DGCA ಜಾರಿಗೊಳಿಸಿದ ಈ ನಿಯಮದಿಂದಾಗಿ ಇನ್ನು ಅಗ್ಗವಾಗಲಿದೆ ವಿಮಾನ ಯಾನ !
New rule to impact flight ticket prices:ವಿವಿಧ ಸ್ಥಳಗಳಿಂದ ಬಂದ ಪ್ರತಿಕ್ರಿಯೆಗಳ ಆಧಾರದ ಮೇಲೆ,ಅನೇಕ ಬಾರಿ ಪ್ರಯಾಣಿಕರಿಗೆ ಪ್ರಯಾಣದ ಸಮಯದಲ್ಲಿ ವಿಮಾನಯಾನ ಸಂಸ್ಥೆಗಳು ಒದಗಿಸುವ ಈ ಸೇವೆಗಳ ಅಗತ್ಯವೇ ಇರುವುದಿಲ್ಲ.
New rule to impact flight ticket prices : ದಿನೇ ದಿನೇ ಹೆಚ್ಚುತ್ತಿರುವ ವಿಮಾನಯಾನ ದಾರದಿಂದ ಬೇಸತ್ತಿದ್ದರೆ ಈ ಸುದ್ದಿಯಿಂದ ನೀವು ನಿರಾಳವಾಗಬಹುದು.ಶೀಘ್ರದಲ್ಲೇ ವಿಮಾನ ಯಾನ ದರ ಕಡಿಮೆಯಾಗಲಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯವು (ಡಿಜಿಸಿಎ) ಸೂಚನೆಯನ್ನು ಹೊರಡಿಸಿದ್ದು, ವಿಮಾನಗಳ ಮೂಲ ದರವನ್ನು ಪ್ರಯಾಣಿಕರಿಗೆ ಹೆಚ್ಚು ಕೈಗೆಟುಕುವಂತೆ ಮಾಡಲು ಎಲ್ಲಾ ರೀತಿಯ ನಡೆಸಿವೆ.
ವಿಮಾನಯಾನ ಸಂಸ್ಥೆಗಳು ನೀಡುವ ನಿಗದಿತ ದರಗಳು ಅವು ಒದಗಿಸುವ ಕೆಲವು ಸೇವೆಗಳಿಗೆ ವಿಧಿಸುವ ಶುಲ್ಕವನ್ನೂ ಒಳಗೊಂಡಿವೆ.ವಿವಿಧ ಸ್ಥಳಗಳಿಂದ ಬಂದ ಪ್ರತಿಕ್ರಿಯೆಗಳ ಆಧಾರದ ಮೇಲೆ,ಅನೇಕ ಬಾರಿ ಪ್ರಯಾಣಿಕರಿಗೆ ಪ್ರಯಾಣದ ಸಮಯದಲ್ಲಿ ವಿಮಾನಯಾನ ಸಂಸ್ಥೆಗಳು ಒದಗಿಸುವ ಈ ಸೇವೆಗಳ ಅಗತ್ಯವೇ ಇರುವುದಿಲ್ಲ.
ಇದನ್ನೂ ಓದಿ : Gold And Silver Price: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಚಿನ್ನ ಹಾಗೂ ಬೆಳ್ಳಿಯ ಬೆಲೆ ಕುಸಿತ!
ಸೇವೆಗಳು ಮತ್ತುಅವುಗಳಶುಲ್ಕಗಳನ್ನು ಪ್ರತ್ಯೇಕಿಸುವ ಮೂಲಕ, ಮೂಲ ದರವು ಹೆಚ್ಚು ಮಿತವ್ಯಯಕಾರಿಯಾಗಬಹುದು ಎಂದು DGCA ಸುತ್ತೋಲೆಯಲ್ಲಿ ತಿಳಿಸಿದೆ. ಇದರೊಂದಿಗೆ, ಗ್ರಾಹಕರು ತಾವು ಪಡೆಯಲು ಬಯಸುವ ಸೇವೆಗಳಿಗೆ ಮಾತ್ರ ಪಾವತಿಸುವ ಆಯ್ಕೆಯನ್ನು ಪಡೆಯುತ್ತಾರೆ. ಬೇರೆ ಬೇರೆ ಸೇವೆಗಳನ್ನು 'ಆಪ್ಟ್-ಇನ್' ಆಧಾರದ ಮೇಲೆ ಸೇವೆ ಒದಗಿಸಬೇಕೆ ಹೊರತು 'ಆಪ್ಟ್- ಔಟ್ ' ಆಧಾರದ ಮೇಲೆ ಅಲ್ಲ ಎಂದು DGCA ಹೇಳಿದೆ.
ಡಿಜಿಸಿಎ 7 ಸೇವೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಇದನ್ನು ಟಿಕೆಟ್ ವೆಚ್ಚದಿಂದ ಹೊರಗಿಟ್ಟರೆ, ಮೂಲ ದರವನ್ನು ಹೆಚ್ಚು ಕೈಗೆಟುಕುವಂತೆ ಮಾಡಬಹುದು.
ಪ್ರಯಾಣಿಕ ಆಸನ ಆಯ್ಕೆ ಶುಲ್ಕಗಳು
ಊಟ/ತಿಂಡಿ/ಪಾನೀಯ ಶುಲ್ಕಗಳು
ಏರ್‌ಲೈನ್ ಲಾಂಜ್ ಬಳಸುವುದಕ್ಕಾಗಿ ಶುಲ್ಕಗಳು
ಚೆಕ್ ಇನ್ ಬ್ಯಾಗೇಜ್ ಚಾರ್ಜ್
ಕ್ರೀಡಾ ಸಲಕರಣೆಗಳ ಶುಲ್ಕಗಳು
ಸಂಗೀತ ಸಲಕರಣೆಗಳ ಶುಲ್ಕಗಳು
ಬೆಲೆಬಾಳುವ ಬ್ಯಾಗೇಜ್ ಗಾಗಿ ಸ್ಪೆಷಲ್ ಡಿಕ್ಲೆರೇಶನ್ ಚಾರ್ಜ್
ಇದನ್ನೂ ಓದಿ : Credit Card: ನೀವೂ ಕೂಡ ಐಸಿಐಸಿಐ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದೀರಾ? ಇಲ್ಲಿದೆ ಶಾಕಿಂಗ್ ನ್ಯೂಸ್
ಏರ್‌ಲೈನ್ ಬ್ಯಾಗೇಜ್ ನೀತಿಯ ಭಾಗವಾಗಿ ಫ್ರೀ ಬ್ಯಾಗೇಜ್ ಅಲ್ಲೋವೆನ್ಸ್ ಜೊತೆಗೆ ಶೂನ್ಯ ಬ್ಯಾಗೇಜ್/ನೋ-ಚೆಕ್-ಇನ್ ಬ್ಯಾಗೇಜ್ ದರಗಳನ್ನು ನೀಡಲು ನಿಗದಿತ ವಿಮಾನಯಾನ ಸಂಸ್ಥೆಗಳಿಗೆ ಅನುಮತಿ ನೀಡಲಾಗುತ್ತದೆ. ಇದರೊಂದಿಗೆ, ವಿಮಾನಯಾನ ಕೌಂಟರ್‌ನಲ್ಲಿ ಚೆಕ್-ಇನ್ ಮಾಡಲು ಲಗೇಜ್ ತಂದರೆ, ಅನ್ವಯವಾಗುವ ಶುಲ್ಕಗಳ ಬಗ್ಗೆ ನಿಮಗೆ ಮಾಹಿತಿಯನ್ನು ನೀಡಲಾಗುವುದು ಎಂದು DGCA ಹೇಳಿದೆ.ಇದರೊಂದಿಗೆ ಟಿಕೆಟ್‌ನಲ್ಲಿಯೂ ಮುದ್ರಿಸಲಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.