ಅಮೆಜಾನ್ ಪೇನಲ್ಲಿ ಇನ್ಮುಂದೆ ಎಫ್ಡಿ ಮತ್ತು ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಿ…
ಅಮೆಜಾನ್ ಪ್ರತಿಸ್ಪರ್ಧಿಯಾಗಿರುವ ಗೂಗಲ್ ಪೇ ಕೂಡ ಈಗಾಗಲೇ ತನ್ನ ಗ್ರಾಹಕರಿಗೆ ಇದೇ ರೀತಿಯ ಸೌಲಭ್ಯಕ್ಕೆ ಚಾಲನೆ ನೀಡಿದೆ.
ನವದೆಹಲಿ: ಅಮೆರಿಕದ ಇ-ಕಾಮರ್ಸ್ ದೈತ್ಯ ಅಮೆಜಾನ್ ಈಗ ತನ್ನ ಗ್ರಾಹಕರಿಗೆ ಮ್ಯೂಚವಲ್ ಫಂಡ್ ಮತ್ತು ನಿಶ್ಚಿತ ಠೇವಣಿಗಳಲ್ಲಿ(Fixed Deposits) ಹೂಡಿಕೆ ಮಾಡುವ ಸೇವೆ ನೀಡಲು ಮುಂದಾಗಿದೆ. ಬುಧವಾರ (ಸೆ.8) ಅಮೆಜಾನ್ ಪೇ ಇಂಡಿಯಾ(Amazon Pay India)ವು ಹೂಡಿಕೆ ಪ್ಲಾಟ್ಫಾರ್ಮ್ Kuvera.in ಜೊತೆಗೆ ಒಪ್ಪಂದ ಮಾಡಿಕೊಳ್ಳುವುದಾಗಿ ಘೋಷಿಸಿದೆ. ಅಮೆಜಾನ್ ಪ್ರತಿಸ್ಪರ್ಧಿಯಾಗಿರುವ ಗೂಗಲ್ ಪೇ ಕೂಡ ಈಗಾಗಲೇ ತನ್ನ ಗ್ರಾಹಕರಿಗೆ ಇದೇ ರೀತಿಯ ಸೌಲಭ್ಯಕ್ಕೆ ಚಾಲನೆ ನೀಡಿದೆ. ಇದಾದ ಕೆಲ ದಿನಗಳಲ್ಲಿಯೇ ಅಮೆಜಾನ್ ಪೇ ಕೂಡ ಗ್ರಾಹಕರಿಗೆ ಮ್ಯೂಚವಲ್ ಫಂಡ್(Amazon Pay mutual funds) ಮತ್ತು F.Dಗಳಲ್ಲಿ ಹೂಡಿಕೆ ಮಾಡುವ ಸೇವೆ ನೀಡಲು ನಿರ್ಧರಿಸಿದೆ.
ಅಮೆಜಾನ್ ಮತ್ತು Kuvera ಎರಡೂ ಕಂಪನಿಗಳ ನಡುವಿನ ಈ ಸಹಯೋಗವು ಬಳಕೆದಾರರಿಗೆ ಮ್ಯೂಚುವಲ್ ಫಂಡ್(Mutual Funds)ಗಳು ಮತ್ತು ಇತರ ರೀತಿಯ ಹಣಕಾಸು ಸೇವೆಗಳಲ್ಲಿ ಹೂಡಿಕೆ ಮಾಡಲು ಸಹಾಯ ಮಾಡುತ್ತದೆ. ಭಾರತವು ಸುಮಾರು 600 ಮಿಲಿಯನ್ ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ 2ನೇ ಅತಿದೊಡ್ಡ ಬೆಳೆಯುತ್ತಿರುವ ಇಂಟರ್ನೆಟ್ ಮಾರುಕಟ್ಟೆಯಾಗಿದೆ. ಕುವೇರಾ ತನ್ನ ಹಣಕಾಸು ಸೇವೆಗಳು ಮತ್ತು ಅಮೆಜಾನ್ ಪೇ ಗ್ರಾಹಕರಿಗೆ ಮ್ಯೂಚುವಲ್ ಫಂಡ್‌ಗಳು, ಸ್ಥಿರ ಠೇವಣಿಗಳು ಮತ್ತಿತರ ಹೂಡಿಕೆಗಳಿಗೆ ಸಹಾಯ ಮಾಡಲಿದೆ.
ಇದನ್ನೂ ಓದಿ: ಗ್ರಾಹಕರಿಗೆ ಮನೆ ಬಾಗಿಲಿಗೆ ವಿತರಣೆಯಾಗಲಿದೆ ಡಿಸೇಲ್, BPCL ಆರಂಭಿಸಿದೆ 'Safar20' ಸೇವೆ
ಈ ಬಗ್ಗೆ ಮಾತನಾಡಿರುವ Kuvera.inನ ಸಂಸ್ಥಾಪಕ ಮತ್ತು CEO ಗೌರವ್ ರಸ್ತೋಗಿ(Gaurav Rastogi), ‘ನಾವು ಹೂಡಿಕೆದಾರರಿಗೆ ನೆರವಾಗಲು ಅತ್ಯಂತ ವೈಶಿಷ್ಟ್ಯಪೂರ್ಣ ಹೂಡಿಕೆ ವೇದಿಕೆಯನ್ನು ಒದಗಿಸುತ್ತೇವೆ. ಅಮೆಜಾನ್ ಪೇ ಇಂಡಿಯಾದ ಈ ಸೇವೆಯ ಮೂಲಕ ಗ್ರಾಹಕರ ಹೂಡಿಕೆಯ ಜರ್ನಿಗೆ ಉತ್ತಮ ಮೌಲ್ಯವನ್ನು ನೀಡಲು ನಾವು ಬಯಸುತ್ತೇವೆ. ಭಾರತದಲ್ಲಿ ಹೂಡಿಕೆ ಮತ್ತು ಸಂಪತ್ತಿನ ನಿರ್ವಹಣೆಯನ್ನು ವೇಗಗೊಳಿಸುವುದು ನಮ್ಮ ಗುರಿಯಾಗಿದೆ’ ಅಂತಾ ಹೇಳಿದ್ದಾರೆ.
ಕುವೇರಾ ಕಂಪನಿಯನ್ನು ಸೆಬಿ(SEBI) ಅಡಿಯಲ್ಲಿ ಹೂಡಿಕೆ ಸಲಹೆಗಾರರಾಗಿ ನೋಂದಾಯಿಸಲಾಗಿದೆ. ಗುರಿ ಆಧಾರಿತ ಆನ್‌ಲೈನ್ ಹಣಕಾಸು ಪರಿಹಾರಗಳನ್ನು ಈ ಕಂಪನಿ ಒದಗಿಸುತ್ತದೆ. ‘ಅಮೆಜಾನ್ ಪೇನಲ್ಲಿ ಪ್ರತಿಯೊಬ್ಬ ಭಾರತೀಯನ ಹಣಕಾಸಿನ ಅಗತ್ಯಗಳನ್ನು ಪರಿಹರಿಸುವ ಮೂಲಕ ಅವರ ಜೀವನವನ್ನು ಸರಳಗೊಳಿಸುವುದು ಮತ್ತು ಅವರ ಆಕಾಂಕ್ಷೆಗಳನ್ನು ಈಡೇರಿಸುವುದು ನಮ್ಮ ಗುರಿಯಾಗಿದೆ. ಗ್ರಾಹಕರಿಗೆ ಉತ್ತಮ ಹೂಡಿಕೆ ವೇದಿಕೆ ಕಲ್ಪಿಸುವ ಮೂಲಕ ಹಣಕಾಸಿನ ಶಿಸ್ತು ಮೂಡಿಸುವುದು ನಮ್ಮ ಉದ್ದೇಶವಾಗಿದೆ’ ಎಂದು ಅಮೆಜಾನ್ ಪೇ ಇಂಡಿಯಾ ನಿರ್ದೇಶಕ ವಿಕಾಸ್ ಬನ್ಸಾಲ್ ಹೇಳಿದ್ದಾರೆ.
ಇದನ್ನೂ ಓದಿ: LIC Scheme: 29 ರೂ ಉಳಿಸಿದರೆ ಸಿಗಲಿದೆ 4 ಲಕ್ಷ ರೂ. ಗಳ ಮೊತ್ತ, LIC ತಂದಿದೆ ಹೊಸ ಪ್ಲಾನ್
ತನ್ನ ಬಳಕೆದಾರರಿಗೆ ಠೇವಣಿ ಆಯ್ಕೆ ನೀಡಲು ಗೂಗಲ್ ಪೇ ಕಂಪನಿ ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಆದರೆ ಅಮೆಜಾನ್ ಪೇ ತನ್ನ ಮೂಲಕ ಗ್ರಾಹಕರು ಠೇವಣಿ ಇರಿಸಬಹುದಾದ ಬ್ಯಾಂಕುಗಳು ಯಾವವು ಎಂಬುದರ ಬಗ್ಗೆ ಇನ್ನೂ ಮಾಹಿತಿ ನೀಡಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ