PM-Kisan ಯೋಜನೆಯ 'ಬ್ಯಾಲೆನ್ಸ್ ಚೆಕ್' ಮಾಡೋದು ಹೇಗೆ? ಇಲ್ಲಿದೆ ನೋಡಿ

ಪ್ರಧಾನಿ ಮೋದಿಯವರು ಪಿಎಂ-ಕಿಸಾನ್ ಯೋಜನೆಯಡಿ 9.5 ಕೋಟಿಗೂ ಹೆಚ್ಚು ರೈತ ಫಲಾನುಭವಿಗಳಿಗೆ 20,000 ಕೋಟಿ ರೂ.ಗೂ ಹೆಚ್ಚು ಹಣವನ್ನು ಬಿಡುಗಡೆ

Last Updated : May 20, 2021, 10:45 AM IST
  • ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆ
  • 8ನೇ ಕಂತನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮೇ 14ರಂದು ಬಿಡುಗಡೆ
  • ಪಿಎಂ ಕಿಸಾನ್ ಅಧಿಕೃತ ವೆಬ್ ಸೈಟ್ ಮೂಲಕ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ
PM-Kisan ಯೋಜನೆಯ 'ಬ್ಯಾಲೆನ್ಸ್ ಚೆಕ್' ಮಾಡೋದು ಹೇಗೆ? ಇಲ್ಲಿದೆ ನೋಡಿ title=

ನವದೆಹಲಿ : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆಯ 8ನೇ ಕಂತನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮೇ 14ರಂದು ಬಿಡುಗಡೆ ಮಾಡಿದ್ದಾರೆ. 

ಪ್ರಧಾನಿ ಮೋದಿ(PM Narendra Modi)ಯವರು ಪಿಎಂ-ಕಿಸಾನ್ ಯೋಜನೆಯಡಿ 9.5 ಕೋಟಿಗೂ ಹೆಚ್ಚು ರೈತ ಫಲಾನುಭವಿಗಳಿಗೆ 20,000 ಕೋಟಿ ರೂ.ಗೂ ಹೆಚ್ಚು ಹಣವನ್ನು ಬಿಡುಗಡೆ ಮಾಡಿದ್ದಾರೆ. ಆದ್ರೆ, ಫಲಾನುಭವಿಗಳು ಮೊತ್ತವನ್ನು ತಮ್ಮ ಖಾತೆಗೆ ಬಂದಿದೆ ಅಥವಾ ಇಲ್ಲವೇ ಎಂಬ ಗೊದಲದಲ್ಲಿದ್ದರೆ. ಈ   ರೈತರಿಗೆ ಸರ್ಕಾರ ಮಹತ್ವದ ಮಾಹಿತಿಯೊಂದನ್ನು ನೀಡಿದೆ.

ಇದನ್ನೂ ಓದಿ : SBI Debit Card PIN: ಕುಳಿತಲ್ಲೇ ಜನರೇಟ್ ಮಾಡಬಹುದು ಎಸ್ ಬಿಐ ಡೆಬಿಟ್ ಕಾರ್ಡ್ ಪಿನ್

ಪಿಎಂ ಕಿಸಾನ್ ಅಧಿಕೃತ ವೆಬ್ ಸೈಟ್(PM-Kisan Website) ಮೂಲಕ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ರೈತರು ತಮ್ಮ ಹೆಸರನ್ನು ಪರಿಶೀಲಿಸಬಹುದು. ಯಾವುದೇ ತೊಂದರೆಯಿಲ್ಲದ ಪರಿಶೀಲಿಸಬಹುದು, ಸರ್ಕಾರವು ಹಾಟ್ ಲೈನ್ ಸಂಖ್ಯೆಗಳ ಸರಣಿಯನ್ನು ನೀಡಿದೆ, ಅದನ್ನು ಬಳಸಿಕೊಂಡು ನೀವು ನಿಮ್ಮ ಕುಂದುಕೊರತೆಗಳನ್ನು ದಾಖಲಿಸಬಹುದು.

ಇದನ್ನೂ ಓದಿ : Doorstep Banking: Cash ಬೇಕೇ! ಈ ಕೆಲಸ ಮಾಡಿದರೆ ನಿಮ್ಮ ಮನೆ ಬಾಗಿಲಿಗೇ ಬರಲಿದೆ ATM

ನೀವು ನಿಮ್ಮ ಕ್ರೆಡಿಟ್ ವಿವರಗಳನ್ನು ಮೂರು ಮೋಡ್ ಗಳ ಮೂಲಕ ಪರಿಶೀಲಿಸಬಹುದು.

- ಆಧಾರ್ ಸಂಖ್ಯೆ(Aadhar Number)
- ಖಾತೆ ಸಂಖ್ಯೆ (Account Number)
- ಮೊಬೈಲ್ ಸಂಖ್ಯೆ(Mobile Number)

ಇದನ್ನೂ ಓದಿ : LPG Discount: 809 ರೂ. ಎಲ್‌ಪಿಜಿ ಸಿಲಿಂಡರ್ ಅನ್ನು ಕೇವಲ 9 ರೂಪಾಯಿಗೆ ಖರೀದಿಸಿ! ಆಫರ್ ಮೇ 31 ರವರೆಗೆ ಮಾತ್ರ

ನಿಮ್ಮ ಅಪೇಕ್ಷಿತ ಪಟ್ಟಿಯಲ್ಲಿ ಪಂಚ್ ಮಾಡಿ ಮತ್ತು ಎಂಟ್ರಿ ಮೇಲೆ ಕ್ಲಿಕ್(Click) ಮಾಡಿ. ಈಗ, ನೀವು ನಿಮ್ಮ ವಿವರಗಳನ್ನು ಪರಿಶೀಲಿಸಬಹುದು.

 ಪಿಎಂ-ಕಿಸಾನ್ ಯೋಜನೆಯು ಕೆಲವು ವಿನಾಯಿತಿಗಳಿಗೆ ಒಳಪಟ್ಟು ಕೃಷಿ(Agriculture)ಯೋಗ್ಯ ಭೂಮಿಯನ್ನು ಹೊಂದಿರುವ ದೇಶಾದ್ಯಂತದ ಎಲ್ಲಾ ಭೂಹಿಡುವಳಿದಾರ ರೈತ ಕುಟುಂಬಗಳಿಗೆ ಆದಾಯ ಬೆಂಬಲವನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ : Free Service Offer: ಈ Automobile ಕಂಪನಿಯ ಗ್ರಾಹಕರಿಗೊಂದು ಸಂತಸದ ಸುದ್ದಿ, ಜುಲೈ 31 ರವೆರೆಗೆ ಎಲ್ಲಾ ವಾಹನ ಮಾಡೆಲ್ ಗಳ ಉಚಿತ ಸರ್ವಿಸ್

ಒಂದು ವರ್ಷದಲ್ಲಿ ಪಿಎಂ ಕಿಸಾನ್ ಕಂತನ್ನು ಏಪ್ರಿಲ್-ಜುಲೈ ವರೆಗೆ ಅವಧಿ 1 ರ ಮೂಲಕ ಮೂರು ಬಾರಿ ಹಣ(Money) ಬಿಡುಗಡೆ ಮಾಡಲಾಗುತ್ತದೆ; ಅವಧಿ 2 ಆಗಸ್ಟ್ ನಿಂದ ನವೆಂಬರ್ ವರೆಗೆ; ಮತ್ತು ಅವಧಿ 3 ಡಿಸೆಂಬರ್ ನಿಂದ ಮಾರ್ಚ್ ವರೆಗೆ ಪಿಎಂ ಕಿಸಾನ್ ಯೋಜನೆಯ ಕಂತಿನ ಹಣ ಬಿಡುಗಡೆ ಮಾಡಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News