ಶಾಕಿಂಗ್! WhatsApp ಬಳಕೆದಾರರು ಇನ್ಮುಂದೆ ಈ ವಿಶೇಷ ಸೇವೆಗಾಗಿ ಶುಲ್ಕ ಪಾವತಿಸಬೇಕು...
ಸಣ್ಣ ಉದ್ಯಮಿಗಳನ್ನು ಗಮನದಲ್ಲಿಟ್ಟುಕೊಂಡು ವಾಟ್ಸಾಪ್ ಇತ್ತೀಚೆಗೆ ವಾಟ್ಸಾಪ್ ಬಿಸಿನೆಸ್ ಎಂಬ ಪ್ರತ್ಯೇಕ ಆ್ಯಪ್ ಅನ್ನು ಪ್ರಾರಂಭಿಸಿದೆ. ಈ ಅಪ್ಲಿಕೇಶನ್‌ನ ವಿಶೇಷ ಲಕ್ಷಣವೆಂದರೆ ಇದು ಸಾಮಾನ್ಯ ವಾಟ್ಸಾಪ್‌ನಲ್ಲಿ ನೀವು ಕಂಡುಕೊಳ್ಳದ ಸಣ್ಣ ವ್ಯವಹಾರಕ್ಕೆ ಸಂಬಂಧಿಸಿದ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ನವದೆಹಲಿ: ಚಾಟಿಂಗ್ ಅಪ್ಲಿಕೇಶನ್ ವಾಟ್ಸಾಪ್ ಈಗ ವಿಶ್ವದಾದ್ಯಂತ ಜನಪ್ರಿಯವಾಗಿದೆ. ಹೆಚ್ಚಿನ ಜನರು ತಮ್ಮ ಫೋನ್ ಸಂಭಾಷಣೆ, ವಿಡಿಯೋ ಕರೆಗಳು ಮತ್ತು ಚಾಟಿಂಗ್‌ಗಾಗಿ ವಾಟ್ಸಾಪ್ ಬಳಸುತ್ತಿದ್ದಾರೆ. ಏತನ್ಮಧ್ಯೆ ವಾಟ್ಸಾಪ್ (Whatsapp) ಬಳಕೆದಾರರಿಗೆ ಒಂದು ಶಾಕಿಂಗ್ ಸುದ್ದಿ ಇದೆ. ಈಗ ವಾಟ್ಸಾಪ್ ಬಿಸಿನೆಸ್‌ಗೆ ಬಳಕೆದಾರರಿಗೆ ಶುಲ್ಕ ವಿಧಿಸಲಾಗುವುದು ಎಂದು ಕಂಪನಿ ಪ್ರಕಟಿಸಿದೆ. ಈ ನಿಟ್ಟಿನಲ್ಲಿ ಕಂಪನಿಯು ತನ್ನ ಅಧಿಕೃತ ಬ್ಲಾಗ್‌ನಿಂದ ಮಾಹಿತಿಯನ್ನು ನೀಡಿದೆ. ಪ್ರಸ್ತುತ ವಾಟ್ಸಾಪ್ ಬಿಸಿನೆಸ್‌ನ 50 ದಶಲಕ್ಷಕ್ಕೂ ಹೆಚ್ಚು ವ್ಯಾಪಾರ ಬಳಕೆದಾರರಿದ್ದಾರೆ ಎಂಬುದು ಗಮನಾರ್ಹವಾಗಿದೆ.
ವಾಟ್ಸಾಪ್‌ನಲ್ಲಿನ ಹೊಸ ವೈಶಿಷ್ಟ್ಯ, ಈಗ ಅನಗತ್ಯ ಮೆಸೇಜ್‌ಗಳಿಗೆ ಹೇಳಿ ಗುಡ್ ಬೈ
ತನ್ನ ಅಧಿಕೃತ ಬ್ಲಾಗ್‌ನಿಂದ ಮಾಹಿತಿ ನೀಡಿರುವ ವಾಟ್ಸಾಪ್:
ವಾಟ್ಸಾಪ್ 50 ದಶಲಕ್ಷಕ್ಕೂ ಹೆಚ್ಚು ವಾಟ್ಸಾಪ್ ಬಿಸಿನೆಸ್ ಬಳಕೆದಾರರಿಗೆ ಪೇ-ಟು-ಮೆಸೇಜ್ ಆಯ್ಕೆಯನ್ನು ಘೋಷಿಸಿದೆ. "ಎರಡು ಶತಕೋಟಿಗೂ ಹೆಚ್ಚು ಗ್ರಾಹಕರಿಗೆ ಉಚಿತ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಪಠ್ಯ, ವಿಡಿಯೋ ಮತ್ತು ಧ್ವನಿ ಕರೆಗಳನ್ನು ಒದಗಿಸಲು ನಾವು ವ್ಯಾಪಾರ ಗ್ರಾಹಕರಿಗೆ ನೀಡುವ ಕೆಲವು ಸೇವೆಗಳಿಗೆ ನಾವು ಶುಲ್ಕ ವಿಧಿಸಲಿದ್ದೇವೆ" ಎಂದು ಕಂಪನಿ ಹೇಳಿದೆ. ಆದರೆ ವ್ಯಾಪಾರ ಸೇವೆಗೆ ಎಷ್ಟು ಶುಲ್ಕ ವಿಧಿಸಲಾಗುವುದು ಎಂಬುದನ್ನು ವಾಟ್ಸಾಪ್ ಬಹಿರಂಗಪಡಿಸಿಲ್ಲ.
ಈಗ ಇಪಿಎಫ್‌ಒ ದೂರುಗಳನ್ನು WhatsAppನಲ್ಲಿ ಇತ್ಯರ್ಥಪಡಿಸಿ
ಸಣ್ಣ ಉದ್ಯಮಿಗಳಿಗೆ ಬಹಳಷ್ಟು ಸಹಕಾರಿ ವಾಟ್ಸಾಪ್ ಬಿಸಿನೆಸ್ :
ಸಣ್ಣ ಉದ್ಯಮಿಗಳನ್ನು ಗಮನದಲ್ಲಿಟ್ಟುಕೊಂಡು ವಾಟ್ಸಾಪ್ ಇತ್ತೀಚೆಗೆ ವಾಟ್ಸಾಪ್ ಬಿಸಿನೆಸ್‌ನ ಪ್ರತ್ಯೇಕ ಆ್ಯಪ್ ಅನ್ನು ಪ್ರಾರಂಭಿಸಿದೆ ಎಂದು ತಜ್ಞರು ಹೇಳುತ್ತಾರೆ. ಈ ಅಪ್ಲಿಕೇಶನ್‌ನ ವಿಶೇಷ ಲಕ್ಷಣವೆಂದರೆ ಇದು ಸಾಮಾನ್ಯ ವಾಟ್ಸಾಪ್‌ನಲ್ಲಿ ನೀವು ಕಂಡುಕೊಳ್ಳದ ಸಣ್ಣ ವ್ಯವಹಾರಕ್ಕೆ ಸಂಬಂಧಿಸಿದ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಈ ವೈಶಿಷ್ಟ್ಯದ ಸಹಾಯದಿಂದ ಸಣ್ಣ ಉದ್ಯಮಗಳು ತಮ್ಮ ವ್ಯವಹಾರವನ್ನು ನಿರ್ಮಿಸಲು ಸಹಾಯ ಮಾಡುತ್ತವೆ ಎಂದು ವಾಟ್ಸಾಪ್ ನಂಬುತ್ತದೆ. ಕಂಪನಿಯು ಈ ಹೊಸ ವೈಶಿಷ್ಟ್ಯಕ್ಕಾಗಿ ಅಧಿಸೂಚನೆಗಳನ್ನು ತನ್ನ ಬಳಕೆದಾರರಿಗೆ ಕಳುಹಿಸಲು ಪ್ರಾರಂಭಿಸಿದೆ.