7th Pay Commission: ಹೊಸ ಸೂತ್ರದಡಿ ಸರ್ಕಾರಿ ನೌಕರರ ವೇತನದಲ್ಲಿ ಬಂಪರ್ ಹೆಚ್ಚಳ, ಪ್ರತಿವರ್ಷ ಮೂಲವೇತನದಲ್ಲಿ ಪರಿಷ್ಕರಣೆ!

7th Pay Commission Latest News 2022: ಫಿಟ್ಮೆಂಟ್ ಫ್ಯಾಕ್ಟರ್ ಮೂಲಕ ವೇತನ ಹೆಚ್ಚಳದ ಬದಲು ಇದೀಗ ಹೊಸ ಸೂತ್ರದಡಿ ಮೂಲವೇತನ ಪರಿಷ್ಕರಣೆಯ ಕುರಿತು ಚಿಂತನೆ ನಡೆಯುವ ಸಾಧ್ಯತೆ ಇದೆ. ಇದಲ್ಲದೆ ಪ್ರತಿ ವರ್ಷ ಬೇಸಿಕ್ ವೇತನವನ್ನು ಹೆಚ್ಚಿಸುವ ಯೋಜನೆ ಮೇಲೂ ಕೂಡ ಚರ್ಚೆ ನಡೆಯಲಿದೆ.  

Written by - Nitin Tabib | Last Updated : May 23, 2022, 04:13 PM IST
  • ಹೊಸ ಸೂತ್ರದಡಿ ಮೂಲವೇತನ ಪರಿಷ್ಕರಣೆಯ ಕುರಿತು ಸರ್ಕಾರದ ಚಿಂತನೆ!
  • ಇದಲ್ಲದೆ ಪ್ರತಿ ವರ್ಷ ಬೇಸಿಕ್ ವೇತನವನ್ನು ಹೆಚ್ಚಿಸುವ ಯೋಜನೆ ಮೇಲೂ ಕೂಡ ಚರ್ಚೆ!
  • ಪ್ರಸ್ತುತ ಫಿಟ್ಮೆಂಟ್ ಆದಾರದ ಮೇಲೆ ವೇತನ ಪರಿಷ್ಕರಿಸಲಾಗುತ್ತದೆ.
7th Pay Commission: ಹೊಸ ಸೂತ್ರದಡಿ ಸರ್ಕಾರಿ ನೌಕರರ ವೇತನದಲ್ಲಿ ಬಂಪರ್ ಹೆಚ್ಚಳ, ಪ್ರತಿವರ್ಷ ಮೂಲವೇತನದಲ್ಲಿ ಪರಿಷ್ಕರಣೆ! title=
7th Pay Commission Latest News (File Photo)

7th Pay Commission Latest News 2022: ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿಯೊಂದು ಪ್ರಕಟವಾಗಿದೆ. ಸರ್ಕಾರಿ ಮೂಲಗಳು ನೀಡಿರುವ ಮಾಹಿತಿಯನ್ನು ಒಂದು ವೇಳೆ ನಂಬುವುದಾದರೆ, ಮುಂದಿನ ವೇತನ ಆಯೋಗ (8ನೇ ವೇತನ ಆಯೋಗ) ಬರಬಹುದು ಅಥವಾ ಬರದೇ ಇರಬಹುದು ಎನ್ನಲಾಗಿದೆ, ಅಂದರೆ, ವೇತನ ಹೆಚ್ಚಳಕ್ಕೆ ಹೊಸ ಇದೀಗ ಸೂತ್ರ ಸಿದ್ಧವಾಗಲಿದೆ ಎನ್ನಲಾಗಿದೆ. ಫಿಟ್‌ಮೆಂಟ್ ಅಂಶದಿಂದ ಸಂಬಳವನ್ನು ಹೆಚ್ಚಿಸುವ ಬದಲು, ಇದೀಗ ಹೊಸ ಸೂತ್ರದ ಅಡಿ ಮೂಲ ವೇತನ ಪರಿಷ್ಕರಣೆಯ ಸಾಧ್ಯತೆ ಇದೆ. ಇದಲ್ಲದೇ ಪ್ರತಿ ವರ್ಷ ಮೂಲ ವೇತನ ಹೆಚ್ಚಿಸುವ ಯೋಜನೆಯೂ ಕೂಡ ಇದೆ ಎನ್ನಲಾಗಿದೆ. ಆದರೆ, ಈ ಹೊಸ ಸೂತ್ರವು 2024 ರ ನಂತರ ಜಾರಿಗೆ ಬರುವ ಸಾಧ್ಯತೆಯಿದೆ.

ಪ್ರತಿ ವರ್ಷ ಮೂಲ ವೇತನ  ನಿಗದಿ
7ನೇ ವೇತನ ಆಯೋಗದ (7ನೇ ವೇತನ ಆಯೋಗ) ಶಿಫಾರಸುಗಳನ್ನು 2016ರಲ್ಲಿ ಜಾರಿಗೊಳಿಸಲಾಗಿತ್ತು. ಮೂಲಗಳ ಪ್ರಕಾರ, ಕೇಂದ್ರ ನೌಕರರ ವೇತನವನ್ನು ನಿರ್ಧರಿಸಲು ಹೊಸ ಸೂತ್ರ ಜಾರಿಗೆ ಬರುವ ಸಾಧ್ಯತೆ ಇದ್ದು, ಪ್ರತಿ ವರ್ಷ ಕೇಂದ್ರ ನೌಕರರ ವೇತನವನ್ನು ನಿಗದಿಪಡಿಸುವ ಗುರಿಹೊಂದಲಾಗಿದೆ ಎನ್ನಲಾಗಿದೆ. ಆದರೆ, ಈ ವಿಚಾರದಲ್ಲಿ ಸರ್ಕಾರದಿಂದ ಯಾವುದೇ ದೃಢೀಕರಣ ಬಂದಿಲ್ಲ. ವೇತನ ಆಯೋಗದಿಂದ ಪ್ರತ್ಯೇಕವಾಗಿ ವೇತನವನ್ನು ಹೆಚ್ಚಿಸುವ ಸೂತ್ರವನ್ನು ಪರಿಗಣಿಸುವ ಸಮಯ ಇದೀಗ ಬಂದಿದೆ ಎಂದು ಮೂಲಗಳು ವರದಿ ಮಾಡಿವೆ. ಪ್ರತಿ ವರ್ಷ ಉದ್ಯೋಗಿಗಳ ಸಂಬಳವನ್ನು ಹೆಚ್ಚಿಸುವುದು ಉತ್ತಮ ಆಯ್ಕೆಯಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ

ಯಾವ ಹೊಸ ಸೂತ್ರವನ್ನು ಚರ್ಚಿಸಲಾಗುತ್ತಿದೆ?
Aykroyd ಸೂತ್ರವನ್ನು ಕೇಂದ್ರ ನೌಕರರ ವೇತನ ಹೆಚ್ಚಳಕ್ಕೆ ಪರಿಗಣಿಸಲಾಗುವುದು ಎನ್ನಲಾಗಿದೆ. ಈ ಹೊಸ ಸೂತ್ರದ ಕುರಿತು ದೀರ್ಘಕಾಲದಿಂದ ಚರ್ಚೆ ನಡೆಯುತ್ತಿದೆ. ಪ್ರಸ್ತುತ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನವನ್ನು ಫಿಟ್‌ಮೆಂಟ್ ಅಂಶದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಇದರ ಮೇಲೆ ತುಟ್ಟಿಭತ್ಯೆಯನ್ನು ಪ್ರತಿ ಆರು ತಿಂಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ. ಆದರೆ, ಮೂಲ ವೇತನದಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ತಜ್ಞರ ಪ್ರಕಾರ, ಹೊಸ ಸೂತ್ರದೊಂದಿಗೆ, ಉದ್ಯೋಗಿಗಳ ಸಂಬಳವು ಹಣದುಬ್ಬರ ದರ, ಜೀವನ ವೆಚ್ಚ ಮತ್ತು ಉದ್ಯೋಗಿಯ ಕಾರ್ಯಕ್ಷಮತೆ ಆಧರಿಸಿ ಇರಲಿದೆ ಎನ್ನಲಾಗಿದೆ. ಈ ಎಲ್ಲಾ ವಿಷಯಗಳ ಮೌಲ್ಯಮಾಪನದ ನಂತರ, ಪ್ರತಿ ವರ್ಷ ವೇತನವನ್ನು ಹೆಚ್ಚಿಸಲಾಗುವುದು ಎನ್ನಲಾಗಿದೆ. ಇದು ಖಾಸಗಿ ವಲಯದ ಕಂಪನಿಗಳಲ್ಲಿ ನಡೆಯುವ ಮೌಲ್ಯಮಾಪನದಂತೆಯೇ ಇರಲಿದೆ ಎನ್ನಲಾಗಿದೆ.

ಇದನ್ನೂ ಓದಿ-ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಉಚಿತವಾಗಿ ಪಡೆಯುವ ಅವಕಾಶ

ಹೊಸ ಸೂತ್ರವನ್ನು ಏಕೆ ರಚಿಸಬಹುದು?
ಇದರಲ್ಲಿ ಎಲ್ಲಾ ವರ್ಗದ ನೌಕರರು ಸಮಾನ ಪ್ರಯೋಜನಗಳನ್ನು ಪಡೆಯುತ್ತಾರೆ ಎಂಬುದು ಸರ್ಕಾರದ ಅನಿಸಿಕೆಯಾಗಿದೆ. ಪ್ರಸ್ತುತ ಗ್ರೇಡ್-ಪೇ ಪ್ರಕಾರ, ಪ್ರತಿಯೊಬ್ಬರ ವೇತನದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಆದರೆ, ಹೊಸ ಸೂತ್ರಗಳ ಆಗಮನದಿಂದ, ಈ ಅಂತರವನ್ನು ಕಡಿಮೆ ಮಾಡಲು ಪ್ದ್ರಯತ್ನಿಸಲಾಗುವುದು ಎನ್ನಲಾಗಿದೆ. ಸರ್ಕಾರಿ ಇಲಾಖೆಗಳಲ್ಲಿ ಪ್ರಸ್ತುತ ಒಟ್ಟು  14 ವೇತನ ಶ್ರೇಣಿಗಳಿವೆ. ಪ್ರತಿ ವೇತನ ಶ್ರೇಣಿಯು ಸಾಮಾನ್ಯ ನೌಕರರಿಂದ ಹಿಡಿದು ಅಧಿಕಾರಿಗಳನ್ನು ಒಳಗೊಂಡಿರುತ್ತದೆ. ಆದರೆ, ಅವರ ಸಂಬಳದಲ್ಲಿ ತುಂಬಾ ವ್ಯತ್ಯಾಸವಿದೆ. ಕೇಂದ್ರ ನೌಕರರ ಜೀವನ ಪರಿಸ್ಥಿತಿಯನ್ನು ಸುಧಾರಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರು ನಮ್ಮ ಅಂಗ ಸಂಸ್ಥೆಯಾಗಿರುವ ಝೀ ಬಿಸಿನೆಸ್ ಡಿಜಿಟಲ್‌ಗೆ ಮಾಹಿತಿ ನೀಡಿದ್ದಾರೆ. ಹೊಸ ಸೂತ್ರದ ಸಲಹೆ ಒಳ್ಳೆಯದು, ಆದರೆ ಇಂತಹ ಯಾವುದೇ ಸೂತ್ರವನ್ನು ಇದುವರೆಗೆ ಚರ್ಚಿಸಲಾಗಿಲ್ಲ. 8ನೇ ವೇತನ ಆಯೋಗದಲ್ಲಿ ಏನು ಬದಲಾವಣೆಗಳಾಗಲಿವೆ ಎಂಬುದನ್ನು ಈಗಲೇ ಹೇಳುವುದು ಸ್ವಲ್ಪ ಅವಸರವಾದೀತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ-Government Alert SBI Customer: ಎಸ್ ಬಿ ಐ ಗ್ರಾಹಕರಿಗೆ ಸರ್ಕಾರದ ಎಚ್ಚರಿಕೆ, ಈ ಸಂದೇಶ ತಕ್ಷಣ ಡಿಲೀಟ್ ಮಾಡಿ

ವೇತನ ರಚನೆಗೆ ಹೊಸ ಸೂತ್ರ
ನ್ಯಾಯಮೂರ್ತಿ ಮಾಥುರ್ ಅವರು 7 ನೇ ವೇತನ ಆಯೋಗದ ಶಿಫಾರಸುಗಳ ಸಮಯದಲ್ಲಿ ನಾವು ವೇತನ ರಚನೆಯನ್ನು ಹೊಸ ಸೂತ್ರಕ್ಕೆ (Aykroyd Formula) ಸ್ಥಳಾಂತರಿಸಲು ಬಯಸುತ್ತೇವೆ ಎಂದು ಈ ಮೊದಲೇ ಸೂಚಿಸಿದ್ದಾರೆ. ಇದರಲ್ಲಿ ಜೀವನ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ಸಂಬಳವನ್ನು ನಿಗದಿಪಡಿಸಲಾಗುವುದು ಎಂದು ಅವರು ಹೇಳಿದ್ದರು. ಈ ಸೂತ್ರದಡಿ ಹಣದುಬ್ಬರಕ್ಕೆ ತಕ್ಕಂತೆ ನೌಕರರ ವೇತನವನ್ನು ಪರಿಷ್ಕರಿಸಲಾಗುತ್ತದೆ ಎಂಬುದು ಇಲ್ಲಿ ಗಮನಾರ್ಹ. Aykroyd ಸೂತ್ರವನ್ನು ಲೇಖಕ ವ್ಯಾಲೇಸ್ ರುಡ್ಡೆಲ್ Aykroyd ನೀಡಿದ್ದಾರೆ. ಜನಸಾಮಾನ್ಯರಿಗೆ ಆಹಾರ ಮತ್ತು ಬಟ್ಟೆ ಅತ್ಯಂತ ಮುಖ್ಯ ಎಂದು ಅವರ ಅನಿಸಿಕೆಯಾಗಿದೆ. ಅವುಗಳ ಬೆಲೆ ಬೆಲೆ ಏರಿಕೆಯೊಂದಿಗೆ ನೌಕರರ ವೇತನವೂ ಕೂಡ ಪರಿಷ್ಕರಣೆಯಾಗಬೇಕು ಎಂಬುದು ಈ ಸೂತ್ರದ ಮೂಲ ಉದ್ದೇಶವಾಗಿದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News