ನವದೆಹಲಿ : ಕಳೆದ ವರ್ಷ ಕೋವಿಡ್ ಸೋಂಕಿನ ಕಾರಣದಿಂದಾಗಿ ಲಾಕ್ ಡೌನ್ ಇದ್ದದ್ದರಿಂದಾಗಿ ಅಮೆಜಾನ್ ಪ್ರೈಮ್ ಡೇಸ್ ಗೆ ಸಾಕಷ್ಟು ಪರಿಣಾಮ ಬೀರಿತ್ತು ಮತ್ತು ಅದರ ಆಯೋಜನಯಲ್ಲೂ ಕೂಡ ವ್ಯತ್ಯಾಸ ಉಂಟಾಗಿತ್ತು.


COMMERCIAL BREAK
SCROLL TO CONTINUE READING

ಆದರೇ ಈ ವರ್ಷ ಅಮೆಜಾನ್ ಪ್ರೈಮ್ ಡೇಸ್(Amazon Prime Days) ಬಗ್ಗೆ ದಿನಾಂಕ ಸೂಚಿಸಿದರು ಅಧಿಕೃತ ಘೋಷಣೆಯಾಗುವವರೆಗೆ ಮಾಹಿತಿಯನ್ನು ಗೌಪ್ಯವಾಗಿಡುವಂತೆ ತನ್ನ ನೌಕಕರಿಗೆ ತಿಳಿಸಿದೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ : Canara Bank Loan : ಕೆನರಾ ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ : ಹೊಸ 3 ಸಾಲ ಯೋಜನೆಗಳನ್ನ ಪ್ರಕಟಿಸಿದ ಬ್ಯಾಂಕ್!


ಫ್ಲಿಪ್ ​ಕಾರ್ಟ್(Flipkart) ಹೋಮ್ ಡೇಸ್ ಆಯೋಜಿಸಿದ್ದು, ಅದರಲ್ಲಿ ಗ್ರಾಹಕರಿಗೆ ಕಡಿಮೆ ಬೆಲೆಗೆ ವಸ್ತುಗಳನ್ನು ಗ್ಯಾಜೆಟ್​ಗಳನ್ನು ಮಾರಾಟ ಮಾಡುತ್ತಿದೆ. ರಸಪ್ರಶ್ನೆಯನ್ನು ಹಮ್ಮಿಕೊಂಡಿದೆ. ವಿಜೇತರಿಗೆ ಆಕರ್ಷಕ ಬಹುಮಾನವನ್ನು ನೀಡುತ್ತಿರುವುದನ್ನು ಅಮೆಜಾನ್ ಕೂಡ ಅನುಸರಿಸಿದೆ.


ಇದನ್ನೂ ಓದಿ : Rules Changing From 1 June 2021: ಜೂನ್ 1 ರಿಂದಾಗುವ ಈ ಬದಲಾವಣೆಗಳು ನಿಮಗೆ ಗೊತ್ತಿರಲಿ


ಅಮೆಜಾನ್(Amazon) ಕೂಡ ಆಯಪ್ ಕ್ಚಿಜ್ ನಡೆಸುತ್ತಿದೆ. 5 ಪ್ರಶ್ನೆಗಳಿಗೆ ಉತ್ತರಿಸಿದವರಿಗೆ ಅಮೆಜಾನ್ 20 ಸಾವಿರ ಬಹುಮಾನವಾಗಿ ನೀಡಲಿದೆ.


ಇದನ್ನೂ ಓದಿ : Petrol-Diesel Price : ವಾಹನ ಸವಾರರಿಗೆ ಬಿಗ್ ರಿಲೀಫ್ : ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ಮುಕ್ತಿ!


ಗ್ರಾಹಕರನ್ನು(Customer) ಆಕರ್ಷಿಸುವ ಉದ್ದೇಶದಿಂದ ಅಮೆಜಾನ್ ಹಲವು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಅಂತೆಯೇ, ಅಮೆಜಾನ್ ಪ್ರೈಮ್ ಡೇಸ್ ನನ್ನು ಈ ವರ್ಷ ಅದ್ಧೂರಿಯಾಗಿ ಆಯೋಜಿಸಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ : TV, Fridge, AC ಬೆಲೆಗಳು ಮತ್ತೆ ಏರಿಕೆ! ಯಾವಾಗ, ಎಷ್ಟು ಹೆಚ್ಚಾಗಲಿದೆ ಎಂದು ತಿಳಿಯಿರಿ


ಕೋವಿಡ್(Covid-19) ಕಾರಣದಿಂದಾಗಿ ಅಮೆಜಾನ್ ಕೆನೆಡಾ ಮತ್ತು ಭಾರತದಲ್ಲಿ ಪ್ರೈಮ್ ಡೇಸ್ ಸೇಲ್ ನಡೆಸುವ ಕುರಿತು ಇದುವರೆಗೂ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಆದರೇ, ಜೂನ್ 21 ರಂದು ಆಯೋಜಿಸಲು ಯೋಜಿಸುತ್ತಿದೆ ಎಂದು ಸಂಸ್ಥೆಯ ಆಂತರಿಕ ಮೂಲಗಳಿಂದ ತಿಳಿದು ಬಂದಿದೆ ಎಂದು ವರದಿಯಾಗಿದೆ. ಇನ್ನು, ಅಮೆಜಾನ್ ಪ್ರೈಮ್ ಡೇಸ್ ನಲ್ಲಿ ಯಾವೆಲ್ಲಾ ವಸ್ತುಗಳ ಮೇಲೆ ಆಕರ್ಷಕ ಡಿಸ್ಕೌಂಟ್ ನೀಡಲಿದೆ ಎಂದು ಕಾದುನೋಡಬೇಕಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.