Budget 2021: ಬಜೆಟ್ ಮಂಡನೆಗೆ ಸಿಎಂ ಬಿಎಸ್ ವೈ ತಯಾರಿ: ಪೂರ್ವಭಾವಿ ಸಭೆಗೆ ಡೇಟ್ಸ್ ಫಿಕ್ಸ್!

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 2021 -22 ನೇ ಸಾಲಿನ ಆಯವ್ಯಯ ಪೂರ್ವಭಾವಿ ಇಲಾಖಾವಾರು ಚರ್ಚೆ

Last Updated : Jan 28, 2021, 09:42 PM IST
  • ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 2021 -22 ನೇ ಸಾಲಿನ ಆಯವ್ಯಯ ಪೂರ್ವಭಾವಿ ಇಲಾಖಾವಾರು ಚರ್ಚೆ
  • ಫೆಬ್ರವರಿ 8 ರಂದು ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ
  • ಫೆಬ್ರವರಿ 9 ರಂದು ಲೋಕೋಪಯೋಗಿ ಇಲಾಖೆ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಆಡಳಿತ, ಗೃಹ, ಕಾನೂನು
Budget 2021: ಬಜೆಟ್ ಮಂಡನೆಗೆ ಸಿಎಂ ಬಿಎಸ್ ವೈ ತಯಾರಿ: ಪೂರ್ವಭಾವಿ ಸಭೆಗೆ ಡೇಟ್ಸ್ ಫಿಕ್ಸ್! title=

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 2021 -22 ನೇ ಸಾಲಿನ ಆಯವ್ಯಯ ಪೂರ್ವಭಾವಿ ಇಲಾಖಾವಾರು ಚರ್ಚೆಯನ್ನು ಸಚಿವರೊಂದಿಗೆ ನಡೆಸಲಿದ್ದಾರೆ.

ಫೆಬ್ರವರಿ 8 ರಂದು ಉನ್ನತ ಶಿಕ್ಷಣ(Education), ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯ ಅಭಿವೃದ್ಧಿ, ಜೀವನೋಪಾಯ ಮತ್ತು ಉದ್ಯಮಶೀಲತೆ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ಯಮ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಕಾರ್ಮಿಕ ಇಲಾಖೆ ಸಭೆ ನಡೆಯಲಿದೆ.

C.P.Yogeshwar: ವಿಧಾನಸೌಧದಲ್ಲಿ ಡಿಕೆಶಿ ಇದ್ದ ಕೊಠಡಿಯನ್ನೇ ಪಡೆದ ಸಿಪಿ ಯೋಗೇಶ್ವರ್..!

ಫೆಬ್ರವರಿ 9 ರಂದು ಲೋಕೋಪಯೋಗಿ ಇಲಾಖೆ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಆಡಳಿತ, ಗೃಹ, ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಸಭೆ ನಡೆಯಲಿದೆ.

BJP: 'ಕಾಂಗ್ರೆಸ್​ಗೆ ತಟ್ಟಿದೆ ಅಂಬೇಡ್ಕರ್​ ಶಾಪ: ಕಂಬ ನಿಲ್ಲಿಸಿದ್ರೂ ಗೆಲ್ಲುತ್ತಿದ್ದ ಪಕ್ಷಕ್ಕೆ ಕ್ಷೇತ್ರವೇ

ಫೆಬ್ರವರಿ 10 ರಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಹಕಾರ, ಮುಜರಾಯಿ, ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ, ಪ್ರವಾಸೋದ್ಯಮ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ, ಸಣ್ಣ ನೀರಾವರಿ ಇಲಾಖೆ ಸಭೆ ನಡೆಯಲಿದೆ.

 H.Vishwanath: 'ಹಳ್ಳಿಹಕ್ಕಿ'ಯ ಮಂತ್ರಿಯಾಗುವ ಕನಸು ನುಚ್ಚು ನೂರು!

ಫೆಬ್ರವರಿ 11 ರಂದು ಪಶುಸಂಗೋಪನೆ, ಜಲಸಂಪನ್ಮೂಲ, ವೈದ್ಯಕೀಯ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕೃಷಿ, ತೋಟಗಾರಿಕೆ, ರೇಷ್ಮೆ, ನಗರಾಭಿವೃದ್ಧಿ ಸಚಿವರೊಂದಿಗೆ ಸಮಾಲೋಚನೆ ನಡೆಯಲಿದೆ.

Karnataka Politics ಸದನ ಕದನಕ್ಕೆ ವೇದಿಕೆ ಸಜ್ಜು, ಇಂದಿನಿಂದ ವಿಧಾನಮಂಡಲ ಅಧಿವೇಶನ

ಫೆಬ್ರವರಿ 12 ರಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಣ್ಣಕೈಗಾರಿಕೆ, ಗಣಿ ಮತ್ತು ಭೂವಿಜ್ಞಾನ, ಜವಳಿ, ಅಲ್ಪಸಂಖ್ಯಾತರ ಕಲ್ಯಾಣ, ಮೂಲಸೌಕರ್ಯಗಳ ಅಭಿವೃದ್ಧಿ ಕುರಿತಾಗಿ ಚರ್ಚೆ ನಡೆಯಲಿದೆ.

 BJP: ಸಭಾಪತಿ-ಉಪಸಭಾಪತಿ ಆಯ್ಕೆ: ಜೆಡಿಎಸ್ ಗೆ ಸಭಾಪತಿ ಸ್ಥಾನ ಬಿಟ್ಟುಕೊಟ್ಟ ಬಿಜೆಪಿ!

ಫೆಬ್ರವರಿ 15 ರಂದು ರೈತ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಫೆಬ್ರವರಿ 18 ರಂದು ವಸತಿ, ಇಂಧನ, ಸಾರಿಗೆ, ಅಬಕಾರಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಫೆಬ್ರವರಿ 19 ರಂದು ಪೌರಾಡಳಿತ, ಸ್ಥಳೀಯ ಸಂಸ್ಥೆ, ಸಕ್ಕರೆ, ಯುವಜನ ಸೇವೆ, ಕ್ರೀಡೆ, ಯೋಜನೆ, ಕಾರ್ಯಕ್ರಮ ಅನುಷ್ಠಾನ, ವಾಣಿಜ್ಯ ತೆರಿಗೆ, ಅಬಕಾರಿ, ಸಾರಿಗೆ ಮುದ್ರಾಂಕ ಮತ್ತು ನೋಂದಣಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಗಳ ಸಭೆ ನಡೆಯಲಿದೆ.

 D.K.Shivakumar: ವಿನಯ್‌ ಗುರೂಜಿ ಜೊತೆ 20 ನಿಮಿಷ ಮಾತುಕತೆ ನಡೆಸಿದ ಡಿ.ಕೆ.ಶಿವಕುಮಾರ್

ಫೆಬ್ರವರಿ 22 ರಂದು ವಾಣಿಜ್ಯ ಸಂಘ-ಸಂಸ್ಥೆಗಳು, ಸಾರಿಗೆ ಸಂಸ್ಥೆಗಳು, ಅಬಕಾರಿ ಸಂಘ-ಸಂಸ್ಥೆಗಳು, ಭೂ ಮಾರುಕಟ್ಟೆ ಸಂಘ ಸಂಸ್ಥೆಗಳು, ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲಾಗುವುದು. ಫೆಬ್ರವರಿ 23 ರಂದು ದಲಿತ ಸಂಘಟನೆಗಳ ಮುಖಂಡರ ಭೇಟಿ, ಹಿಂದುಳಿದ ಜಾತಿಗಳ ಒಕ್ಕೂಟದ ಪದಾಧಿಕಾರಿಗಳು, ಅಲ್ಪಸಂಖ್ಯಾತ ಸಮುದಾಯದ ಸಂಸತ್ ಸದಸ್ಯರು ಮತ್ತು ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ.

BJP-JDS: ಮೇಲ್ಮನೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News