ನವದೆಹಲಿ :  SBI Changes Rule: ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಇದೀಗ ಪ್ರತಿ ಶಾಖೆಯಲ್ಲಿ ಹಣ ವರ್ಗಾವಣೆಗೆ ಇಮಿಡಿಯೇಟ್  ಪೇಮೆಂಟ್ ಸರ್ವಿಸ್ (IMPS) ಮಿತಿಯನ್ನು ಹೆಚ್ಚಿಸಿದೆ.  ಬ್ಯಾಂಕ್ ನೀಡಿದ ಮಾಹಿತಿಯ ಪ್ರಕಾರ, ಇಂದಿನಿಂದ ಅಂದರೆ ಫೆಬ್ರವರಿ 1, 2022 ರಿಂದ, IMPS ವಹಿವಾಟುಗಳಿಗೆ ಹೊಸ ಸ್ಲ್ಯಾಬ್ ಅನ್ನು ಸೇರಿಸಲಾಗಿದೆ.


COMMERCIAL BREAK
SCROLL TO CONTINUE READING

ಈ ಹೊಸ ಸ್ಲ್ಯಾಬ್ ಪ್ರಕಾರ, 2 ಲಕ್ಷದಿಂದ 5 ಲಕ್ಷದವರೆಗಿನ ಮೊತ್ತಕ್ಕೆ, IMPS ಮೂಲಕ ಹಣ ಕಳುಹಿಸಲು 20 ರೂಪಾಯಿ ಜೊತೆಗೆ ಜಿಎಸ್‌ಟಿ (GST) ವಿಧಿಸಲಾಗುತ್ತದೆ. IMPS ಎಂಬುದು ಬ್ಯಾಂಕ್‌ಗಳು (Bank) ಒದಗಿಸುವ  ಪೇಮೆಂಟ್ ಸರ್ವಿಸ್ ಆಗಿದೆ. ಇದು ಭಾನುವಾರ ಸೇರಿದಂತೆ ಎಲ್ಲಾ ರಜಾದಿನಗಳನ್ನು ಒಳಗೊಂಡಂತೆ 24 X7 ಲಭ್ಯವಿರ್ರುವ ಸೇವೆಯಾಗಿದೆ. 


ಇದನ್ನೂ ಓದಿ : Economic Survey 2022: ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷಾ ವರದಿ ಮಂಡಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಇಲ್ಲಿವೆ ಹೈಲೈಟ್ಸ್


IMPS ಎಂದರೇನು ಗೊತ್ತಾ?
IMPS ಎಂದರೆ ತಕ್ಷಣದ ಮೊಬೈಲ್ ಪಾವತಿ (Mobile payment) ಸೇವೆ. ಇದರ ಮೂಲಕ ಯಾವುದೇ ಖಾತೆದಾರರಿಗೆ ಎಲ್ಲಿಯಾದರೂ, ಯಾವುದೇ ಸಮಯದಲ್ಲಿ ಬೇಕಾದರೂ ಹಣವನ್ನು ಕಳುಹಿಸಬಹುದು. ಇದರಲ್ಲಿ ಹಣ ವರ್ಗಾವಣೆ ಸಮಯಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಬಂಧವಿಲ್ಲ. ಈ ವಿಶೇಷ ಸೇವೆಯ ಅಡಿಯಲ್ಲಿ, IMPS ಮೂಲಕ ಯಾವುದೇ ಸಮಯದಲ್ಲಿ, ದಿನದ 24 ಗಂಟೆಗಳು, ವಾರದ ಏಳು ದಿನಗಳು ಹಣವನ್ನು ವರ್ಗಾಯಿಸಬಹುದು.


ಭಾರತದಲ್ಲಿ ಆನ್‌ಲೈನ್ ಬ್ಯಾಂಕಿಂಗ್ (online banking) ಮೂಲಕ ಎಲ್ಲಿ ಬೇಕಾದರೂ ಹಣವನ್ನು ಕಳುಹಿಸಬಹುದು. ಆದರೆ ಹಣವನ್ನು ಕಳುಹಿಸುವ ವಿಧಾನಗಳು ವಿಭಿನ್ನವಾಗಿವೆ. ಆನ್‌ಲೈನ್ ಬ್ಯಾಂಕಿಂಗ್‌ನಿಂದ ಹಣವನ್ನು ವರ್ಗಾಯಿಸಲು ಮೂರು ಮಾರ್ಗಗಳಿವೆ - IMPS, NEFT, RTGS. 


ಇದನ್ನು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ನಿರ್ವಹಿಸುತ್ತದೆ.   ಇದರಲ್ಲಿ ಹಣವನ್ನು ತಕ್ಷಣವೇ ವರ್ಗಾಯಿಸಲಾಗುತ್ತದೆ. IMPS ವರ್ಷವಿಡೀ 24×7 ಲಭ್ಯವಿದೆ. ಆದರೆ, NEFT ಮತ್ತು RTGS ನಲ್ಲಿ ಈ ಸೌಲಭ್ಯವಿರುವುದಿಲ್ಲ. 


ಇದನ್ನೂ ಓದಿ : Budget 2022: ಈ ಬಜೆಟ್ ಅಧಿವೇಶನದಲ್ಲಿ ತೆರಿಗೆ ಪಾವತಿದಾರರಿಗೆ ಸಿಗಲಿದೆ ಈ ಸಂತಸದ ಸುದ್ದಿ!


ಆರ್‌ಬಿಐನಿಂದ ಘೋಷಣೆ : 
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಗವರ್ನರ್ ಶಕ್ತಿಕಾಂತ ದಾಸ್ ಅವರು ಅಕ್ಟೋಬರ್‌ನಲ್ಲಿ IMPS ಸೇವೆಯ ಬಗ್ಗೆ ದೊಡ್ಡ ಘೋಷಣೆ ಮಾಡಿದ್ದರು. ಇದರ ಅಡಿಯಲ್ಲಿ, ಗ್ರಾಹಕರು ಒಂದು ದಿನದಲ್ಲಿ 5 ಲಕ್ಷದವರೆಗಿನ ವಹಿವಾಟುಗಳನ್ನು ಮಾಡಲು ಸಾಧ್ಯವಾಗುತ್ತದೆ. ಈ ಮೊದಲು ಇದರ ಮಿತಿ 2 ಲಕ್ಷ ರೂಪಾಯಿಗೆ ಸೀಮಿತವಾಗಿತ್ತು. 


ಎಸ್‌ಬಿಐ ವಿಶೇಷ ಕೊಡುಗೆ :
ಹೊಸ ವರ್ಷದಂದು ಎಸ್‌ಬಿಐ (SBI) ಗ್ರಾಹಕರಿಗಾಗಿ ವಿಶೇಷ ಕೊಡುಗೆಯನ್ನು ಪರಿಚಯಿಸಿದೆ. ಜನರು ವೈಯಕ್ತಿಕ ಸಾಲಗಳಿಗೆ ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಆದ್ದರಿಂದ, SBI ತನ್ನ ಗ್ರಾಹಕರಿಗೆ ಪೂರ್ವ-ಅನುಮೋದಿತ ವೈಯಕ್ತಿಕ ಸಾಲದ ಕೊಡುಗೆಯನ್ನು ಪರಿಚಯಿಸಿದೆ. ಇದನ್ನು YONO ಅಪ್ಲಿಕೇಶನ್ ಮೂಲಕ ಪಡೆಯಬಹುದು. ಇದರ ಅಡಿಯಲ್ಲಿ, ಬ್ಯಾಂಕ್ ಗ್ರಾಹಕರಿಗೆ ವೈಯಕ್ತಿಕ ಸಾಲಗಳ ಮೇಲೆ ವಿಶೇಷ ರಿಯಾಯಿತಿಗಳನ್ನು ಸಹ ನೀಡುತ್ತಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಗ್ರಾಹಕರಿಗೆ ಶೂನ್ಯ ಸಂಸ್ಕರಣಾ ಶುಲ್ಕದಲ್ಲಿ ಸಾಲ ನೀಡುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.