Credit Card Tips: ಆಧುನಿಕ ಜಗತ್ತಿನಲ್ಲಿ ಬಹುತೇಕ ಪ್ರತಿಯೊಬ್ಬರ ಬಳಿಯೂ ಕ್ರೆಡಿಟ್ ಕಾರ್ಡ್ ಇದ್ದೇ ಇರುತ್ತದೆ. ಇದಕ್ಕೆ ಮುಖ್ಯ ಕಾರಣ ಕೈಯಲ್ಲಿ ನಗದು ಹಣ ಇಲ್ಲದಿದ್ದರೂ ಸಹ ಕ್ರೆಡಿಟ್ ಕಾರ್ಡ್‌ನಿಂದ (Credit Card) ತಕ್ಷಣದ ಅಗತ್ಯತೆಗಳು, ಆಕಸ್ಮಿಕ ಹಣಕಾಸಿನ ಪರಿಸ್ಥಿತಿಗಳನ್ನು ನಿರ್ವಹಿಸಬಹುದು. ಕ್ರೆಡಿಟ್ ಕಾರ್ಡ್‌ಗಳ ಬಳಕೆ ಹೆಚ್ಚಾಗಿರುವುದಕ್ಕೆ ಮತ್ತೊಂದು ಕಾರಣ ಇದರಲ್ಲಿ ಲಭ್ಯವಿರುವ ಆಕರ್ಷಕ ಕೊಡುಗೆಗಳು. ಹಾಗಾಗಿಯೇ ಕೆಲವರು, ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್‌ಗಳನ್ನು (More Than One Credit Card) ಹೊಂದಿರುತ್ತಾರೆ. ಆದರೆ, ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿದ್ದರೆ ಮತ್ತು ಅವುಗಳನ್ನು ನಿಯಮಿತವಾಗಿ ಬಳಸದಿದ್ದರೆ ಇದರಿಂದ ಏನಾಗಬಹುದು ಎಂದು ಎಂದಾದರೂ ಯೋಚಿಸಿದ್ದೀರಾ?
ಕ್ರೆಡಿಟ್ ಕಾರ್ಡ್ ಬಳಕೆ (Credit card usage) :-
ಪ್ರತಿ ತಿಂಗಳ ಮನೆಯ ಖರ್ಚು-ವೆಚ್ಚಗಳನ್ನು ನಿರ್ವಹಿಸುವಲ್ಲಿ ಕ್ರೆಡಿಟ್ ಕಾರ್ಡ್ ತುಂಬಾ ಪ್ರಯೋಜನಕಾರಿ ಆಗಿದೆ. ಆದರೆ, ಕ್ರೆಡಿಟ್ ಕಾರ್ಡ್‌ಗಳನ್ನು (Credit Card) ಜವಾಬ್ದಾರಿಯುತವಾಗಿ ಬಳಸಬೇಕು. ಇಲ್ಲದಿದ್ದರೆ ಸಾಲದ ಹೊರೆ ಹೆಚ್ಚಾಗುತ್ತದೆ. ಹಾಗಂತ ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿದ್ದು ಅವುಗಳನ್ನು ಬಳಸದೆ ಬಿಡಬಾರದು.
ಜೀವಮಾನದ ಉಚಿತ ಕ್ರೆಡಿಟ್ ಕಾರ್ಡ್ (Lifetime Free Credit Card) :-
ವಾಸ್ತವವಾಗಿ, ಸ್ಯಾಲರಿ ಅಕೌಂಟ್ (Salary Account) ಹೊಂದಿದ್ದು ಸಿಬಿಲ್ ಸ್ಕೋರ್ ಉತ್ತಮವಾಗಿದ್ದಾಗ ಕೆಲವು ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಜೀವಮಾನದ ಉಚಿತ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುತ್ತವೆ. ಸಾಮಾನ್ಯವಾಗಿ ಗ್ರಾಹಕರು ಇದನ್ನು ಲಾಭದಾಯಕ ಕೊಡುಗೆ ಎಂದು ಪರಿಗಣಿಸುತ್ತಾರೆ. ಅಷ್ಟೇ ಅಲ್ಲ, ಜೀವಮಾನದ ಉಚಿತ ಕ್ರೆಡಿಟ್ ಕಾರ್ಡ್ ಆಗಿರುವುದರಿಂದ ನಾವು ಅದನ್ನು ಬಳಸದಿದ್ದರೂ ಸಹ ಅದರಿಂದ ಏನೂ ಹಾನಿಯಾಗುವುದಿಲ್ಲ ಎಂದು ಭಾವಿಸುತ್ತೇವೆ. ಆದರೆ ಇದು ತಪ್ಪು ಕಲ್ಪನೆ.
ಇದನ್ನೂ ಓದಿ- NPS ಮಾತ್ರವಲ್ಲ ವೃದ್ದಾಪ್ಯ ಜೀವನ ಭದ್ರವಾಗಿಸಲು ಈ ಯೋಜನೆ ಕೂಡಾ ಬೆಸ್ಟ್ !ಸಿಗುತ್ತದೆ ಅತಿ ಹೆಚ್ಚು ಲಾಭ
ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್:
ಲೈಫ್ ಟೈಮ್ ಉಚಿತ ಕ್ರೆಡಿಟ್ ಕಾರ್ಡ್ (Lifetime Free Credit Card) ಹೊಂದಿದ್ದರೂ ಬಳಸದವರು ಒಂದೆಡೆಯಾದರೆ, ಇದಕ್ಕೆ ವಿರುದ್ಧವಾಗಿ ವಿಭಿನ್ನ ಉದ್ದೇಶಗಳಿಗಾಗಿ ವಿಭಿನ್ನ ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿರುವಂತಹ ಜನರು ಮತ್ತೊಂದೆಡೆ. ಅರ್ಥಾತ್, ನಮ್ಮಲ್ಲಿ ಕೆಲವರು ದಿನಸಿ ಶಾಪಿಂಗ್‌ಗಾಗಿ ಒಂದು ಕಾರ್ಡ್, ಇಂಧನ ಖರೀದಿಗಾಗಿ ಇನ್ನೊಂದು ಕ್ರೆಡಿಟ್ ಕಾರ್ಡ್, ಸಾಮಾನ್ಯ ವಹಿವಾಟಿಗಾಗಿ ಮತ್ತೊಂದು ಕ್ರೆಡಿಟ್ ಕಾರ್ಡ್ ಹೊಂದಿರುತ್ತಾರೆ. ಇದಲ್ಲದೆ, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಅನೇಕ ಆನ್‌ಲೈನ್ ಶಾಪಿಂಗ್ (Online Shopping) ಅಪ್ಲಿಕೇಶನ್‌ಗಳು ಒದಗಿಸುವ ಮೀಸಲಾದ ಕಾರ್ಡ್‌ಗಳನ್ನು ಸಹ ಬಳಸುತ್ತಾರೆ.
ಲೈಫ್ ಟೈಮ್ ಉಚಿತ ಕ್ರೆಡಿಟ್ ಕಾರ್ಡ್ ಹೊಂದಿದ್ದು ಬಳಸದಿದ್ದರೂ ಅಥವಾ ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಹೊಂದಿದ್ದು ಅವುಗಳನ್ನು ಸರಿಯಾಗಿ ನಿರ್ವಹಿಸದಿದ್ದರೂ ಇದು ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಅಥವಾ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರಬಹುದು.
ಸಿಬಿಲ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ (Negative impact on CIBIL score):-
ಆರ್ಥಿಕ ತಜ್ಞರ ಪ್ರಕಾರ, ಜೀವಮಾನದ ಉಚಿತ ಕ್ರೆಡಿಟ್ ಕಾರ್ಡ್ ಅನ್ನು ಸ್ವಲ್ಪ ಸಮಯದವರೆಗೆ ಬಳಸದೆ ಬಿಟ್ಟರೆ, ಅದು ಒಬ್ಬರ ಕ್ರೆಡಿಟ್ ಸ್ಕೋರ್ (ಸಿಬಿಲ್ ಸ್ಕೋರ್) ಮೇಲೆ ನಕಾರಾತ್ಮಕ ಪರಿಣಾಮ (Negative impact on CIBIL score) ಬೀರಬಹುದು ಎಂದು ಹೇಳಲಾಗುತ್ತದೆ. ಒಂದೊಮ್ಮೆ ಲೈಫ್ ಟೈಮ್ ಕ್ರೆಡಿಟ್ ಕಾರ್ಡ್ ಕ್ರೆಡಿಟ್ ಸ್ಕೋರ್ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರದಿದ್ದರೂ ಸಹ ಸುಪ್ತ ಶುಲ್ಕವನ್ನು ಆಹ್ವಾನಿಸಬಹುದು. ಕೆಲವು ಕಾರ್ಡ್‌ಗಳಲ್ಲಿ ನಿಷ್ಕ್ರಿಯತೆ ಶುಲ್ಕವನ್ನು ಕೂಡ ವಿಧಿಸಲಾಗುತ್ತದೆ.
ಇದನ್ನೂ ಓದಿ- Cheque ಹಿಂಭಾಗದಲ್ಲಿ ಯಾವಾಗ ಸಹಿ ಹಾಕಬೇಕು?
ಹೆಚ್ಚಿನ ಕ್ರೆಡಿಟ್ ಕಾರ್ಡ್ ಹೊಂದಿರುವ ಪರಿಣಾಮ:
ಹೆಚ್ಚಿನ ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದುವುದರಿಂದ ತಕ್ಷಣದ ಅಗತ್ಯತೆಗಳನ್ನು ಪೂರೈಸಬಹುದಾದರೂ, ಇದನ್ನು ಸರಿಯಾಗಿ ನಿರ್ವಹಿಸದಿದ್ದರೆ ಇದರಿಂದ ಕೆಲವು ಅನಾನುಕೂಲಗಳು ಸಹ ಇವೆ.
ವಾಸ್ತವವಾಗಿ, ನೀವು ಎಷ್ಟು ಕ್ರೆಡಿಟ್ ಕಾರ್ಡ್ ಹೊಂದಿದ್ದೀರಿ ಎಂಬುದು ನಿಮ್ಮ ಆದಾಯಕ್ಕೆ ನೇರವಾಗಿ ಸಂಬಂಧಿಸುವುದಿಲ್ಲ. ಹೆಚ್ಚಿನ ಕ್ರೆಡಿಟ್ ಬಳಕೆಯೊಂದಿಗೆ ಹಲವಾರು ಕಾರ್ಡ್‌ಗಳನ್ನು ನಿರ್ವಹಿಸುವ ನಿಮ್ಮ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ. ಇದರಿಂದಾಗಿ, ಬೇರಾವುದೇ ಲೋನ್ ಪಡೆಯಲು ಹೋದಾಗ ಸಾಲದಾತರು ನಿಮ್ಮ ಸಾಲಕ್ಕೆ ಅನುಮೋದನೆ ನೀಡುವಾಗ ಇದನ್ನು ಪರಿಗಣಿಸಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.