7th Pay Commission Update: ನಾಪತ್ತೆಯಾಗಿರುವ ಕೇಂದ್ರ ಸರ್ಕಾರಿ ನೌಕರರು, ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯದ ಉಗ್ರಗಾಮಿ ಪೀಡಿತ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಹಾಗೂ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವವರ ಕುಟುಂಬಗಳಿಗೆ ಕುಟುಂಬ ಪಿಂಚಣಿ ನಿಯಮಗಳನ್ನು ಸಡಿಲಿಸಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಸೋಮವಾರ ಹೇಳಿದ್ದಾರೆ. ಇದು ಸರ್ಕಾರಿ ನೌಕರರ ಕುಟುಂಬ ಸದಸ್ಯರ ಪಾಲಿಗೆ ಭಾರಿ ನೆಮ್ಮದಿಯ ಸುದ್ದಿ ಎಂದೇ ಹೇಳಲಾಗುವುದು.

COMMERCIAL BREAK
SCROLL TO CONTINUE READING

ಆದೇಶದ ಪ್ರಕಾರ, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ಅಡಿಯಲ್ಲಿ ಸೇವೆಯಲ್ಲಿರುವ ಸರ್ಕಾರಿ ನೌಕರರು ಕಾಣೆಯಾದ ಎಲ್ಲಾ ಪ್ರಕರಣಗಳಲ್ಲಿ, ಕುಟುಂಬ ಪಿಂಚಣಿಯ ಪ್ರಯೋಜನವನ್ನು ತಕ್ಷಣವೇ ಕುಟುಂಬಕ್ಕೆ ನೀಡಲಾಗುವುದು ಮತ್ತು ಅವರು ಮತ್ತೆ ಹಾಜರಾಗಿ ಸೇವೆಯನ್ನು ಪುನರಾರಂಭಿಸಿದರೆ, ಪಾವತಿಸಿದ ಮೊತ್ತ ನಾಪತ್ತೆಯಾದ ಮಧ್ಯಂತರ ಅವಧಿಯಲ್ಲಿ ಕುಟುಂಬ ಪಿಂಚಣಿಯನ್ನು ಅವನ ಸಂಬಳದಿಂದ ಕಡಿತಗೊಳಿಸಲಾಗುವುದು ಎನ್ನಲಾಗಿದೆ.

ಸಿಬ್ಬಂದಿ ಸಚಿವಾಲಯ ಹೊರಡಿಸಿದ ಹೇಳಿಕೆಯಲ್ಲಿ, ಈ ಹಿಂದೆ, ಕಾಣೆಯಾದ ಸರ್ಕಾರಿ ನೌಕರನನ್ನು ಕಾನೂನಿನ ಪ್ರಕಾರ ಮೃತ ಎಂದು ಘೋಷಿಸುವವರೆಗೆ ಅಥವಾ ಅವನು ಕಣ್ಮರೆಯಾದ ಏಳು ವರ್ಷಗಳು ಗತಿಸಿದ ನಂತರ ಕುಟುಂಬ ಸದಸ್ಯರಿಗೆ ಪಿಂಚಣಿಯನ್ನು ಪಾವತಿಸಲಾಗುತ್ತಿತ್ತು ಎನ್ನಲಾಗಿದೆ.  ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯ ಆದೇಶವನ್ನು ಉಲ್ಲೇಖಿಸಿದ ಸಚಿವ ಜಿತೇಂದ್ರ ಸಿಂಗ್, ವಿಶೇಷವಾಗಿ ಸರ್ಕಾರಿ ನೌಕರರು ಕಾಣೆಯಾದ ಘಟನೆಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ ಅವರ ಕುಟುಂಬ ಸದಸ್ಯರಿಗೆ ಇದು ದೊಡ್ಡ ನೆಮ್ಮದಿಯನ್ನು ನೀಡಲಿದೆ ಎಂದು ಹೇಳಿದ್ದಾರೆ.

ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಕಾರ್ಯನಿರತ ಕೇಂದ್ರ ಸರ್ಕಾರಿ ನೌಕರರ ಅಪಹರಣ ಮುನ್ನೆಲೆಗೆ ಬರುತ್ತಿದ್ದು, ನೌಕರರಲ್ಲಿ ವಿಶ್ವಾಸ ಮೂಡಿಸಲು ಮತ್ತು ನೌಕರನ ಮತ್ತು ಆತನ ಕುಟುಂಬದ ಹಿತಾಸಕ್ತಿಗಳನ್ನು ರಕ್ಷಿಸಲು ಪಿಂಚಣಿ ನಿಯಮಗಳಲ್ಲಿ ಈ ಬದಲಾವಣೆ ಮಾಡಲಾಗಿದೆ ಎಂದು ಸಿಬ್ಬಂದಿ ಖಾತೆ ರಾಜ್ಯ ಸಚಿವ ಸಿಂಗ್ ಹೇಳಿದ್ದಾರೆ. . 1972 ರ ಸಿಸಿಎಸ್ (ಪಿಂಚಣಿ) ನಿಯಮಗಳ ಅಡಿಯಲ್ಲಿ ಬರುವ ಸರ್ಕಾರಿ ನೌಕರರು ನಾಪತ್ತೆಯಾದರೆ, ಕಾಣೆಯಾದ ನೌಕರರ ಕುಟುಂಬಗಳಿಗೆ ಬಾಕಿ ವೇತನ, ಕುಟುಂಬ ಪಿಂಚಣಿ, ನಿವೃತ್ತಿ ಗ್ರಾಚ್ಯುಟಿ, ರಜೆ ನಗದೀಕರಣ ಇತ್ಯಾದಿಗಳ ಲಾಭವನ್ನು ಜೂನ್ 25, 2013 ರಂದು ಜಾರಿಗೊಳಿಸಲಾದ ಸೂಚನೆಗಳ ಪ್ರಕಾರ ನೀಡಲಾಗುತ್ತದೆ ಎಂದು ಸಚಿವರು  ಹೇಳಿದ್ದಾರೆ.


ಇದನ್ನೂ ಓದಿ-SBI New Feature: ತನ್ನ ಗ್ರಾಹಕರಿಗೆ ಅದ್ಭುತ ಉಡುಗೊರೆ ನೀಡಿದ ಎಸ್ಬಿಐ, ಮನೆಯಲ್ಲಿಯೇ ಕುಳಿತು 35 ಲಕ್ಷ ರೂ ಸಾಲ ಪಡೆಯಬಹುದು

ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಹಣಕಾಸು ಸೇವೆಗಳ ಇಲಾಖೆ ಮತ್ತು ವೆಚ್ಚ ಇಲಾಖೆಗಳೊಂದಿಗೆ ಸುದೀರ್ಘ ಸಮಾಲೋಚನೆಯ ಬಳಿಕ ಮತ್ತು ಅಂತಹ ಸರ್ಕಾರಿ ನೌಕರರ ಕುಟುಂಬಗಳು ಎದುರಿಸುತ್ತಿರುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು, ಸಮಾನ ಪ್ರಯೋಜನಗಳನ್ನು (ಸಿಸಿಎಸ್‌ನಲ್ಲಿ ಅನ್ವಯಿಸುವಂತೆ) ಪರಿಶೀಲಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಇದಲ್ಲದೆ ಪಿಂಚಣಿ ನಿಯಮಗಳ ಪ್ರಕಾರ ಉದ್ಯೋಗಿಗಳ ಕುಟುಂಬಗಳಿಗೂ NPS ವ್ಯಾಪ್ತಿಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.


ಇದನ್ನೂ ಓದಿ-Service Charge: ಇನ್ಮುಂದೆ ಹೋಟೆಲ್-ರೆಸ್ಟಾರೆಂಟ್ ಗಳಲ್ಲಿ ಸೇವಾ ಶುಲ್ಕ ನೀಡುವ ಅವಶ್ಯಕತೆ ಇಲ್ಲ, ಸರ್ಕಾರದ ಮಹತ್ವದ ಘೋಷಣೆ

ಎನ್‌ಪಿಎಸ್ ವ್ಯಾಪ್ತಿಗೆ ಒಳಪಡುವ ಸರ್ಕಾರಿ ನೌಕರರು ಒಂದು ವೇಳೆ ಸೇವೆಯಲ್ಲಿರುವಾಗ ನಾಪತ್ತೆಯಾದರೆ ಮತ್ತು ಅವರು ಸಿಸಿಎಸ್ (ಪಿಂಚಣಿ) ನಿಯಮಗಳನ್ನು ತೆಗೆದುಕೊಂಡಿದ್ದರೂ ಕೂಡ, ಬಾಕಿ ವೇತನ, ನಿವೃತ್ತಿ ಗ್ರಾಚ್ಯುಟಿ ಮತ್ತು ರಜೆಯ ನಗದೀಕರಣದ ಪ್ರಯೋಜನವನ್ನು ಕುಟುಂಬಕ್ಕೆ ನೀಡಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಅಡಿಯಲ್ಲಿ ನಿರ್ಗಮನ ಮತ್ತು ಹಿಂತೆಗೆದುಕೊಳ್ಳುವಿಕೆ) ನಿಯಮಗಳು, 2015 ಅಡಿಯಲ್ಲಿ ಪ್ರಯೋಜನಗಳಿಗಾಗಿ ಈ ಆಯ್ಕೆಯನ್ನು ಮಾಡಿಕೊಳ್ಳಬಹುದು. 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.