ನವದೆಹಲಿ : ಈಗ ಎಲ್ಲಾ ಕೆಲಸಗಳಿಗೂ ಆಧಾರ್ ಕಾರ್ಡ್ (aadhaar card) ಅತ್ಯಗತ್ಯ ದಾಖಲೆಯಾಗಿದೆ. ಈ ದಾಖಲೆ ಇಲ್ಲದೆ, ಯಾವುದೇ ಸರ್ಕಾರಿ ಕೆಲಸ ಪೂರ್ಣಗೊಳ್ಳುವುದಿಲ್ಲ. ಸರ್ಕಾರಿ ಸೌಲಭ್ಯದ ಲಾಭವನ್ನು ಪಡೆಯುವುದು ಕೂಡಾ  ಆಧಾರ್ ಇಲ್ಲದೆ ಸಾಧ್ಯವಾಗುವುದಿಲ್ಲ. ಈಗ ಆಧಾರ್ ಪರಿಶೀಲನೆಯನ್ನು ಆಫ್‌ಲೈನ್‌ನಲ್ಲಿಯೂ ಮಾಡಬಹುದು. ಈ ಅಪ್ಡೇಟ್ ಬಗ್ಗೆ ಸರ್ಕಾರ ಇತ್ತೀಚೆಗೆ ಅಧಿಸೂಚನೆಯನ್ನು ಹೊರಡಿಸಿದೆ. 


COMMERCIAL BREAK
SCROLL TO CONTINUE READING

ಆಫ್‌ಲೈನ್‌ನಲ್ಲಿಯೂ ಆಧಾರ್ ಪರಿಶೀಲನೆ :
ಯುಐಡಿಎಐ (UIDAI) ರಚಿಸಿದ ಡಿಜಿಟಲ್ ಸಹಿ ಮಾಡಿದ ದಾಖಲೆಯನ್ನು ಹಂಚಿಕೊಳ್ಳುವ ಮೂಲಕ, ಜನರು ತಮ್ಮ ಆಧಾರ್ ಅನ್ನು ಆಫ್‌ಲೈನ್‌ನಲ್ಲಿ (Aadhaar Verification) ಪರಿಶೀಲಿಸಬಹುದು. ಇದಕ್ಕಾಗಿ ಆಧಾರ್ ಸಂಖ್ಯೆಯ ಕೊನೆಯ 4 ಅಂಕಿಗಳನ್ನು ಮಾತ್ರ ಬಳಸಬೇಕಾಗುತ್ತದೆ. 


ಇದನ್ನೂ ಓದಿ : Business Idea: ಮನೆಯಲ್ಲಿಯೇ ಕೇವಲ 5000 ರೂ.ನಲ್ಲಿ ಈ ಬ್ಯಸಿನೆಸ್ ಪ್ರಾರಂಭಿಸಿ, ಲಕ್ಷ ಲಕ್ಷ ಗಳಿಸಿ


ಆಧಾರ್ ನಿಯಮಗಳು ನವೆಂಬರ್ 8 ರಂದು ತಿಳಿಸಲಾಗಿದ್ದು, ಇದನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಇದರಲ್ಲಿ ಆಧಾರ್‌ನ ಆಫ್‌ಲೈನ್ ಪರಿಶೀಲನೆ ಹೇಗೆ ಮಾಡುವುದು ಎನ್ನುವುದನ್ನು  ವಿವರವಾಗಿ ವಿವರಿಸಲಾಗಿದೆ. 


ಆಧಾರ್ ಅನ್ನು ಹೀಗೆ ಪರಿಶೀಲಿಸಬಹುದು :
UIADI ಆನ್‌ಲೈನ್ ಪರಿಶೀಲನೆಯಲ್ಲಿ ಅಸ್ತಿತ್ವದಲ್ಲಿರುವ ಪ್ರಕ್ರಿಯೆಯ ಜೊತೆಗೆ  QR ಕೋಡ್ ಪರಿಶೀಲನೆ (QR Code Verification), ಆಧಾರ್ ಪೇಪರ್‌ಲೆಸ್ ಆಫ್‌ಲೈನ್ ಇ-ಕೆವೈಸಿ ಪರಿಶೀಲನೆ (Aadhaar Paperless Offline e-KYC Verification), ಇ-ಆಧಾರ್ ಪರಿಶೀಲನೆಯನ್ನು (e-Aadhaar Verification) ಪರಿಚಯಿಸಿದೆ. ಆಫ್‌ಲೈನ್ ಪೇಪರ್ ಆಧಾರಿತ ಪರಿಶೀಲನೆ (Offilne paper based verification) ಮತ್ತು ಇತರ  ಆಫ್‌ಲೈನ್ ಪರಿಶೀಲನೆಯ ಪ್ರಕಾರವನ್ನು ಕೂಡಾ ಸೇರಿಸಲಾಗಿದೆ.


ಇದನ್ನೂ ಓದಿ : Arecanut Price Today: ರಾಜ್ಯದಲ್ಲಿ ಮತ್ತೆ ಭರ್ಜರಿ ಏರಿಕೆ ಕಂಡ ಅಡಿಕೆ ಧಾರಣೆ


ಈ ಹೊಸ ನಿಯಮದೊಂದಿಗೆ, ಆಧಾರ್ ಬಳಕೆದಾರರಿಗೆ ಅದನ್ನು ಡಿಜಿಟಲ್ ಸಹಿಯಾಗಿ ಉಪಯೋಗಿಸಿಕೊಳ್ಳುವ ಆಯ್ಕೆಯನ್ನು ನೀಡುತ್ತದೆ. ಇದರ ಮೂಲಕ ಆಧಾರ್ ಪೇಪರ್‌ಲೆಸ್ ಆಫ್‌ಲೈನ್ ಇ-ಕೆವೈಸಿ ಮಾಡಲು ಸುಲಭವಾಗುತ್ತದೆ. 


ಈ ವಿಧಾನಗಳಲ್ಲಿ ಪರಿಶೀಲನೆಯನ್ನು ಮಾಡಬಹುದು :
ಒನ್ ಟೈಮ್ ಪಿನ್ ಮತ್ತು ಬಯೋಮೆಟ್ರಿಕ್ ಆಧಾರಿತ ದೃಢೀಕರಣದಂತಹ ಪರಿಶೀಲನೆಯ ಇತರ ವಿಧಾನಗಳು, ಆಫ್‌ಲೈನ್ ಆಯ್ಕೆಯೊಂದಿಗೆ ಮುಂದುವರಿಯುತ್ತದೆ. ಆಧಾರ್ ಡೇಟಾವನ್ನು ಪರಿಶೀಲಿಸುವ ಅಧಿಕೃತ ಏಜೆನ್ಸಿಗಳು ದೃಢೀಕರಣದ ಯಾವುದೇ ವಿಧಾನವನ್ನು ಆಯ್ಕೆ ಮಾಡಬಹುದು. 


ತಮ್ಮ ಇ-ಕೆವೈಸಿ (e-KYC)  ಡೇಟಾವನ್ನು ಯಾವುದೇ ಸಮಯದಲ್ಲಿ ಸಂಗ್ರಹಿಸಲು, ಪರಿಶೀಲನಾ ಏಜೆನ್ಸಿಗೆ ನೀಡಿದ ಸಮ್ಮತಿಯನ್ನು ಹಿಂಪಡೆಯುವ ಅವಕಾಶವನ್ನು  ಆಧಾರ್ ಸಂಖ್ಯೆ ಹೊಂದಿರುವವರಿಗೆ ಹೊಸ ನಿಯಮ ನೀಡುತ್ತದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.