Affordable Bikes:ಪೆಟ್ರೋಲ್ ದರ ಏರಿಕೆ ಚಿಂತೆ ಬಿಟ್ಟು ಬಿಡಿ, ಇಲ್ಲಿವೆ ಪವರ್ಪುಲ್ ಮೈಲೇಜ್ ನೀಡುವ ಅಗ್ಗದ ಬೈಕ್ ಗಳು
Best Milage Bikes: ದಿನದಿಂದ ದಿನಕ್ಕೆ ಬದಲಾಗುತ್ತಿರುವ ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಹಿನ್ನೆಲೆ ಜನ ಕಂಗಾಲಾಗಿದ್ದಾರೆ. ಅಷ್ಟೇ ಅಲ್ಲ ಕೊರೊನಾ ಹಿನ್ನಲೆ ಬಜೆಟ್ ಮೇಲೂ ಭಾರಿ ಪರಿಣಾಮ ಉಂಟಾಗಿದೆ. ಇವೆಲ್ಲವುಗಳ ನಡುವೆ ನಾವು ನಿಮಗೆ ಕೆಲ ಬೈಕ್ ಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದು, ಇವು ಕೇವಲ ಅಗ್ಗದ ಬೈಕ್ ಗಳಾಗದೆ, ಜಬರ್ದಸ್ತ್ ಮೈಲೇಜ್ ಕೂಡ ನೀಡುತ್ತವೆ.
ನವದೆಹಲಿ: Fuel Saving Bikes - ಪೆಟ್ರೋಲ್-ಡೀಸೆಲ್ ಬೆಲೆಗಳು ಗಗನಕ್ಕೇರುತ್ತಿವೆ ಮತ್ತು ಇಂತಹ ಅಗ್ಗದ ಮತ್ತು ಕೈಗೆಟುಕುವ ಮೋಟಾರ್‌ಸೈಕಲ್‌ಗಳು ಅತ್ಯಂತ ಪರಿಣಾಮಕಾರಿ ಆಯ್ಕೆಯಾಗಿ ಹೊರಹೊಮ್ಮಿವೆ. ಅವು ಕಡಿಮೆ ಬಜೆಟ್(Cheap Bikes) ಜೊತೆಗೆ ಮೈಲೇಜ್‌ನ ವಿಷಯದಲ್ಲಿಯೂ ಅವು ಎಲ್ಲಾ ಬೈಕ್ ಗಳನ್ನು ಮೀರಿಸುತ್ತಿವೆ. ಒಂದೆಡೆ ಎಲೆಕ್ಟ್ರಿಕ್ ವಾಹನಗಳ ಖರೀದಿಯು ದೂರದ ಪಯಣ ಎಂದು ತೋರುತ್ತಿದ್ದರೆ, ಈ ಮೋಟಾರ್‌ಸೈಕಲ್‌ಗಳು ಪ್ರಸ್ತುತ ಕಡಿಮೆ ಪ್ರಮಾಣದ ಪೆಟ್ರೋಲ್ ಅನ್ನು ಕುಡಿಯುತ್ತವೆ. ಇದು ಮಧ್ಯಮ ವರ್ಗದ ಕುಟುಂಬಗಳ ಅತ್ಯಂತ ಆದ್ಯತೆಯ ವಿಭಾಗವಾಗಿದ್ದು, ಇದು ಒಂದು ದಶಕಕ್ಕೂ ಹೆಚ್ಚು ಕಾಲ ಅವರ ಆದ್ಯತೆಯಾಗಿದೆ. ಈ ವರದಿಯಲ್ಲಿ ನಾವು ನಿಮತೆ 50,000 ರೂ.ಗಿಂತ ಕಡಿಮೆ ಬೆಲೆಯ ಬೈಕ್‌ಗಳ (Bikes Under 50,000) ಬಗ್ಗೆ ಮಾಹಿತಿ ನೀಡುತ್ತಿದ್ದು, ಅವುಗಳ ಮೈಲೇಜ್ ಕೂಡ ತುಂಬಾ ಸ್ಟ್ರಾಂಗ್ ಆಗಿದೆ.
ಬಜಾಜ್ CT 100 (Bajaj CT100)
ಬಜಾಜ್ CT 100 ಎಲೆಕ್ಟ್ರಿಕ್ ಸ್ಟಾರ್ಟ್‌ನೊಂದಿಗೆ ಮಾರಾಟವಾಗುತ್ತಿರುವ ಕಂಪನಿಯ ಅಗ್ಗದ ಬೈಕ್ ಆಗಿದೆ. ಮುಂಬೈನಲ್ಲಿ ಈ ಬೈಕ್ ನ ಆರಂಭಿಕ ಎಕ್ಸ್ ಶೋ ರೂಂ ಬೆಲೆ ರೂ 44,073 ಆಗಿದ್ದು, ಇದರ ಉನ್ನತ ಮಾದರಿ ಬೆಲೆ ರೂ 60941 ಕ್ಕೆ ತಲುಪುವ ಸಾಧ್ಯತೆ ಇದೆ. 50,000 ರೂ. ಒಳಗಿನ ಅತ್ಯುತ್ತಮ ಬಜೆಟ್ ಬೈಕ್‌ಗಳಲ್ಲಿ ಈ ಬೈಕ್ ಅನ್ನು ಸೇರಿಸಲಾಗಿದೆ ಮತ್ತು ಇದಕ್ಕೆ 102 ಸಿಸಿ ಎಂಜಿನ್ ನೀಡಲಾಗಿದೆ. ಈ ಬೈಕ್ ಅನ್ನು ಒಂದು ಲೀಟರ್ ಪೆಟ್ರೋಲ್ ನಲ್ಲಿ 90 ಕಿ.ಮೀ ಓಡಿಸಬಹುದು.
ಟಿವಿಎಸ್ ಸ್ಪೋರ್ಟ್(TVS Sports)
ಟಿವಿಎಸ್ ಸ್ಪೋರ್ಟ್ ಕೆಲವು ಉತ್ತಮ ವೈಶಿಷ್ಟ್ಯಗಳೊಂದಿಗೆ ಸೊಗಸಾಗಿ ಕಾಣುವ ಬೈಕ್ ಆಗಿದೆ. ಇದು 7.8 PS ಪವರ್ ಮತ್ತು 7.5 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವಬೈಕ್ ಆಗಿದ್ದು, ಇದು 99.7 cc ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ ಅನ್ನು 4-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಬೈಕಿನ ಮುಂಭಾಗದ ಭಾಗವು ಟೆಲಿಸ್ಕೋಪಿಕ್ ಫೋರ್ಕ್‌ಗಳಿದ್ದರೆ, ಹಿಂಭಾಗದಲ್ಲಿ ಅವಳಿ ಶಾಕ್ ಅಬ್ಸಾರ್ಬರ್‌ಗಳನ್ನು ಹೊಂದಿದೆ. ಈ ಬೈಕ್ ಅನ್ನು 1 ಲೀಟರ್ ಪೆಟ್ರೋಲ್ ನಲ್ಲಿ 75 ಕಿ.ಮೀ ಓಡಿಸಬಹುದು. ಮುಂಬೈನಲ್ಲಿ ಇದರ ಆರಂಭಿಕ ಎಕ್ಸ್ ಶೋ ರೂಂ ಬೆಲೆ ರೂ 41,981 ರಿಂದ ಪ್ರಾರಂಭವಾಗುತ್ತದೆ ಮತ್ತು ರೂ 50,697 ವರೆಗೆ ತಲುಪುತ್ತದೆ.
ಇದನ್ನೂ ಓದಿ-Sensexನಲ್ಲಿ ಭಾರೀ ಕುಸಿತ.. ನಿಫ್ಟಿ 17,100 ಕ್ಕೆ ಇಳಿಕೆ
ಹೀರೋ HF ಡಿಲಕ್ಸ್ (Hero HF Delux)
ಭಾರತೀಯ ಮಾರುಕಟ್ಟೆಯಲ್ಲಿ ಈ ಬೈಕ್ ಅನ್ನು ಅತಿ ಹೆಚ್ಚು ಇಷ್ಟಪಡಲಾಗುತ್ತದೆ. ಇದು ಮಾರುಕಟ್ಟೆಯಲ್ಲಿ ಒಟ್ಟು 5 ವೆರಿಯಂಟ್‌ಗಳಲ್ಲಿ ಲಭ್ಯವಿದೆ. ಬೈಕು 97.2 cc ಎಂಜಿನ್‌ಗೆ ಹೊಂದಿದ್ದು, ಇದು , 8.36 PS ಪವರ್ ಮತ್ತು 8.05 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕ್ ಅನ್ನು 1 ಲೀಟರ್ ಪೆಟ್ರೋಲ್ ನಲ್ಲಿ 82.9 ಕಿ.ಮೀ. ಓಡಿಸಬಹುದು. ಬೈಕ್‌ನ ಎಕ್ಸ್ ಶೋ ರೂಂ ಬೆಲೆ ಮುಂಬೈನಲ್ಲಿ 39,990 ರೂ.ನಿಂದ ಪ್ರಾರಂಭವಾಗುತ್ತದೆ ಮತ್ತು 56,025 ರೂ. ವರೆಗೆ ತಲುಪುತ್ತದೆ. ಇದರೊಂದಿಗೆ, ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಮ್, 5-ಸ್ಪೋಕ್ ಅಲಾಯ್ ಚಕ್ರಗಳು ಮತ್ತು ಹೆಡ್‌ಲೈಟ್‌ನಂತಹ ವೈಶಿಷ್ಟ್ಯಗಳನ್ನು ಇದರಲ್ಲಿ ನೀಡಲಾಗಿದೆ.
ಇದನ್ನೂ ಓದಿ-7th Pay Commission : ಹೊಸ ವರ್ಷದಲ್ಲಿ ಸರ್ಕಾರಿ ನೌಕರರಿಗೆ ಸಿಗಲಿದೆ ಭರ್ಜರಿ ಗಿಫ್ಟ್, ಹೆಚ್ಚಾಗಲಿದೆ ವೇತನ
ಬಜಾಜ್ ಪ್ಲಾಟಿನಾ 100(Bajaj Platina 100)
ಬಜಾಜ್ ಪ್ಲಾಟಿನಾ 100 ಸಹ 2005 ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ಅತ್ಯಂತ ಕೈಗೆಟುಕುವ ಬೈಕ್‌ಗಳಲ್ಲಿ ಒಂದಾಗಿದೆ ಮತ್ತು ಇದುವರೆಗೆ ಕಂಪನಿಯು ಈ ಬೈಕ್‌ನ 5 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿದೆ. ಈ ಬೈಕು ಕಿಕ್-ಸ್ಟಾರ್ಟ್ ಮತ್ತು ಎಲೆಕ್ಟ್ರಿಕ್-ಸ್ಟಾರ್ಟ್ ರೂಪಾಂತರಗಳಲ್ಲಿ ಲಭ್ಯವಿದೆ ಮತ್ತು ಇದರ ಆರಂಭಿಕ ಬೆಲೆ ರೂ 47,648 ಎಕ್ಸ್-ಶೋರೂಮ್ ಆಗಿದೆ, ಇದರ ಉನ್ನತ ಮಾದರಿ ಬೆಲೆ ರೂ 55,181 ವರೆಗೆ ತಲುಪುತ್ತದೆ. ಬೈಕ್ ನೊಂದಿಗೆ 102 ಸಿಸಿ ಎಂಜಿನ್ ನೀಡಲಾಗಿದ್ದು, 1 ಲೀಟರ್ ಪೆಟ್ರೋಲ್ ನಲ್ಲಿ 90 ಕಿ.ಮೀ ವರೆಗೆ ಬೈಕ್ ಮೈಲೇಜ್ ನೀಡುತ್ತದೆ.
ಇದನ್ನೂ ಓದಿ-ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದ್ದರೂ ಅಕೌಂಟ್ ನಿಂದ ಪಡೆಯಬಹುದು 10 ಸಾವಿರ ರೂಪಾಯಿ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.