Petrol-Diesel Price : ವಾಹನ ಸವಾರರಿಗೆ ಬಿಗ್ ರಿಲೀಫ್ : ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ಮುಕ್ತಿ!

ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ. 93.68 ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ. 84.61 ರಷ್ಟಿ

Last Updated : May 28, 2021, 11:24 AM IST
  • ಕೇಂದ್ರ ಸರ್ಕಾರ ಮೇ ತಿಂಗಳಲ್ಲಿ ಒಟ್ಟು 14 ಭಾರಿ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಏರಿಕೆ
  • ಇವತ್ತು ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಕೆ ಆಗಿಲ್ಲ
  • ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ. 93.68 ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ. 84.61 ರಷ್ಟಿ
Petrol-Diesel Price : ವಾಹನ ಸವಾರರಿಗೆ ಬಿಗ್ ರಿಲೀಫ್ : ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ಮುಕ್ತಿ! title=

ನವದೆಹಲಿ : ಕೇಂದ್ರ ಸರ್ಕಾರ ಮೇ ತಿಂಗಳಲ್ಲಿ ಒಟ್ಟು 14 ಭಾರಿ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಏರಿಕೆ ಮಾಡಿದೆ. ಆದರೆ ಇವತ್ತು ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಕೆ ಆಗಿಲ್ಲ. ಇದು ಗ್ರಾಹಕರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ. 

ಪಂಚ ರಾಜ್ಯ ಚುನಾವಣೆ ಸಂದರ್ಭದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ(Petrol-Diesel Price) ಏರಿಕೆ ಮಾಡಿಲ್ಲದಿದ್ದ ಕೇಂದ್ರ ಸರ್ಕಾರ ಮೇ 4ರಿಂದಲೇ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಆರಂಭಿಸಿತು. ಅಲ್ಲಿಂದ ಮೇ 27ರವರೆಗೆ ಒಟ್ಟು 14 ಬಾರಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಸಿ ಗ್ರಾಹಕರ ಜೇಬನ್ನು ಲೂಟಿ ಮಾಡಲಾಗಿದೆ. ಇದೊಂದೇ ತಿಂಗಳಲ್ಲಿ ಪ್ರತಿ ಪೆಟ್ರೋಲ್ ಮೇಲೆ 3.28 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 3.88 ರೂ. ಏರಿಕೆ ಮಾಡಲಾಗಿದೆ.

ಇದನ್ನೂ ಓದಿ : Aadhar Card ನಲ್ಲಿದ್ದ 'ಮೊಬೈಲ್ ನಂಬರ್' ಬಂದ್ ಆಗಿದೆಯಾ? ಹೊಸ ನಂಬರ್ ಅಪ್ಡೇಟ್  ಮಾಡುವುದು ಹೇಗೆ ಇಲ್ಲಿದೆ ನೋಡಿ!

ಪೆಟ್ರೋಲ್ ಬೆಲೆ(Petrol Price) ಪ್ರತಿ ಲೀಟರ್‌ಗೆ. ₹ 93.68 ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ. ₹ 84.61 ರಷ್ಟಿದೆ ಎಂದು ಭಾರತೀಯ ತೈಲ ನಿಗಮ ತಿಳಿಸಿದೆ.

ಇದನ್ನೂ ಓದಿ : 'ITR E-ಫೈಲಿಂಗ್' : ಆದಾಯ ತೆರಿಗೆದಾರರಿಗೊಂದು ಮಹತ್ವದ ಮಾಹಿತಿ!

ಮುಂಬೈಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ. ₹ 99.94 ಮತ್ತು ಡೀಸೆಲ್ ಬೆಲೆ(Diesel Price) ಲೀಟರ್‌ಗೆ. ₹ 91.87 ಆಗಿದೆ. ಪೆಟ್ರೋಲ್ ದರಗಳು ಈಗಾಗಲೇ ರಾಜಸ್ಥಾನ ಮತ್ತು ಮಧ್ಯಪ್ರದೇಶದ ಹಲವಾರು ನಗರಗಳಲ್ಲಿ ₹ 100 ರ ಗಡಿ ದಾಟಿದೆ. ಮೌಲ್ಯವರ್ಧಿತ ತೆರಿಗೆ ಅಥವಾ ವ್ಯಾಟ್‌ನಿಂದಾಗಿ ದೇಶದ ರಾಜ್ಯಗಳಲ್ಲಿ ಇಂಧನ ದರಗಳು ಬದಲಾಗುತ್ತವೆ.

ಇದನ್ನೂ ಓದಿ : Gold-Silver Rate : ಆಭರಣ ಪ್ರಿಯರಿಗೆ ಸಿಹಿ ಸುದ್ದಿ : ಇಳಿಕೆ ಕಂಡ ಚಿನ್ನದ ಬೆಲೆ!

ದೆಹಲಿಯಲ್ಲೂ ಪೆಟ್ರೋಲ್ ಬೆಲೆ 93.68 ರೂ. ಮತ್ತು ಡೀಸೆಲ್ ಬೆಲೆ 84.61 ರೂ. ಇದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News