ಭಾರತದಲ್ಲಿ ಶೀಘ್ರವೇ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳು ಬ್ಯಾನ್..!

ಮುಂದಿನ 10 ವರ್ಷಗಳಲ್ಲಿ ದೇಶದಿಂದ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳನ್ನು ಸಂಪೂರ್ಣವಾಗಿ ಭಾರತದ ರಸ್ತೆಗಳಿಂದ ತೆಗೆದುಹಾಕಲು ನಾನು ಬಯಸುತ್ತೇನೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್, ಕಾರು ಮತ್ತು ಬಸ್‌ಗಳು ಬಂದಿವೆ. ಅವು ಜನರಿಗೆ ಸಾಕ್ಷಟು ಅನುಕೂಲಗಳನ್ನು ನೀಡುತ್ತಿದ್ದು, ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ​

Written by - Puttaraj K Alur | Last Updated : Jun 1, 2024, 09:52 AM IST
  • ಮುಂದಿನ ಹತ್ತು ವರ್ಷದೊಳಗೆ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳು ಸಂಪೂರ್ಣವಾಗಿ ಬ್ಯಾನ್‌?
  • ಮತ್ತೊಮ್ಮೆ ಎಲೆಕ್ಟ್ರಿಕ್‌ ವಾಹನಗಳ ಮಹತ್ವ ತಿಳಿಸಿದ ಕೇಂದ್ರ ರಸ್ತೆ ಸಾರಿಗೆ & ಹೆದ್ದಾರಿ ಸಚಿವ ನಿತಿನ್ ಗಡ್ಕರಿ
  • ದೇಶದ ಜನರ ಆರ್ಥಿಕ ಹೊರೆ ತಪ್ಪಿಸಿಲು ಹೆಚ್ಚಾಗಿ ಇವಿ ವಾಹನಗಳ ಬಳಕೆಯತ್ತ ಚಿಂತನೆ
ಭಾರತದಲ್ಲಿ ಶೀಘ್ರವೇ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳು ಬ್ಯಾನ್..!   title=
ಪೆಟ್ರೋಲ್ & ಡೀಸೆಲ್ ವಾಹನ ಬ್ಯಾನ್!

ನವದೆಹಲಿ: ಮುಂದಿನ ಹತ್ತು ವರ್ಷದೊಳಗೆ ದೇಶದ ರಸ್ತೆಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಸಂಪೂರ್ಣವಾಗಿ ಬ್ಯಾನ್‌ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. 

ಎಲೆಕ್ಟ್ರಿಕ್ ವಾಹನಗಳ (EV) ಮಹತ್ವವನ್ನು ಮತ್ತೊಮ್ಮೆ ದೇಶದ ಜನರಿಗೆ ತಿಳಿಸಿರುವ ಗಡ್ಕರಿ ಅವರು, ಇಂಜಿನ್‌ ಚಾಲಿತ ಸಾಂಪ್ರದಾಯಿಕ ವಾಹನಗಳಿಗೆ ಹೋಲಿಸಿದರೆ ಇವಿ ವಾಹಗಳನ್ನು ಬಳಸುವುದರಿಂದ ಉಂಟಾಗುವ ವೆಚ್ಚದ ಪ್ರಯೋಜನಗಳ ಬಗ್ಗೆ ತಿಳಿಸಿದ್ದಾರೆ. ಹಿಮಾಚಲ ಪ್ರದೇಶದ ಮಂಡಿಯಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಗಡ್ಕರಿ, 2034ರ ವೇಳೆಗೆ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಸಂಪೂರ್ಣವಾಗಿ ಬ್ಯಾನ್‌ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದಿದ್ದಾರೆ.  

ಇದನ್ನೂ ಓದಿ: LPG ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ.. ಈಗ ಬೆಲೆ ಎಷ್ಟು ಗೊತ್ತಾ?

ʼಮುಂದಿನ 10 ವರ್ಷಗಳಲ್ಲಿ ದೇಶದಿಂದ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳನ್ನು ಸಂಪೂರ್ಣವಾಗಿ ಭಾರತದ ರಸ್ತೆಗಳಿಂದ ತೆಗೆದುಹಾಕಲು ನಾನು ಬಯಸುತ್ತೇನೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್, ಕಾರು ಮತ್ತು ಬಸ್‌ಗಳು ಬಂದಿವೆ. ಅವು ಜನರಿಗೆ ಸಾಕ್ಷಟು ಅನುಕೂಲಗಳನ್ನು ನೀಡುತ್ತಿದ್ದು, ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ನೀವು ಡೀಸೆಲ್‌ಗಾಗಿ 100 ರೂ. ಖರ್ಚು ಮಾಡಿದರೆ, ಇವಿ ವಾಹನಗಳಿಗೆ ಕೇವಲ 4 ರೂ.ಗಳ ವಿದ್ಯುತ್‌ ಖರ್ಚಾಗುತ್ತದೆ. ಇದರಿಂದ ದೇಶವು ಹೆಚ್ಚಾಗಿ ವಿದೇಶಗಳಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಮೇಲಿನ ಅವಲಂಬನೆಯು ಕಡಿಮೆಯಾಗುತ್ತದೆ. ಪೆಟ್ರೋಲ್-ಡೀಸೆಲ್‌ ವಾಹನಗಳಿಗೆ ಹೋಲಿಸಿದರೆ, ಇವಿ ವಾಹನಗಳಿಂದ ದೇಶದ ಖಜಾನೆಯ ಮೇಲಿನ ಹೊರೆಯೂ ತಗ್ಗುತ್ತದೆ ಎಂದು ಹೇಳಿದ್ದಾರೆ.  

ಒಟ್ಟಾರೆ ಭಾರತವು 2030ರ ವೇಳೆಗೆ ಆಟೋಮೋಟಿವ್ ಕ್ಷೇತ್ರಗಳಲ್ಲಿನ ಎಲ್ಲಾ ಮಾರಾಟಗಳಲ್ಲಿ ಶೇ.30ರಷ್ಟು ಎಲೆಕ್ಟ್ರಿಕ್ ಆಯ್ಕೆಗಳಿಂದ ಲೆಕ್ಕಹಾಕಲು ನೋಡುತ್ತಿದೆ. ಪಾಶ್ಚಿಮಾತ್ಯ ದೇಶಗಳು ನಿಗದಿಪಡಿಸಿದ ಗುರಿಗಳಿಗೆ ಹೋಲಿಸಿದರೆ ಇದು ಪ್ರಭಾವಶಾಲಿಯಾಗಿದೆ. ವಿಶ್ವದ ೨ನೇ ಅತಿದೊಡ್ಡ ಕಾರು ಮಾರುಕಟ್ಟೆಯಾದ ಅಮೆರಿಕ 2030ರ ವೇಳೆಗೆ ಎಲ್ಲಾ ಮಾರಾಟಗಳಲ್ಲಿ ಶೇ.50ರಷ್ಟು ಮತ್ತು 2032ರ ವೇಳೆಗೆ ಶೇ.67ರಷ್ಟು ಎಲೆಕ್ಟ್ರಿಕ್ ವಾಹನಗಳಿಂದ ಬರುವ ಗುರಿ ಹೊಂದಿದೆ. 2023ರಲ್ಲಿ ಇಂಗ್ಲೆಂಡ್‌ನಲ್ಲಿ ಶೇ.19ರಷ್ಟು ಎಲೆಕ್ಟ್ರಿಕ್ ವಾಹನಗಳ ಮಾರಾಟವಾಗಿದ್ದು, 2035ರ ವೇಳೆಗೆ ಶೇ.100ರಷ್ಟು ಎಲೆಕ್ಟ್ರಿಕ್ ಕಾರುಗಳನ್ನು ಬಳಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: Reserve Bank of India: ₹500 ನೋಟುಗಳ ಬಗ್ಗೆ ಮಹತ್ವದ ಮಾಹಿತಿ ನೀಡಿದ ಆರ್‌ಬಿಐ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News