Bank Holidays In February 2022: 2022 ರ ಮೊದಲ ತಿಂಗಳು ಅಂದರೆ ಜನವರಿ ಇನ್ನೇನು ಅಂತ್ಯವಾಗುತ್ತಾ ಬಂದಿದೆ. ಹೀಗಿರುವಾಗ ಮುಂದಿನ ತಿಂಗಳು ಅಂದರೆ ಫೆಬ್ರವರಿಯಲ್ಲಿ ಬಾಕಿ ಉಳಿದಿರುವ ಕೆಲಸಗಳ ಬಗ್ಗೆ ಜನರು ಯೋಜನೆ ರೂಪಿಸಲು ಪ್ರಾರಂಭಿಸಿರುತ್ತಾರೆ. ನೀವು ಫೆಬ್ರವರಿಯಲ್ಲಿ ಯಾವುದೇ ಬ್ಯಾಂಕ್ ಸಂಬಂಧಿತ ವ್ಯವಹಾರವನ್ನು ಹೊಂದಿದ್ದರೆ, ಮುಂದಿನ ತಿಂಗಳು ಬ್ಯಾಂಕುಗಳು ಯಾವಾಗ ರಜೆ ಇರಲಿವೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ, ಮುಂದಿನ ತಿಂಗಳು ಅಂದರೆ ಫೆಬ್ರವರಿಯಲ್ಲಿ ಒಟ್ಟು 12 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಆದರೆ, ಎಲ್ಲ ರಾಜ್ಯಗಳಲ್ಲೂ ಇಷ್ಟು ದಿನ ರಜೆ ಇರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಬ್ಯಾಂಕ್ ಕೆಲಸಕ್ಕೆ ಮನೆಯಿಂದ ಹೊರಡುವ ಮೊದಲು, ಬ್ಯಾಂಕ್ ರಜೆ ಪಟ್ಟಿಯನ್ನು ಪರಿಶೀಲಿಸಿ.
ಇದನ್ನೂ ಓದಿ - ಕಾರು ಅಥವಾ ಬೈಕ್ ನಲ್ಲಿ ಈ Tape ಅಳವಡಿಸದಿದ್ದಲ್ಲಿ ತೆರಬೇಕಾಗುತ್ತದೆ 10,000 ರೂ. ದಂಡ
ಪ್ರತಿಕೂಲ ಹವಾಮಾನದಿಂದಾಗಿ ಸಂಭವಿಸುವ ರಸ್ತೆ ಅಪಘಾತಗಳನ್ನು ನಿಯಂತ್ರಿಸು
ಫೆಬ್ರವರಿ 2022 ರಲ್ಲಿ, ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಬಸಂತ್ ಪಂಚಮಿ, ಗುರು ರವಿದಾಸ್ ಜಯಂತಿ ಮತ್ತು ಡೋಲ್ಜಾತ್ರಾ ಸೇರಿದಂತೆ ಹಲವು ಸ್ಥಳೀಯ ಹಬ್ಬಗಳಂದು ಆರು ದಿನಗಳು ಬ್ಯಾಂಕುಗಳಿಗೆ ರಜೆ (Bank Holidays) ಇರಲಿದೆ. ಇದಲ್ಲದೇ, ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರದಂದು ವಾರದ ರಜೆ ಇರುತ್ತದೆ. ಹೀಗೆ ಮುಂದಿನ ತಿಂಗಳಲ್ಲಿ ಒಟ್ಟು 12 ದಿನಗಳ ಕಾಲ ಬ್ಯಾಂಕ್ ಗಳಲ್ಲಿ ವ್ಯವಹಾರ ಇರುವುದಿಲ್ಲ. ಈ ಸಮಯದಲ್ಲಿ ಗ್ರಾಹಕರು ಎಟಿಎಂ, ಇಂಟರ್ನೆಟ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್ ಮತ್ತು ಆನ್ಲೈನ್ ಸೇವೆಗಳ ಮೂಲಕ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಬಹುದಾಗಿದೆ.
ಇದನ್ನೂ ಓದಿ - ಹೊಸ ಸೇವೆ ಆರಂಭಿಸಿದ SBI, ಎಲ್ಲಾ ಗ್ರಾಹಕರಿಗೂ ಸಿಗಲಿದೆ ಭರ್ಜರಿ ಲಾಭ
ಫೆಬ್ರವರಿಯಲ್ಲಿ 12 ದಿನಗಳು ಬ್ಯಾಂಕ್ ರಜೆ, ಇಲ್ಲಿದೆ ಫುಲ್ ಲಿಸ್ಟ್:
>> ಫೆಬ್ರವರಿ 2: ಸೋನಮ್ ಲೋಚಾರ್ (ಗ್ಯಾಂಗ್‌ಟಾಕ್‌ನಲ್ಲಿ ಬ್ಯಾಂಕ್‌ಗಳಿಗೆ ರಜೆ)
>> ಫೆಬ್ರವರಿ 5: ಸರಸ್ವತಿ ಪೂಜೆ/ಶ್ರೀ ಪಂಚಮಿ/ಬಸಂತ್ ಪಂಚಮಿ (ಅಗರ್ತಲಾ, ಭುವನೇಶ್ವರ್, ಕೋಲ್ಕತ್ತಾದಲ್ಲಿ ಬ್ಯಾಂಕ್‌ಗಳಿಗೆ ರಜೆ)
>> 15 ಫೆಬ್ರವರಿ: ಮುಹಮ್ಮದ್ ಹಜರತ್ ಅಲಿ/ಲೂಯಿಸ್-ನಾಗೈ-ನೀ ಅವರ ಜನ್ಮದಿನ (ಇಂಫಾಲ್, ಕಾನ್ಪುರ್, ಲಕ್ನೋದಲ್ಲಿ ಬ್ಯಾಂಕ್‌ಗಳಿಗೆ ರಜೆ)
>> 16 ಫೆಬ್ರವರಿ: ಗುರು ರವಿದಾಸ್ ಜಯಂತಿ (ಚಂಡೀಗಢದಲ್ಲಿ ಬ್ಯಾಂಕ್‌ಗಳಿಗೆ ರಜೆ)
>> ಫೆಬ್ರವರಿ 18: ಡೊಲ್ಜಾತ್ರಾ (ಕೋಲ್ಕತ್ತಾದಲ್ಲಿ ಬ್ಯಾಂಕುಗಳಿಗೆ ರಜೆ)
>> ಫೆಬ್ರವರಿ 19: ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ (ಬೆಲಾಪುರ, ಮುಂಬೈ, ನಾಗ್ಪುರದಲ್ಲಿ ಬ್ಯಾಂಕ್‌ಗಳಿಗೆ ರಜೆ)
ಈ ವಾರಾಂತ್ಯದಲ್ಲಿ ಬ್ಯಾಂಕುಗಳು ಸಹ ಮುಚ್ಚಲ್ಪಡುತ್ತವೆ:
* 6 ಫೆಬ್ರವರಿ: ಭಾನುವಾರ (ವಾರದ ರಜೆ)
* ಫೆಬ್ರವರಿ 12: ತಿಂಗಳ ಎರಡನೇ ಶನಿವಾರ (ವಾರದ ರಜೆ)
* 13 ಫೆಬ್ರವರಿ: ಭಾನುವಾರ (ವಾರದ ರಜೆ)
* ಫೆಬ್ರವರಿ 20: ಭಾನುವಾರ (ವಾರದ ರಜೆ)
* 26 ಫೆಬ್ರವರಿ: ತಿಂಗಳ ನಾಲ್ಕನೇ ಶನಿವಾರ (ವಾರದ ರಜೆ)
* ಫೆಬ್ರವರಿ 27: ಭಾನುವಾರ (ವಾರದ ರಜೆ)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.