Aadhar Card New Rules: ಆಧಾರ್ ಕಾರ್ಡ್ ಬಗ್ಗೆ ಕೇಂದ್ರ ಸರ್ಕಾರ ನೂತನ ಅಡ್ವೈಸರಿ ಜಾರಿಗೊಳಿಸಿದೆ. ದುರುಪಯೋಗವನ್ನು ತಡೆಗಟ್ಟುವ ಉದ್ದೇಶದಿಂದ ತಮ್ಮ ಆಧಾರ್ ಕಾರ್ಡ್‌ಗಳ ಮುಖವಾಡದ ಪ್ರತಿಗಳನ್ನು ಮಾತ್ರ ಹಂಚಿಕೊಳ್ಳುವಂತೆ ಸರ್ಕಾರ ದೇಶದ ನಾಗರಿಕರಲ್ಲಿ ಮನವಿ ಮಾಡಿದೆ. ಈ ಕುರಿತು ಭಾನುವಾರ ಪತ್ರಿಕಾ ಪ್ರಕಟಣೆ ನೀಡಿರುವ ಸರ್ಕಾರ, ‘ನಿಮ್ಮ ಆಧಾರ್ ನಕಲು ಪ್ರತಿಗಳನ್ನು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯೊಂದಿಗೆ ಮನಬಂದಂತೆ ಹಂಚಿಕೊಳ್ಳಬೇಡಿ, ಏಕೆಂದರೆ ಅದು ದುರುಪಯೋಗವಾಗುವ ಸಾಧ್ಯತೆ ಇದೆ ಎಂದು ಸರ್ಕಾರ ಹೇಳಿದೆ.

COMMERCIAL BREAK
SCROLL TO CONTINUE READING

ಆಧಾರ್ ಕಾರ್ಡ್ ಹಂಚಿಕೊಳ್ಳಲು ಈ ಹೊಸ ಆಯ್ಕೆಯನ್ನು ನೀಡುವ ಮೂಲಕ, ಕೇವಲ ಮಾಸ್ಕ್ಡ್ ಆಧಾರ್ ಅನ್ನು ಮಾತ್ರ ಹಂಚಿಕೊಳ್ಳಲು ಸರ್ಕಾರ ಸಲಹೆ ನೀಡಿದೆ. ಮಾಸ್ಕ್ಡ್ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕಿಗಳನ್ನು ಮಾತ್ರ ದಾಖಲಿಸಲಾಗಿರುತ್ತದೆ ಎಂಬುದು ಇಲ್ಲಿ ಉಲ್ಲೇಖನೀಯ.

ಇದಲ್ಲದೆ, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊರಡಿಸಿದ ನೋಟೀಸ್ ಪ್ರಕಾರ, ಪರವಾನಗಿ ಇಲ್ಲದೆ ಇರುವ ಖಾಸಗಿ ಸಂಸ್ಥೆಗಳು ಹೋಟೆಲ್ ಗಳಿದ್ದಂತೆ ಮತ್ತು ಸಿನಿಮಾ ಹಾಲ್‌ಗಳಿಗೆ ಆಧಾರ್ ಕಾರ್ಡ್‌ಗಳ ಪ್ರತಿಗಳನ್ನು ಪಡೆಯಲು ಅಥವಾ ಸಂಗ್ರಹಿಸಿ ಇಟ್ಟುಕೊಳ್ಳಲು ಅನುಮತಿ ನೀಡಲಾಗುವುದಿಲ್ಲ ಎಂದು ಹೇಳಲಾಗಿದೆ.


ಇದನ್ನೂ ಓದಿ-New Feature In Two Wheelers - ಇನ್ಮುಂದೆ ದ್ವಿಚಕ್ರ ವಾಹನಗಳಲ್ಲಿಯೂ ಕೂಡ 'ಟೈಯರ್ ಮಾನಿಟರಿಂಗ್ ಸಿಸ್ಟಮ್' ಅಳವಡಿಸಬಹುದು

"ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ ಬಳಕೆದಾರರ ಪರವಾನಗಿ ಪಡೆದ ಸಂಸ್ಥೆಗಳು ಮಾತ್ರ ವ್ಯಕ್ತಿಯ ಗುರುತನ್ನು ಸ್ಥಾಪಿಸಲು ಆಧಾರ್ ಅನ್ನು ಬಳಸಬಹುದು" ಎಂದು ಸರ್ಕಾರ ಹೇಳಿದೆ. ಸಂಸ್ಥೆಯು ತಮ್ಮ ಆಧಾರ್ ಕಾರ್ಡ್‌ಗಳನ್ನು ಹಂಚಿಕೊಳ್ಳುವ ಮೊದಲು UIDAI ನಿಂದ ಮಾನ್ಯವಾದ ಬಳಕೆದಾರ ಪರವಾನಗಿಯನ್ನು ಹೊಂದಿದೆಯೇ ಎಂದು ಪರಿಶೀಲಿಸಲು ಸರ್ಕಾರವು ನಾಗರಿಕರನ್ನು ಕೇಳಿದೆ.


ಇದನ್ನೂ ಓದಿ-e-Commerce ತಾಣಗಳ ಮೇಲೆ ನಕಲಿ ವಿಮರ್ಶೆ ಬರೆಯುವವರೇ ಎಚ್ಚರ! ಸರ್ಕಾರ ಕೈಗೊಳ್ಳುತ್ತಿದೆ ಈ ಕ್ರಮ

ಹೆಚ್ಚುವರಿಯಾಗಿ, ತಮ್ಮ ಆಧಾರ್ ಕಾರ್ಡ್‌ಗಳನ್ನು ಡೌನ್‌ಲೋಡ್ ಮಾಡಲು ಇಂಟರ್ನೆಟ್ ಕೆಫೆಗಳಲ್ಲಿ ಸಾರ್ವಜನಿಕ ಕಂಪ್ಯೂಟರ್‌ಗಳನ್ನು ಬಳಸದಂತೆ ಸರ್ಕಾರ ಜನರಿಗೆ ಎಚ್ಚರಿಕೆ ನೀಡಿದೆ. "ನೀವು ಹಾಗೆ ಮಾಡಿದರೆ ದಯವಿಟ್ಟು ಆ ಕಂಪ್ಯೂಟರ್‌ನಿಂದ ಡೌನ್‌ಲೋಡ್ ಮಾಡಿದ ಎಲ್ಲಾ ಇ-ಆಧಾರ್ ಪ್ರತಿಗಳನ್ನು ನೀವು ಶಾಶ್ವತವಾಗಿ ಡಿಲೀಟ್ ಮಾಡುತ್ತಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ" ಎಂದು ಸರ್ಕಾರ ತನ್ನ ಸಲಹೆಯಲ್ಲಿ ತಿಳಿಸಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.