ಟಾಟಾ ಟಿಯಾಗೊ ಮತ್ತು ಟಿಗೊರ್ CNG AMT ಬುಕಿಂಗ್: ಟಾಟಾ ಮೋಟಾರ್ಸ್ CNG-ಚಾಲಿತ ಟಿಯಾಗೊ ಹ್ಯಾಚ್‌ಬ್ಯಾಕ್ ಮತ್ತು ಟಿಗೊರ್ ಕಾಂಪ್ಯಾಕ್ಟ್ ಸೆಡಾನ್‌ನ AMT (ಸ್ವಯಂಚಾಲಿತ ಮ್ಯಾನುವಲ್ ಟ್ರಾನ್ಸ್‌ಮಿಷನ್) ಆವೃತ್ತಿಗಳನ್ನು ಅನಾವರಣಗೊಳಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ CNG ಕಾರು ಸ್ವಯಂಚಾಲಿತ ಗೇರ್‌ಬಾಕ್ಸ್‌ನೊಂದಿಗೆ ಪರಿಚಯಿಸಲ್ಪಟ್ಟಿರುವುದು ಇದೇ ಮೊದಲು. ಆಸಕ್ತ ಖರೀದಿದಾರರು ಟಾಟಾ ಟಿಯಾಗೊ CNG ಮತ್ತು Tigor CNGನ AMT ಆವೃತ್ತಿಗಳನ್ನು ಆನ್‌ಲೈನ್‌ನಲ್ಲಿ ಅಥವಾ ಅಧಿಕೃತ ಡೀಲರ್‌ಶಿಪ್‌ಗಳಿಂದ 21,000 ರೂ. ಟೋಕನ್ ಹಣವನ್ನು ಪಾವತಿಸುವ ಮೂಲಕ ಬುಕ್ ಮಾಡಬಹುದು.


COMMERCIAL BREAK
SCROLL TO CONTINUE READING

Tata Tiago CNG AMT ಅನ್ನು XTA CNG, XZA+ CNG ಮತ್ತು XZA NRG ಎಂಬ 3 ಟ್ರಿಮ್‌ಗಳಲ್ಲಿ ಪರಿಚಯಿಸಲಾಗಿದೆ. Tigor CNG AMT ಕಾರನ್ನು XZA CNG ಮತ್ತು XZA+ CNG ಎಂಬ ೨ ಟ್ರಿಮ್‌ಗಳಲ್ಲಿ ಲಭ್ಯವಾಗಲಿದೆ. ಈ ಎರಡೂ CNG ಕಾರುಗಳು ಒಂದೇ 1.2-ಲೀಟರ್, 3-ಸಿಲಿಂಡರ್ NA ಪೆಟ್ರೋಲ್ ಎಂಜಿನ್ ಜೊತೆಗೆ ಫ್ಯಾಕ್ಟರಿ-ಫಿಟ್ಡ್ ಟ್ವಿನ್-CNG ಸಿಲಿಂಡರ್‌ಗಳನ್ನು ಹೊಂದಿವೆ. ಪೆಟ್ರೋಲ್ ಮಾದರಿಯಲ್ಲಿ ಈ ಎಂಜಿನ್ 85bhp ಮತ್ತು 113Nm ಉತ್ಪಾದಿಸುತ್ತದೆ. CNG ಮೋಡ್‌ನಲ್ಲಿ ಪವರ್ ಮತ್ತು ಟಾರ್ಕ್ ಕ್ರಮವಾಗಿ 73bhp ಮತ್ತು 95Nmನಲ್ಲಿ ಉಳಿಯುತ್ತದೆ.


ಇದನ್ನೂ ಓದಿ: ತಿರುಪತಿ ಭಕ್ತರ ಗಮನಕ್ಕೆ : ರೂ. 300 ವಿಶೇಷ ದರ್ಶನ ಆನ್‌ಲೈನ್‌ ಟಿಕೆಟ್‌ ಬಿಡುಗಡೆ 


ಟ್ರಾಫಿಕ್‌ನಲ್ಲಿ ಕಡಿಮೆ ವೇಗದಲ್ಲಿ CNG ಸ್ವಯಂಚಾಲಿತ ವಾಹನವನ್ನು ಚಲಾಯಿಸುವ ಸಾಮರ್ಥ್ಯವನ್ನು ಸುಧಾರಿಸಲು AMT ಗೇರ್‌ಬಾಕ್ಸ್ ಅನ್ನು ಮಾರ್ಪಡಿಸಲಾಗಿದೆ ಎಂದು ಟಾಟಾ ಮೋಟಾರ್ಸ್ ಹೇಳಿಕೊಂಡಿದೆ. ಈ ಎರಡೂ ಮಾದರಿಗಳು ಹೊಸ ಬಣ್ಣದ ಆಯ್ಕೆಗಳನ್ನು ಸಹ ಹೊಂದಿವೆ. Tiago CNG ಟೊರ್ನಾಡೋ ಬ್ಲೂ ಮತ್ತು ಗ್ರಾಸ್‌ಲ್ಯಾಂಡ್ ಬೀಜ್ (Tiago NRG) ೨ ಹೊಸ ಬಣ್ಣಗಳೊಂದಿಗೆ ಬರುತ್ತದೆ. ಟಿಗೋರ್ CNG ಅನ್ನು New Meteor Bronze ಬಣ್ಣದಲ್ಲಿ ಪರಿಚಯಿಸಲಾಗಿದೆ.


ಈ ಎರಡೂ ಕಾರುಗಳು ನೇರವಾಗಿ CNGನಲ್ಲಿ Start ಆಗಬಹುದು ಎಂಬುದು ಗಮನಿಸಬೇಕಾದ ಸಂಗತಿ. ಇವುಗಳಲ್ಲಿ ಚಾಲಕ CNG ಮೋಡ್‌ಗೆ ಬದಲಾಯಿಸುವ ಅಗತ್ಯವಿಲ್ಲ, ಬದಲಿಗೆ ಕಾರು ಮೊದಲಿನಿಂದಲೂ CNGಯಲ್ಲೇ Start ಆಗುತ್ತದೆ. CNGಯಲ್ಲಿ ನೇರವಾಗಿ ಪ್ರಾರಂಭವಾಗುವ ವಿಭಾಗದಲ್ಲಿ ಇದೇ ಮೊದಲ ಕಾರು ಎನಿಸಿಕೊಂಡಿದೆ.


ಇದನ್ನೂ ಓದಿ: ಇಂದಿನಿಂದ 48 ದಿನ ಬ್ರಹ್ಮಕಲಶಾಭಿಷೇಕೋತ್ಸವ; ರಾಮಮಂದಿರದಿಂದ ಆರ್ಥಿಕತೆಗೆ ಎಷ್ಟು ಲಾಭ ಗೊತ್ತಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.