ನವದೆಹಲಿ : ಡೀಸೆಲ್ ವಾಹನಗಳ ಗ್ರಾಹಕರಿಗೆ ಇದೊಂದು ಒಳ್ಳೆಯ ಸುದ್ದಿ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಡೀಸೆಲ್ ಅನ್ನು ಮನೆ ಬಾಗಿಲಿಗೆ ತಲುಪಿಸುವ ಯೋಜನೆಯನ್ನು (Doorstep Delivery Of Diesel) ಆರಂಭಿಸಿದೆ. ಹಮ್ಸಫರ್ ಇಂಡಿಯಾ ಜೊತೆ ಕೈಜೋಡಿಸಿರುವ BPCL ಈ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆ ಅಡಿಯಲ್ಲಿ, BPCL ನ 20 ಲೀಟರ್ ಜೆರಿಕಾನ್ ನಲ್ಲಿ ಮನೆ ಬಾಗಿಲಿಗೆ ಡೀಸೆಲ್ ವಿತರಿಸಲಾಗುತ್ತದೆ.
ಮನೆ ಬಾಗಿಲಿಗೆ ಡೀಸೆಲ್ ತಲುಪಿಸುವ ಸೌಲಭ್ಯ :
ಡೋರ್ ಸ್ಟೆಪ್ ಡೀಸೆಲ್ ಡೆಲಿವರಿ ಸೌಲಭ್ಯವನ್ನು (Doorstep Diesel Delivery Benefits) ಜೆರ್ರಿಕಾನ್ ನಲ್ಲಿ ನೀಡಲಾಗುತ್ತಿದ್ದು, ಇದಕ್ಕೆ ಸಫರ್ 20 ಎಂದು ಹೆಸರಿಡಲಾಗಿದೆ. 20 ಲೀಟರ್‌ಗಿಂತ ಕಡಿಮೆ ಡೀಸೆಲ್ ಬೇಡಿಕೆಯಿರುವ ಗ್ರಾಹಕರಿಗೆ ಈ ಸೌಲಭ್ಯವನ್ನು ನೀಡಲಾಗುತ್ತದೆ. ಇದು ಸಣ್ಣ ಕೈಗಾರಿಕೆಗಳು, ಮಾಲ್‌ಗಳು, ಆಸ್ಪತ್ರೆಗಳು, ಬ್ಯಾಂಕುಗಳು (Bank), ನಿರ್ಮಾಣ ಸ್ಥಳಗಳು, ರೈತರು, ಮೊಬೈಲ್ ಟವರ್‌ಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಸಣ್ಣ ಕೈಗಾರಿಕೆಗಳಿಗೆ ಈ ಯೋಜನೆಯ ಪ್ರಯೋಜನ ಸಿಗಲಿದೆ.
ಇದನ್ನೂ ಓದಿ : LIC Scheme: 29 ರೂ ಉಳಿಸಿದರೆ ಸಿಗಲಿದೆ 4 ಲಕ್ಷ ರೂ. ಗಳ ಮೊತ್ತ, LIC ತಂದಿದೆ ಹೊಸ ಪ್ಲಾನ್
ಈ ಸೌಲಭ್ಯವನ್ನು ಈ ರಾಜ್ಯಗಳಲ್ಲಿ ಆರಂಭಿಸಲಾಗುವುದು :
BPCL ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಈ 20 ಲೀಟರ್ ಜೆರಿಕಾನ್ ಸೇವೆಯನ್ನು ಆರಂಭಿಸಲು ಉದ್ದೇಶಿಸಿದೆ. ಈ ರಾಜ್ಯಗಳಲ್ಲಿನ ಹೆಚ್ಚಿನ ರೆಸಾರ್ಟ್‌ಗಳು, ಹೋಟೆಲ್‌ಗಳು (Hotel) , ಕೈಗಾರಿಕೆಗಳು ಮತ್ತು ಫಾರ್ಮ್‌ಗಳು ಬೆಟ್ಟಗಳ ಮೇಲೆ ದೂರ ಪ್ರದೇಶಗಳಲ್ಲಿವೆ. ಹಾಗಾಗಿ ಈ ಪ್ರದೇಶಗಳಲ್ಲಿ ಪಂಪ್‌ಗಳ ಕೊರತೆಯಿರುತ್ತದೆ. ಹೀಗಿರುವಾಗ, ಡೋರ್ ಸ್ಟೆಪ್ ಡೀಸೆಲ್ ಡೆಲಿವರಿ ಈ ರಾಜ್ಯಗಳ ಪ್ರವಾಸಿಗರಿಗೆ ಬಹಳಷ್ಟು ಸಹಾಯಕವಾಗಿದೆ.
ಬಂಡವಾಳ ಹೂಡಿಕೆಯ ಪಟ್ಟಿಯಲ್ಲಿ ಬಿಪಿಸಿಎಲ್ (BPCL ) ಅಗ್ರಸ್ಥಾನದಲ್ಲಿದೆ :
ಪ್ರಸಕ್ತ ಹಣಕಾಸು ವರ್ಷದಲ್ಲಿ ಸರ್ಕಾರದ ಖಾಸಗೀಕರಣ ಮತ್ತು ಬಂಡವಾಳ ಹೂಡಿಕೆಯ ಗುರಿಯನ್ನು ರೂ 1.75 ಲಕ್ಷ ಕೋಟಿಯಲ್ಲಿ ಇರಿಸಲಾಗಿದೆ. ಬಿಪಿಸಿಎಲ್‌ನ ಹೆಸರು ಈ ವರ್ಷದ ಬಂಡವಾಳ (Investment) ಹೂಡಿಕೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದು ದೇಶದ ಎರಡನೇ ಅತಿದೊಡ್ಡ ತೈಲ ಸಂಸ್ಕರಣಾ ಕಂಪನಿಯಾಗಿದೆ. ಇದರಲ್ಲಿ ಪ್ರಸ್ತುತ ಸರ್ಕಾರ 52.98 ಶೇಕಡಾ ಪಾಲು ಹೊಂದಿದ್ದು, ಸರ್ಕಾರವು ಅದರ ಸಂಪೂರ್ಣ ಪಾಲನ್ನು ಮಾರಾಟ ಮಾಡಲು ಹೊರಟಿದೆ.
ಇದನ್ನೂ ಓದಿ : Indian Railways: ಆನ್ ಲೈನ್ ಟಿಕೆಟ್ ಬುಕಿಂಗ್ ನಿಯಮದಲ್ಲಿ ಬದಲಾವಣೆ, ಇನ್ನು ಈ ಪ್ರಕ್ರಿಯೆ ಪೂರ್ಣಗೊಳಿಸುವುದು ಅಗತ್ಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.