4 ವರ್ಷಗಳ ನಂತರ ಬಡ್ಡಿದರ ಹೆಚ್ಚಿಸಲಿದೆ ಆರ್‌ಬಿಐ; ನಿಮ್ಮ ಸಾಲದ EMI ಮೇಲೆ ದೊಡ್ಡ ಪರಿಣಾಮ!

ಕೇಂದ್ರೀಯ ಬ್ಯಾಂಕ್‌ಗಳ ಬಡ್ಡಿದರಗಳ ಹೆಚ್ಚಳವು ನಿಮ್ಮ ಮನೆ ಮತ್ತು ಅದರ EMI ಮೇಲೆ ನೇರ ಪರಿಣಾಮ ಬೀರಲಿದೆ. ಅಂದರೆ ಬಡ್ಡಿದರಗಳನ್ನು ಹೆಚ್ಚಿಸಿದ ನಂತರ ನಿಮ್ಮ ಇಎಂಐ ಕೂಡ ಹೆಚ್ಚಾಗುತ್ತದೆ.

Written by - Puttaraj K Alur | Last Updated : Mar 3, 2022, 04:10 PM IST
  • ನಿರಂತರವಾಗಿ ಹೆಚ್ಚುತ್ತಿರುವ ಹಣದುಬ್ಬರದ ನಡುವೆ ಶಾಕಿಂಗ್ ನ್ಯೂಸ್
  • ಮಾರ್ಚ್ 15-16ರಂದು ನಡೆಯಲಿರುವ ಫೆಡರಲ್ ರಿಸರ್ವ್ ಸಭೆ
  • ನಿಮ್ಮ ಮನೆ ಮತ್ತು ಅದರ EMI ಮೇಲೆ ನೇರ ಪರಿಣಾಮ ಬೀರಲಿದೆ
4 ವರ್ಷಗಳ ನಂತರ ಬಡ್ಡಿದರ ಹೆಚ್ಚಿಸಲಿದೆ ಆರ್‌ಬಿಐ; ನಿಮ್ಮ ಸಾಲದ EMI ಮೇಲೆ ದೊಡ್ಡ ಪರಿಣಾಮ! title=
ಹೆಚ್ಚುತ್ತಿರುವ ಹಣದುಬ್ಬರದ ನಡುವೆ ಶಾಕಿಂಗ್ ನ್ಯೂಸ್

ನವದೆಹಲಿ: ನಿರಂತರವಾಗಿ ಹೆಚ್ಚುತ್ತಿರುವ ಹಣದುಬ್ಬರದ ನಡುವೆ ಮತ್ತೊಂದು ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ಈ ಬಾರಿ ಅಮೆರಿಕದ ಸೆಂಟ್ರಲ್ ಬ್ಯಾಂಕ್ ಫೆಡರಲ್ ರಿಸರ್ವ್(Federal Reserve Rate Hike)ಜನಸಾಮಾನ್ಯರಿಗೆ ದೊಡ್ಡ ಹೊಡೆತ ನೀಡಲಿದೆ. ಫೆಡರಲ್ ರಿಸರ್ವ್ ಈ ತಿಂಗಳು ಬಡ್ಡಿದರಗಳಲ್ಲಿ ಹೆಚ್ಚಳವನ್ನು ಘೋಷಿಸಬಹುದು. ಅಮೆರಿಕದ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥ ಜೆರೋಮ್ ಪೊವೆಲ್ ಈ ತಿಂಗಳು ಪಾಲಿಸಿ ಬಡ್ಡಿದರ(Policy Interest Rates)ಗಳಲ್ಲಿ ಹೆಚ್ಚಳವನ್ನು ಘೋಷಿಸಿದರು. 4 ವರ್ಷಗಳ ನಂತರ ಮೊದಲ ಬಾರಿಗೆ ಪಾಲಿಸಿ ಬಡ್ಡಿದರಗಳನ್ನು ಹೆಚ್ಚಿಸಲಾಗುವುದು ಎಂದು ವರದಿಯಾಗಿದೆ.

ಅಮೆರಿಕ ಸೆಂಟ್ರಲ್ ಬ್ಯಾಂಕ್‌ನಲ್ಲಿ 4 ವರ್ಷಗಳ ನಂತರ ನಡೆಯುತ್ತಿರುವ ಈ ಬದಲಾವಣೆಯು ವಿಶ್ವಾದ್ಯಂತ ಪರಿಣಾಮ ಬೀರುತ್ತದೆ. ಇದರ ನಂತರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಸೇರಿದಂತೆ ಪ್ರಪಂಚದಾದ್ಯಂತ ಇರುವ ಕೇಂದ್ರೀಯ ಬ್ಯಾಂಕುಗಳು ಬಡ್ಡಿದರಗಳನ್ನು ಹೆಚ್ಚಿಸಬಹುದು. ಕೇಂದ್ರೀಯ ಬ್ಯಾಂಕ್‌ಗಳ ಬಡ್ಡಿದರಗಳ ಹೆಚ್ಚಳವು ನಿಮ್ಮ ಮನೆ ಮತ್ತು ಅದರ EMI (Home and Auto Loan EMI) ಮೇಲೆ ನೇರ ಪರಿಣಾಮ ಬೀರಲಿದೆ. ಅಂದರೆ ಬಡ್ಡಿದರಗಳನ್ನು ಹೆಚ್ಚಿಸಿದ ನಂತರ ನಿಮ್ಮ ಇಎಂಐ ಕೂಡ ಹೆಚ್ಚಾಗುತ್ತದೆ.

ಇದನ್ನೂ ಓದಿ: Hero Electric: ಈ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಲೈಸೆನ್ಸ್ ಇಲ್ಲದೆ ಓಡಿಸಬಹುದು

2018ರಿಂದ ಮೊದಲ ಬಾರಿಗೆ ಬಡ್ಡಿದರ ಹೆಚ್ಚಾಗಲಿವೆ

ಫೆಡರಲ್ ರಿಸರ್ವ್ ಈ ತಿಂಗಳಿನಿಂದ ಬಡ್ಡಿದರ(Interest Rate)ಗಳನ್ನು ಹೆಚ್ಚಿಸಲು ಪ್ರಾರಂಭಿಸಲಿದೆ ಎಂದು ಪೊವೆಲ್ ಅಮೆರಿಕ ಸಂಸತ್ತಿನ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಮೆರಿಕದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಹಣದುಬ್ಬರದಿಂದ ತೊಂದರೆಗೀಡಾದ ಫೆಡರಲ್ ರಿಸರ್ವ್‌ನ ಈ ಕ್ರಮದ ಸಾಧ್ಯತೆಯು ಈಗಾಗಲೇ ವ್ಯಕ್ತವಾಗಿದೆ. 2018ರ ನಂತರ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಹೆಚ್ಚಿಸುವುದು ಬಹುತೇಕ ಖಚಿತವೆಂದು ಹೇಳಲಾಗುತ್ತಿದೆ.

ಮಾರ್ಚ್ 15-16ರಂದು ಸಭೆ  

ಆದಾಗ್ಯೂ ಅಮೆರಿಕ ಸೆಂಟ್ರಲ್ ಬ್ಯಾಂಕ್(US Central Bank)ಎಷ್ಟು ವೇಗವಾಗಿ ಬಡ್ಡಿದರಗಳನ್ನು ಹೆಚ್ಚಿಸಲಿದೆ ಎಂಬುದನ್ನು ಪೊವೆಲ್(Jerome Powell) ಸೂಚಿಸಿಲ್ಲ. ಆದರೆ ಇದೇ ಮಾರ್ಚ್ 15-16ರಂದು ಫೆಡರಲ್ ರಿಸರ್ವ್ ಸಭೆಯಲ್ಲಿ ಪ್ರಮಾಣಿತ ಅಲ್ಪಾವಧಿಯ ಬಡ್ಡಿದರಗಳನ್ನು ಹೆಚ್ಚಿಸಲು ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. ಇದಲ್ಲದೆ ಈ ಹೆಚ್ಚಳ ಸಂಭವಿಸಿದರೆ ಕಚ್ಚಾ ತೈಲದ ದಾಖಲೆಯ ಏರಿಕೆ ಮತ್ತು ಹಣದುಬ್ಬರದ ನಡುವೆ ಸಾಮಾನ್ಯ ಜನರ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ವಾಹನದಲ್ಲಿ ಈ ನಂಬರ್ ಪ್ಲೇಟ್ ಇದ್ದರೆ, ಪೊಲೀಸರು ನಿಮ್ಮ ಕಾರನ್ನು ತಡೆಯುವಂತಿಲ್ಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News