Advance Salary Loan Vs Personal Loan: ಮನುಷ್ಯನಿಗೆ ಕಷ್ಟ ಬರುವುದು ಸಹಜ. ಆರ್ಥಿಕವಾಗಿ ತುರ್ತು ಪರಿಸ್ಥಿತಿಗಳು ಎದುರಾದಾಗ ಅಂತಹ ಸಂದರ್ಭದಲ್ಲಿ ತಕ್ಷಣ ಏನು ಮಾಡುವುದು ಎಂದು ತೋಚುವುದಿಲ್ಲ. ಹಾಗಾಗಿ, ಬಡ್ಡಿ ಬಗ್ಗೆ ಯೋಚಿಸದೆ ಆ ಕ್ಷಣಕ್ಕೆ ಎಲ್ಲಿ ಲಭ್ಯವೋ ಅಲ್ಲಿ ಸಾಲ ಕೊಳ್ಳುತ್ತೇವೆ. ಕೆಲವರು ಕೈಸಾಲ ಪಡೆದರೆ, ಇನ್ನೂ ಕೆಲವರು ಕಚೇರಿಯಲ್ಲಿ ಅಡ್ವಾನ್ಸ್ ಸ್ಯಾಲರಿ ಪಡೆಯುತ್ತಾರೆ. ಮತ್ತೊಂದಿಷ್ಟು ಜನ ಸುಲಭವಾಗಿ ಸಿಗುತ್ತೆ ಎಂದು ಪರ್ಸನಲ್ ಲೋನ್ ಪಡೆಯುತ್ತಾರೆ. ಆದರೆ, ಸಾಲ ಕೊಳ್ಳುವಾಗ  ಅಡ್ವಾನ್ಸ್ ಸ್ಯಾಲರಿ ಲೋನ್  ಅಥವಾ ಪರ್ಸನಲ್ ಲೋನ್ (Advance Salary Loan vs Personal Loan) ಇವೆರಡರಲ್ಲಿ ಯಾವುದು ಉತ್ತಮ ಆಯ್ಕೆ ಎಂದು ತಿಳಿಯುವುದು ಅಗತ್ಯ. ಇಲ್ಲದಿದ್ದರೆ, ನಿಮ್ಮ ಸಾಲದ ಹೊರೆ ಹೆಚ್ಚಾಗಬಹುದು. 


COMMERCIAL BREAK
SCROLL TO CONTINUE READING

ಏನಿದು ಅಡ್ವಾನ್ಸ್ ಸ್ಯಾಲರಿ ಲೋನ್? 
ಅಡ್ವಾನ್ಸ್ ಸ್ಯಾಲರಿ ಲೋನ್ (Advance Salary Loan) ಪಡೆಯಲು ನೀವು ಉದ್ಯೋಗಸ್ಥರಾಗಿರಬೇಕು. ಉದ್ಯೋಗದಲ್ಲಿರುವವರಿಗೆ ಹಲವು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು  ಮುಂಗಡ ಸಂಬಳ ಸಾಲಗಳನ್ನು ನೀಡುತ್ತವೆ. ಇದರ ಪ್ರಮುಖ ಪ್ರಯೋಜನವೆಂದರೆ ಈ ಸಾಲ ಪಡೆಯಲು ನಿಮಗೆ ಹೆಚ್ಚಿನ ದಾಖಲೆಗಳ ಅಗತ್ಯವಿರುವುದಿಲ್ಲ. ಕೆಲವು ಷರತ್ತುಗಳನ್ನು ಅನುಸರಿಸುವ ಮೂಲಕ ಸುಲಭವಾಗಿ ಸಾಲವನ್ನು  ತೆಗೆದುಕೊಳ್ಳಬಹುದು. 


ಅಡ್ವಾನ್ಸ್ ಸ್ಯಾಲರಿ ಲೋನ್ ಪಡೆಯಲು ನಿಯಮಗಳು: 
* ನೀವು ಕನಿಷ್ಟ ಎರಡು ವರ್ಷಗಳ ಕೆಲಸದ ಅನುಭವವನ್ನು ಹೊಂದಿರಬೇಕು.
* ಪ್ರಸ್ತುತ ಕೆಲಸ ಮಾಡುತ್ತಿರುವ ಸಂಸ್ಥೆಯಲ್ಲಿ ಕನಿಷ್ಠ ಒಂದು ವರ್ಷ ಪೂರ್ಣಗೊಂಡಿರಬೇಕು.
* ನಿಮ್ಮ  ಸಂಬಳವನ್ನು ಮೇಲಾಧಾರವಾಗಿ ಇರಿಸಲಾಗುತ್ತದೆ. 
* ಸಾಲ ಪಡೆಯುವವರ ವಯಸ್ಸು  21 ವರ್ಷದಿಂದ 60 ವರ್ಷಗಳ ಒಳಗಿರಬೇಕು. ಇದರೊಂದಿಗೆ ನಿಮ್ಮ ಕ್ರೆಡಿಟ್ ಸ್ಕೋರ್ ಕೂಡ ಉತ್ತಮವಾಗಿರಬೇಕು. 
* ಇದನ್ನು ಇಎಂಐ ಮೂಲಕ ಸುಲಭವಾಗಿ ಪಾವತಿ ಮಾಡಬಹುದು. 


ಇದನ್ನೂ ಓದಿ- ಇಂದಿನಿಂದ ರಾಜ್ಯದ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಹೆಚ್ಚಳ : ಇನ್ನು ಪಾವತಿಸಬೇಕು 3-25% ಜಾಸ್ತಿ ಟೋಲ್


ವೈಯಕ್ತಿಕ ಸಾಲ?  
ನೀವು ಬ್ಯಾಂಕ್‌ಗಳು, ಕ್ರೆಡಿಟ್ ಯೂನಿಯನ್‌ಗಳು ಮತ್ತು ಆನ್‌ಲೈನ್ ಸಾಲದಾತರ ಮೂಲಕ ವೈಯಕ್ತಿಕ ಸಾಲಗಳನ್ನು (Personal Loan) ಪಡೆಯಬಹುದು. ವೈಯಕ್ತಿಕ ಸಾಲವನ್ನು ಪಡೆಯಲು ಇದಕ್ಕಾಗಿ ಮೇಲಾಧಾರದ ಅಗತ್ಯವಿದೆ. ಈ ಸಾಲಗಳು ಇತರ ಕಂತಿನ ಸಾಲಗಳಿಗಿಂತ ಭಿನ್ನವಾಗಿರುತ್ತದೆ. ಪರ್ಸನಲ್ ಲೋನ್ ಬಡ್ಡಿದರಗಳು, ಶುಲ್ಕಗಳು, ಮೊತ್ತಗಳು ಮತ್ತು ಮರುಪಾವತಿಯ ನಿಯಮಗಳು ಒಂದು ಬ್ಯಾಂಕಿನಿಂದ ಇನ್ನೊಂದು ಬ್ಯಾಂಕ್‌ಗೆ ಬದಲಾಗಬಹುದು. 


ವೈಯಕ್ತಿಕ ಸಾಲ ಪಡೆಯಲು ನಿಯಮಗಳು (Rules for availing personal loan): 
>> ಉದ್ಯೋಗದಲ್ಲಿರುವವರು ಮಾತ್ರವಲ್ಲ, ಯಾರಾದರೂ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳಬಹುದು. 
>> ಕ್ರೆಡಿಟ್ ಸ್ಕೋರ್ (Credit Score) ಉತ್ತಮವಾಗಿರಬೇಕು. 
>> ಆದಾಯ ಪುರಾವೆ ಬೇಕಾಗುತ್ತದೆ. 


ಇದನ್ನೂ ಓದಿ- Electric Scooter Offer: ಈ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಬರೋಬ್ಬರಿ 34 ಸಾವಿರ ರೂ. ಡಿಸ್ಕೌಂಟ್!a


ಅಡ್ವಾನ್ಸ್ ಸ್ಯಾಲರಿ ಲೋನ್ vs ವೈಯಕ್ತಿಕ ಸಾಲ ಎರಡರಲ್ಲಿ ಯಾವುದು ಉತ್ತಮ ಆಯ್ಕೆ? 
ಅಡ್ವಾನ್ಸ್ ಸ್ಯಾಲರಿ ಲೋನ್ ಸುಲಭವಾಗಿ ಲಭ್ಯವಾಗುತ್ತದೆ ಎಂಬುದರ ಬಗ್ಗೆ ಅನುಮಾನವಿಲ್ಲ. ಇದನ್ನು ಇಎಂಐ ಮೂಲಕ ಸುಲಭವಾಗಿ ಪಾವತಿ ಮಾಡಬಹುದು. ಆದರೆ, ಇದರ ಬಡ್ಡಿದರ ವೈಯಕ್ತಿಕ ಸಾಲಕ್ಕಿಂತ ಹೆಚ್ಚಿರುತ್ತದೆ. ಆದರೆ ಸಾಲದ ಮಿತಿ ಮತ್ತು ಅವಧಿ ಎರಡೂ ತುಂಬಾ ಕಡಿಮೆ.
ವೈಯಕ್ತಿಕ ಲೋನ್ ಪಡೆಯುವಾಗ, ನಿಮಗೆ ಅಗತ್ಯವಿದ್ದರೆ, ಹೆಚ್ಚಿನ ಮೊತ್ತವನ್ನು ಸಾಲವಾಗಿ ಪಡೆಯಬಹುದು. ಜೊತೆಗೆ ಇದನ್ನು ಮರುಪಾವತಿಸಲು ಗರಿಷ್ಠ ಐದು ವರ್ಷಗಳವರೆಗೆ ಸಮಯಾವಕಾಶವಿರುತ್ತದೆ. ಹಾಗಾಗಿ, ಅಡ್ವಾನ್ಸ್ ಸ್ಯಾಲರಿ ಲೋನ್ ಪಡೆಯುವುದಕ್ಕಿಂತ ವೈಯಕ್ತಿಕ ಲೋನ್ ಪಡೆಯುವುದು ಉತ್ತಮ ಆಯ್ಕೆ ಎಂದು ಹೇಳಲಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.