ಚಾಮರಾಜನಗರ: ದೇಶದ ಜನಪ್ರಿಯ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯಕ್ಕೆ ಗ್ರೀನ್ ಟ್ಯಾಕ್ಸ್ ನಿಂದಲೇ ಭರಪೂರ ಆದಾಯ ಬಂದಿದೆ. 


COMMERCIAL BREAK
SCROLL TO CONTINUE READING

ಹೌದು..., ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದಲ್ಲಿ ಗ್ರೀನ್ ಟ್ಯಾಕ್ಸ್ (ಹಸಿರು ತೆರಿಗೆ) ಮೂಲಕ ಕಳೆದ 10 ತಿಂಗಳಲ್ಲಿ 4.5 ಕೋಟಿ ಸಂಗ್ರಹವಾಗಿದ್ದು ಅರಣ್ಯ ಇಲಾಖೆಯ ವೇತನ ನಿರ್ವಹಣೆಗೆ ಸಹಕಾರಿಯಾಗಿದೆ.


ಬಂಡೀಪುರವು ತಮಿಳುನಾಡು ಮತ್ತು ಕೇರಳ ಗಡಿಯನ್ನು ಹಂಚಿಕೊಂಡಿದ್ದು ಬಂಡೀಪುರ ಅಭಯಾರಣ್ಯದ ಮೂಲಕ ತಮಿಳುನಾಡು ಹಾಗೂ ಕೇರಳಕ್ಕೆ ತೆರಳುವ ಕಾರು, ಲಾರಿ ಸೇರಿದಂತೆ ಎಲ್ಲಾ  ವಾಹನಗಳಿಂದ  20 ರೂ. ಟ್ಯಾಕ್ಸ್ ಸಂಗ್ರಹ ಮಾಡಲಾಗುತ್ತಿದೆ.


ಇದನ್ನೂ ಓದಿ- Viral Video: ಬಂಡೀಪುರದಲ್ಲಿ ಸಫಾರಿ ವಾಹನಕ್ಕೆ ಬೇರೆ ದಾರಿ ತೋರಿದ ಸಲಗ!!


ಕಳೆದ ಏಪ್ರಿಲ್ ನಲ್ಲಿ ಆರಂಭಗೊಂಡ ಈ ಗ್ರೀನ್ ಟ್ಯಾಕ್ಸ್  ಇದೀಗ ಹತ್ತು ತಿಂಗಳ ಅವಧಿಯಲ್ಲಿ 4.5 ಕೋಟಿ ರೂ ಸಂಗ್ರಹವಾಗಿದೆ. ಈ ಕುರಿತು, ಬಂಡೀಪುರ ಸಿಎಫ್ಒ ರಮೇಶ್ ಕುಮಾರ್ ಪ್ರತಿಕ್ರಿಯಿಸಿ, ಗ್ರೀನ್ ಟ್ಯಾಕ್ಸ್ ಮೂಲಕ ವಸೂಲಿ ಮಾಡುವ ಹಣವನ್ನು
ಅರಣ್ಯ ಇಲಾಖೆಯ ಸುಮಾರು 500ಕ್ಕೂ ಹೆಚ್ಚು ಮುಂಚೂಣಿ ಸಿಬ್ಬಂದಿಗಳ ವೇತನಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ‌ ಮೂಲಕ ರಾಜ್ಯ ಸರ್ಕಾರದಿಂದ ಸಿಬ್ಬಂದಿಯ ವೇತನಕ್ಕೆ ಕಾಯಬೇಕಾದ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ- ಬಂಡೀಪುರದಲ್ಲಿ ಪ್ರವಾಸಿಗರ ನಡುವೆ ಜಟಾಪಟಿ: ಟ್ವೀಟ್ ನಿಂದ ಘಟನೆ ಬೆಳಕಿಗೆ!!


ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ಸ್ಥಳೀಯ ನೋಂದಣಿ ವಾಹನಗಳಿಗೆ ರಿಯಾಯಿತಿ ನೀಡಲಾಗಿದ್ದು, ಹೊರ ಜಿಲ್ಲೆ ಹಾಗೂ ಅಂತರರಾಜ್ಯ ವಾಹನಗಳಿಂದ ಮಾತ್ರ ಸುಂಕ‌ ವಸೂಲಿ ಮಾಡಲಾಗುತ್ತಿದೆ. ಇದು ಸ್ಥಳೀಯರ ಸಂಚಾರಕ್ಕೆ ಹೆಚ್ಚು ಅನುಕೂಲವಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.