Aadhaar Card: ಆಧಾರ್ ಕಾರ್ಡ್ ಧಾರಕರಿಗೊಂದು ಮಹತ್ವದ ಮಾಹಿತಿ, ಹೊಸ ಅಡ್ವೈಸರಿ ಹಿಂಪಡೆದ ಕೇಂದ್ರ ಸರ್ಕಾರ, ಕಾರಣ ಇಲ್ಲಿದೆ
Aadhaar Card Latest News: ಆಧಾರ್ ಬಳಕೆದಾರರಿಗೆ ಮತ್ತೊಮ್ಮೆ ಪ್ರಮುಖ ಸುದ್ದಿ ಪ್ರಕಟವಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಇತ್ತೀಚೆಗಷ್ಟೇ ಹೇಳಿಕೆಯನ್ನು ಬಿಡುಗಡೆ ಮಾಡುವ ಮೂಲಕ ಆಧಾರ್‌ನ ಫೋಟೋಕಾಪಿಗಳ ದುರ್ಬಳಕೆಯನ್ನು ತಡೆಯಲು ದೇಶನ ನಾಗರಿಕರು ಅವುಗಳನ್ನು ಹಂಚಿಕೊಳ್ಳಬಾರದು ಎಂಬ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿತ್ತು. ಆದರೆ ಇದೀಗ ಸಚಿವಾಲಯ ತನ್ನ ಪತ್ರಿಕಾ ಪ್ರಕಟಣೆಯನ್ನು ಹಿಂದಕ್ಕೆ ಪಡೆದಿದೆ.
Masked Aadhaar Card Download: ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಇಂದು ಸರ್ಕಾರ ಹೊರಡಿಸಿದ್ದ ಪತ್ರಿಕಾ ಪ್ರಕಟಣೆಯನ್ನು ಹಿಂದಕ್ಕೆ ಪಡೆದಿದೆ. ಭಾರತೀಯ ವಿಶಿಷ್ಠ ಗುರುತು ಚೀಟಿ ಪ್ರಾಧಿಕಾರ ಹೊಸ ಸಲಹೆಗಳನ್ನು ವಾಪಸ್ ಪಡೆದುಕೊಂಡಿದೆ. ಈ ಮೊದಲು ಸಲಹೆಗಳನ್ನು ನೀಡಿದ್ದ ಪ್ರಾಧಿಕಾರ, ಆಧಾರ್ ಕಾರ್ಡ್ ನ ಫೋಟೋಕಾಪಿ ಹಂಚಿಕೊಳ್ಳುವ ಕುರಿತು ನಾಗರಿಕರಿಗೆ ಎಚ್ಚರಿಕೆಯನ್ನು ನೀಡಿತ್ತು. ಆದರೆ, ಇದೀಗ ಪುನಃ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಆಧಾರ್ ನ ಫೋಟೊಕಾಪಿಗಳನ್ನು ತಪ್ಪಾಗಿ ಅರ್ಥೈಸುವ ಸಾಧ್ಯತೆಯಿರುವುದರಿಂದ ಅದನ್ನು ಹಂಚಿಕೊಳ್ಳದಂತೆ ಸಲಹೆ ನೀಡುವ ಪತ್ರಿಕಾ ಪ್ರಕಟಣೆಯನ್ನು ಹಿಂಪಡೆಯುತ್ತಿರುವುದಾಗಿ ಹೇಳಿದೆ.
ಇದನ್ನೂ ಓದಿ-Driving License ಪಡೆಯುವ ನಿಯಮಗಳಲ್ಲಿ ಮಹತ್ವದ ಬದಲಾವಣೆ! ಸರ್ಕಾರದ ನೂತನ ಮಾರ್ಗಸೂಚಿಗಳು ಇಲ್ಲಿವೆ
ಹೊಸ ಹೇಳಿಕೆಯಲ್ಲಿ ಸಚಿವಾಲಯ ಹೇಳಿದ್ದೇನು?
'ಈ ಹಿಂದೆ ಹೊರಡಿಸಲಾಗಿದ್ದ ಪತ್ರಿಕಾ ಪ್ರಕಟಣೆಯಲ್ಲಿ ನಾಗರಿಕರು ತಮ್ಮ ಆಧಾರ್ ಕಾರ್ಡ್ ಪ್ರತಿಗಳನ್ನು ಹಂಚಿಕೊಳ್ಳಬಾರದು, ಅವುಗಳ ಬದಲಿಗೆ ಆಧಾರ್ ಕಾರ್ಡ್ ನ ಕೇವಲ ಕೊನೆಯ ನಾಲ್ಕು ಸಂಖ್ಯೆಗಳನ್ನು ಬಿಂಬಿಸುವ ಮಾಸ್ಕ್ಡ್ ಆಧಾರ್ ಬಳಸುವಂತೆ ಸಲಹೆ ನೀಡಿತ್ತು. ಆದರೆ, ಇದರಲ್ಲಿ ಒಟ್ಟು ಆಧಾರ್ ಸಂಖ್ಯೆಯ ಮೊದಲ ಎಂಟು ಅಂಕಿಗಳನ್ನು ಮರೆಮಾಚಲಾಗುತ್ತದೆ. ಈ ಕಾರಣದಿಂದ ಮೊದಲಿನ ಪತ್ರಿಕಾ ಪ್ರಕಟಣೆಯ ಕಾರಣ ತಪ್ಪು ವ್ಯಾಖ್ಯಾನದ ಸಾಧ್ಯತೆ ಹೆಚ್ಚಾಗಿರುವುದರಿಂದ ತಕ್ಷಣಕ್ಕೆ ಜಾರಿಗೆ ಬರುವಂತೆ ಅದನ್ನು ಹಿಂಪಡೆಯಲಾಗುತ್ತಿದೆ' ಎಂದು ಸಚಿವಾಲಯ ತನ್ನ ಹೊಸ ಹೇಳಿಕೆಯಲ್ಲಿ ಹೇಳಿದೆ.
UIDAI ನೀಡಿದ ಸ್ಪಷ್ಟೀಕರಣ ಏನು?
'UIDAI, ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಆಧಾರ್ ಸಂಖ್ಯೆಯನ್ನು ಹಂಚಿಕೊಳ್ಳಲು ತಮ್ಮ ತಿಳುವಳಿಕೆಯನ್ನು ಬಳಸಲು ಮಾತ್ರ ಸಲಹೆ ನೀಡುತ್ತದೆ. ಇನ್ನುಳಿದಂತೆ ಆಧಾರ್ ಗುರುತಿನ ದೃಢೀಕರಣ ಪರಿಸರ ವ್ಯವಸ್ಥೆಯು ಆಧಾರ್ ಹೊಂದಿರುವವರ ಗುರುತು ಮತ್ತು ಗೌಪ್ಯತೆಯನ್ನು ರಕ್ಷಿಸಲು ಸಾಕಷ್ಟು ಸೌಲಭ್ಯಗಳನ್ನು ಒದಗಿಸಲಾಗಿದೆ' ಎಂಬ ಸ್ಪಷ್ಟೀಕರಣ ಯುಐಡಿಎಐ ಹೇಳಿದೆ.
Aadhar Card New Rules: ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಹೊಸ ಅಡ್ವೈಸರಿ ಜಾರಿಗೊಳಿಸಿದ ಸರ್ಕಾರ, ಈಗಲೇ ತಿಳಿದುಕೊಳ್ಳಿ
ಅಲರ್ಟ್ ಜಾರಿಗೊಳಿಸಿದ್ದ ಸರ್ಕಾರ
ಇದಕ್ಕೂ ಮೊದಲು, ಬೆಂಗಳೂರಿನಲ್ಲಿರುವ ಯುಐಡಿಎಐ ಪ್ರಾದೇಶಿಕ ಕಚೇರಿ ಬಿಡುಗಡೆ ಮಾಡಿದ್ದ ಪ್ರಕಟಣೆಯಲ್ಲಿ, ಸಾರ್ವಜನಿಕರು ತಮ್ಮ ಆಧಾರ್‌ನ ಫೋಟೊಕಾಪಿಯನ್ನು ಯಾವುದೇ ಸಂಸ್ಥೆಯೊಂದಿಗೆ ಹಂಚಿಕೊಳ್ಳದಂತೆ ಕೇಳಿಕೊಳ್ಳಲಾಗಿತ್ತು. ಇದರಲ್ಲಿ, ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕೆಗಳನ್ನು ಪ್ರತಿನಿಧಿಸುವ ಮಾಸ್ಕ್ಡ್ ಆಧಾರ್ ಅನ್ನು ಪರ್ಯಾಯವಾಗಿ ಬಳಸಲು ಸಲಹೆ ನೀಡಲಾಗಿತ್ತು. ಯುಐಡಿಎಐ ನೀಡಿದ ಆಧಾರ್ ಕಾರ್ಡ್‌ಗಳನ್ನು ಹೊಂದಿರುವವರು ತಮ್ಮ ಆಧಾರ್ ಸಂಖ್ಯೆಯನ್ನು ಮಾತ್ರ ಬಳಸುವಲ್ಲಿ ಮತ್ತು ಅದನ್ನು ಇತರರೊಂದಿಗೆ ಹಂಚಿಕೊಳ್ಳಲು ಸಮಂಜಸವಾದ ವಿವೇಚನೆಯನ್ನು ಚಲಾಯಿಸಲು ಸಲಹೆ ನೀಡಲಾಗುತ್ತದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿತ್ತು.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.