ಬಜೆಟ್ ನಂತರ ಸರ್ಕಾರಿ ನೌಕರರಿಗೆ ಬಂಪರ್ .! 9,000 ರೂಪಾಯಿಯಷ್ಟು ಹೆಚ್ಚಾಗುವುದು ವೇತನ
7th Pay Commission DA Hike:ಕೇಂದ್ರ ನೌಕರರ ಫಿಟ್‌ಮೆಂಟ್ ಫ್ಯಾಕ್ಟರ್ ಹೆಚ್ಚಿಸುವ ನಿರೀಕ್ಷೆಯಿದೆ. ಇನ್ನು ಮಾರ್ಚ್‌ನಲ್ಲಿ ಕೇಂದ್ರ ನೌಕರರ ಡಿಎ ಹೆಚ್ಚಳವನ್ನು ಘೋಷಿಸುವುದು ಕೂಡಾ ಬಹುತೇಕ ಖಚಿತ.
7th Pay Commission DA Hike : 2023-24ನೇ ಹಣಕಾಸು ವರ್ಷದ ಬಜೆಟ್ ಮಂಡನೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಪ್ರತಿ ಬಾರಿಯಂತೆ ಈ ಬಾರಿಯೂ ಬಜೆಟ್‌ನ ಮೇಲೆ ಕಾರ್ಮಿಕರು ಮತ್ತು ರೈತರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇನ್ನೊಂದೆಡೆ, ಕೇಂದ್ರ ನೌಕರರ ಫಿಟ್‌ಮೆಂಟ್ ಫ್ಯಾಕ್ಟರ್ ಹೆಚ್ಚಿಸುವ ನಿರೀಕ್ಷೆಯಿದೆ. ಇನ್ನು ಮಾರ್ಚ್‌ನಲ್ಲಿ ಕೇಂದ್ರ ನೌಕರರ ಡಿಎ ಹೆಚ್ಚಳವನ್ನು ಘೋಷಿಸುವುದು ಕೂಡಾ ಬಹುತೇಕ ಖಚಿತ. ಹೋಳಿಗೂ ಮುನ್ನವೇ ಈ ಘೋಷಣೆಯಾಗುವ ಸಾಧ್ಯತೆ ಇದೆ. ಒಂದು ಕೋಟಿ ಕೇಂದ್ರ ನೌಕರರು ಮತ್ತು ಪಿಂಚಣಿದಾರರು ಈ ಡಿಎ ಹೆಚ್ಚಳದ ಲಾಭವನ್ನು ಪಡೆಯಲಿದ್ದಾರೆ.
ಈ ಬಾರಿ ಎಷ್ಟು ಹೆಚ್ಚಳವಾಗಲಿದೆ ಡಿಎ ? :
ಡಿಸೆಂಬರ್‌ನ ಎಐಸಿಪಿಐ ಸೂಚ್ಯಂಕದ ದತ್ತಾಂಶದ ಸಹಾಯದಿಂದ ಈ ಬಾರಿ ಎಷ್ಟು ಡಿಎ ಹೆಚ್ಚಾಗುವ ನಿರೀಕ್ಷೆಯಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಜುಲೈ 2022 ರ ಹೆಚ್ಚಳದ ಆಧಾರದ ಮೇಲೆ ಕೇಂದ್ರ ನೌಕರರು 38% ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಈ ಅಂಕಿ ಅಂಶವು 41% ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ : ಮಾರುತಿ, ಹ್ಯುಂಡೈ ಸೇರಿದಂತೆ ಹಲವು ದೊಡ್ಡ ಕಾರು ಕಂಪನಿಗಳಿಗೆ ಟಕ್ಕರ್ ನೀಡಿದ ಭಾರತೀಯ ಕಂಪನಿ
ಉದ್ಯೋಗಿಗಳಿಗೆ ಹೆಚ್ಚು ಸಮಾಧಾನಕರ ವಿಷಯ ಎಂದರೆ ಮೂಲಗಳ ಪ್ರಕಾರ ಈ ಬಾರಿ ಕನಿಷ್ಠ 3 ರಷ್ಟು ಡಿಎ ಹೆಚ್ಚಳವನ್ನು ನಿಗದಿಪಡಿಸಲಾಗಿದೆ. ಉದಾಹರಣೆಗೆ, ನೌಕರನ ಮೂಲ ವೇತನವು 25000 ರೂ ಆಗಿದ್ದರೆ, 3 ಪ್ರತಿಶತದ ಪ್ರಕಾರ, ವೇತನವೂ ತಿಂಗಳಿಗೆ 750 ರೂಪಾಯಿಗಳಷ್ಟು ಹೆಚ್ಚಾಗುತ್ತದೆ. ಹೀಗಾದಾಗ ವಾರ್ಷಿಕ ಆಧಾರದ ಮೇಲೆ ಲೆಕ್ಕ ಹಾಕುವುದಾದರೆ 9000 ರೂ.ಗಳಷ್ಟು ಹೆಚ್ಚಾಗುತ್ತದೆ. ಕ್ಯಾಬಿನೆಟ್ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳ ವೇತನವು ತಿಂಗಳಿಗೆ 7,500 ರೂ.ಗಳಷ್ಟು ಅಂದರೆ ವರ್ಷಕ್ಕೆ 90,000 ರೂ.ಗಳಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ನೌಕರರ ಜೀವನಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ತುಟ್ಟಿಭತ್ಯೆ ನೀಡಲಾಗುತ್ತದೆ. ಉದ್ಯೋಗಿಯ ಮೂಲ ವೇತನದ ಆಧಾರದ ಮೇಲೆ ಇದನ್ನು ಲೆಕ್ಕಹಾಕಲಾಗುತ್ತದೆ.
ಇದನ್ನೂ ಓದಿ : ಹಳೆ ಪಿಂಚಣಿ ಯೋಜನೆ ಬಗ್ಗೆ ಶಾಕಿಂಗ್ ಮಾಹಿತಿ ನೀಡಿದ ರಿಸರ್ವ್ ಬ್ಯಾಂಕ್ !
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.