Aadhaar PAN Link : ನೀವು ಇನ್ನೂ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡದಿದ್ದರೆ,ನಿಮ್ಮ ಜೇಬಿಗೆ ಆದಾಯ ತೆರಿಗೆಯ ಭಾರ ಬೀಳುವುದು ಖಂಡಿತಾ. ನೀವು ದುಪ್ಪಟ್ಟು ತೆರಿಗೆ ಪಾವತಿಸಬೇಕಾದ ಸಂದರ್ಭ ಎದುರಾಗಬಹುದು. ಈ ಬಗ್ಗೆ ಆದಾಯ ತೆರಿಗೆ ಇಲಾಖೆಯು ತೆರಿಗೆದಾರರಿಗೆ ಎಚ್ಚರಿಕೆ ನೀಡಿದೆ.ಜನರು ತಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಮೇ 31 ರೊಳಗೆ ಲಿಂಕ್ ಮಾಡುವಂತೆ ಸೂಚಿಸಲಾಗಿದೆ.  


COMMERCIAL BREAK
SCROLL TO CONTINUE READING

ಮೇ 31 ರೊಳಗೆ ಆಧಾರ್‌ನೊಂದಿಗೆ ಪ್ಯಾನ್ ಅನ್ನು ಲಿಂಕ್ ಮಾಡುವುದು ಅವಶ್ಯಕ  :
ನೀವು ತೆರಿಗೆದಾರರಾಗಿದ್ದರೆ ಮೇ 31 ರ ಮೊದಲು ನಿಮ್ಮ ಆಧಾರ್‌ಗೆ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಬೇಕು.ಈ ಗಡುವನ್ನು ತಪ್ಪಿದರೆ  ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು.ಮೇ 31 ರೊಳಗೆ ಪ್ಯಾನ್-ಆಧಾರ್ ಲಿಂಕ್ ಮಾಡಲು ಜನರಿಗೆ ಸಲಹೆ ನೀಡುವ ಮೂಲಕ ಆದಾಯ ತೆರಿಗೆ ಇಲಾಖೆ ಈ ಮಾಹಿತಿಯನ್ನು ನೀಡಿದೆ. 


ಇದನ್ನೂ ಓದಿ : ಪಡಿತರದಾರರಿಗೆ ಬಂಪರ್! ಪ್ರತಿ ತಿಂಗಳೂ ಸಿಗಲಿದೆ 5,000 ರೂ. ಇಂದೇ ಅರ್ಜಿ ಸಲ್ಲಿಸಿ


ನೀವು ಲಿಂಕ್ ಮಾಡದಿದ್ದರೆ ಏನಾಗುತ್ತದೆ? :   
ಆದಾಯ ತೆರಿಗೆ ಇಲಾಖೆಯ ಪ್ರಕಾರ, ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ಡಬಲ್ ಟಿಡಿಎಸ್ ಪಾವತಿಸಬೇಕಾಗುತ್ತದೆ.ಏಪ್ರಿಲ್ 24, 2024 ರಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಹೊರಡಿಸಿದ ಸುತ್ತೋಲೆ ಪ್ರಕಾರ,ನಿಮ್ಮ ಖಾತೆಯಿಂದ ಕಡಿಮೆ ಟಿಡಿಎಸ್ ಕಡಿತವಾಗಿದ್ದು, ನೀವು  ಮೇ 31 ರೊಳಗೆ ತಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಿದ್ದಲ್ಲಿ ನೀವು ಹೆಚ್ಚಿನ ಟಿಡಿಎಸ್ ಪಾವತಿಸುವ ಅವಶ್ಯಕತೆ ಇಲ್ಲ. ಮಾತ್ರವಲ್ಲ ಸಿಬಿಸಿಡಿ ಪ್ರಕಾರ ಅಂತಹವರ ವಿರುದ್ಧ ಕ್ರಮ ಕೂಡಾ ಕೈಗೊಳ್ಳುವುದಿಲ್ಲ.ಅಂದರೆ, ಹೆಚ್ಚುವರಿ ತೆರಿಗೆ ಕಡಿತವನ್ನು ತಪ್ಪಿಸಬೇಕಾದರೆ, ಮೇ 31 ರೊಳಗೆ ಆಧಾರ್‌ನೊಂದಿಗೆ ಪ್ಯಾನ್ ಅನ್ನು ಲಿಂಕ್ ಮಾಡಬೇಕು.  


ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಹೇಗೆ  ?: 
ನೀವು ಮನೆಯಲ್ಲೇ ಕುಳಿತು ಆಧಾರ್‌ಗೆ ಪ್ಯಾನ್ ಅನ್ನು ಲಿಂಕ್ ಮಾಡಬಹುದು.
೧.ಇದಕ್ಕಾಗಿ ನೀವು ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್ incometaxindiaefiling.gov.in ಗೆ ಹೋಗಬೇಕಾಗುತ್ತದೆ. 
೨.Quick Links ಮೇಲೆ ಕ್ಲಿಕ್ ಮಾಡಿ ಮತ್ತು ಲಿಂಕ್ ಆಧಾರ್ ಮೇಲೆ ಕ್ಲಿಕ್ ಮಾಡಿ.
೩. ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿದ ನಂತರ, ವ್ಯಾಲಿಡೇಟ್ ಕ್ಲಿಕ್ ಮಾಡಿ. 
೪.ಆಧಾರ್ ಕಾರ್ಡ್‌ನಲ್ಲಿ ಬರೆದಿರುವ ನಿಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿದ ನಂತರ, ಲಿಂಕ್ ಆಧಾರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
೫. ಮೊಬೈಲ್ ಸಂಖ್ಯೆಗೆ ಬಂದ OTP ಅನ್ನು ಭರ್ತಿ ಮಾಡಿ ಮತ್ತು Validate ಮೇಲೆ  ಕ್ಲಿಕ್ ಮಾಡಿ. 


ಇದನ್ನೂ ಓದಿ : Railway Rules for Lower Berth: ರೈಲಿನಲ್ಲಿ ಲೋವರ್ ಬರ್ತ್‌ ಪಡೆಯಲು ಈ ನಿಮಯಗಳನ್ನು ತಿಳಿಯಿರಿ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.