American Stock: ಇನ್ಮುಂದೆ ಭಾರತೀಯ ಹೂಡಿಕೆದಾರರು ಕೂಡ ಅಮೇರಿಕ ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಬಹುದು
How To Invest In US Stock - ನೀವೂ ಕೂಡ ಒಂದು ವೇಳೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದರೆ, ಇಂದಿನ ದಿನ ನಿಮ್ಮ ಪಾಲಿಗೆ ವಿಶೇಷ ದಿನವಾಗಿರಲಿದೆ. ಏಕೆಂದರೆ, ಇಂದು ನಿಮ್ಮ ಒಂದು ಬಹು ದಿನಗಳ ಆಸೆ ಈಡೇರಲಿದೆ.
ನವದೆಹಲಿ: How To Invest In US Stock - ಇಂದಿನಿಂದ ಹೂಡಿಕೆದಾರರು ಫೇಸ್‌ಬುಕ್ (Facebook) ಮತ್ತು ಗೂಗಲ್‌ನಂತಹ ದೊಡ್ಡ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡಲು ಸಾಧ್ಯವಾಗಲಿದೆ. ಹೌದು ಇಂದಿನಿಂದ ನೀವು ಈ ಕಂಪನಿಗಳ ಷೇರುಗಳಲ್ಲಿ ನೇರವಾಗಿ ಹೂಡಿಕೆ ಮಾಡುವ ಅವಕಾಶವನ್ನು ಪಡೆಯಲಿರುವಿರಿ. ಈ ಕುರಿತಾದ ಸಿದ್ಧತೆ ಬಹಳದಿನಗಳಿಂದ ನಡೆಯುತ್ತಿದೆ. ನೀವು ಯಾವ ಕಂಪನಿಗಳಲ್ಲಿ ಹೂಡಿಕೆ ಮಾಡಲು ಸಾಧ್ಯವಾಗಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ನೀವು ಯಾವ US ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡಬಹುದು?
ಪ್ರಸ್ತುತ, ನೀವು ನೇರವಾಗಿ ಅಮೆರಿಕದ 8 ಷೇರುಗಳಲ್ಲಿ ಮಾತ್ರ ಹೂಡಿಕೆ ಮಾಡಲು ಸಾಧ್ಯವಾಗಲಿದೆ. ಇವುಗಳಲ್ಲಿ Amazon, Tesla, Alphabet (Google), Meta Platform (Facebook), Microsoft, Netflix, Apple ಮತ್ತು Walmart ಶಾಮೀಲಾಗಿವೆ. ಶೀಘ್ರದಲ್ಲೇ ನೀವು ಇತರ 42 ದೊಡ್ಡ ಅಮೆರಿಕನ್ ಕಂಪನಿಗಳಲ್ಲಿಯೂ ಕೂಡ ನೇರವಾಗಿ ಹೂಡಿಕೆ ಮಾಡುವ ಅವಕಾಶವನ್ನು ಪಡೆಯಲಿರುವಿರಿ.
ಹೇಗೆ ಹೂಡಿಕೆ ಮಾಡಬಹುದು?
ಹೂಡಿಕೆ ಮಾಡಲು NSE ಅಂಗಸಂಸ್ಥೆ ವಿನಿಮಯವನ್ನು ರಚಿಸಿದೆ. ಇದು 29 ನವೆಂಬರ್ 2016 ರಿಂದ ಆರಂಭಗೊಂಡಿದೆ. ಇದು ಗುಜರಾತ್‌ನ ಗಿಫ್ಟ್ ಸಿಟಿಯಲ್ಲಿದೆ. GIFT ಸಿಟಿಯಲ್ಲಿರುವ ಸ್ಟಾಕ್ ಎಕ್ಸ್ಚೇಂಜ್ ಇತರ ದೇಶಗಳ ಕರೆನ್ಸಿ ಅಥವಾ ಸೆಕ್ಯುರಿಟಿಗಳಲ್ಲಿ ವ್ಯಾಪಾರವನ್ನು ನಡೆಸಲು ಅನುಮತಿಸಲಾಗಿದೆ. 2017 ರಿಂದ, NSE IFSC ಅನೇಕ ಇತರ ಉತ್ಪನ್ನಗಳಲ್ಲಿ ವ್ಯಾಪಾರದ ಸೌಲಭ್ಯವನ್ನು ಒದಗಿಸುತ್ತಿದೆ.
ಹೂಡಿಕೆದಾರರು US ಕಂಪನಿಗಳ ಷೇರುಗಳನ್ನು ಪಡೆಯುತ್ತಾರೆಯೇ?
ಅಮೇರಿಕನ್ ಕಂಪನಿಗಳ ಷೇರುಗಳನ್ನು ಹೂಡಿಕೆದಾರರಿಗೆ ನೀಡಲಾಗುವುದಿಲ್ಲ. ಅದರ ಬದಲಾಗಿ, ಅವರಿಗೆ NSE IFSC ರಶೀದಿಗಳನ್ನು ನಾದಲಾಗುವುದು. ಅವುಗಳ ಆಧಾರವಾಗಿರುವ ಮೌಲ್ಯವು US ಷೇರುಗಳಾಗಿರುತ್ತವೆ. ನೀವು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದಂತೆ, ನೀವು ಅಮೆರಿಕನ್ ಕಂಪನಿಗಳ ಷೇರುಗಳನ್ನು ಖರೀದಿಸಲು ಇದರಿಂದ ಸಾಧ್ಯವಾಗಲಿದೆ. ಇದರ ನಂತರ NSE IFSC ರಶೀದಿಯನ್ನು ನಿಮಗೆ ನೀಡಲಾಗುವುದು.
ಇದನ್ನೂ ಓದಿ-7th Pay Commission : ಕೇಂದ್ರ ನೌಕರರಿಗೆ ಸಿಗಲಿದೆ ₹4500 ಲಾಭ! ಹಾಗಿದ್ರೆ, ಆದಷ್ಟು ಬೇಗ ಈ ಕೆಲಸ ಮಾಡಿ
ಹೂಡಿಕೆಯಿಂದ ಬರುವ ಲಾಭಕ್ಕೆ ತೆರಿಗೆ ವಿಧಿಸಲಾಗುತ್ತದೆಯೇ?
US ಷೇರುಗಳಲ್ಲಿನ ಹೂಡಿಕೆಯ ವಿರುದ್ಧ ನೀಡಲಾದ ಠೇವಣಿ ರಸೀದಿಗಳನ್ನು ಆದಾಯ ತೆರಿಗೆಯ ಪ್ರಕಾರ ಭಾರತದಲ್ಲಿ ವಿದೇಶಿ ಆಸ್ತಿಗಳೆಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ, ಅಲ್ಪಾವಧಿಯ ಬಂಡವಾಳ ಲಾಭಗಳು ಮತ್ತು ದೀರ್ಘಾವಧಿಯ ಬಂಡವಾಳ ಲಾಭಗಳ ನಿಯಮಗಳು ಅದರ ಲಾಭದ ಮೇಲೆ ಅನ್ವಯಿಸುತ್ತವೆ. ನಿಮ್ಮ ಸ್ಲ್ಯಾಬ್‌ಗೆ ಅನುಗುಣವಾಗಿ ಅಲ್ಪಾವಧಿಯ ಬಂಡವಾಳ ಲಾಭಗಳ ಮೇಲಿನ ತೆರಿಗೆ ಅನ್ವಯವಾಗುತ್ತದೆ. ದೀರ್ಘಾವಧಿಯ ಬಂಡವಾಳ ಲಾಭದ ಮೇಲೆ ಸೂಚ್ಯಂಕದೊಂದಿಗೆ, ನೀವು ಶೇ. 20 ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ-PM Mudra Yojana : ಸ್ವಂತ ಉದ್ಯೋಗಕ್ಕೆ ಸರ್ಕಾರ ನೀಡುತ್ತಿದೆ ₹10 ಲಕ್ಷ : 10 ದಿನಗಳಲ್ಲಿ ಕೈಗೆ ಸಿಗುತ್ತೆ ಹಣ!
ಯಾವ ಸಮಯದಲ್ಲಿ ನೀವು US ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದು
US ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುವ ನಿಮ್ಮ ಸಮಯವು ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ. ನೀವು ಪ್ರತಿದಿನ ರಾತ್ರಿ 8:30 ರಿಂದ ಮರುದಿನ ಮಧ್ಯಾಹ್ನ 2:30 ರವರೆಗೆ US ಷೇರುಗಳಲ್ಲಿ ನೇರವಾಗಿ ಹೂಡಿಕೆ ಮಾಡಬಹುದು. ಶನಿವಾರ ಮತ್ತು ಭಾನುವಾರದಂದು ಅಮೇರಿಕನ್ ಮಾರುಕಟ್ಟೆಗಳು ಮುಚ್ಚಲ್ಪಡುತ್ತವೆ ಎಂಬುದನ್ನು ದಯವಿಟ್ಟು ನೆನಪಿನಲ್ಲಿಡಿ. ವಹಿವಾಟಿನ ಎರಡು ದಿನಗಳಲ್ಲಿ ನಿಮ್ಮ ಡಿಮ್ಯಾಟ್ ಖಾತೆಗೆ ಠೇವಣಿ ರಸೀದಿಯನ್ನು ಜಮಾ ಮಾಡಲಾಗುತ್ತದೆ.
ಇದನ್ನೂ ಓದಿ-4 ವರ್ಷಗಳ ನಂತರ ಬಡ್ಡಿದರ ಹೆಚ್ಚಿಸಲಿದೆ ಆರ್‌ಬಿಐ; ನಿಮ್ಮ ಸಾಲದ EMI ಮೇಲೆ ದೊಡ್ಡ ಪರಿಣಾಮ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.