Aadhaar Upadate: ನಿಮ್ಮ ಆಧಾರ್ ಕಾರ್ಡ್ ಅನ್ನು ಎಷ್ಟು ಬಾರಿ ಬದಲಾಯಿಸಬಹುದು? ನಿಯಮದ ಬಗ್ಗೆ ತಿಳಿಯಿರಿ

ಕೆಲವೊಮ್ಮೆ ಆಧಾರ್ ಕಾರ್ಡ್‌ನಲ್ಲಿರುವ ಹೆಸರು, ವಿಳಾಸ ಅಥವಾ ಮೊಬೈಲ್ ಸಂಖ್ಯೆಯಂತಹ ಮಾಹಿತಿಯಲ್ಲಿ ಕೆಲವು ತಪ್ಪುಗಳಾಗಿರುತ್ತವೆ.

Written by - Puttaraj K Alur | Last Updated : Oct 29, 2021, 01:05 PM IST
  • ಆಧಾರ್ ಕಾರ್ಡ್‌ನಲ್ಲಿ ಸಣ್ಣ ತಪ್ಪು ಕಂಡುಬಂದರೂ ನಿಮಗೆ ಹಲವು ಸಮಸ್ಯೆಗಳು ಎದುರಾಗಬಹುದು
  • ಹುಟ್ಟಿದ ದಿನಾಂಕದಿಂದ ಹಿಡಿದು ಹೆಸರು, ವಿಳಾಸ ಅಥವಾ ಲಿಂಗವನ್ನು ಸರಿಪಡಿಸುವುದು ತುಂಬಾ ಸುಲಭ
  • ಆಧಾರ್ ಕಾರ್ಡ್ ನಲ್ಲಿ ಎಷ್ಟು ಬಾರಿ ಎಡಿಟ್ ಮಾಡಬಹುದು ಎಂಬುದನ್ನು ತಿಳಿಯಿರಿ
Aadhaar Upadate: ನಿಮ್ಮ ಆಧಾರ್ ಕಾರ್ಡ್ ಅನ್ನು ಎಷ್ಟು ಬಾರಿ ಬದಲಾಯಿಸಬಹುದು? ನಿಯಮದ ಬಗ್ಗೆ ತಿಳಿಯಿರಿ title=
ಆಧಾರ್ ಕಾರ್ಡ್ ಅನ್ನು ಎಷ್ಟು ಬಾರಿ ಬದಲಾಯಿಸಬಹುದು?

ನವದೆಹಲಿ: ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಆಧಾರ್ ಕಾರ್ಡ್(Aadhaar Card) ಕಡ್ಡಾಯ ದಾಖಲೆಯಾಗಿದೆ. ಆಧಾರ್ ಇಲ್ಲದೆ ಯಾವುದೇ ಸರ್ಕಾರಿ ಕೆಲಸ ನಡೆಯುವುದಿಲ್ಲ. ಕೆಲವೊಮ್ಮೆ ಆಧಾರ್ ಕಾರ್ಡ್‌ನಲ್ಲಿರುವ ಹೆಸರು, ವಿಳಾಸ ಅಥವಾ ಮೊಬೈಲ್ ಸಂಖ್ಯೆಯಂತಹ ಮಾಹಿತಿಯಲ್ಲಿ ಕೆಲವು ತಪ್ಪುಗಳಾಗಿರುತ್ತವೆ. ಇದಕ್ಕಾಗಿ ಜನರು ಆಧಾರ್ ನವೀಕರಣಕ್ಕಾಗಿ ಸಾರ್ವಜನಿಕ ಸೇವಾ ಕೇಂದ್ರಗಳ ಮೊರೆ ಹೋಗುತ್ತಾರೆ. ಆದರೆ ಆಧಾರ್ ಕಾರ್ಡ್ ಅನ್ನು ಎಷ್ಟು ಬಾರಿ ನವೀಕರಿಸಬಹುದು ಮತ್ತು ಯಾವ ದಾಖಲೆಗಳು ಬೇಕಾಗುತ್ತವೆ ಎಂಬುದರ ಬಗ್ಗೆ ನಿಮಗೆ ತಿಳಿದಿದೆಯೇ?  

ಆಧಾರ್ ಕಾರ್ಡ್‌(Aadhaar Card)ನಲ್ಲಿ ಸಣ್ಣ ತಪ್ಪು ಕಂಡುಬಂದರೂ ನಿಮಗೆ ಹಲವು ಸಮಸ್ಯೆಗಳು ಎದುರಾಗಬಹುದು. ಇದರಿಂದ ಪಿಎಂ ಕಿಸಾನ್‌ನ ಹಣದ ಕಂತು ನಿಲ್ಲಬಹುದು, ತಪ್ಪಾದ ಕಾಗುಣಿತದಿಂದ ಬ್ಯಾಂಕ್‌ನಲ್ಲಿ ಖಾತೆ ತೆರೆಯಲು ಸಾಧ್ಯವಾಗದಿರಬಹುದು ಹೀಗೆ ಅನೇಕ ಸಮಸ್ಯೆಗಳು ನಿಮಗೆ ಎದುರಾಗುತ್ತವೆ. ಇದಕ್ಕೆಲ್ಲಾ ಬಹುತೇಕರು ತಲೆಕೆಡಿಸಿಕೊಂಡಿರುತ್ತಾರೆ. ಆದರೆ ಈ ಎಲ್ಲಾ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸಬಹುದು. ಹುಟ್ಟಿದ ದಿನಾಂಕದಿಂದ ಹಿಡಿದು ಹೆಸರು, ವಿಳಾಸ ಅಥವಾ ಲಿಂಗವನ್ನು ಸರಿಪಡಿಸುವುದು ಈಗ ತುಂಬಾ ಸುಲಭ. ಆದರೆ ಈ ರೀತಿ ಹೆಸರು ಅಥವಾ ಏನನ್ನಾದರೂ ಬದಲಾಯಿಸುವ ಮುನ್ನ ಬಹುಮುಖ್ಯ ಅಂಶಗಳನ್ನು ನೀವು ತಿಳಿದುಕೊಳ್ಳುವುದು ಅಗತ್ಯ.

ಇದನ್ನೂ ಓದಿ: EPFO Alert: ಒಂದಕ್ಕಿಂತ ಹೆಚ್ಚು UAN ಸಂಖ್ಯೆ ಇದೆಯೇ? ಈ ಸುದ್ದಿಯನ್ನು ತಪ್ಪದೇ ಓದಿ

ಎಷ್ಟು ಬಾರಿ ಎಡಿಟ್ ಮಾಡಬಹುದು?

ಹೆಸರು: 2 ಬಾರಿ ಮಾತ್ರ

ಲಿಂಗ: ಒಮ್ಮೆ ಮಾತ್ರ

ಹುಟ್ಟಿದ ದಿನಾಂಕ: ಜೀವನದಲ್ಲಿ ಒಮ್ಮೆ (Unverified ಜನ್ಮ ದಿನಾಂಕವನ್ನು ಮಾತ್ರ ಅಪ್‌ಡೇಟ್ ಮಾಡಬಹುದು)

ಈ ರೀತಿ ಅಪ್‌ಡೇಟ್ ಮಾಡಬಹುದು

ಆಧಾರ್ ಕಾರ್ಡ್‌ನಲ್ಲಿ ಹೆಸರು, ಜನ್ಮ ದಿನಾಂಕ ಅಥವಾ ಲಿಂಗ(Gender)ದಲ್ಲಿ ಯಾವುದೇ ದೋಷವಿದ್ದರೆ ಅದನ್ನು ನವೀಕರಿಸಲು ಆಧಾರ್ ನೋಂದಣಿ/ಅಪ್‌ಡೇಟ್ ಕೇಂದ್ರಕ್ಕೆ ಭೇಟಿ ನೀಡಬೇಕು. ಅಪ್‌ಡೇಟ್ ಸೀಮಿತ ಸಂಖ್ಯೆಯನ್ನು ದಾಟಿದ್ದರೆ, ನೋಂದಣಿ ಕೇಂದ್ರದಲ್ಲಿ ಮಾಡಿದ ನವೀಕರಣವನ್ನು ಸ್ವೀಕರಿಸಲು ನೀವು ಇಮೇಲ್ ಅಥವಾ ಪೋಸ್ಟ್ ಮೂಲಕ UIDAIನ ಪ್ರಾದೇಶಿಕ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಇಂತಹ ವಿನಂತಿಗೆ ಯುಆರ್‌ಎನ್ ಸ್ಲಿಪ್‌ನ ನಕಲು, ಆಧಾರ್ ವಿವರಗಳಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಎಡಿಟ್ ಮಾಡುವ ವಿವರಗಳ ಅಗತ್ಯವಿರುತ್ತದೆ. ಈ ವಿವರಗಳೊಂದಿಗೆ ನೀವು ಇಮೇಲ್ help@uidai.gov.in ಗೆ ನಿಮ್ಮ ಅರ್ಜಿಯನ್ನು ಕಳುಹಿಸಬಹುದು. ಬಳಿಕ ಆಧಾರ್‌ನ ಪ್ರಾದೇಶಿಕ ಕಚೇರಿಯಿಂದ ನಿಮಗೆ ಮೇಲ್ ಬರುತ್ತದೆ. UIDAI ಮೊದಲು ನಿಮ್ಮ ದಾಖಲೆಗಳನ್ನು ಪರಿಶೀಲಿಸುತ್ತದೆ, ಎಲ್ಲವೂ ಸರಿಯಾಗಿದ್ದರೆ ತೊಂದರೆ ಇಲ್ಲ, ಏನಾದರೂ ದೋಷವಿದ್ದರೆ ಮಾತ್ರ ನಿಮ್ಮ ಆಧಾರ್‌ನಲ್ಲಿ ಅಗತ್ಯ ವಿವರಗಳನ್ನು ಎಡಿಟ್ ಮಾಡಲಾಗುತ್ತದೆ.

ಇದನ್ನೂ ಓದಿ: ದೇಶದಲ್ಲಿ ಇಳಿಕೆಯಾಗಲಿದೆ ಅಡುಗೆ ಎಣ್ಣೆ, ಬೇಳೆ ಕಾಳುಗಳ ಬೆಲೆ, ಸರ್ಕಾರ ನೀಡಿದೆ ಉತ್ತರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News