ಮಾರುತಿಯ ಈ ಕಾರ್ ಖರೀದಿಯಲ್ಲಿ ಸಿಗುತ್ತಿದೆ ಬಂಪರ್ ಡಿಸ್ಕೌಂಟ್
ಮಾರುತಿ ಸುಜುಕಿ ಕಂಪನಿಯು ತನ್ನ ಜನಪ್ರಿಯ ಮೂರು ಕಾರುಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಯಾವ ಕಾರುಗಳಲ್ಲಿ ಡಿಸ್ಕೌಂಟ್ ಲಭ್ಯವಿದೆ, ಯಾವ ಕಾರುಗಳಲ್ಲಿ ಎಷ್ಟು ರಿಯಾಯಿತಿ ಲಭ್ಯವಾಗುತ್ತಿದೆ ಎಂದು ತಿಳಿಯಿರಿ.
ಬೆಂಗಳೂರು: ಜನಪ್ರಿಯ ಕಾರು ಕಂಪನಿ ಮಾರುತಿ ಸುಜುಕಿ ತನ್ನ ಕೆಲ ಕಾರುಗಳ ಮೇಲೆ ಬಂಪರ್ ಡಿಸ್ಕೌಂಟ್ ಘೋಷಿಸಿದೆ. ಮಾರುತಿ ಸುಜುಕಿ ತನ್ನ ಕೆಲವು ಮಾದರಿಗಳ ಮೇಲೆ 50,000 ರೂ.ವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಇವುಗಳಲ್ಲಿ ನಗದು ರಿಯಾಯಿತಿ, ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿಗಳು ಲಭ್ಯವಾಗಲಿವೆ. ಗಮನಾರ್ಹವಾಗಿ, ಈ ಡಿಸ್ಕೌಂಟ್ ಫೆಬ್ರವರಿ ತಿಂಗಳಿನಲ್ಲಿ ಮಾತ್ರ ಮಾನ್ಯವಾಗಲಿದೆ. ಮಾರುತಿ ಸುಜುಕಿಯ ಯಾವ ಕಾರುಗಳ ಮೇಲೆ ರಿಯಾಯಿತಿ ಲಭ್ಯವಾಗುತ್ತಿದೆ. ಎಲ್ಲಿ ರಿಯಾಯಿತಿ ದರದಲ್ಲಿ ಕಾರುಗಳನ್ನು ಖರೀದಿಸಬಹುದು ಎಂದು ತಿಳಿಯಿರಿ.
ಮಾರುತಿಯ ಈ ಮೂರು ಕಾರುಗಳ ಮೇಲೆ ಸಿಗುತ್ತಿದೆ ಡಿಸ್ಕೌಂಟ್:
ಮಾರುತಿ ಸುಜುಕಿ ಕಂಪನಿಯ ಮಾರುತಿ ಸುಜುಕಿ ಇಗ್ನಿಸ್, ಮಾರುತಿ ಸುಜುಕಿ ಸಿಯಾಜ್ ಮತ್ತು ಮಾರುತಿ ಸುಜುಕಿ ಬಲೆನೊ ಮೇಲೆ 50,000 ರೂ.ವರೆಗೆ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಎಲ್ಲಾ ಮೂರು ಕಾರುಗಳನ್ನು ನೆಕ್ಸಾ ಡೀಲರ್ಶಿಪ್ಗಳಿಂದ ಮಾರಾಟ ಮಾಡಲಾಗಿದೆ.
ಇದನ್ನೂ ಓದಿ- Car ಖರೀದಿಯ ಮೇಲೆ ಈ ರೀತಿ ಶೇ.15ರಷ್ಟು ರಿಯಾಯಿತಿ ಪಡೆಯಿರಿ, ಟ್ರಿಕ್ ಹೇಳಿಕೊಟ್ಟ ಗಡ್ಕರಿ
ಮಾರುತಿ ಸುಜುಕಿ ಇಗ್ನಿಸ್:
ಫೆಬ್ರವರಿ 2023 ರಲ್ಲಿ ಮಾರುತಿ ಸುಜುಕಿ ಇಗ್ನಿಸ್ನಲ್ಲಿ ದೊಡ್ಡ ಭರ್ಜರಿ ರಿಯಾಯಿತಿ ನೀಡಲಾಗುತ್ತಿದೆ.
ಮಾರುತಿಯ ನೆಕ್ಸ ಪ್ರವೇಶ ಹಂತದ ಕೊಡುಗೆಯ ಮೇಲೆ 25,000 ರೂಪಾಯಿಗಳ ನಗದು ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದಲ್ಲದೆ, ಇದರಲ್ಲಿ 25,000 ರೂ. (ಮ್ಯಾನುವಲ್ ಗೇರ್ ಬಾಕ್ಸ್ ಮಾದರಿ) ಹೆಚ್ಚುವರಿ ವಿನಿಮಯ ಬೋನಸ್ ಕೂಡ ಲಭ್ಯವಾಗಲಿದೆ.
ಮಾರುತಿ ಸುಜುಕಿ ಇಗ್ನಿಸ್ನ ಸ್ವಯಂಚಾಲಿತ ಮಾದರಿಯು 19,000 ರೂಪಾಯಿಗಳ ರಿಯಾಯಿತಿ ಮತ್ತು 4,000 ರೂಪಾಯಿಗಳ ಕಾರ್ಪೊರೇಟ್ ಬೋನಸ್ ಅನ್ನು ಪಡೆಯುತ್ತಿದೆ. ಈ ಕೊಡುಗೆಯು 2022 ಮತ್ತು 2023 ಎರಡೂ ಮಾದರಿಗಳಿಗೆ ಅನ್ವಯಿಸುತ್ತದೆ.
ಮಾರುತಿ ಸುಜುಕಿ ಸಿಯಾಜ್:
ಮಾರುತಿ ಸುಜುಕಿಯ ಮಧ್ಯಮ ಗಾತ್ರದ ಸೆಡಾನ್ ಸಿಯಾಜ್ ಒಟ್ಟು 40,000 ರೂಪಾಯಿಗಳ ರಿಯಾಯಿತಿಯನ್ನು ಪಡೆಯುತ್ತಿದೆ. 2022ರ ಮಾದರಿಯಲ್ಲಿ ಗ್ರಾಹಕರು 10,000 ರೂ. ನಗದು ರಿಯಾಯಿತಿ, 25,000 ರೂ. ವಿನಿಮಯ ಬೋನಸ್ ಮತ್ತು 5,000 ರೂ.ಗಳ ಕಾರ್ಪೊರೇಟ್ ರಿಯಾಯಿತಿಯನ್ನು ಇದರಲ್ಲಿ ನೀಡಲಾಗುತ್ತಿದೆ. ಮಾರುತಿ ಸುಜುಕಿ ಸಿಯಾಜ್ನ 2023 ಮಾದರಿಯಲ್ಲಿ ಒಟ್ಟು 30,000 ರೂ. ಇದು 25,000 ರೂಪಾಯಿಗಳ ವಿನಿಮಯ ಬೋನಸ್ ಮತ್ತು 5,000 ರೂಪಾಯಿಗಳ ಕಾರ್ಪೊರೇಟ್ ರಿಯಾಯಿತಿಯನ್ನು ಒಳಗೊಂಡಿದೆ.
ಇದನ್ನೂ ಓದಿ- ಇದೇ ಕಾರಣಕ್ಕೆ ಟಾಟಾ ಕಂಪನಿಯ ಈ ಮೂರು ಕಾರುಗಳು ಅತಿ ಹೆಚ್ಚು ಮಾರಾಟವಾಗುತ್ತಿರುವುದು!
ಮಾರುತಿ ಸುಜುಕಿ ಬಲೆನೋ:
ಮಾರುತಿ ಸುಜುಕಿ ಬಲೆನೋ ಕಾರಿನ ಮ್ಯಾನುಯಲ್ ಆವೃತ್ತಿ (2022 ಮತ್ತು 2023 ಮಾದರಿಗಳು) 15,000 ರೂಪಾಯಿಗಳ ನಗದು ರಿಯಾಯಿತಿಯಲ್ಲಿ ಲಭ್ಯವಾಗಲಿವೆ. ಆದ್ಯಾಗ್ಯೂ, ಮಾರುತಿ ಸುಜುಕಿ ಬಲೆನೋ ಕಾರಿನ ಅಟೋಮ್ಯಾಟಿಕ್ ಕಾರಿನ ಮೇಲೆ ಯಾವುದೇ ಡಿಸ್ಕೌಂಟ್ ಲಭ್ಯವಾಗುತ್ತಿಲ್ಲ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.