8th Pay Commission ನಿರೀಕ್ಷೆಯಲ್ಲಿರುವ ಸರ್ಕಾರಿ ನೌಕರರಿಗೊಂದು ಉಪಯುಕ್ತ ಮಾಹಿತಿ
8th Pay Commission Latest News: 7ನೇ ವೇತನ ಆಯೋಗದ ಶಿಫಾರಸಿನಲ್ಲಿ, ನ್ಯಾಯಮೂರ್ತಿ ಮಾಥುರ್ ಅವರು Aykroyd ಸೂತ್ರದ ಅಡಿಯಲ್ಲಿ ವೇತನ ರಚನೆಯನ್ನು ಸರಿಪಡಿಸಲು ಬಯಸುತ್ತೇವೆ ಎಂದು ಹೇಳಿದ್ದಾರೆ. ಇದರಲ್ಲಿ ಜೀವನ ವೆಚ್ಚವನ್ನೂ (Cost Of Living)ಕೂಡ ಪರಿಗಣಿಸಲಾಗುವುದು ಎಂದು ಹೇಳಿದ್ದರು.
ನವದೆಹಲಿ : 8th Pay Commission Latest News - ಕೇಂದ್ರ ಸರ್ಕಾರಿ ನೌಕರರಿಗೆ ನಿರಂತರ ಒಳ್ಳೆಯ ಪ್ರಕಟಗೊಳ್ಳುತ್ತಲೇ ಇವೆ.. 7ನೇ ವೇತನ ಆಯೋಗದ ಶಿಫಾರಸುಗಳನ್ನು 2016 ರಲ್ಲಿ ಜಾರಿಗೆ ತರಲಾಗಿತ್ತು. ಅಂದರೆ, 7ನೇ ವೇತನ ಆಯೋಗದ ಶಿಫಾರಸ್ಸುಗಳು ಜಾರಿಗೆ ಬಂದು ಐದು ವರ್ಷ ಗತಿಸಿವೆ. ಕೇಂದ್ರ ಸರ್ಕಾರ ನೌಕರರ ವೇತನವನ್ನು ನಿಗದಿಪಡಿಸಲು 8 ನೇ ವೇತನ ಆಯೋಗವನ್ನು (8th Pay Commission) ಶೀಘ್ರದಲ್ಲಿಯೇ ರಚಿಸುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ. ಆದರೆ, ಈ ರಚನೆ ಯಾವಾಗ ನಡೆಯುತ್ತದೆ ಎಂಬುದು ಇದುವರೆಗೆ ಸ್ಪಷ್ಟವಾಗಿಲ್ಲ. ಇದರೊಂದಿಗೆ ಮತ್ತೆ ಎರಡು ವಿಭಿನ್ನ ವಿಷಯಗಳು ಕೂಡ ಚರ್ಚೆಯಲ್ಲಿವೆ. ಮೊದಲನೆ ವಿಷಯ ಎಂದರೆ- ಇನ್ಮುಂದೆ ಯಾವುದೇ ಹೊಸ ವೇತನ ಆಯೋಗರಚನೆಯಾಗುವುದಿಲ್ಲ ಮತ್ತು ಎರಡನೆಯದಾಗಿ, ಹೊಸ ಸೂತ್ರದ ಆಧಾರದ ಮೇಲೆ ಕೇಂದ್ರ ನೌಕರರ ವೇತನವನ್ನು ಪ್ರತಿ ವರ್ಷ ನಿಗದಿಪಡಿಸಲಾಗುವುದು ಎಂಬ ಚರ್ಚೆ.
ಆದರೆ, ಈ ಎರಡೂ ವಿಷಯಗಳ ಕುರಿತು ಇದುವರೆಗೆ ಸರ್ಕಾರದ ವತಿಯಿಂದ ಯಾವುದೇ ಸ್ಪಷ್ಟೀಕರಣ ಬಂದಿಲ್ಲ. ವಿಷಯ ತಜ್ಞರು ಹೇಳುವ ಪ್ರಕಾರ, ವೇತನ ಆಯೋಗವನ್ನು ಹೊರತುಪಡಿಸಿ, ಹೊಸ ಸೂತ್ರಕ್ಕೆ ಹೋಗುವ ಸಮಯ ಬಂದಾಗಿದೆ. ದಿನಗಳು ಕಳೆದಂತೆ ಕಾಸ್ಟ್ ಆಫ್ ಲಿವಿಂಗ್ ಸತವಾಗಿ ಹೆಚ್ಚಾಗುತ್ತಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಪ್ರತಿ ವರ್ಷ ಸರ್ಕಾರಿ ನೌಕರರ ವೇತನ ಪರಿಷ್ಕರಿಸುವುದು ತುಂಬಾ ಉತ್ತಮ ಎಂದು ಹೇಳಲಾಗುತ್ತಿದೆ.
ಚರ್ಚೆಯಾಗುತ್ತಿರುವ ಹೊಸ ಫಾರ್ಮುಲಾ ಯಾವುದು?
ಕೇಂದ್ರ ಸರ್ಕಾರಿ (Central Government) ನೌಕರರ ವೇತನ ಹೆಚ್ಚಳದ ಕುರಿತು ಭಾರಿ ಚರ್ಚೆಯಲ್ಲಿರುವ ಫಾರ್ಮುಲಾ ಅಂದರೆ ಅದುವೇ Aykroyd ಫಾರ್ಮುಲಾ (Aykroyd Formula). ಈ ಫಾರ್ಮುಲಾ ಅಡಿ ನೌಕರರ ವೇತನದಲ್ಲಿ ಹಣದುಬ್ಬರ, ಕಾಸ್ಟ್ ಆಫ್ ಲಿವಿಂಗ್ ಹಾಗೂ ನೌಕರರ ಪರ್ಫಾರ್ಮೆನ್ಸ್ ಅನ್ನು ಕೂಡ ಜೋಡಿಸಲಾಗುವುದು ಎನ್ನಲಾಗುತ್ತಿದೆ. ಈ ಎಲ್ಲ ಸಂಗತಿಗಳ ಪರಿಶೀಲನೆಯ ಬಳಿಕ ಮಾತ್ರ ವೇತನ ಹೆಚ್ಚಾಗಲಿದೆ. ಇದರಿಂದ ಎಲ್ಲಾ ವರ್ಗದ ನೌಕರರಿಗೆ ಲಾಭ ಸಿಗಲಿದೆ ಎನ್ನಲಾಗಿದೆ. ಆದರೆ, ಕೇಂದ್ರ ವಿತ್ತ ಸಚಿವಾಲಯದ (Finance Ministry) ಅಧಿಕಾರಿಯೊಬ್ಬರು ನೀಡಿರುವ ಹೇಳಿಕೆಯ ಪ್ರಕಾರ, ಸಲಹೆ ಉತ್ತಮವಾಗಿದೆ. ಆದರೆ, ಇದುವರೆಗೆ ಇಂತಹ ಯಾವುದೇ ಫಾರ್ಮುಲಾ ಕುರಿತು ಚರ್ಚಿಸಲಾಗಿಲ್ಲ. ಇದಲ್ಲದೆ 8ನೇ ವೇತನ ಆಯೋಗ ಕೂಡ ಯಾವಾಗ ಬರಲಿದೆ ಎಂಬುದರ ಚರ್ಚೆಯು ನಡೆಯುತ್ತಿಲ್ಲ ಎಂದಿದ್ದಾರೆ.
ಇದನ್ನೂ ಓದಿ-ನಿಮ್ಮ SBI ಖಾತೆಯಿಂದಲು ಹಣ ಕಟ್ ಆಗಿದೆಯಾ? SBI ಗ್ರಾಹಕರು ಈ ಸುದ್ದಿ ತಪ್ಪದೆ ಓದಿ
7ನೇ ವೇತನ ಆಯೋಗದ ವೇಳೆಯೂ ಕೂಡ ಚರ್ಚೆ ನಡೆದಿತ್ತು
7ನೇ ವೇತನ ಆಯೋಗದ (7th Pay Commission) ಶಿಫಾರಸ್ಸಿನಲ್ಲಿಯೂ ಕೂಡ ಈ ಕುರಿತು ಹೇಳಿರುವ ಜಸ್ಟಿಸ್ ಮಾಥೂರ್, ನಾವು ಪೇ ಸ್ಟ್ರಕ್ಚರ್ ಅನ್ನು Aykroyd ಸೂತ್ರದ ಅಡಿ ನಿಗದಿಪಡಿಸಬೇಕು. ಇದರಿಂದ ಅದರಲ್ಲಿ ಕಾಸ್ಟ್ ಆಫ್ ಲಿವಿಂಗ್ ಬಗ್ಗೆಯೂ ಕೂಡ ಗಮನಹರಿಸಬಹುದು. ಈ ಸೂತ್ರವನ್ನು ವಾಲೇಸ್ ರುಡೆಲ್ ಆಯ್ಕರಾಯ್ದ್ ಸೂಚಿಸಿದ್ದರು. ಜನಸಾಮಾನ್ಯರ ಪಾಲಿಗೆ ಎರಡು ಪ್ರಮುಖ ವಿಷಯಗಳಿವೆ ಎಂಬುದು ಅವರ ಅನಿಸಿಕೆ. ಅವುಗಳೆಂದರೆ ಊಟ ಹಾಗೂ ವಸ್ತ್ರ. ಇವುಗಳ ಬೆಲೆ ಹೆಚ್ಚಾಗುತ್ತಿದ್ದಂತೆ ನೌಕರರ ವೇತನ ಕೂಡ ಹೆಚ್ಚಾಗಬೇಕು ಎಂಬುದು ಅವರ ಅಭಿಪ್ರಾಯ.
ಇದನ್ನೂ ಓದಿ- ITR Filing : ತೆರಿಗೆದಾರರಿಗೆ ಗುಡ್ ನ್ಯೂಸ್: IT ರಿಟರ್ನ್ಸ್ ದಿನಾಂಕ 2 ತಿಂಗಳು ವಿಸ್ತರಣೆ!
7ನೇ ವೇತನ ಆಯೋಗದ ಅಡಿ ಕೇಂದ್ರ ಸರ್ಕಾರ ಸರ್ಕಾರಿ ನೌಕರರ ಕನಿಷ್ಠ ಸಂಬಳವನ್ನು 7000 ರೂ.ಗಳಿಂದ 18,000 ರೂ.ಗಳಿಗೆ ಹೆಚ್ಚಿಸಿತ್ತು. ಈ ವೇಳೆ ಸರ್ಕಾರ ಪ್ರೈಸ್ ಇಂಡೆಕ್ಸ್ ಆಧರಿಸಿ ಪ್ರತಿ ವರ್ಷ ಕೇಂದ್ರ ಸರ್ಕಾರಿ ನೌಕರ ವೇತನದ ಸಮೀಕ್ಷೆ ನಡೆಸಬೇಕು ಎಂದು ಅವರು ಹೇಳಿದ್ದರು. ಆದರೆ, ಈ ಕುರಿತು ಕೇಂದ್ರ ಸರಕಾರದ ವತಿಯಿಂದ ಅಧಿಕೃತವಾಗಿ ಯಾವುದೇ ಹೇಳಿಕೆ ಬಂದಿರಲಿಲ್ಲ. ಆದರೆ, 8ನೇ ವೇತನ ಆಯೋಗದ ಕುರಿತು ಕೂಡ ಇದುವರೆಗೆ ಯಾವುದೇ ಚರ್ಚೆಗಳು ನಡೆಯುತ್ತಿಲ್ಲ ಎಂಬುದು ಇಲ್ಲಿ ಗಮನಾರ್ಹ.
ಇದನ್ನೂ ಓದಿ- EPFO: ನಿಮ್ಮ ಖಾತೆಗೆ ಪಿಎಫ್ ಹಣ ಬಂದಿದೆಯೇ? ಈ ರೀತಿ ಪರಿಶೀಲಿಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.