Akshaya Tritiya Shopping: ನಾಡಿನಾದ್ಯಂತ ಇಂದು ಬಸವ ಜಯಂತಿಯೊಂದಿಗೆ ಅಕ್ಷಯ ತೃತೀಯ ಆಚರಣೆ ನಡೆಯುತ್ತಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಅಕ್ಷಯ ತೃತೀಯ ದಿನದಂದು ಚಿನ್ನ, ಬೆಳ್ಳಿ ಸೇರಿದಂತೆ ಕೆಲವು ವಸ್ತುಗಳ ಖರೀದಿಯನ್ನು ಅತ್ಯಂತ ಮಂಗಳಕರ ಎಂದು ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂದು ಬಾಗಲಕೋಟೆಯಲ್ಲಿ ಚಿನ್ನ, ಬೆಳ್ಳಿ ಖರೀದಿಸಲು ಚಿನ್ನದಂಗಡಿಯಲ್ಲಿ ಜನಜಂಗುಳಿಯೇ ನೆರೆದಿದೆ. 


COMMERCIAL BREAK
SCROLL TO CONTINUE READING

ಹೌದು, ಹಳೇ ಬಾಗಲಕೋಟೆ, ನವನಗರ, ವಿದ್ಯಾಗಿರಿಯ ಬಂಗಾರದ ಅಂಗಡಿಗಳಿಗೆ ಜನ ಬೆಳಿಗ್ಗೆಯಿಂದಲೇ ಮುಗಿಬಿದ್ದಿರುವ ದೃಶ್ಯ ಕಂಡು ಬಂದಿತು. 


ಇದನ್ನೂ ಓದಿ- Gold And Silver Price: ಅಕ್ಷಯ ತೃತೀಯದಂದು ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್:‌ ಚಿನ್ನ ಮತ್ತು ಬೆಳ್ಳಿಯ ಬೆಲೆ ಕುಸಿತ!!


ಇನ್ನೂ ಅಕ್ಷಯ ತೃತೀಯ ಪ್ರಯುಕ್ತ  ಚಿನ್ನದ ದರ (Gold Price) 1 ತೊಲೆಗೆ 74 ಸಾವಿರಕ್ಕೆ ಏರಿದೆ. ಆದಾಗ್ಯೂ, ಅಕ್ಷಯ ತೃತೀಯಾ ದಿನದಂದು ಅಂದ್ರೆ ಇಂದು ಚಿನ್ನ ಖರೀದಿಸಿದ್ರೆ ಒಳ್ಳೆಯದಾಗುತ್ತೆ ಅನ್ನೋ ನಂಬಿಕೆ ಹಿನ್ನೆಲೆಯಲ್ಲಿ ಚಿನ್ನ ಖರೀದಿ ಭರಾಟೆ ಜೋರಾಗಿಯೇ ಇದೆ. 


ಕೆಲವರು ತಮ್ಮ ಶಕ್ತ್ಯಾನುಸಾರ ಚಿನ್ನ ಖರೀದಿಸಿದರೆ, ಇನ್ನೂ ಕೆಲವರು ಬೆಳ್ಳಿ ಖರೀದಿಸುತ್ತಿರುವ ದೃಶ್ಯಗಳು ಕೂಡ ಕಂಡು ಬಂದಿತು. ವಾಸ್ತವವಾಗಿ, ಅಕ್ಷಯ ತೃತೀಯ (Akshaya Trithiya) ದಿನದಂದು ಚಿನ್ನದಂತೆ ಬೆಳ್ಳಿ ಖರೀದಿಯೂ ಶುಭ ಎಂದು ಪರಿಗಣಿಸಲಾಗಿದೆ. 


ಇದನ್ನೂ ಓದಿ- Credit Card Tips: ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್‌ಗಳಿದ್ದು ಅವುಗಳನ್ನು ಬಳಸದಿದ್ದರೆ ಏನಾಗುತ್ತೆ!


ವಾಸ್ತವವಾಗಿ, ಕಳೆದ ಮೂರ್ನಾಲ್ಕು ವರ್ಷಗಳಿಂದ ಕರೋನಾ ಸಾಂಕ್ರಾಮಿಕ ಸೇರಿದಂತೆ ಹಲವು ಕಾರಣಗಳಿಂದ ಅಕ್ಷಯ ತೃತೀಯದಂದು ಅಷ್ಟೊಂದು ವ್ಯಾಪಾರ ಇರಲಿಲ್ಲ, ಆದರೆ, ಈ ಬಾರಿ ಅಕ್ಷಯ ತೃತೀಯಕ್ಕೆ ವ್ಯಾಪಾರ ಜೋರಾಗಿದೆ ಎಂದು ವ್ಯಾಪಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.