ಇದೇ ಕಾರಣಕ್ಕೆ ಟಾಟಾ ಕಂಪನಿಯ ಈ ಮೂರು ಕಾರುಗಳು ಅತಿ ಹೆಚ್ಚು ಮಾರಾಟವಾಗುತ್ತಿರುವುದು!

Top 3 Tata Cars In Jan 2023 : ಕಳೆದ ವರ್ಷ ಈ  ಜನವರಿಯಲ್ಲಿ ಕೇವಲ 40777 ಯೂನಿಟ್‌ಗಳಷ್ಟು ಟಾಟಾ ಕಾರು ಮಾರಾಟವಾಗಿತ್ತು. ಆದರೆ, ಜನವರಿ 2023 ರಲ್ಲಿ, ಕಂಪನಿಯು ಇದಕ್ಕಿಂತ 7210 ಹೆಚ್ಚು ಯುನಿಟ್‌ಗಳನ್ನು ಕಂಪನಿ ಮಾರಾಟ ಮಾಡಿದೆ. 

Written by - Ranjitha R K | Last Updated : Feb 8, 2023, 09:48 AM IST
  • ಜನವರಿಯಲ್ಲಿ ಟಾಟಾ ಮೋಟಾರ್ಸ್ 47,987 ಕಾರುಗಳು ಮಾರಾಟ
  • ಕಾರಿನ ಮಾರಾಟದಲ್ಲಿ 17.68 ಪ್ರತಿಶತದಷ್ಟು ಹೆಚ್ಚಳ
  • ದೇಶದ ಮೂರನೇ ಅತಿದೊಡ್ಡ ಕಾರು ಮಾರಾಟ ಕಂಪನಿ ಟಾಟಾ ಮೋಟಾರ್ಸ್
ಇದೇ  ಕಾರಣಕ್ಕೆ ಟಾಟಾ ಕಂಪನಿಯ ಈ ಮೂರು ಕಾರುಗಳು ಅತಿ ಹೆಚ್ಚು ಮಾರಾಟವಾಗುತ್ತಿರುವುದು!  title=

Top 3 Tata Cars In Jan 2023 : ಜನವರಿಯಲ್ಲಿ   ಟಾಟಾ ಮೋಟಾರ್ಸ್ 47,987 ಕಾರುಗಳನ್ನು ಮಾರಾಟ ಮಾಡಿದೆ. ವಾರ್ಷಿಕ ಆಧಾರದ ಮೇಲೆ ನೋಡುವುದಾದರೆ ಕಾರಿನ ಮಾರಾಟ 17.68 ಪ್ರತಿಶತದಷ್ಟು ಹೆಚ್ಚಾಗಿದೆ. ಕಳೆದ ವರ್ಷ ಈ ಜನವರಿಯಲ್ಲಿ ಕೇವಲ 40777 ಯೂನಿಟ್‌ಗಳಷ್ಟು ಟಾಟಾ ಕಾರು ಮಾರಾಟವಾಗಿತ್ತು. ಆದರೆ, ಜನವರಿ 2023 ರಲ್ಲಿ, ಕಂಪನಿಯು ಇದಕ್ಕಿಂತ 7210 ಹೆಚ್ಚು ಯುನಿಟ್‌ಗಳನ್ನು ಕಂಪನಿ ಮಾರಾಟ ಮಾಡಿದೆ. ಇದರೊಂದಿಗೆ, ಟಾಟಾ ಮೋಟಾರ್ಸ್ ದೇಶದ ಮೂರನೇ ಅತಿದೊಡ್ಡ ಕಾರು ಮಾರಾಟ ಕಂಪನಿಯಾಗಿ ಹೊರ ಹೊಮ್ಮಿದೆ. ಕಂಪನಿಯ ಹೆಚ್ಚು ಮಾರಾಟವಾಗುವ ಕಾರುಗಳು ಯಾವುವು ನೋಡೋಣ. 

ಟಾಟಾ ನೆಕ್ಸನ್ :
ಟಾಟಾ ನೆಕ್ಸಾನ್ ಕಾರು ಅತಿ ಹೆಚ್ಚು ಮಾರಾಟವಾದ ಕಾರು. ಟಾಟಾ ಮೋಟಾರ್ಸ್ ಜನವರಿ 2023 ರಲ್ಲಿ ನೆಕ್ಸಾನ್‌ನ 15,567 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಅದರ ಮಾರಾಟದಲ್ಲಿ 13 ಪ್ರತಿಶತದಷ್ಟು ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ. ನೆಕ್ಸಾನ್‌ನ ಪ್ರಬಲ ಅಂಶವೆಂದರೆ ಅದರ ಪವರ್‌ಟ್ರೇನ್ ಆಯ್ಕೆಗಳು. Nexon ಎಲ್ಲಾ ಮೂರು ಆವೃತ್ತಿಗಳಲ್ಲಿ ಲಭ್ಯವಿದೆ.  ಪೆಟ್ರೋಲ್, ಡೀಸೆಲ್ ಮತ್ತು EV.ಇಷ್ಟು ಮಾತ್ರವಲ್ಲದೆ ಇದರ CNG ಆವೃತ್ತಿ ಕೂಡ ಶೀಘ್ರದಲ್ಲೇ  ಮಾರುಕಟ್ಟೆಗೆ ಬರಲಿದೆ. 

ಇದನ್ನೂ ಓದಿ : Aero India 2023 : ಏರೋ ಇಂಡಿಯಾ 2023 ರ ಭವ್ಯತೆಗೆ ಸಾಕ್ಷಿ : ಇಲ್ಲಿದೆ ಈ ಭಾರಿಯ ವಿಶೇಷತೆಗಳು!

ಟಾಟಾ ಪಂಚ್ :
ಟಾಟಾ ಪಂಚ್ ಕಂಪನಿಯ ಇತ್ತೀಚಿನ ಪ್ರಾಡಕ್ಟ್ ಆಗಿದೆ. ಇದು ಟಾಟಾದ ಎರಡನೇ ಅತಿ ಹೆಚ್ಚು ಮಾರಾಟವಾದ ಕಾರಾಗಿದೆ. ಟಾಟಾ ಮೋಟಾರ್ಸ್ ಕಳೆದ ವರ್ಷ ಜನವರಿಯಲ್ಲಿ  10,027 ಯುನಿಟ್ ಗಳಷ್ಟನ್ನು ಮಾರಾಟ ಮಾಡಿದೆ. 
ಆದರೆ ಈ ವರ್ಷ ಕಂಪನಿ 12,006 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಅಂದರೆ ಈ ಕಾರಿನ ಮಾರಾಟದಲ್ಲಿ 20 ಪ್ರತಿಶತದಷ್ಟು ಹೆಚ್ಚಾಗಿದೆ. ಪಂಚ್ ಅನ್ನು ಪ್ರಸ್ತುತ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರಾಟ ಮಾಡಲಾಗುತ್ತಿದೆ. ಇನ್ನೇನು ಕೆಲವೆಸಮಯದಲ್ಲಿ CNG ಆವೃತ್ತಿ ಕೂಡಾ ಬಿಡುಗಡೆಯಾಗಲಿದೆ. 

ಟಾಟಾ ಟಿಯಾಗೊ :
ಜನವರಿ 2023 ರಲ್ಲಿ ಟಾಟಾದ ಮೂರನೇ ಅತ್ಯುತ್ತಮ ಮಾರಾಟವಾದ ಕಾರು ಟಿಯಾಗೊ ಹ್ಯಾಚ್‌ಬ್ಯಾಕ್. ಕಳೆದ ತಿಂಗಳು, ಟಾಟಾ ಅದರ 9,032 ಯುನಿಟ್‌ಗಳನ್ನು ಮಾರಾಟ ಮಾಡಿದದೆ. ಆದರೆ ಜನವರಿ 2022 ರಲ್ಲಿ ಕೇವಲ  5,195 ಯುನಿಟ್‌ಗಳಷ್ಟೇ ಮಾರಾಟವಾಗಿತ್ತು. ಅಂದರೆ ಈ ಕಾರಿನ ಮಾರಾಟದಲ್ಲಿ 74 ಶೇಕಡಾ ಹೆಚ್ಚಾಗಿದೆ. ಪೆಟ್ರೋಲ್ ಎಂಜಿನ್ ಜೊತೆಗೆ, ಟಾಟಾ ಟಿಯಾಗೊ ಸಿಎನ್‌ಜಿ ಆವೃತ್ತಿಯಲ್ಲಿಯೂ ಲಭ್ಯವಿದೆ. ಇದರ ಆಲ್-ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಆವೃತ್ತಿಯು ಭಾರತದಲ್ಲಿ ಅಗ್ಗದ EV ಆಗಿದೆ. 

ಇದನ್ನೂ ಓದಿ :  Google versus OpenAI:ಕೆಲವೇ ದಿನಗಳಲ್ಲಿ ಬಳಕೆದಾರರಿಗೆ ಲಭ್ಯವಾಗಲಿದೆ ಚಾಟ್‌ಜಿಪಿಟಿ ಪ್ರತಿಸ್ಪರ್ಧಿ “ಬಾರ್ಡ್”

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News