Tyre Pressure Monitoring System - ಅಥರ್ ಎನರ್ಜಿ ತನ್ನ 450X ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಹೊಸ ಟಿಎಂಪಿಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಅನ್ನು ಪರಿಚಯಿಸಿದೆ. ಈ ವೈಶಿಷ್ಟ್ಯವು ಪ್ರಸ್ತುತ ದುಬಾರಿ ಬೈಕುಗಳು ಮತ್ತು ಕಾರುಗಳಲ್ಲಿ ಮಾತ್ರ ಲಭ್ಯವಿದೆ. ಅಥರ್ ಪ್ರಕಾರ, ಪೆಟ್ರೋಲ್-ಡೀಸೆಲ್ ಚಾಲಿತ ವಾಹನಗಳಿಗಿಂತ ಎಲೆಕ್ಟ್ರಿಕ್ ವಾಹನಗಳಿಗೆ ಟಿಎಂಪಿಎಸ್ ತುಂಬಾ ಆವಶ್ಯಕವಾಗಿದೆ ಎನ್ನಲಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಇಂಧನ ಭರ್ತಿಗಾಗಿ ಇಂಧನ ಕೇಂದ್ರಗಳಿಗೆ ತೆಗೆದುಕೊಂಡು ಹೋಗಬೇಕಾಗುತ್ತದೆ. ಉಚಿತ ಏರ್ ಚೆಕಪ್ ಮತ್ತು ರೀಫಿಲ್ ಸೌಲಭ್ಯ ಅಲ್ಲಿ ಲಭ್ಯವಿರುತ್ತದೆ. ಆದರೆ, ಇದಕ್ಕೆ ವಿಪರೀತ ಎಂಬಂತೆ ಎಲೆಕ್ಟ್ರಿಕ್ ವಾಹನಗಳು ಹೆಚ್ಚಾಗಿ ಮನೆಯಲ್ಲಿ ಚಾರ್ಜ್ ಆಗುತ್ತವೆ. ಮಾಲೀಕರು ನಿಯಮಿತವಾಗಿ ಚಾರ್ಜಿಂಗ್ ಸ್ಟೇಷನ್ ಗಳಿಗೆ ಭೇಟಿ ನೀಡುವುದಿಲ್ಲ, ಹೀಗಾಗಿ ಟೈರ್ ನಲ್ಲಿನ ಗಾಳಿ ಒತ್ತಡವನ್ನು ಪರೀಕ್ಷಿಸುವುದು ಅವರು ಮರೆತುಬಿಡುತ್ತಾರೆ.
ಇದನ್ನೂ ಓದಿ-PM Kisan : ರೈತರೆ ಗಮನಿಸಿ, ಪಿಎಂ ಕಿಸಾನ್ ಯೋಜನೆಯ 11ನೇ ಕಂತಿನ ಬಗ್ಗೆ ಬಿಗ್ ಅಪ್ಡೇಟ್!
ಈ ಸಿಸ್ಟಮ್ ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗೆ ಸಂಪರ್ಕ ಹೊಂದಿದೆ
ಈ ವ್ಯವಸ್ಥೆಯ ವೈಶಿಷ್ಟ್ಯ ಎಂದರೆ ಇದು ನೇರವಾಗಿ ಸ್ಕೂಟರ್ ಇನ್‌ಸ್ಟ್ರುಮೆಂಟ್ ಕನ್ಸೋಲ್ ಮತ್ತು ಕಂಪನಿಯ ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗೆ ಜೊತೆಗೆ ಸಂಪರ್ಕ ಹೊಂದಿದೆ. ಇದಲ್ಲದೆ, ಇದು ಡ್ಯಾಶ್‌ಬೋರ್ಡ್ ಮತ್ತು ಅಪ್ಲಿಕೇಶನ್‌ನಲ್ಲಿ ಕೆಂಪು, ಕಿತ್ತಳೆ ಮತ್ತು ಬಿಳಿಯಂತಹ ಬಣ್ಣ-ಕೋಡೆಡ್ ಸಿಗ್ನಲ್‌ಗಳು ಬಿತ್ತರಗೊಳ್ಳುತ್ತವೆ. ಈ ಸಂಕೇತಗಳು ಕ್ರಮವಾಗಿ ಕಡಿಮೆ, ಮಧ್ಯಮ ಮತ್ತು ಪೂರ್ಣ ಗಾಳಿಯ ಒತ್ತಡವನ್ನು ಬಿಂಬಿಸುತ್ತವೆ. ಅಥರ್ ತನ್ನ ಸ್ಕೂಟರ್ ಗಾಗಿ ಮುಂಭಾಗದಲ್ಲಿ 30 psi ಮತ್ತು ಹಿಂಭಾಗದಲ್ಲಿ 32 psi ಗಾಳಿ ಒತ್ತಡದ ಶಿಫಾರಸ್ಸು ಮಾಡುತ್ತದೆ.
ಇದನ್ನೂ ಓದಿ-PhonePe ಬಳಕೆದಾರರಿಗೆ 24K ಗೋಲ್ಡ್ ಎಸ್ಐಪಿ ಬಿಡುಗಡೆ, ಏನಿದರ ಹೂಡಿಕೆಯ ಲಾಭ?
ರೀಡಿಂಗ್ ಯಾರಿಂದಲೂ ಕೂಡ ಬದಲಾಯಿಸಲು ಸಾಧ್ಯವಿಲ್ಲ
ಅಥರ್‌ನ ಹೊಸ ಟಿಎಂಪಿಎಸ್ ವೈಶಿಷ್ಟ್ಯವನ್ನು ಐಚ್ಛಿಕ ವೈಶಿಷ್ಟ್ಯದ ರೂಪದಲ್ಲಿ ಸೇರಿಸಿದೆ, ಇದರ ಬೆಲೆ ₹5,000. ಇದನ್ನು ವಾಲ್ ಸ್ಟೆಮ್ ಬದಲು ಚಕ್ರದೊಳಗೆ ಇರಿಸಲಾಗಿದೆ. ಟೈರ್‌ನ ಹೊರಭಾಗದಲ್ಲಿ ಸಂವೇದಕಗಳನ್ನು ಹೊಂದಿರುವ ಸಾಂಪ್ರದಾಯಿಕ ವ್ಯವಸ್ಥೆಗಿಂತ ಇದು ಉತ್ತಮವಾಗಿದೆ, ಏಕೆಂದರೆ ಇದರಿಂದ ಯಾರೂ ಈ ವ್ಯವಸ್ಥೆಯನ್ನು ಬದಲಾಯಿಸಲು ಅಥವಾ ಹಾಳುಮಾಡಲು ಸಾಧ್ಯವಿಲ್ಲ. ಆದರೆ, ಈ ವ್ಯವಸ್ಥೆಯ ಬ್ಯಾಟರಿಯನ್ನು ಟೈರ್ ತೆಗೆಯುವ ಮೂಲಕ ಮಾತ್ರ ಬದಲಾಯಿಸಬಹುದು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.