆ ಅವರ UAN ಸಂಖ್ಯೆಯ ಹಾಗೆ EPF ಖಾತೆ ಕೂಡ ಒಂದೇ ಇರಲಿದೆ.

Written by - Nitin Tabib | Last Updated : Nov 20, 2021, 08:14 PM IST
  • ಒಂದು UAN ಒಂದು EPF ಖಾತೆಗೆ ಕಾರ್ಮಿಕ ಸಚಿವಾಲಯ ಅನುಮೋದನೆ.
  • ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್‌ಗಳಲ್ಲಿ (InvITs) ಹೂಡಿಕೆಗಳನ್ನು ಸಹ ಅನುಮೋದಿಸಲಾಗಿದೆ.
  • ಇದರಿಂದಾಗಿ EPFO ​​ಖಾತೆದಾರರು ಹೆಚ್ಚಿನ ಆದಾಯವನ್ನು ಪಡೆಯಲಿದ್ದಾರೆ.
EPFO Big Update: ಇನ್ಮುಂದೆ ಎಷ್ಟೇ ನೌಕರಿ ಬದಲಿಸಿದರೂ ಒಂದೇ UAN ಸಂಖ್ಯೆ ಮತ್ತು ಒಂದೇ EPFO ಖಾತೆ  title=
One UAN One EPF Account (File Photo)

One UAN One EPF Account: ದೇಶದ  5 ಕೋಟಿಗೂ ಹೆಚ್ಚು EPF ಖಾತೆದಾರರಿಗೆ (EPF Account Holders) ಭಾರಿ ನೆಮ್ಮದಿಯ ಸುದ್ದಿಯೊಂದು ಪ್ರಕಟವಾಗಿದೆ. ಹೌದು, ಇನ್ಮುಂದೆ ಉದ್ಯೋಗವನ್ನು ಬದಲಾಯಿಸುವಾಗ, ಮೊದಲ ಕಂಪನಿಯ ಇಪಿಎಫ್ ಖಾತೆಯಲ್ಲಿ ಠೇವಣಿ ಮಾಡಿದ ಹಣವನ್ನು ಹೊಸ ಪಿಎಫ್ ಖಾತೆಗೆ ವರ್ಗಾಯಿಸುವ ಅಗತ್ಯವಿಲ್ಲ. ಕೆಲಸವನ್ನು ಬದಲಾಯಿಸಿದಾಗ, ಹಳೆಯ EPF ಖಾತೆ ಮತ್ತು ಹೊಸ EPF ಖಾತೆಯು ಸ್ವಯಂಚಾಲಿತವಾಗಿ ವಿಲೀನಗೊಳ್ಳುತ್ತದೆ. ಕಾರ್ಮಿಕ ಸಚಿವ ಭೂಪೇಂದ್ರ ಯಾದವ್ (Union Labour Minister Bhupendra Yadav) ಅವರ ಅಧ್ಯಕ್ಷತೆಯಲ್ಲಿ ಇಪಿಎಫ್‌ಒದ ಕೇಂದ್ರೀಯ ಟ್ರಸ್ಟಿಗಳ (EPFO Central Trustee Meet) ಸಭೆಯಲ್ಲಿ ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಒಂದು UAN ನಂತರ, ಈಗ ಒಂದು EPF ಖಾತೆ
ಅಂದರೆ ಇಪಿಎಫ್ ಖಾತೆದಾರರು ಎಷ್ಟೇ ಉದ್ಯೋಗಗಳನ್ನು ಬದಲಾಯಿಸಿದರೂ ಅವರ ಇಪಿಎಫ್ ಖಾತೆ ಹಾಗೆಯೇ ಮುಂದುವರೆಯಲಿದೆ. ಹಳೆಯ ಪಿಎಫ್ ಖಾತೆಯ ಬ್ಯಾಲೆನ್ಸ್ ಸ್ವಯಂಚಾಲಿತವಾಗಿ ಅದೇ ಖಾತೆಯಲ್ಲಿ ಜಮಾ ಆಗಲಿದೆ. ಚಂದಾದಾರರು ಬಯಸಿದಲ್ಲಿ, ಹೊಸ ಸಂಸ್ಥೆಯಲ್ಲಿಯೂ ಹಳೆಯ ಖಾತೆಯನ್ನು ಮುಂದುವರಿಸಬಹುದು ಎಂಬ ಆಯ್ಕೆಯನ್ನು ಹೊಂದಿರುತ್ತಾರೆ. ಇಪಿಎಫ್‌ಒದ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು ಇದಕ್ಕಾಗಿ ಕೇಂದ್ರೀಕೃತ ಐಟಿ ವ್ಯವಸ್ಥೆಯನ್ನು (Centralised IT System) ರಚಿಸಲು ಅನುಮೋದನೆ ನೀಡಿದೆ

ಇದನ್ನೂ ಓದಿ-EPFO Update: ನೀವೂ ಕೂಡ PF ಖಾತೆ ಹೊಂದಿದ್ದರೆ ತಕ್ಷಣ ಈ ಕೆಲಸ ಮಾಡಿ, ಟ್ವೀಟ್ ಮೂಲಕ ಮಾಹಿತಿ ನೀಡಿದ EPFO

ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್‌ಗಳಲ್ಲಿ (InvITs) ಹೂಡಿಕೆಗಳನ್ನು ಸಹ ಅನುಮೋದಿಸಲಾಗಿದೆ.
ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು EPFO ​​ನ ವಾರ್ಷಿಕ ಠೇವಣಿಯಲ್ಲಿ ಶೇ. 5 ರಷ್ಟು ಮೂಲಸೌಕರ್ಯ ಹೂಡಿಕೆ ಟ್ರಸ್ಟ್‌ಗಳಲ್ಲಿ (InvITs) ಹೂಡಿಕೆ ಮಾಡಲು ಕೂಡ ಅನುಮೋದನೆ ನೀಡಿದೆ.  ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿದರೆ ಇನ್ವಿಟಿಗಳ ಮೂಲಸೌಕರ್ಯದಲ್ಲಿ ಹೂಡಿಕೆಯನ್ನು ಹೆಚ್ಚಿಸಬಹುದು. ಹೀಗಾಗಿ ಇಪಿಎಫ್‌ಒ ಹೂಡಿಕೆಯ ಬಕೆಟ್ ಹೊಸ ಹೂಡಿಕೆ ಮಾಧ್ಯಮವನ್ನು ಸೇರಿಸಲಾಗಿದೆ. ಪ್ರಸ್ತುತ, ಇಪಿಎಫ್‌ಒ ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್‌ಗಳು (ETF), ಸರ್ಕಾರಿ ಭದ್ರತೆಗಳು (Government Securities) ಮತ್ತು Bondಗಳಲ್ಲಿ ಹೂಡಿಕೆ ಮಾಡುತ್ತದೆ.

ಇದನ್ನೂ ಓದಿ-EPFO Rules: ನೌಕರಿ ಬಿಟ್ಟ ಬಳಿಕ ಇಷ್ಟು ದಿನಗಳಲ್ಲಿ PFನಿಂದ ಹಣ ಹಿಂಪಡೆಯದೆ ಹೋದರೆ ಭಾರಿ ಹಾನಿ, ಕಾರಣ ಇಲ್ಲಿದೆ

EPFO ನಲ್ಲಿ ಪ್ರತಿ ತಿಂಗಳು 15000-16000 ಕೋಟಿ ಠೇವಣಿ ಇರಿಸಲಾಗುತ್ತದೆ
ಪ್ರತಿ ತಿಂಗಳು ಸುಮಾರು 15000-16000 ಕೋಟಿ ಇಪಿಎಫ್‌ಒನಲ್ಲಿ ಠೇವಣಿ ಇರಿಸಲಾಗುತ್ತದೆ. 2021-22ರಲ್ಲಿ ಇಪಿಎಫ್‌ಒ ಠೇವಣಿ 1.8 ಲಕ್ಷ ಕೋಟಿಯಿಂದ 1.9 ಲಕ್ಷ ಕೋಟಿವರೆಗೆ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ಇದರಲ್ಲಿ ಶೇಕಡಾ 15 ರಷ್ಟು ಮೊತ್ತವನ್ನು ಈಕ್ವಿಟಿಯಲ್ಲಿ ಮತ್ತು ಉಳಿದ ಮೊತ್ತವನ್ನು ಡೆಟ್ ಇನ್ಸ್ಟ್ರುಮೆಂಟ್‌ನಲ್ಲಿ ಹೂಡಿಕೆ ಮಾಡಲಾಗುತ್ತದೆ. ಠೇವಣಿಗಳ ಹೆಚ್ಚಳವನ್ನು ಪರಿಗಣಿಸಿ, EPFO ​​ತನ್ನ ಹೂಡಿಕೆಯ ಬಾಸ್ಕೆಟ್ ವಿಸ್ತರಿಸಲು ಉತ್ತಮ ಅವಕಾಶವನ್ನು ಹೊಂದಿದೆ. ಇದರಿಂದಾಗಿ EPFO ​​ಖಾತೆದಾರರು ಹೆಚ್ಚಿನ ಆದಾಯವನ್ನು ಪಡೆಯಲಿದ್ದಾರೆ. 

ಇದನ್ನೂ ಓದಿ-EPFO News:EPFOನ 6.47 ಕೋಟಿ ಚಂದಾದಾರರಿಗೊಂದು Good News

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News