Budget 2021-22: ರೈತರಿಗೆ ಸಿಗಲಿದೆ ಉಡುಗೊರೆ! Kisan Samman Nidhi ಕೊಡುಗೆಯಲ್ಲಿ ಏರಿಕೆ!
Budget 2021-22: ಫೆಬ್ರವರಿ 1 ರಂದು ಮಂಡನೆಯಾಗಲಿರುವ ಬಜೆಟ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮೂರನೇ ಬಜೆಟ್ (Union Budget 2021) ಆಗಿರಲಿದೆ ಹಣಕಾಸು ಸಚಿವರು ತಮಗಾಗಿ ಏನಾದರೂ ವಿಶೇಷ ಘೋಷಣೆ ಮಾಡಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ (Farmers). ವರದಿಗಳ ಪ್ರಕಾರ, ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆ (PM Kisan Samman Nidhi)ಯಲ್ಲಿ ಸರ್ಕಾರ ತನ್ನ ಕೊಡುಗೆ ಹೆಚ್ಚಿಸಲಿದೆ.
ನವದೆಹಲಿ: Budget 2021-22 - ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆ.1 ರಿಂದ ಸಂಸತ್ತಿನಲ್ಲಿ ಈ ವರ್ಷದ ಬಜೆಟ್ ಮಂಡಿಸಲಿದ್ದಾರೆ. ಕೊರೊನಾ ಮಹಾಮಾರಿಯ ಕಾಲದಲ್ಲಿ ಮಂಡನೆಯಾಗುತ್ತಿರುವ ಈ ಬಜೆಟ್ ನಿಂದ ಜನರಿಗೆ ಸಾಕಷ್ಟು ನಿರೀಕ್ಷೆಗಳಿವೆ. ಇನ್ನೊಂದೆಡೆ ಸ್ವತಃ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೂಡ ಈ ಬಾರಿಯ ಬಜೆಟ್ ಎಂದಿಗಿಂತ ವಿಶೇಷವಾಗಿರಲಿದೆ ಎಂದು ಈಗಾಗಲೇ ಸಂಕೇತ ನೀಡಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಕೆಲ ವಿಶೇಷ ಘೋಷಣೆಗಳಾಗುವ ಸಾಧ್ಯತೆ ಇದೆ.
ಇದನ್ನು ಓದಿ- Budget 2021: ಬಜೆಟ್ ಮಂಡನೆಗೆ ಸಿಎಂ ಬಿಎಸ್ ವೈ ತಯಾರಿ: ಪೂರ್ವಭಾವಿ ಸಭೆಗೆ ಡೇಟ್ಸ್ ಫಿಕ್ಸ್!
ಕೃಷಿ ಕ್ಷೇತ್ರಕ್ಕಾಗಿ ಬಜೆಟ್ ನಲ್ಲಿ ಮಹತ್ವದ ಘೋಷಣೆಗಳಾಗುವ ನಿರೀಕ್ಷೆ
ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಕೇಂದ್ರದ ಮೋದಿ ಸರ್ಕಾರ ಆರ್ಥಿಕ ವರ್ಷ 2021-22 ಸಾಲಿಗಾಗಿ ಕೃಷಿ ಸಾಲವನ್ನು 19 ಲಕ್ಷ ರೂ.ಗಳ ವರೆಗೆ ಹೆಚ್ಚಿಸುವ ಸಾಧ್ಯತೆ ಇದೆ. ಇದನ್ನು ಅಂಕಿ-ಅಂಶಗಳಲ್ಲಿ ಹೇಳುವುದಾದರೆ, ಕೃಷಿ ಸಾಲದಲ್ಲಿ ಶೇ.25 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇದುವರೆಗೆ ಕೃಷಿ ಸಾಲದ (Agriculture Loan)ಮಿತಿ 15 ಲಕ್ಷ ರೂ.ಗಳವರೆಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಈ ಬದಲಾವಣೆಯಾದರೆ, ರೈತರ ಹಿತದೃಷ್ಟಿಯಿಂದ ಇದೊಂದು ದೊಡ್ಡ ಹೆಜ್ಜೆ ಎಂದೇ ಭಾವಿಸಲಾಗುವುದು.
ಇದನ್ನು ಓದಿ- Budget 2021: ಬಜೆಟ್ ನಲ್ಲಿ ರೈತರಿಗೆ ಸಿಗಲಿದೆ ಭರ್ಜರಿ ಗಿಫ್ಟ್, ಕಡಿಮೆ ಬಡ್ಡಿ ದೊಡ್ಡ ಸಾಲ.? ನಿಮಗೂ ಅರ್ಹತೆ ಇದೆಯಾ ನೋಡಿ.
PM ಕಿಸಾನ್ ಸಮ್ಮಾನ್ ನಿಧಿ ಕೊಡುಗೆಯಲ್ಲಿ ಹೆಚ್ಚಳ
ಇದಲ್ಲದೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi Scheme) ಅಡಿಯಲ್ಲಿ ರೈತರಿಗೆ ವಾರ್ಷಿಕವಾಗಿ ನೀಡಲಾಗುವ ಕೊಡುಗೆಯಲ್ಲಿಯೂ ಕೂಡ ಏರಿಕೆಯಾಗುವ ಸಾಧ್ಯತೆ ಇದೆ. ಏಕೆಂದರೆ ರೈತರ ಪ್ರಕಾರ ನಾಲ್ಕು ತಿಂಗಳಿಗೆ ರೂ.2000 ಈ ಮೊಟ್ಟ ಕೃಷಿಗೆ ಸಾಕಾಗುವುದಿಲ್ಲ. ಹೀಗಾಗಿ ಈ ಮೊತ್ತ 3000 ರೂ.ಗಳಿಗೆ ಏರಿಕೆಯಾಗುವ ಸಾಧ್ಯತೆ ಇದೆ. ಪ್ರಸ್ತುತ ಸುಮಾರು 11 ಕೋಟಿ 50 ಲಕ್ಷ ರೈತರಿಗೆ ಈ ಯೋಜನೆಯ ಲಾಭ ಸಿಗುತ್ತಿದೆ. ಆದರೆ, ಈ ಬಾರಿಯ ಬಜೆಟ್ (Budget-2021-22) ನಲ್ಲಿ ಈ ಯೋಜನೆಯ ಅಂಕಿ-ಸಂಖ್ಯೆಯಲ್ಲಿಯೂ ಕೂಡ ಏರಿಕೆಯಾಗುವ ಸಾಧ್ಯತೆ ಇದೆ.
ಇದನ್ನು ಓದಿ- February Changes: ದೈನಂದಿನ ಜೀವನಕ್ಕೆ ಸಂಬಂಧಿಸಿದ ಈ ನಿಯಮಗಳು ಫೆ.1 ರಿಂದ ಬದಲಾಗುತ್ತಿವೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.