Ayushman Bharat Scheme : ಜನರ ಕಲ್ಯಾಣಕ್ಕಾಗಿ ಸರ್ಕಾರವು ಅನೇಕ ಯೋಜನೆಗಳನ್ನು ನಡೆಸುತ್ತಿದೆ. ಈ ಯೋಜನೆಗಳ ಮೂಲಕ ಸಮಾಜದ ಪ್ರತಿಯೊಂದು ವರ್ಗದ ಜನರಿಗೂ ಅನುಕೂಲವಾಗುವಂತಹ ಕ್ರಮ ಕೈಗೊಳ್ಳುತ್ತದೆ. ಇದೆ ಹಾದಿಯಲ್ಲಿ ಸರ್ಕಾರವು ಆರೋಗ್ಯ ಯೋಜನೆಯನ್ನು  ನಡೆಸುತ್ತಿದೆ. ಈ ಮೂಲಕ ಬಡವರಿಗೆ ಸರ್ಕಾರದಿಂದ ಲಕ್ಷಾಂತರ ರೂಪಾಯಿ ಸಹಾಯವನ್ನು ನೀಡಲಾಗುತ್ತಿದೆ. ಆಯುಷ್ಮಾನ್ ಭಾರತ್ - ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (AB-PMJAY) ರಾಷ್ಟ್ರೀಯ ಆರೋಗ್ಯ ವಿಮೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಇದು ಭರವಸೆ ಯೋಜನೆಯಾಗಿದೆ. ಇದು ಅಸ್ತಿತ್ವದಲ್ಲಿರುವ ಉಪ ಕೇಂದ್ರಗಳು, ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳ  ಮೂಲಕ ಸೇವೆ ಒದಗಿಸುತ್ತದೆ. 


COMMERCIAL BREAK
SCROLL TO CONTINUE READING

ಆರೋಗ್ಯ ಯೋಜನೆಗಳು : 
ಕೇಂದ್ರ ಸರ್ಕಾರವು ನಡೆಸುತ್ತಿರುವ ಈ ಯೋಜನೆಯು ಆರೋಗ್ಯ ಯೋಜನೆಗಳಲ್ಲಿ ಬಹಳ ಜನಪ್ರಿಯವಾಗಿದೆ. ಈ ಯೋಜನೆ ಅಡಿಯಲ್ಲಿ  ಫಲಾನುಭಾವಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಈ ಯೋಜನೆಯಡಿಯಲ್ಲಿ, ಕುಟುಂಬದ ಸದಸ್ಯರು  ದೀರ್ಘಾವಧಿಯವರೆಗೆ ಆಸ್ಪತ್ರೆಗೆ ದಾಖಲಾಗಬೇಕಾದರೆ, ವೈದ್ಯಕೀಯ ವೆಚ್ಚವನ್ನು ಸರಿದೂಗಿಸಲು 5 ಲಕ್ಷದವರೆಗೆ ಪ್ರಯೋಜನ ಒದಗಿಸಲಾಗುವುದು. 


ಇದನ್ನೂ ಓದಿ : ರೈಲಿನಲ್ಲಿ ಬೈಕ್ ಪಾರ್ಸೆಲ್ ಮಾಡಲು ತಗಲುವ ವೆಚ್ಚ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ!


ಅರ್ಹತೆ : 
ಆಯುಷ್ಮಾನ್ ಭಾರತ್ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವೊಂದು ಮಾನದಂಡಗಳನ್ನು ವಿಧಿಸಲಾಗಿದೆ. ಇದರಲ್ಲಿ ಮುಖ್ಯವಾಗಿ, ಆಯುಷ್ಮಾನ್ ಭಾರತ್ ಯೋಜನೆಯಡಿ ಪ್ರಯೋಜನಗಳನ್ನು ಪಡೆಯಬೇಕಾದರೆ ಕುಟುಂಬದ ಸದಸ್ಯರ ಹೆಸರನ್ನು ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ (SECC) 
2011 ರಲ್ಲಿ ಸೇರಿಸಿರಬೇಕು. 


ಆಯುಷ್ಮಾನ್ ಭಾರತ್ ಯೋಜನೆ 2023 ರ ಪ್ರಯೋಜನಗಳು : 
- ಈ ಯೋಜನೆಯಡಿಯಲ್ಲಿ ಫಲಾನುಭವಿಗಳು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಬಹುದು. 
-ABHA ಕಾರ್ಡ್ ಫಲಾನುಭವಿಗಳಿಗೆ ನಗದು ರಹಿತ ಚಿಕಿತ್ಸೆ ಮತ್ತು ಪ್ರವೇಶ ಸೇವೆಗಳು ಲಭ್ಯವಿದೆ.
- ಈ ಯೋಜನೆಯಡಿ, ಪಟ್ಟಿ ಮಾಡಲಾದ ರಾಜ್ಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಸಿಗುತ್ತದೆ. 
- ಆಸ್ಪತ್ರೆಗೆ ದಾಖಲಾದರೆ, 15 ದಿನಗಳ ವರೆಗಿನ ನಿಮ್ಮ ವೆಚ್ಚಗಳನ್ನು ಭಾರತ ಸರ್ಕಾರದ ಈ ಯೋಜನೆಯಡಿ ಒಳಗೊಂಡಿರುತ್ತದೆ.
- ಇದು ಸಂಪೂರ್ಣ ನಗದು ರಹಿತ ಯೋಜನೆಯಾಗಿದೆ ಮತ್ತು ಪ್ರಯೋಜನಗಳನ್ನು ಪಡೆಯಲು ನಗದು ಅಗತ್ಯವಿಲ್ಲ.


ಇದನ್ನೂ ಓದಿ : Bank Fraud: ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಲು ಇಂತಹ ಪಠ್ಯ ಸಂದೇಶಗಳ ಬಗ್ಗೆ ಇರಲಿ ಎಚ್ಚರ


ಆಯುಷ್ಮಾನ್ ಭಾರತ್ ಕಾರ್ಡ್ ಆನ್‌ಲೈನ್ ಅಪ್ಲಿಕೇಶನ್ : 
- ಆನ್‌ಲೈನ್‌ ನಲ್ಲಿ ಆಯುಷ್ಮಾನ್ ಭಾರತ್ ಕಾರ್ಡ್ ಪಡೆಯಲು ಅರ್ಜಿದಾರರು pmjay.gov.in ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಈ  ಪೋರ್ಟಲ್‌ಗೆ ಹೋಗಿ ಕ್ರಿಯೇಟ್  ABHA ಕಾರ್ಡ್ ಮೇಲೆ  ಕ್ಲಿಕ್ ಮಾಡಿ.
ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ  OTP ಹಾಕಿ. 
ಈಗ ಅರ್ಜಿ ನಮೂನೆಗೆ ವಿವರಗಳನ್ನು ನಮೂದಿಸಿ.
ನೋಂದಣಿಯನ್ನು ಪೂರ್ಣಗೊಳಿಸಲು ದಾಖಲೆಗಳು ಮತ್ತು ಪ್ರಮಾಣಪತ್ರಗಳನ್ನು ಅಪ್‌ಲೋಡ್ ಮಾಡಿ.
- ಅರ್ಜಿಯನ್ನು  ಸಬ್ಮಿಟ್ ಮಾಡಿ ಮತ್ತು ಅಧಿಕಾರಿಗಳಿಂದ ಅನುಮೋದನೆಗಾಗಿ ಕಾಯಿರಿ.


ಆಯುಷ್ಮಾನ್ ಭಾರತ್ ಕಾರ್ಡ್ ಡೌನ್‌ಲೋಡ್ ಪ್ರಕ್ರಿಯೆ : 
-pmjay.gov.inಗೆ ಭೇಟಿ ನೀಡುವ ಮೂಲಕ ಆಯುಷ್ಮಾನ್ ಭಾರತ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು.
pmjay.gov.inಗೆ ಹೋಗಿ ಮತ್ತು ಡೌನ್‌ಲೋಡ್ ಆಯುಷ್ಮಾನ್ ಕಾರ್ಡ್ ಬಟನ್ ಮೇಲೆ ಕ್ಲಿಕ್ ಮಾಡಿ.
-ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಮತ್ತು ನಂತರ OTP ಹಾಕಿ. 
- ನಿಮ್ಮ ಆಯುಷ್ಮಾನ್ ಕಾರ್ಡ್‌ನ ಡಿಜಿಟಲ್  ಕಾಪಿಯನ್ನು ಪರಿಶೀಲಿಸಿ ಅದನ್ನು ಡೌನ್‌ಲೋಡ್ ಮಾಡಿ.
- ಪ್ರಿಂಟ್ ಔಟ್ ತೆಗೆದಿಟ್ಟುಕೊಳ್ಳಿ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.